AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಕೆ. ಎಲ್ ರಾಹುಲ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ; ವಾರದ ಬಳಿಕ ಮತ್ತೆ ಐಪಿಎಲ್​ ಅಖಾಡಕ್ಕಿಳಿಯುವ ಸಾಧ್ಯತೆ

IPL 2021: ಕೆ.ಎಲ್. ರಾಹುಲ್ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮುಂಬೈನ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಕೆ.ಎಲ್ ರಾಹುಲ್ ಅವರನ್ನು ಚಾರ್ಟರ್ ಪ್ಲೇನ್ ಮೂಲಕ ಅಹಮದಾಬಾದ್‌ನಿಂದ ಮುಂಬೈಗೆ ಸ್ಥಳಾಂತರಿಸಲಾಯಿತು

KL Rahul: ಕೆ. ಎಲ್ ರಾಹುಲ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ; ವಾರದ ಬಳಿಕ ಮತ್ತೆ ಐಪಿಎಲ್​ ಅಖಾಡಕ್ಕಿಳಿಯುವ ಸಾಧ್ಯತೆ
ಕೆ.ಎಲ್.ರಾಹುಲ್
ಪೃಥ್ವಿಶಂಕರ
|

Updated on: May 03, 2021 | 8:24 PM

Share

ಕೆ.ಎಲ್. ರಾಹುಲ್ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮುಂಬೈನ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಕೆ.ಎಲ್ ರಾಹುಲ್ ಅವರನ್ನು ಚಾರ್ಟರ್ ಪ್ಲೇನ್ ಮೂಲಕ ಅಹಮದಾಬಾದ್‌ನಿಂದ ಮುಂಬೈಗೆ ಸ್ಥಳಾಂತರಿಸಲಾಯಿತು. ಶೀಘ್ರದಲ್ಲೇ ಅವರು ಐಪಿಎಲ್ 2021 ಬಯೋ ಬಬಲ್ ಪ್ರವೇಶಿಸಲಿದ್ದಾರೆ ಎಂದು ನಂಬಲಾಗಿದೆ. ನಂತರ ಅಗತ್ಯವಾದ ಕ್ವಾರಂಟೈನ್​ ನಿಯಮವನ್ನು ಪೂರ್ಣಗೊಳಿಸಿದ ನಂತರ, ಅವರು ಒಂದು ವಾರದಲ್ಲಿ ಪಂಜಾಬ್ ತಂಡದ ಪರ ಆಡಲು ಲಭ್ಯವಿರುತ್ತಾರೆ. ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ನಾಯಕ. ಶಸ್ತ್ರಚಿಕಿತ್ಸೆಗಾಗಿ ತಂಡದಿಂದ ಬೇರ್ಪಟ್ಟ ಕಾರಣ ಮಯಂಕ್ ಅಗರ್ವಾಲ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ದೆಹಲಿ ವಿರುದ್ಧ ನಾಯಕತ್ವ ವಹಿಸಿದ ಅವರು ಮೇ 2 ರಂದು ಅಜೇಯ 99 ರನ್ ಗಳಿಸಿದರು. ಆದರೆ ತಂಡವು ಏಳು ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.

ರಾಹುಲ್ ಅವರ ಕ್ವಾರಂಟೈನ್​ ಬಗ್ಗೆ ನಿರ್ಧರಿಸಬಹುದು ಕೆ.ಎಲ್. ರಾಹುಲ್ ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟಮಿ ಹೊಂದಿದ್ದಾರೆ. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಮತ್ತು ಚೇತರಿಕೆ ಕೂಡ ತ್ವರಿತವಾಗಿ ಆಗಲಿದೆ. ಒಂದು ವಾರದೊಳಗೆ ಎಲ್ಲಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸಿದ್ಧರಾಗಿರುವಂತೆ ವೈದ್ಯರು ಕೆ.ಎಲ್.ರಾಹುಲ್ ಅವರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಸಂಘಟಕರೊಂದಿಗೆ ಮಾತನಾಡಲಿದ್ದು, ಇದರಿಂದ ರಾಹುಲ್ ಅವರ ಕ್ವಾರಂಟೈನ್​ ಬಗ್ಗೆ ನಿರ್ಧರಿಸಬಹುದು.

ಮೇ 1 ರಂದು ರಾಹುಲ್ ತೀವ್ರ ನೋವು ಅನುಭವಿಸಿದ್ದರು ಅಹಮದಾಬಾದ್‌ನಲ್ಲಿ ನಡೆಯುವ ಪಂದ್ಯದ ಮೊದಲು ಮೇ 2 ರಂದು ಕೆ.ಎಲ್.ರಾಹುಲ್ ಶಸ್ತ್ರಚಿಕಿತ್ಸೆಗೆ ಹೋಗುವ ಸುದ್ದಿ ಬಂದಿತ್ತು. ತೀವ್ರ ಹೊಟ್ಟೆ ನೋವಿನಿಂದ ರಾಹುಲ್ ಹೆಣಗಾಡುತ್ತಿದ್ದಾರೆ ಎಂದು ಪಂಜಾಬ್ ಕಿಂಗ್ಸ್ ಹೇಳಿಕೆ ನೀಡಿತ್ತು. ಮೇ 1 ರ ರಾತ್ರಿ ಹೋಟೆಲ್‌ನಲ್ಲಿ ತೀವ್ರ ನೋವು ಅನುಭವಿಸಿದ್ದರು. ಇದರ ನಂತರ ಅವರಿಗೆ ಔಷಧಿಗಳನ್ನು ನೀಡಲಾಯಿತು. ಆದರೆ ಯಾವುದೇ ಪರಿಹಾರ ಇರಲಿಲ್ಲ. ನಂತರ ತನಿಖೆಯಲ್ಲಿ ಕರುಳು ಸಂಬಂಧಿಸಿದ ಕಾಯಿಲೆ ಇದೆ ಎಂದು ತಿಳಿದುಬಂದಿತ್ತು. ಇದರ ನಂತರ, ಮೇ 2 ರಂದು ಅವರನ್ನು ಚಾರ್ಟರ್ ವಿಮಾನದಲ್ಲಿ ಮುಂಬೈಗೆ ಕಳುಹಿಸಲಾಯಿತು. ಕೆಎಲ್ ರಾಹುಲ್ ಕೊನೆಯ ಬಾರಿಗೆ ಏಪ್ರಿಲ್ 30 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಿದ್ದರು. ಅಜೇಯ 91 ರನ್ ಗಳಿಸಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು.

ಐಪಿಎಲ್ 2021 ರಲ್ಲಿ ರಾಹುಲ್ ಬ್ಯಾಟ್ ಅಬ್ಬರಿಸುತ್ತಿದೆ ರಾಹುಲ್ ಪ್ರಸ್ತುತ ಐಪಿಎಲ್ 2021 ರ ಟಾಪ್ ಸ್ಕೋರರ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಏಳು ಇನ್ನಿಂಗ್ಸ್‌ಗಳಲ್ಲಿ 66.20 ಸರಾಸರಿಯಲ್ಲಿ 331 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 136.21 ಆಗಿದೆ. ಈ ಋತುವಿನಲ್ಲಿ ಅವರು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಪಂದ್ಯಾವಳಿಯ ಎಂಟು ಪಂದ್ಯಗಳಲ್ಲಿ ಮೂರು ಗೆಲುವುಗಳು ಮತ್ತು ಐದು ಸೋಲುಗಳೊಂದಿಗೆ ಪಂಜಾಬ್ ಪ್ರಸ್ತುತ ಪಾಯಿಂಟ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ಲೇಆಫ್ ತಲುಪಲು ಪಂಜಾಬ್‌ಗೆ ಕೆ.ಎಲ್. ರಾಹುಲ್ ಅವರ ಅವಶ್ಯಕತೆಯಿದೆ.