ಇಂದು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರಸ್ಪರ ಮೈದಾನದಲ್ಲಿ ಹೋರಾಡಲಿದ್ದು, ಈ ಪಂದ್ಯವು ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಿಬಿಕೆಎಸ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಗೆದ್ದು ತಮ್ಮ ಸೋಲಿನ ಓಟವನ್ನು ಕೊನೆಗೊಳಿಸಿಕೊಂಡಿದೆ ಮತ್ತು ಈ ವರ್ಷದ ಐಪಿಎಲ್ನಲ್ಲಿ ಇನ್ನೂ ಯಾವುದೇ ಲಯ ಕಂಡುಕೊಳ್ಳದ ಕೆಕೆಆರ್ ತಂಡವನ್ನು ಸೋಲಿಸಿ ಗೆಲುವಿನ ಓಟ ಮುಂದುವರೆಸಲು ನೋಡುತ್ತಿದೆ.
ಎಂಐ ವಿರುದ್ಧ ಪಿಬಿಕೆಎಸ್ ಜಯಗಳಿಸಲು ಒಂದು ಕಾರಣವೆಂದರೆ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಮಾಡಿದ ರೀತಿ. ಈ ಆವೃತ್ತಿಯಲ್ಲಿ ಇದುವರೆಗೆ ಆರಂಭಿಕರು ನೀಡಿದ ಅತ್ಯುತ್ತಮ ಪ್ರದರ್ಶನ ಅದು. 3 ನೇ ಕ್ರಮದಲ್ಲಿ ಬಂದ ಕ್ರಿಸ್ ಗೇಲ್ ಸಹ ಪ್ರಬುದ್ಧತೆ ಮತ್ತು ಬ್ಯಾಟಿಂಗ್ ಅನುಭವವನ್ನು ತೋರಿಸಿದರು.
ಮತ್ತೊಂದೆಡೆ, ಕೆಕೆಆರ್ ತಮ್ಮ ತಂಡದಲ್ಲಿ ದೃಢವಾದ ಟಿ 20 ಆಟಗಾರರನ್ನು ಹೊಂದಿದ್ದರೂ ಸಹ, ನಿರೀಕ್ಷೆಗಳಿಗೆ ತಕ್ಕಂತೆ ಆಟವಾಡಲು ವಿಫಲವಾಗಿದೆ. ಅವರು ಈ ಬಾರಿಯ ತಮ್ಮ ಪಯಣವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದರೂ ನಂತರದಲ್ಲಿ ಸಂಪೂರ್ಣವಾಗಿ ಟ್ರ್ಯಾಕ್ ಕಳೆದುಕೊಂಡಿದ್ದಾರೆ. ತಮ್ಮ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧ ಇಯೊನ್ ಮೋರ್ಗಾನ್ ಮತ್ತು ತಂಡ ತುಂಬಾ ಕಳಪೆಯಾಗಿ ಆಡಿ ಪಂದ್ಯವನ್ನು ಕಳೆದುಕೊಂಡಿತು. ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ನಿತೀಶ್ ರಾಣಾ ವಿಫಲರಾಗಿದ್ದರು. ಹೀಗಾಗಿ ನಾಳಿನ ಪಂದ್ಯದಲ್ಲಿ ಸ್ವಲ್ಪ ಬದಲಾವಣೆಯನ್ನು ನೋಡಬಹುದು.
ಪಿಬಿಕೆಎಸ್ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯ 21 ಯಾವಾಗ ನಡೆಯುತ್ತದೆ?
ಪಿಬಿಕೆಎಸ್ ಮತ್ತು ಕೆಕೆಆರ್ ನಡುವಿನ ಐಪಿಎಲ್‌ನ ಪಂದ್ಯ 21 ಏಪ್ರಿಲ್ 20, 2021 ರಂದು ನಡೆಯಲಿದೆ.
ಪಂದ್ಯದ ಸ್ಥಳ ಯಾವುದು?
ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?
ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.