23 ವರ್ಷದ ರಿಷಭ್ ಪಂತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಮೊದಲ ನಾಯಕತ್ವದ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಏಕೆಂದರೆ ತಂಡದ ನಾಯಕ ಶ್ರೇಯಸ್ ಅಯ್ಯರ್ ಭುಜದ ಗಾಯದಿಂದ ಈ ಆವೃತ್ತಿಯಿಂದ ಹೊರಗುಳಿಯಲ್ಲಿದ್ದಾರೆ. ಆದರಿಂದ ತಮ್ಮ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆವೃತ್ತಿಗೆ ಹೊಸ ನಾಯಕನನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದರು. ಕಳೆದ ಕೆಲವು ತಿಂಗಳುಗಳಿಂದ ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಪಂತ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅನೇಕ ಪಂದ್ಯಗಳನ್ನು ಅವರು ಏಕಾಂಗಿ ಹೋರಾಟ ನಡೆಸಿ ಗೆಲ್ಲಿಸಿದ್ದಾರೆ. ಆದರೆ, ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳುವುದು ಸುಲಭವಲ್ಲ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ನಾಯಕತ್ವದೊಂದಿಗೆ ಜವಾಬ್ದಾರಿ ಬರುತ್ತದೆ
ಈ ಬಗ್ಗೆ ಮಾತಾನಾಡಿದ ಭಾರತದ ಮಾಜಿ ನಾಯಕ ಕಪಿಲ್ ದೇವ್, ಪಂತ್ ಕ್ಯಾಪ್ಟನ್ ಆಗಿದ್ದಾರೆ, ಅದಕ್ಕಿಂತ ಹೆಚ್ಚು ಸುರಕ್ಷಿತವಾದದ್ದು ಯಾವುದು. ಆದರೆ ನಾಯಕತ್ವದೊಂದಿಗೆ ಜವಾಬ್ದಾರಿ ಬರುತ್ತದೆ, ಪಂತ್‌ಗೆ ಅದು ಸುಲಭವಲ್ಲ. ಅವನ ನಿರ್ಭೀತ ಆಟವನ್ನು ಮುಂದುವರೆಸಬೇಕೆಂದು ನಾನು ಬಯಸಿದ್ದೆ ಆದರೆ ಮುಂದಿನ ದಿನಗಳಲ್ಲಿ ನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ಮ್ಯಾನೇಜ್‌ಮೆಂಟ್ ಭಾವಿಸಿದೆ. ಈ ಆವೃತ್ತಿಯಲ್ಲಿ ಈ ಜವಾಬ್ದಾರಿಯ ಫಲಿತಾಂಶಕ್ಕಾಗಿ ನಾವು ಕಾಯಬೇಕಾಗಿದೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಪಂತ್ ತಂಡವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನಾವು ಗಮನಹರಿಸಬೇಕು. ಆದರೆ ತಂಡದಲ್ಲಿ ಅನೇಕ ಹಿರಿಯ ಆಟಗಾರರು ಇರುವಾಗ ಇದು ಸುಲಭದ ಕೆಲಸವಲ್ಲ. ಡಿಸಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಎಲ್ಲಾ ಜನರು ಆತನನ್ನು ದೂಷಿಸಬಹುದು. ಸಮಯ ಕಳೆದಂತೆ, ಅವರು ಎಲ್ಲಾ ನ್ಯೂನತೆಗಳಿಂದ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.
ಹಿರಿಯ ಆಟಗಾರರು ಬೆಂಬಲಿಸಿದರೆ ಅದು ಅವರಿಗೆ ಕಷ್ಟವಾಗುವುದಿಲ್ಲ
ಭಾರತೀಯ ವಿಶ್ವಕಪ್ ವಿಜೇತ ಮಾಜಿ ನಾಯಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ಇದೇ ರೀತಿಯ ಸವಾಲನ್ನು ಎದುರಿಸಿದ್ದರು ಎಂದು ಹೇಳಿದರು. ಗುಂಡಪ್ಪ ವಿಶ್ವನಾಥ್, ದಿಲೀಪ್ ವೆಂಗ್ಸಾರ್ಕರ್ ಮತ್ತು ಮದನ್ ಲಾಲ್ ಮುಂತಾದ ಅನುಭವಿ ಆಟಗಾರರನ್ನು ಹೊಂದಿದ್ದ ತಂಡವನ್ನು ಮುನ್ನಡೆಸಿದ್ದರಿಂದ ದೇವ್ ಅವರನ್ನು 23 ನೇ ವಯಸ್ಸಿನಲ್ಲಿ ಭಾರತೀಯ ನಾಯಕ ಎಂದು ಹೆಸರಿಸಲಾಯಿತು. ಹಿರಿಯ ಆಟಗಾರರು ಅವರನ್ನು ಬೆಂಬಲಿಸಿದರೆ ಅದು ಅವರಿಗೆ ಕಷ್ಟವಾಗುವುದಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಕ್ಯಾಪ್ಟನ್ ಆಗಿದ್ದ ಅನುಭವವೂ ನನಗಿದೆ ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ.
ರಿಕಿ ಪಾಂಟಿಂಗ್ ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತ್ರ ಆಟವನ್ನು ನಿಯಂತ್ರಿಸಬಹುದು. ತಂಡವು ಮೈದಾನದಿಂದ ಹೊರಬಂದ ನಂತರ, ಇದು ನಾಯಕನ ಚಿಂತನೆಯ ಪ್ರಕ್ರಿಯೆಯಾಗಿದೆ. ಮತ್ತು ಅನುಭವಿ ಆಟಗಾರರಾದ ರಹಾನೆ ಮತ್ತು ಧವನ್ ಯುವ ನಾಯಕನನ್ನು ಬೆಂಬಲಿಸಬೇಕಾಗುತ್ತದೆ ಎಂದು ದೇವ್ ಹೇಳಿದರು.
Published On - 12:53 pm, Wed, 7 April 21