IPL 2021: ಈ ಐಪಿಎಲ್ನಲ್ಲಿ ಎಸೆದಿರುವ 90 ಬಾಲ್ಗಳಲ್ಲಿ 53 ಡಾಟ್ ಬಾಲ್ಗಳು.. ಸಿರಾಜ್ ಹೆಸರಲ್ಲಿ ದಾಖಲಾಯ್ತು ಹೊಸದೊಂದು ದಾಖಲೆ
IPL 2021 Mohammed Siraj: ಪ್ರಸ್ತುತ ಐಪಿಎಲ್ನಲ್ಲಿ ಮೊಹಮ್ಮದ್ ಸಿರಾಜ್ ಮಾಡಿರುವ 15 ಓವರ್ಗಳಲ್ಲಿ, ಅಂದ್ರೆ ಎಸೆದಿರುವ 90 ಬಾಲ್ಗಳಲ್ಲಿ ಬರೋಬ್ಬರಿ 53 ಡಾಟ್ ಬಾಲ್ಗಳನ್ನ ಎಸೆದಿದ್ದಾರೆ.

ಈ ಸೀಸನ್ನಲ್ಲಿ ಆರ್ಸಿಬಿ ಸತತ ನಾಲ್ಕು ಪಂದ್ಯಗಳನ್ನ ಗೆದ್ದು ಬೀಗಿದೆ ಅಂದ್ರೆ, ಅದಕ್ಕೆ ಬ್ಯಾಟ್ಸ್ಮನ್ಗಳೊಂದೇ ಕಾರಣವಲ್ಲ. ಬ್ಯಾಟ್ಸ್ಮನ್ಗಳಿಗಿಂತ ಬೌಲರ್ಗಳ ಕೊಡುಗೆಯೇ ಹೆಚ್ಚಾಗಿದೆ. ಅದ್ರಲ್ಲೂ ಡೆತ್ ಓವರ್ನಲ್ಲಿ ಆರ್ಸಿಬಿ ಬೌಲರ್ಗಳ ಪರಿಣಾಮಕಾರಿ ಸ್ಪೆಲ್, ಎದುರಾಳಿಗಳಿಗೆ ಸೋಲಿನ ಬರೆ ಎಳೆಯುವಂತೆ ಮಾಡ್ತಿದೆ. ಸದ್ಯ ಆರ್ಸಿಬಿ ವೇಗಿ ಹರ್ಷಲ್ ಪಟೇಲ್ ಕಳೆದ ನಾಲ್ಕು ಪಂದ್ಯಗಳಲ್ಲಿ 12 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಆದ್ರೆ ಆರ್ಸಿಬಿ ತಂಡದ ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್, ನಾಲ್ಕು ಪಂದ್ಯಗಳಲ್ಲಿ ಐದೇ ವಿಕೆಟ್ ಪಡೆದ್ರೂ, ಅರ್ಧಶತಕ ಸಿಡಿಸಿದ್ದಾರೆ.
ಅರೇ ಇದೇನಿದು ಬೌಲರ್ ಸಿರಾಜ್ ಎಲ್ಲಿ ಅರ್ಧಶತಕ ಸಿಡಿಸೋದಕ್ಕೆ ಸಾಧ್ಯ ಅಂತೀರಾ. ಅಲ್ಲೇ ಇರೋದು ಮಜಾ. ಸಿರಾಜ್ ಡಾಟ್ ಬಾಲ್ಗಳನ್ನ ಎಸೆಯೋದ್ರಲ್ಲಿ, ಈ ಸೀಸನ್ನಲ್ಲಿ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ.. ಈ ಸೀಸನ್ನಲ್ಲಿ ಸದ್ಯ ಅತೀ ಹೆಚ್ಚು ಡಾಟ್ ಬಾಲ್ಗಳನ್ನ ಎಸೆದವರ ಪಟ್ಟಿಯಲ್ಲಿ ಸಿರಾಜ್ ಅಗ್ರಸ್ಥಾನದಲ್ಲಿದ್ದಾರೆ.
90 ಬಾಲ್ಗಳಲ್ಲಿ 53 ಡಾಟ್ ಬಾಲ್ ಮಾಡಿರುವ ಸಿರಾಜ್! ಪ್ರಸ್ತುತ ಐಪಿಎಲ್ನಲ್ಲಿ ಮೊಹಮ್ಮದ್ ಸಿರಾಜ್ ಮಾಡಿರುವ 15 ಓವರ್ಗಳಲ್ಲಿ, ಅಂದ್ರೆ ಎಸೆದಿರುವ 90 ಬಾಲ್ಗಳಲ್ಲಿ ಬರೋಬ್ಬರಿ 53 ಡಾಟ್ ಬಾಲ್ಗಳನ್ನ ಎಸೆದಿದ್ದಾರೆ. ಈ ಸೀಸನ್ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲೇ ಅತೀ ಹೆಚ್ಚು ಡಾಟ್ ಬಾಲ್ಗಳನ್ನ ಮಾಡಿರುವ ಸಿರಾಜ್, ಬೂಮ್ರಾ, ರಬಾಡಾ, ಬೌಲ್ಟ್ರಂತ ಸ್ಟಾರ್ ಬೌಲರ್ಗಳಿಗೆ ಶಾಕ್ ನೀಡಿದ್ದಾರೆ..
ರಸ್ಸೆಲ್ಗೆ ಒಂದೇ ಓವರ್ನಲ್ಲಿ 5 ಡಾಟ್ ಬಾಲ್ ಮಾಡಿದ್ದ ಸಿರಾಜ್! ಈ ಸೀಸನ್ನಲ್ಲಿ ಸಿರಾಜ್ ಎಷ್ಟು ಎಫೆಕ್ಟೀವ್ ಬೌಲರ್ ಅನ್ನೋದಕ್ಕೆ ಮೊಹಮ್ಮದ್ ಸಿರಾಜ್, ಕೆಕೆಆರ್ ತಂಡದ ದೈತ್ಯ ರಸ್ಸೆಲ್ನನ್ನ ಕಟ್ಟಿ ಹಾಕಿದ್ದೇ ಸಾಕ್ಷಿ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ 17ನೇ ಓವರ್ನಲ್ಲಿ ಸಿರಾಜ್, ದೈತ್ಯ ರಸ್ಸೆಲ್ಗೆ ಮೊದಲ ಐದು ಬಾಲ್ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡಲಿಲ್ಲ..
ಅತೀ ಹೆಚ್ಚು ಡಾಟ್ ಬಾಲ್ ಎಸೆದವರು ಪ್ರಸ್ತುತ ಐಪಿಎಲ್ನಲ್ಲಿ 53 ಡಾಟ್ ಬಾಲ್ಗಳನ್ನ ಮಾಡಿರುವ ಸಿರಾಜ್ ಅಗ್ರಸ್ಥಾನದಲ್ಲಿದ್ರೆ, ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೌಲ್ಟ್ 49 ಡಾಟ್ ಬಾಲ್ಗಳನ್ನ ಮಾಡಿ 2ನೇ ಪ್ಲೇಸ್ನಲ್ಲಿದ್ದಾರೆ. ಚೆನ್ನೈ ತಂಡದ ದೀಪಕ್ ಚಹರ್ 47 ಡಾಟ್ ಬಾಲ್ ಮಾಡಿದ್ರೆ, ಹೈದರಾಬಾದ್ನ ರಶೀದ್ ಖಾನ್ 42 ಡಾಟ್ ಬಾಲ್ಗಳನ್ನ ಮಾಡಿದ್ದಾರೆ. ಕೇವಲ ಈ ಸೀಸನ್ನಲ್ಲಿ ಮಾತ್ರವಲ್ಲ.. ಐಪಿಎಲ್ನಲ್ಲಿ ಪ್ರತೀ ಸೀಸನ್ನಲ್ಲೂ ರಸ್ಸೆಲ್ ಡಾಟ್ ಬಾಲ್ಗಳನ್ನ ಎಸೆಯೋದ್ರಲ್ಲಿ ಪಂಟರ್ ಎನಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಸಿರಾಟ್ ಡಾಟ್ ಬಾಲ್ 2020ರ ಐಪಿಎಲ್ನಲ್ಲಿ ಮೊಹಮ್ಮದ್ ಸಿರಾಜ್ 14 ಪಂದ್ಯಗಳಿಂದ ಒಟ್ಟು 140 ಡಾಟ್ ಬಾಲ್ಗಳನ್ನ ಮಾಡಿದ್ರೆ, 2019ರಲ್ಲಿ ಸಿರಾಜ್ 9 ಪಂದ್ಯಗಳಿಂದ 69 ಡಾಟ್ ಬಾಲ್ಗಳನ್ನ ಮಾಡಿದ್ರು. 2018ರಲ್ಲಿ 11 ಪಂದ್ಯಗಳಿಂದ 90 ಡಾಟ್ ಬಾಲ್ಗಳನ್ನ ಮಾಡಿದ್ರೆ, 2017ರ ಐಪಿಎಲ್ನಲ್ಲಿ ಹೈದರಾಬಾದ್ ತಂಡದ ಪರ 48 ಡಾಟ್ ಬಾಲ್ಗಳನ್ನ ಮಾಡಿದ್ರು..
ಸ್ಟೇನ್ ಹೆಸರಿನಲ್ಲಿದೆ ಅತೀ ಹೆಚ್ಚು ಡಾಟ್ ಬಾಲ್ ಮಾಡಿದ ದಾಖಲೆ! ಐಪಿಎಲ್ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ಗಳನ್ನ ಮಾಡಿದ ಸಾಧನೆ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಹೆಸರಿನಲ್ಲಿದೆ. 2013ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಸ್ಟೇನ್, ಒಟ್ಟು 211 ಡಾಟ್ ಬಾಲ್ಗಳನ್ನ ಮಾಡಿದ್ರು. ಇದು ಐಪಿಎಲ್ನಲ್ಲಿ ವೇಗಿಯೊಬ್ಬನ ಸಾರ್ವಕಾಲಿಕ ದಾಖಲೆಯಾಗುಳಿದಿದೆ..
ಆದ್ರೀಗ ಕೇವಲ ನಾಲ್ಕು ಪಂದ್ಯಗಳಲ್ಲೇ 53 ಡಾಟ್ ಬಾಲ್ಗಳನ್ನ ಮಾಡಿರುವ ಸಿರಾಜ್ಗೆ, ಡೇಲ್ ಸ್ಟೇನ್ ದಾಖಲೆಯನ್ನ ಅಳಿಸಿ ಹಾಕುವ ಅವಕಾಶವಿದೆ. ಇಲ್ಲಾ ಕಳೆದ ಸೀಸನ್ನಲ್ಲಿ 175 ಡಾಟ್ ಬಾಲ್ಗಳನ್ನ ಮಾಡಿರುವ ರಾಜಸ್ಥಾನ್ ರಾಯಲ್ಸ್ ತಂಡದ ಜೋಫ್ರಾ ಆರ್ಚರ್ ದಾಖಲೆಯನ್ನು ಅಳಿಸಿ ಹಾಕುವ ಅವಕಾಶವಿದೆ..
