AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಪಂತ್​ಗೆ ಪಟ್ಟ ಕಟ್ಟಿದ ಡೆಲ್ಲಿ.. ನಾಯಕನಾಗಿ ಧೋನಿ ಎದುರು ಅಬ್ಬರಿಸಲಿದ್ದಾನೆ 23 ವರ್ಷದ ರಿಷಭ್!

IPL 2021: ಆರಂಭದಲ್ಲಿ ಡೆಲ್ಲಿ ಫ್ರಾಂಚೈಸಿ ತಂಡದಲ್ಲಿರುವ ಅನುಭವಿ ಆಟಗಾರರಾದ ಆರ್.ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮೇಲೆ ಕಣ್ಣಿಟ್ಟಿತ್ತು.

IPL 2021: ಪಂತ್​ಗೆ ಪಟ್ಟ ಕಟ್ಟಿದ ಡೆಲ್ಲಿ.. ನಾಯಕನಾಗಿ ಧೋನಿ ಎದುರು ಅಬ್ಬರಿಸಲಿದ್ದಾನೆ 23 ವರ್ಷದ ರಿಷಭ್!
ರಿಷಭ್ ಪಂತ್
Follow us
ಪೃಥ್ವಿಶಂಕರ
|

Updated on: Mar 31, 2021 | 11:05 AM

ಶ್ರೇಯಸ್ ಅಯ್ಯರ್ ಗಾಯಗೊಂಡು ಐಪಿಎಲ್ನಿಂದ ಹೊರ ಬಿದ್ದ ಬಳಿಕ ಡೆಲ್ಲಿ ಫ್ರಾಂಚೈಸಿ, ಐಪಿಎಲ್ಗೆ ಯಾರನ್ನ ನಾಯಕನನ್ನಾಗಿ ನೇಮಿಸಬೇಕು ಅನ್ನೋ ಗೊಂದಲದಲ್ಲಿತ್ತು. ಆದ್ರೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಳೆದು ತೂಗಿ, ಯುವ ಆಟಗಾರನೊಬ್ಬನಿಗೆ ಪಟ್ಟ ಕಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟಿಟ್ವೆಂಟಿ ಮತ್ತು ಏಕದಿನ ಸರಣಿಯಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್, ಕ್ರಿಕೆಟ್ ಬದುಕಿನಲ್ಲಿ ಹೊಸ ವಸಂತ ಶುರುವಾಗಿದೆ. ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಡ್ಡಿದ್ದ ಪಂತ್, ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನವನ್ನ ಸಂಪಾದಿಸಿದ್ದಾನೆ. ಇದರ ಜೊತೆಯಲ್ಲೇ ಪಂತ್ ಕಂಡಿದ್ದ ಬಹುದಿನಗಳ ಕನಸೊಂದು ನನಸಾಗಿದೆ.

ಶ್ರೇಯಸ್​ಗೆ ಗಾಯ.. ಪಂತ್​ಗೆ ಡೆಲ್ಲಿ ತಂಡದ ಕಿರೀಟ! ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ, ಎಡ ಭುಜಕ್ಕೆ ಗಂಭೀರ ಗಾಯಮಾಡಿಕೊಂಡ ಶ್ರೇಯಸ್ ಅಯ್ಯರ್, ಐಪಿಎಲ್ನಲ್ಲಿ ಆಡೋದು ಅನುಮಾನವಾಗಿದೆ. ಹೀಗಾಗಿ ಡೆಲ್ಲಿ ಫ್ರಾಂಚೈಸಿ, ಶ್ರೇಯರ್ ಬದಲಿಗೆ ಯಾರನ್ನ ತಂಡದ ಸಾರಥಿಯನ್ನಾಗಿ ಮಾಡಬೇಕು ಅನ್ನೋ ಯೋಚನೆಯಲ್ಲಿತ್ತು. ಕಡೆಗೆ ಡೆಲ್ಲಿ ಕ್ಯಾಪಿಟಲ್ಸ್ ತವರಿನ ಹುಡುಗ ರಿಷಭ್ ಪಂತ್ಗೆ ಪಟ್ಟ ಕಟ್ಟಿದೆ.

ಆರಂಭದಲ್ಲಿ ಡೆಲ್ಲಿ ಫ್ರಾಂಚೈಸಿ ತಂಡದಲ್ಲಿರುವ ಅನುಭವಿ ಆಟಗಾರರಾದ ಆರ್.ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮೇಲೆ ಕಣ್ಣಿಟ್ಟಿತ್ತು. ಹೆಚ್ಚು ಕಮ್ಮಿ ಸ್ಮಿತ್ಗೆ ಪಟ್ಟ ಕಟ್ಟಲು ಫ್ರಾಂಚೈಸಿ ಮುಂದಾಗಿತ್ತು. ಆದ್ರೆ ಮಂಗಳವಾರ ನಡೆದ ಅಂತಿಮ ಸಭೆಯಲ್ಲಿ ಪಂತ್ನನ್ನ ನಾಯಕನನ್ನಾಗಿ ನೇಮಿಸಿದೆ. ಡೆಲ್ಲಿ ಫ್ರಾಂಚೈಸಿ ಕ್ಯಾಪ್ಟನ್ ಪಟ್ಟ ನೀಡಿದ್ದಕ್ಕೆ ಪಂತ್ ಸಂತಸ ವ್ಯಕ್ತಪಡಿಸಿದ್ದಾರೆ.

ಕನಸು ನನಸಾಯ್ತು ದೆಹಲಿ ನಾನು ಹುಟ್ಟಿ ಬೆಳೆದ ಸ್ಥಳ. ಆರು ವರ್ಷಗಳ ಹಿಂದೆ ನನ್ನ ಐಪಿಎಲ್ ಪ್ರಯಾಣ ಆರಂಭವಾಯ್ತು. ಅಂದಿನಿಂದ ಈ ತಂಡವನ್ನ ಒಂದು ದಿನವಾದರೂ ಮುನ್ನಡೆಸಬೇಕು ಎಂದು ಕನಸು ಕಂಡಿದ್ದೆ. ಇಂದು ನನ್ನ ಕನಸು ನನಸಾಗಿದ್ದಕ್ಕೆ, ಡೆಲ್ಲಿ ತಂಡಕ್ಕೆ ನಾನು ವಿನಮ್ರನಾಗಿರುತ್ತೇನೆ. -ರಿಷಭ್ ಪಂತ್, ಡೆಲ್ಲಿ ತಂಡದ ನಾಯಕ

ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ರಿಷಭ್ ಪಂತ್, ಈ ಸೀಸನ್ನ ಐಪಿಎಲ್ನಲ್ಲಿ ಅತೀ ಕಿರಿಯ ನಾಯಕ ಅನ್ನೋ ಹಿರಿಮೆಯನ್ನ ತನ್ನದಾಗಿಸಿಕೊಂಡಿದ್ದಾರೆ.

Rishabh Pant

ಅಯ್ಯರ್ ಪಂತ್ ನಾಯಕತ್ವವನ್ನು ಬೆಂಬಲಿಸಿದರು ರವಿಚಂದ್ರನ್ ಅಶ್ವಿನ್ ಕೂಡ ಐಪಿಎಲ್‌ನಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಅವರು ಎರಡು ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಿದರು. ಆದಾಗ್ಯೂ ಎರಡೂ ಬಾರಿ ಅವರು ತಂಡವನ್ನು ಪ್ಲೇಆಫ್‌ಗೆ ಕರೆದೊಯ್ಯುವುದನ್ನು ತಪ್ಪಿಸಿಕೊಂಡರು. ಅಂತಹ ಪರಿಸ್ಥಿತಿಯಲ್ಲಿ, ಅವರ ಅನುಭವವನ್ನು ರಿಷಭ್ ಪಂತ್ ಅವರು ಮರೆಮಾಡಬಹುದು. ಪಂತ್ ನಾಯಕನಾಗುವುದರಲ್ಲಿ ಶ್ರೇಯಸ್ ಅಯ್ಯರ್ ಮತ್ತು ದೆಹಲಿ ತಂಡದ ನಿರ್ವಹಣೆ ದೊಡ್ಡ ಪಾತ್ರ ವಹಿಸಿದೆ. ಅಯ್ಯರ್ ಈ ಕೆಲಸಕ್ಕೆ ಪಂತ್ ಅವರನ್ನು ಅತ್ಯುತ್ತಮ ವ್ಯಕ್ತಿ ಎಂದು ಪರಿಗಣಿಸಿದ್ದಾರೆ.

ಪಂತ್‌ಗೆ ಉತ್ತಮ ಫಾರ್ಮ್‌ನ ಲಾಭ ಸಿಕ್ಕಿತು ಅದೇ ಸಮಯದಲ್ಲಿ ದೆಹಲಿ ತಂಡದ ಆಡಳಿತವು ನಾಯಕತ್ವವನ್ನು ಪಂತ್‌ಗೆ ಹಸ್ತಾಂತರಿಸುವ ಮೂಲಕ ಯುವಕರನ್ನು ನಂಬುವ ನೀತಿಯನ್ನು ಮುಂದುವರಿಸಿದೆ. 2019 ರಲ್ಲಿ ದೆಹಲಿ ತಂಡ ಹೊಸದಾಗಿ ರಚನೆಯಾದಾಗ, ಶ್ರೇಯಾಸ್ ಅವರನ್ನು 23 ನೇ ವಯಸ್ಸಿನಲ್ಲಿ ನಾಯಕನನ್ನಾಗಿ ಮಾಡಲಾಯಿತು. ಇದೀಗ, ಪಂತ್ ಅವರ ಉತ್ತಮ ಫಾರ್ಮ್ ಕೂಡ ಅವರಿಗೆ ಲಾಭ ನೀಡಿದೆ. ಆಸ್ಟ್ರೇಲಿಯಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಅವರು ಟೀಮ್ ಇಂಡಿಯಾ ಪರ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದರು.

ದೆಹಲಿ ಕ್ಯಾಪಿಟಲ್ಸ್ ಏಪ್ರಿಲ್ 10 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ 2021 ರಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪಂದ್ಯವು ಪಂತ್‌ಗೂ ವಿಶೇಷವಾಗಿರುತ್ತದೆ. ಏಕೆಂದರೆ ಅವರು ತಮ್ಮ ಐಪಿಎಲ್ ನಾಯಕತ್ವಕ್ಕೆ ಎಂಎಸ್ ಧೋನಿ ಎದುರು ಪಾದಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ:IPL 2021: ಆರ್​ಸಿಬಿ 15 ಕೋಟಿ ಕೊಟ್ಟು ಖರೀದಿಸಿದ್ದ ನ್ಯೂಜಿಲ್ಯಾಂಡ್​ ವೇಗಿಗೆ ಶಾಕ್​ ಮೇಲೆ ಶಾಕ್!

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್