IPL 2021: ಆರ್​ಸಿಬಿ ಮೇಲೆ ಪಂಜಾಬ್​ಗೆ ಸಿಕ್ಕಾಪಟ್ಟೆ ಲವ್.. ಬೆಂಗಳೂರು ತಂಡದ ಜೆರ್ಸಿ ಕಾಪಿ ಹೊಡೆದ ಕಿಂಗ್ಸ್​ಗೆ ಈಗ ಟ್ರೋಲಿಗರ ಕಾಟ!

IPL 2021: ಮುಂದಿನ ಆವೃತ್ತಿಯಲ್ಲಿಪಂಜಾಬ್, ತನ್ನ ಹೆಸರನ್ನು ಮಾಜಿ-ಆರ್ಸಿಬಿ ಎಂದು ಬದಲಾಯಿಸುತ್ತದೆ ಎಂದು ಅಭಿಮಾನಿಯೊಬ್ಬರು ಪಂಜಾಬ್ ಕಿಂಗ್ಸ್ ಅನ್ನು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.

IPL 2021: ಆರ್​ಸಿಬಿ ಮೇಲೆ ಪಂಜಾಬ್​ಗೆ ಸಿಕ್ಕಾಪಟ್ಟೆ ಲವ್.. ಬೆಂಗಳೂರು ತಂಡದ ಜೆರ್ಸಿ ಕಾಪಿ ಹೊಡೆದ ಕಿಂಗ್ಸ್​ಗೆ ಈಗ ಟ್ರೋಲಿಗರ ಕಾಟ!
ಆರ್​ಸಿಬಿಯ ಹಳೆ ಜೆರ್ಸಿ, ಪಂಜಾಬ್​ನ ಇಂದಿನ ಜೆರ್ಸಿ

Updated on: Mar 31, 2021 | 1:02 PM

ಇಂಡಿಯನ್ ಪ್ರೀಮಿಯರ್ ಲೀಗ್ 14 ರ ಆವೃತ್ತಿಗೂ ಮುನ್ನ ತನ್ನ ತಂಡದ ಹೆಸರನ್ನು ಬದಲಿಸಿದ ಪ್ರೀತಿ ಜಿಂಟಾ ಸಹ-ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಮ್ಮ ಹೊಸ ಜರ್ಸಿಯನ್ನು ಮಂಗಳವಾರ ಅನಾವರಣಗೊಳಿಸಿತು. ಪಂಜಾಬ್‌ ಕಿಂಗ್ಸ್‌ ತಂಡ ತನ್ನ ನೂತನ ಸಮವಸ್ತ್ರಕ್ಕೆ ಕೆಂಪು ಮತ್ತು ಸ್ವರ್ಣ ಬಣ್ಣಗಳ ಬಳಕೆ ಮಾಡಿಕೊಂಡಿದ್ದು, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಐಪಿಎಲ್ 2021 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಗೂ ಮೊದಲೇ ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡ ಪಂಜಾಬ್‌ ಕಿಂಗ್ಸ್‌ ಎಂದು ಹೊಸ ರೂಪ ತಾಳಿ ನೂತನ ಲಾಂಚನವನ್ನೂ ಅನಾವರಣ ಪಡಿಸಿತ್ತು.

ಈ ತಂಡದಲ್ಲಿ ಹಲವು ಆಟಗಾರರು ಕನ್ನಡಿಗರಾಗಿದ್ದಾರೆ
ಆದರೆ ಪಂಜಾಬ್​ ತಂಡವನ್ನು ಈಗಾಗಲೇ ಕ್ರಿಕೆಟ್​ ಅಭಿಮಾನಿಗಳು ಎರಡನೇ ಆರ್​ಸಿಬಿ ತಂಡ ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಈ ತಂಡದಲ್ಲಿ ಹಲವು ಆಟಗಾರರು ಕನ್ನಡಿಗರಾಗಿದ್ದಾರೆ. ಅಲ್ಲದೆ ಮೊದಲು ಆರ್​ಸಿಬಿ ತಂಡದಲ್ಲಿ ಮಿಂಚಿದ್ದ ಆಟಗಾರರು ಹೆಚ್ಚಾಗಿ ಪಂಜಾಬ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲು ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕುಂಬ್ಳೆ, ಈಗ ಪಂಜಾಬ್​ ತಂಡದ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಆರ್​ಸಿಬಿಯಲ್ಲಿ ಅಬ್ಬರಿಸಿದ್ದ ಗೇಲ್​, ಈಗ ಪಂಜಾಬ್​ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಪಂಜಾಬ್​ ತಂಡದ ಸಾರಥ್ಯವಹಿಸಿರುವ ಕನ್ನಡಿಗ ರಾಹುಲ್​, ಮೊದಲು ಆಡಿದ್ದು ನಮ್ಮ ಆರ್​ಸಿಬಿ ತಂಡದಲ್ಲಿ. ಪಂಜಾಬ್​ ತಂಡದಲ್ಲಿರುವ ಮತ್ತೊಬ್ಬ ಆಟಗಾರ ಮಾಯಾಂಕ್ ಅಗರ್​ವಾಲ್​ ಕನ್ನಡಿಗನೆಂಬುದು ವಿಶೇಷವಾಗಿದೆ. ಹೀಗೆ ಇನ್ನೂ ಅನೇಕ ಆಟಗಾರರು ಆರ್​ಸಿಬಿ ಮತ್ತು ಕರ್ನಾಟಕವನ್ನ ಪ್ರಧಿನಿದಿಸಿದವರಾಗಿದ್ದಾರೆ.

ಹೀಗಾಗಿ ಅಂದಿನಿಂದಲೂ ಆರ್​ಸಿಬಿ ಮೇಲೆ ಹೆಚ್ಚು ಒಲವಿರುವ ಒಡತಿ ಪ್ರೀತಿ ಜಿಂಟಾ ಈಗ ತನ್ನ ತಂಡದ ಆಟಗಾರರ ಜೆರ್ಸಿಯಲ್ಲೂ ಸಹ ಆರ್​ಸಿಬಿಯನ್ನು ಅನುಕರಣೆ ಮಾಡಿದ್ದಾರೆ ಎಂದು ನೆಟ್ಟಿಗರು ಸಿಕ್ಕಾಪಟೆ ಟ್ರೋಲ್​ ಮಾಡುತ್ತಿದ್ದಾರೆ. ಪಂಜಾಬ್​ ಅನಾವರಣಗೊಳಿಸಿರುವ ಹೊಸ ಜೆರ್ಸಿ, ಈ ಹಿಂದೆ ಆರ್​ಸಿಬಿ ತಂಡ ತೋಡುತ್ತಿದ್ದ ಜೆರ್ಸಿಯಂತೆ ಕಾಣುತ್ತಿರುವುದೇ, ಪಂಜಾಬ್​ ಟ್ರೋಲ್​ ಆಗುತ್ತಿರುವುದಕ್ಕೆ ಕಾರಣವಾಗಿದೆ.

ಸಖತ್​ ಟ್ರೋಲ್​ ಆಗ್ತಿದೆ ಜರ್ಸಿ
ಐಪಿಎಲ್‌ನ ಈ ಆವೃತ್ತಿಯಲ್ಲಿ ಹೊಸ ಪಂಜಾಬ್ ಕಿಂಗ್ಸ್ ಜರ್ಸಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜರ್ಸಿಗೆ ಹೋಲುತ್ತದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಮುಂದಿನ ಆವೃತ್ತಿಯಲ್ಲಿಪಂಜಾಬ್, ತನ್ನ ಹೆಸರನ್ನು ಮಾಜಿ-ಆರ್ಸಿಬಿ ಎಂದು ಬದಲಾಯಿಸುತ್ತದೆ ಎಂದು ಅಭಿಮಾನಿಯೊಬ್ಬರು ಪಂಜಾಬ್ ಕಿಂಗ್ಸ್ ಅನ್ನು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.

ಪಂಜಾಬ್ ಕಿಂಗ್ಸ್ ಆರ್ಸಿಬಿಯ ಹಳೆಯ ಜರ್ಸಿಯನ್ನು ನಕಲಿಸಿದ್ದಾರೆ. ಮೊದಲು ಅವರು ನಮ್ಮ ಆಟಗಾರನನ್ನು ಕರೆದೊಯ್ಯುತ್ತಾರೆ. ನಂತರ ನಮ್ಮ ಜರ್ಸಿ. ಅವರು ನಮ್ಮಂತೆಯೇ ಹೆಲ್ಮೆಟ್ ಅನ್ನು ಸಹ ಹೊಂದಿದ್ದಾರೆ ಎಂದು ಆರ್ಸಿಬಿ ಅಭಿಮಾನಿಯೊಬ್ಬರು ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ತಮ್ಮ ಪೋಸ್ಟ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲ ಪಂದ್ಯ
ಏಪ್ರಿಲ್ 12 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2021 ಅಭಿಯಾನದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹೊಸ ಜರ್ಸಿಯನ್ನು ತೊಟ್ಟು ಆಡಲಿದೆ. ಐಪಿಎಲ್ 2021 ಹರಾಜಿನಲ್ಲಿ ಅತಿದೊಡ್ಡ ಪರ್ಸ್‌ನೊಂದಿಗೆ ಪ್ರವೇಶಿಸಿದ ಪಂಜಾಬ್ ಕಿಂಗ್ಸ್ ಒಂಬತ್ತು ಆಟಗಾರರನ್ನು ಕೊಂಡುಕೊಂಡಿತ್ತು.

ಆಸ್ಟ್ರೇಲಿಯಾದ ವೇಗಿ ರಿಚರ್ಡ್‌ಸನ್‌ಗೆ 14 ಕೋಟಿ ರೂ. ನೀಡಿದರೆ, ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಅವರು ರಾಹುಲ್ ನೇತೃತ್ವದ ತಂಡಕ್ಕೆ 1.5 ಕೋಟಿ ರೂಗೆ ಸೇರಿಕೊಂಡಿದ್ದಾರೆ. ಶಾರುಖ್ ಖಾನ್ ಅವರನ್ನು 5.25 ಕೋಟಿಗೆ ಖರೀದಿ ಮಾಡಿದ್ದರೆ, ರಿಲೇ ಮೆರೆಡಿತ್ ಅವರ ಸೇವೆಯನ್ನು ಪಂಜಾಬ್ ಕಿಂಗ್ಸ್ 8 ಕೋಟಿಗೆ ಪಡೆದುಕೊಂಡಿದೆ.

ಇದನ್ನೂ ಓದಿ:IPL 2021: ಪಂತ್​ಗೆ ಪಟ್ಟ ಕಟ್ಟಿದ ಡೆಲ್ಲಿ.. ನಾಯಕನಾಗಿ ಧೋನಿ ಎದುರು ಅಬ್ಬರಿಸಲಿದ್ದಾನೆ 23 ವರ್ಷದ ರಿಷಭ್!