ಕೊರೊನಾ ಕೋಲಾಹಲದ ಮಧ್ಯೆಯೂ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ದಿನದಿಂದ ದಿನಕ್ಕೆ, ಕ್ರಿಕೆಟ್ ಪ್ರಿಯರಿಗೆ ಕಿಕ್ ನೀಡುತ್ತಿದೆ. ಹೀಗಿರುವಾಗಲೇ ಐಪಿಎಲ್ನಲ್ಲಿ ಆಟಗಾರರ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಬಿಸಿಸಿಐ ನಿಯಮದ ಪ್ರಕಾರ ಒಂದು ತಂಡದಲ್ಲಿ ಬೆಂಚ್ ಕಾಯುತ್ತಿರುವ ಆಟಗಾರನನ್ನು, ಬೇರೆ ಫ್ರಾಂಚೈಸಿ ಬಯಸಿದರೆ ಆತನನ್ನು ವರ್ಗಾಯುಸಲಾಗುತ್ತೆ. ಐಪಿಎಲ್ ಮಧ್ಯೆ ಆಟಗಾರರನ್ನ ವರ್ಗಾಯಿಸುವ ನಿಯಮದ ಪ್ರಕಾರ, ಆಟಗಾರ ತನ್ನ ಫ್ರಾಂಚೈಸಿ ಪರ 2ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿರಬಾರದು. ಆಟಗಾರ ತನ್ನ ಮೂಲ ಫ್ರಾಂಚೈಸಿಯಿಂದ ಬೇರೆ ಫ್ರಾಂಚೈಸಿಗೆ ಸೇರಿಕೊಂಡ್ರೆ, ಮೂಲ ಫ್ರಾಂಚೈಸಿ ವಿರುದ್ಧದ ಪಂದ್ಯಗಳನ್ನ ಆಡುವಂತಿಲ್ಲ.
ಇನ್ನು ಈ ಸೀಸನ್ನಲ್ಲಿ ಯಾವ್ಯಾವ ಫ್ರಾಂಚೈಸಿಯಲ್ಲಿರುವ ಆಟಗಾರರು, ಬೇರೆ ಬೇರೆ ಫ್ರಾಂಚೈಸಿಗಳನ್ನು ಸೇರಿಕೊಳ್ತಾರೆ. ಯಾವ್ಯಾವ ಆಟಗಾರರ ಮೇಲೆ ಯಾವ್ಯಾವ ಫ್ರಾಂಚೈಸಿ ಕಣ್ಣಿಟ್ಟಿದೆ ಅನ್ನೋದರ ಪಟ್ಟಿ ಇಲ್ಲಿದೆ.
ಸ್ಯಾಮ್ ಬಿಲ್ಲಿಂಗ್ಸ್
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸ್ಯಾಮ್ ಬಿಲ್ಲಿಂಗ್ಸ್ ಈ ಸೀಸನ್ನಲ್ಲಿ ಒಂದೇ ಒಂದು ಪಂದ್ಯವನ್ನಾಡಿಲ್ಲ. ಹೀಗಾಗಿ ಡೆಲ್ಲಿ ಬಿಲ್ಲಿಂಗ್ಸ್ನನ್ನ ಆಟಗಾರರ ವರ್ಗಾವಣೆ ಪಟ್ಟಿಯಲ್ಲಿದೆ. ಬಿಲ್ಲಿಂಗ್ಸ್ನನ್ನ ತಮ್ಮ ಫ್ರಾಂಚೈಸಿಗೆ ಸೇರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಎದುರು ನೋಡ್ತಿದೆ. ಯಾಕಂದ್ರೆ ಪಂಜಾಬ್ ಬ್ಯಾಟಿಂಗ್ ವಿಭಾಗದಲ್ಲಿ ಒಬ್ಬ ವಿದೇಶಿ ಆಟಗಾರನನ್ನ ಹುಡುಕುತ್ತಿದ್ದು, ಬಿಲ್ಲಿಂಗ್ಸ್ನನ್ನ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ..
ಅಜಿಂಕ್ಯಾ ರಹಾನೆ
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಅಜಿಂಕ್ಯಾ ರಹಾನೆ, ಈ ಸೀಸನ್ನಲ್ಲಿ ಆಡಿರುವುದು ಒಂದೇ ಒಂದು ಪಂದ್ಯವನ್ನ. ರಹಾನೆಯನ್ನ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮನಸ್ಸು ಮಾಡಿದೆ. ಈ ಹಿಂದೆ ರಾಜಸ್ಥಾನ್ ತಂಡದ ನಾಯಕನಾಗಿದ್ದ ರಹಾನೆ, ಆರಂಭಿಕನಾಗಿ ಯಶಸ್ಸು ಕಂಡಿದ್ರು. ಹೀಗಾಗಿ ರಾಯಲ್ಸ್ ಬ್ಯಾಟಿಂಗ್ ವಿಭಾಗ ಬಲಿಷ್ಠ ಮಾಡಲು ರಹಾನೆ ಮೇಲೆ ಕಣ್ಣಿಟ್ಟಿದೆ..
ರಾಬಿನ್ ಉತ್ತಪ್ಪ
ಚೆನ್ನೈ ಸೂಪರ್ ಕಿಂಗ್ಸ್
ಈ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿರುವ ರಾಬಿನ್ ಉತ್ತಪ್ಪ, ಚೆನ್ನೈ ಪರ ಒಂದೂ ಪಂದ್ಯವನ್ನಾಡಿಲ್ಲ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಕಳೆದ ಸೀಸನ್ನಲ್ಲಿದ್ದ ಉತ್ತಪ್ಪನನ್ನ ತಮಗೆ ವಾಪಸ್ ನೀಡಿ ಎಂದು, ಮನವಿ ಮಾಡಿಕೊಂಡಿದೆ..
ಬೆನ್ ಕಟ್ಟಿಂಗ್
ಕೊಲ್ಕತ್ತಾ ನೈಟ್ ರೈಡರ್ಸ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಌಂಡ್ರೆ ರಸ್ಸೆಲ್, ಶಕೀಬ್ ಅಲ್ ಹಸನ್ ಮತ್ತು ಸುನಿಲ್ ನರೈನ್ರಂತ ಸ್ಟಾರ್ ಆಲ್ರೌಂಡರ್ಗಳಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ಕಟ್ಟಿಂಗ್ ಬೆಂಚ್ ಕಾಯುತ್ತಿದ್ದಾರೆ. ಸದ್ಯ ಆರ್ಸಿಬಿ ತಂಡದಲ್ಲಿದ್ದ ರಿಚರ್ಡ್ಸನ್ ಮತ್ತು ಜಂಪಾ ತವರಿಗೆ ವಾಪಸ್ ಆಗಿದ್ದಾರೆ. ಹೀಗಾಗಿ ಆರ್ಸಿಬಿ ಸ್ಟಾರ್ ಆಲ್ರೌಂಡರ್ ಹುಡುಕಾಟದಲ್ಲಿದ್ದು, ಕಟ್ಟಿಂಗ್ನನ್ನು ತೆಕ್ಕೆಗೆ ಹಾಕಿಕೊಳ್ಳುವ ಯೋಚನೆ ಮಾಡಿದೆ..
ವೃದ್ದಿಮಾನ್ ಸಾಹ
ಸನ್ ರೈಸರ್ಸ್ ಹೈದರಾಬಾದ್
ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಜಾನಿ ಬೇರ್ಸ್ಟೋ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ವೃದ್ದಿಮಾನ್ ಸಾಹಗೆ ಅವಕಾಶ ಸಿಗುತ್ತಿಲ್ಲ. ಇನ್ನು ಆಡಿದ ಎರಡೂ ಪಂದ್ಯಗಳಲ್ಲಿ ಸಾಹ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಪಂಜಾಬ್ ಫ್ರಾಂಚೈಸಿ, ಈ ಹಿಂದೆ ತಮ್ಮದೇ ತಂಡದಲ್ಲಿದ್ದ ಸಾಹನನ್ನ ವಾಪಸ್ ಕರೆತರುವ ಪ್ಲ್ಯಾನ್ ಮಾಡಿದೆ..
ಟಾಮ್ ಕರ್ರನ್
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ವೇಗಿ ಟಾಮ್ ಕರ್ರನ್ ಈ ಸೀಸನ್ನಲ್ಲಿ ಎರಡು ಪಂದ್ಯಗಳನ್ನಾಡಿದ್ದಾರೆ. ಆದ್ರೆ ಡೆಲ್ಲಿ ತಂಡದಲ್ಲಿ ಸ್ಟಾರ್ ವೇಗಿಗಳಿರೋದ್ರಿಂದ, ಟಾಮ್ ಕರ್ರನ್ರನ್ನ ಟ್ರಾನ್ಸಫರ್ ಮಾಡಲು ಫ್ರಾಂಚೈಸಿ ಮುಂದಾಗಿದೆ. ಕೇನ್ ರಿಚರ್ಡ್ಸನ್ ಬದಲಿಗೆ ಆರ್ಸಿಬಿ ಟಾಮ್ ಕರ್ರನ್ಗೆ ಗಾಳ ಹಾಕುವ ಸಾಧ್ಯತೆಯಿದೆ..
ಜಿಮ್ಮಿ ನಿಶಾಮ್
ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ನ್ಯೂಜಿಲೆಂಡ್ನ ಆಲ್ರೌಂಡರ್ ಜಿಮ್ಮಿ ನಿಶಾಮ್ಗೂ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಕ್ಕಿಲ್ಲ. ಹೀಗಾಗಿ ಮುಂಬೈ ನಿಶಾಮ್ನನ್ನ ಆಟಗಾರರ ವರ್ಗಾವಣೆ ಪಟ್ಟಿಗೆ ಸೇರಿಸಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ಬೆನ್ ಸ್ಟೋಕ್ಸ್ ಅಲಭ್ಯತೆ ನಿವಾರಿಸಿಕೊಳ್ಳಲು, ನಿಶಾಮ್ ಮೇಲೆ ಒಲವು ತೋರಿಸಿದೆ..
ಹೀಗೆ ಈ ಬಾರಿಯ ಐಪಿಎಲ್ನಲ್ಲಿ ಆಟಗಾರರ ವರ್ಗಾವಣೆ ಟೂರ್ನಿಗೆ ಮತ್ತಷ್ಟು ಕಿಕ್ ನೀಡಲಿದೆ. ಮೇ 23ರವರೆಗೆ ಆಟಗಾರರ ವರ್ಗಾವಣೆಗೆ ಅವಕಾಶ ನೀಡಿರುವದರಿಂದ, ಎಲ್ಲ ಫ್ರಾಂಚೈಸಿಗಳು ಆಟಗಾರರ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಿಕೊಳ್ಳಲಿವೆ.