IPL 2021: ಒಂದೇ ಇನಿಂಗ್ಸ್.. ರಾತ್ರೋ ರಾತ್ರಿ ಸ್ಟಾರ್ ಆದ ಆರ್​ಸಿಬಿ ಆಟಗಾರ ಅಜರ್! ಅಜರುದ್ದೀನ್ ಹೆಸರಿನ ಹಿಂದಿದೆ ರೋಚಕ ಸ್ಟೋರಿ!

|

Updated on: Apr 07, 2021 | 12:10 PM

IPL 2021: ಕೇವಲ 37 ಬಾಲ್ಗಲ್ಲೇ ಭರ್ಜರಿ ಶತಕ ಸಿಡಿಸಿದ್ದ ಅಜರುದ್ದೀನ್, 54 ಬಾಲ್ಗಳಲ್ಲಿ 137 ರನ್ಗಳಿಸಿದ್ದ. ತನ್ನ ಸ್ಫೋಟಕ ಬ್ಯಾಟಿಂಗ್ನಿಂದಲೇ ಅಜರ್, ಬಲಿಷ್ಟ ಮುಂಬೈ ಆಟಗಾರರನ್ನ ಬೆಚ್ಚಿ ಬೀಳಿಸಿದ್ದ.

IPL 2021: ಒಂದೇ ಇನಿಂಗ್ಸ್.. ರಾತ್ರೋ ರಾತ್ರಿ ಸ್ಟಾರ್ ಆದ ಆರ್​ಸಿಬಿ ಆಟಗಾರ ಅಜರ್!  ಅಜರುದ್ದೀನ್ ಹೆಸರಿನ ಹಿಂದಿದೆ ರೋಚಕ ಸ್ಟೋರಿ!
ಮೊಹಮ್ಮದ್ ಅಜರುದ್ದೀನ್
Follow us on

ಮೊಹಮ್ಮದ್ ಅಜರುದ್ದೀನ್.. ಭಾರತೀಯ ಕ್ರಿಕೆಟ್ ಕಂಡ ಅಪರೂಪದ ಕ್ರಿಕೆಟಿಗ. ನಾಯಕನಾಗಿ ಹಾಗೇ ಒಬ್ಬ ಬ್ಯಾಟ್ಸ್ಮನ್ ಆಗಿ ಅಜರ್, ಅಪ್ರತಿಮ ಪ್ರತಿಭೆ. ಲೈಟ್ ವೇಯ್ಟ್ ಬ್ಯಾಟ್ನಿಂದಲೇ ರನ್ ಮಳೆ ಹರಿಸಿದ ಸರದಾರ. ಇವತ್ತಿಗೂ ಮೊಹಮ್ಮದ್ ಅಜರುದ್ದೀನ್ ಬ್ಯಾಟಿಂಗ್ ಸ್ಟೈಲ್ ಆಗಲಿ. ವಾಕಿಂಗ್ ಸ್ಟೈಲ್ ಆಗಲಿ. ಮತ್ತೊಬ್ಬರಿಂದ ಕಾಫಿ ಮಾಡೋಕೆ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅಜರ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಚಾಪನ್ನ ಒತ್ತಿದ್ದಾರೆ. ಆದ್ರೀಗ ಐಪಿಎಲ್ನಲ್ಲಿ ಮೊಹಮ್ಮದ್ ಅಜರುದ್ದೀನ್ ಹೆಸರಿನ ಯುವ ಕ್ರಿಕೆಟಿಗನ ಹವಾ ಶುರುವಾಗಿದೆ. ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ಈ ಮೊಹಮ್ಮದ್ ಅಜರುದ್ದೀನ್ಗೂ, ದಿಗ್ಗಜ ಮೊಹಮ್ಮದ್ ಅಜರುದ್ದೀನ್ಗೂ ಒಂದು ಅಪರೂಪದ ನಂಟಿದೆ.

ಕೇರಳದ ಹುಟ್ಟಿ ಬೆಳೆದ ಈ ಮೊಹಮ್ಮದ್ ಅಜರುದ್ದೀನ್, ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿಗೆ ಹರಾಜಾಗಿದ್ದ. ಇದೇ ಅಜರುದ್ದೀನ್ ಮೇಲೆ ಕ್ಯಾಪ್ಟನ್ ಕೊಹ್ಲಿ ಕಣ್ಣಿಟ್ಟಿದ್ದಾರೆ. ಪಡಿಕ್ಕಲ್ ಅಲಭ್ಯತೆಯಲ್ಲಿ ಅಜರ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯೋಕೆ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ಒಂದೇ ಇನಿಂಗ್ಸ್.. ರಾತ್ರೋ ರಾತ್ರಿ ಸ್ಟಾರ್ ಆದ ಅಜರ್!
27 ವರ್ಷದ ಮೊಹಮ್ಮದ್ ಅಜರುದ್ದೀನ್.. ಭಾರತೀಯ ಕ್ರಿಕೆಟ್ನಲ್ಲಿ ಸದ್ದು ಮಾಡಿದ್ದು ಕೇವಲ ಒಂದೇ ಒಂದು ಇನಿಂಗ್ಸ್ನಿಂದ. ಜನವರಿಯಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ, ಬಲಿಷ್ಟ ಮುಂಬೈ ವಿರುದ್ಧ ರಣ ವಿಕ್ರಮನ ಬ್ಯಾಟಿಂಗ್ ಮಾಡಿದ್ದ. ಕೇವಲ 37 ಬಾಲ್ಗಲ್ಲೇ ಭರ್ಜರಿ ಶತಕ ಸಿಡಿಸಿದ್ದ ಅಜರುದ್ದೀನ್, 54 ಬಾಲ್ಗಳಲ್ಲಿ 137 ರನ್ಗಳಿಸಿದ್ದ. ತನ್ನ ಸ್ಫೋಟಕ ಬ್ಯಾಟಿಂಗ್ನಿಂದಲೇ ಅಜರ್, ಬಲಿಷ್ಟ ಮುಂಬೈ ಆಟಗಾರರನ್ನ ಬೆಚ್ಚಿ ಬೀಳಿಸಿದ್ದ. ಆವತ್ತು ಅಜರ್ ಆಟಕ್ಕೆ, ವಿರೇಂದ್ರ ಸೆಹ್ವಾಗ್ರಿಂದ ಹಿಡಿದು ಕ್ರಿಕೆಟ್ ದಿಗ್ಗಜರೆಲ್ಲಾ ಹಾಡಿ ಹೊಗಳಿದ್ರು.

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿರುವ ಅಜರುದ್ದೀನ್, ಪಕ್ಕಾ ಹೊಡಿ ಬಡಿ ಆಟಗಾರ. ಒಮ್ಮೆ ಕ್ರೀಸ್ ಕಚ್ಚಿ ನಿಂತ್ರೆ, ರನ್ ಸ್ಪೋಟವಾಗುತ್ತೆ. ಎದುರಾಳಿ ತಂಡದಲ್ಲಿ ಎಂತಹದ್ದೇ ಬಲಿಷ್ಟ ಬೌಲರ್ಗಳಿರಲಿ.. ಅಜರ್ ಲೀಲಾಜಾಲವಾಗಿ ಬೌಂಡರಿ ಸಿಕ್ಸರ್ ಸಿಡಿಸಿ ಅಬ್ಬರಿಸ್ತಾನೆ. ಇದೇ ಕಾರಣಕ್ಕೆ ವಿರಾಟ್ ಪಡಿಕ್ಕಲ್ ಅಲಭ್ಯತೆಯಲ್ಲಿ, ಅಜರ್ ಜೊತೆಗೆ ಆರಂಭಿಕನಾಗಿ ಇನಿಂಗ್ಸ್ ಆರಂಭಿಸುವ ಯೋಚನೆಯಲ್ಲಿದ್ದಾರೆ..

ಐಪಿಎಲ್ ಹರಾಜಿಗೂ ಮುನ್ನ ಅಜರ್, ನಾನು ಆರ್ಸಿಬಿ ತಂಡದಲ್ಲಿ ಕೊಹ್ಲಿ ಜೊತೆಗೆ ಆಡುವ ಭಯಕೆಯನ್ನ ವ್ಯಕ್ತಪಡಿಸಿದ್ದ. ಅಜರ್ ಕಂಡ ಕನಸು ನನಸಾಗಿದ್ದು, ಕೊಹ್ಲಿ ತಂಡವನ್ನೇ ಸೇರಿಕೊಂಡಿದ್ದಾನೆ. ಆದ್ರೀಗ ಪಡಿಕ್ಕಲ್ ಅನುಪಸ್ಥಿತಿ ಅಜರ್ ಅದೃಷ್ಟ ಬದಲಾಗುವಂತೆ ಮಾಡಿದೆ. ಯಾಕಂದ್ರೆ ವಿರಾಟ್ಗೆ, ಸಚಿನ್ ಬೇಬಿ ಮತ್ತು ಭರತ್ಗಿಂತ ಅಜರ್ ಮೇಲೆ ಹೆಚ್ಚಿನ ನಂಬಿಕೆಯಿದೆ. ಹೀಗಾಗಿ ಆರ್ಸಿಬಿಗೆ ಅಜರ್ ಆಧಾರಸ್ಥಂಬವಾಗಿ ಗುರುತಿಸಿಕೊಂಡಿದ್ದಾನೆ..

ಅಜರುದ್ದೀನ್ ಹೆಸರಿನ ಹಿಂದಿದೆ ರೋಚಕ ಸ್ಟೋರಿ!
ಈತನಿಗೆ ಮೊಹಮ್ಮದ್ ಅಜರುದ್ದೀನ್ ಅಂತಾ ಹೆಸರಿಟ್ಟಿರೋದ್ರ ಹಿಂದೆ, ಒಂದು ಸ್ವಾರಸ್ಯಕರವಾದ ಕಹಾನಿ ಇದೆ. ಅಜರ್‌ ಜನಿಸಿದ್ದು ಕಾಸರಗೋಡಿನ ತಳಂಗೆರೆಯಲ್ಲಿ. ಈತನ ಮೂಲ ಹೆಸರು ಅಜ್ಮಲ್‌. ಆದ್ರೆ ಅಜ್ಮಲ್ ಅಣ್ಣ, ಕಮರುದ್ದೀನ್, ಮೊಹಮ್ಮದ್ ಅಜರುದ್ದೀನ್ ಅವರ ಅಪ್ಪಟ ಅಭಿಮಾನಿ. ಹೀಗಾಗಿ ತನ್ನ ಹೆತ್ತವರ ಮನವೊಲಿಸಿ ಚಿಕ್ಕಂದಿನಲ್ಲೇ ತಮ್ಮ ಅಜ್ಮಲ್ಗೆ, ಮೊಹಮ್ಮದ್ ಅಜರುದ್ದೀನ್ ಎಂದು ಹೊಸ ಹೆಸರಿಟ್ಟಿದ್ದ.

ಅಜರುದ್ದೀನ್ಗೆ 7 ಮಂದಿ ಅಣ್ಣಂದಿರು. ಏಳು ಮಂದಿ ಅಣ್ಣಂದಿರಿಗೂ ಅಜರ್, ಮತ್ತೊಮ್ಮೆ ಅಜರುದ್ದೀನ್ ಆಗ್ಬೇಕು ಅನ್ನೋ ಕನಸಿದೆ. 15ನೇ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡ ಅಜರ್, 20ನೇ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡ. ಅಣ್ಣನ ಆಶ್ರಯದಲ್ಲೇ ಬೆಳೆದ ಅಜರ್ಗೆ, ನನಗ್ಯಾಕೆ ಅಜರುದ್ದೀನ್ ಅಂತಾ ಹೆಸರಿಟ್ಟಿದ್ದಾರೆ ಅಂತ ಯೋಚಿಸಿದ್ದ. ಆವತ್ತೇ ಅಜರ್ ತಾನು ಮತ್ತೊಬ್ಬ ಅಜರ್ ಆಗ್ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದು..

ನಾನು ಅಜರ್ ಎಂದು ಅಜರುದ್ದೀನ್ಗೆ ಪರಿಚಯಿಸಿಕೊಂಡ!
ಕಳೆದ ಫೆಬ್ರವರಿಯಲ್ಲಿ ಮೊಹಮ್ಮದ್ ಅಜರುದ್ದೀನ್ ಕೇರಳ ಕ್ರಿಕೆಟ್ ಸಂಸ್ಥೆಗೆ ಭೇಟಿ ಕೊಟ್ಟಿದ್ರು. ಆವತ್ತು ಅಜರುದ್ದೀನ್ಗೆ ಕೈ ಕುಲುಕಿದ ಈತ, ನಾನೂ ಕೂಡ ಅಜರ್ ಎಂದು ಪರಿಚಯಿಸಿಕೊಂಡಿದ್ದ. ಅಜರ್ ಮುಂದೆ, ತನ್ನ ಹೆಸರಿನ ಹಿಂದಿರುವ ಅಣ್ಣನ ಅಭಿಮಾನದ ಕಹಾನಿ ಬಿಚ್ಚಿಟ್ಟಿದ್ದ.

ಕೇರಳದಾದ್ಯಂತ ಮತ್ತು ಕ್ರಿಕೆಟ್ ವಲಯದಲ್ಲಿ ಜ್ಯೂನಿಯರ್ ಅಜರ್ ಎಂದು ಕರೆಸಿಕೊಳ್ಳುತ್ತಿರುವ ಈತ, ಕ್ಯಾಪ್ಟನ್ ಕೊಹ್ಲಿ ಗಮನ ಸೆಳೆದಿದ್ದಾನೆ. ಒಂದು ವೇಳೆ ಅಜರ್ಗೆ ಆರ್ಸಿಬಿಯ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿದ್ದೇ ಆದ್ರೆ, ತನ್ನ ಏಳು ಮಂದಿ ಅಣ್ಣಂದಿರ ಕನಸು ನನಸು ಮಾಡದೇ ಇರೋದಿಲ್ಲ.

ಇದನ್ನೂ ಓದಿ:IPL 2021: ಮೊದಲ ಪಂದ್ಯಕ್ಕೆ ಪಡಿಕ್ಕಲ್​ ಅಲಭ್ಯ! ಕೊಹ್ಲಿ ಜೊತೆ ಆರ್​ಸಿಬಿ ಇನ್ನಿಂಗ್ಸ್​ ಆರಂಭಿಸುವವರು ಯಾರು?