ಅವರಿಬ್ಬರೂ ದೇಶಕ್ಕಾಗಿ ಆಡುವಾಗ ಒಗ್ಗೂಡಿ ಆಡುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ದೇಶೀಯವಾಗಿಯೇ ಬೇರೆ ಬೇರೆ ತಂಡಗಳಿಗೆ ಆಡುವ ಅನಿವಾರ್ಯತೆ ಎದುರಾಗಿ ಪರಸ್ಪರ ಪೈಪೋಟಿಯಲ್ಲಿ ತೊಡಗಬೇಕಾಗುತ್ತದೆ. ದೇಶಕ್ಕಾಗಿ ಆಡುವಾಗ.. ಒಬ್ಬರು ಮತ್ತೊಬ್ಬರ ಕೈಕೆಳಗೆ ಆಡುವುದು ಅತ್ಯಗತ್ಯವಾಗಿರುತ್ತದೆ. ಅದೇ ಬೇರೆ ಬೇರೆ ತಂಡಗಳಿಗೆ ಆಡುವಾಗ ಪರಸ್ಪರ ಕೈಮಿಲಾಯಿಸಿ ಆಡುವ ಜರೂರತ್ತು ಇರುತ್ತದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಇದು ಎದ್ದು ಕಂಡಿದೆ. ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳ ನಡುವೆ ಪಂದ್ಯ ನಡೆದಾಗ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ್ದ ಡೆಲ್ಲಿ ತಂಡಕ್ಕೆ ಕೊನೆಯ ಕ್ಷಣದಲ್ಲಿ ಪಂದ್ಯ ಕೈಜಾರಿದೆ. ಅದಕ್ಕೆ ಸಹಜವಾಗಿಯೇ ಡೆಲ್ಲಿ ತಂಡದ ಕ್ಯಾಪ್ಟನ್ ತನ್ನ ಕಣ್ಣೆದುರೇ ಪಂದ್ಯ ಕೈಜಾರಿದಾಗ ಕಣ್ಣೀರು ಹಾಕಿದ್ದಾರೆ. ಸರಿಯಾಗಿ ಆಗಲೇ ಮನೆಯ ಹಿರಿಯಣ್ಣನಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆ ಕಿರಿಯ ಕ್ಯಾಪ್ಟನ್ ಭುಜದ ಮೇಲೆ ಕೈಹಾಕಿ, ಸಂತೈಸಿದ್ದಾನೆ!
ಜೀವನವೇ ಹಾಗೆ.. ಕೊನೆಯ ಘಳಿಗೆಯಲ್ಲಿ ಏನು ಬೇಕಾದರೂ ಆಗಬಹುದು. ಈ ಕ್ರಿಕೆಟ್ ಆಟ ಸಹ ಅದಕ್ಕೆ ಒರತಲ್ಲ. ಅದರಲ್ಲೂ ಈ IPL ಬಂದಮೇಲೆ.. ಕೊನೆಯ ಕ್ಷಣದಲ್ಲಿ ಕೊನೆಯ ಬಾಲಿನಲ್ಲಿ ಏನು ಬೇಕಾದರೂ ಆಗಬಹುದು. ನಿನ್ನೆಯ Royal Challengers Bangalore (RCB) ಮತ್ತು Delhi Capitals (DC) ನಡುವಣ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ, ಕ್ಯಾಪ್ಟನ್ಸಿ ಆಟ ಆಡುತ್ತಿದ್ದ ರಿಷಬ್ ಪಂತ್ ಕಣ್ಣೇದುರಿಗೇ ಸೋಲುವಂತಾಯಿತು. ಕಣ್ಣೀರು ಗಂಗಾ ನದಿಯಾಗಿ ಉಕ್ಕಿದೆ. ಪಾಪ ರಿಷಬ್ ಪಂತ್ ಸಣ್ಣವ. ಅವ ಅಳುತ್ತಿರುವುದನ್ನು ಕಂಡು ದೊಡ್ಡಣ್ಣ ವಿರಾಟ್ ಕೊಹ್ಲಿ ತಡೆಯಲಾರದೆ ರಿಷಬ್ ಪಂತ್ ಬಳಿ ತೆರಳಿ.. ಗುರೂ ನೀನು ಅಳಬೇಡಾಮ್ಮಾ. ಆಟದಲ್ಲಿ ಇದೆಲ್ಲ ಸಹಜವೇ. ಚೆನ್ನಾಗಿಯೇ ಆಡಿದ್ದೀಯಾ ಬಿಡು. ಬೇಜಾರು ಮಾಡಿಕೋ ಬೇಡ ಭುಜ ತಟ್ಟಿ ಸಂತೈಸಿದ್ದಾರೆ.
ನಿನ್ನೆಯ ಪಂದ್ಯದ ಕಟ್ಟಕಡೆಯ ಎರಡು ಬಾಲ್ಗಳಲ್ಲಿ ಡೆಲ್ಲಿ ತಂಡಕ್ಕೆ ಜಸ್ಟ್ ರನ್ಸ್ ಬೇಕಿದ್ದವು. ಅಗ ಬ್ಯಾಟ್ ಬೀಸುತ್ತಿದ್ದುದ್ದು ಇದೇ ಕ್ಯಾಪ್ಟನ್ ರಿಷಬ್ ಪಂತ್. ಅರ್ಧ ಶತಕ ಬಾರಿಸಿ, ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದರು. ಕೊನೆ ಬಾಲುಗಳಲ್ಲಿಯೂ ಸಿಕ್ಸ್- ಬೌಂಡರಿ ಬಾರಿಸಿ, ತಂಡವನ್ನು ದಡ ಮುಟ್ಟಿಸುತ್ತಾರೆ ಎಂದು ಅಪಾರ ನಿರೀಕ್ಷೆಯಿತ್ತು. ಸ್ವತಃ ರಿಷಬ್ ಪಂತ್ ಸಹ ಹಾಗೆಂದುಕೊಂಡೇ ಬ್ಯಾಟ್ ಹಿಡಿದು ಆಡಿದರು. ಆದ್ರೆ ಕೇವಲ ಎರಡೇ ಬೌಂಡರಿ ಬಾರಿಸಲು ಶಕ್ತ್ಯವಾದರು. ನೋ ಸಿಕ್ಸರ್. ಅಲ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯದ ನಗೆ ಬೀರಿತು. ಎಕ್ಸಾಕ್ಟ್ಲಿ ಆಗಲೇ ರಿಷಬ್ ಪಂತ್ ಅಳತೊಡಗಿದರು. ಆಗ ಕೊಹ್ಲಿ ಸಂತೈಸತೊಡಗಿದರು. ಅಷ್ಟೇ ಅಲ್ಲ.. ಅದಕ್ಕೂ ಮುನ್ನ Delhi Capitals ಪರ ಅವೇಶ್ ಖಾನ್ ಉತ್ತಮ ಬೌಲಿಂಗ್ ಮಾಡಿದ್ದರು. ಇದನ್ನು ಗಮನಿಸಿದ Royal Challengers Bangalore ಕ್ಯಾಪ್ಟನ್ ಕೊಹ್ಲಿ ಅವೇಶ್ ಅವರು ಧರಿಸುವ ಜೆರ್ಸಿ ಮೇಲೆ ಹಸ್ತಾಕ್ಷರ ಮಾಡಿ, ಹುರುದುಂಬಿಸಿದರು.
Chin up, Rishabh Pant. Who better than Captain Kohli to tell you, it’s all a part of the learning. ❤️#PlayBold #WeAreChallengers #DCvRCB #IPL2021 pic.twitter.com/j10Iz3vBPk
— Royal Challengers Bangalore (@RCBTweets) April 27, 2021
ಪಂದ್ಯ ಹೀಗೆ ಸಾಗಿತ್ತು.. ಅವೇಶ್ ಖಾನ್ ಉತ್ತಮ ಬೌಲಿಂಗ್; ಜೆರ್ಸಿ ಮೇಲೆ ಸೈನ್ ಮಾಡಿದ ಕೊಹ್ಲಿ:
ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಿಸಲು ಪಂತ್- ಹೆಟ್ಮೆಯರ್ ನಡೆಸಿದ ಹೊರಾಟ ವ್ಯರ್ಥವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ವಿರುದ್ಧ 1 ರನ್ಗಳ ಸೋಲು ಕಂಡಿದೆ. 172 ರನ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ, 170 ರನ್ ಗಳಿಸಲಷ್ಟೇ ಶಕ್ತವಾಗಿದೆ. ಪಂತ್ 58 ರನ್ ಮತ್ತು ಹೆಟ್ಮೆಯರ್ 53 ರನ್ಗಳ ಹೋರಾಟ ವ್ಯರ್ಥವಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿತ್ತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲಲು 172 ರನ್ ಗುರಿ ನೀಡಿತ್ತು. ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ ಆಕರ್ಷಕ ಅರ್ಧಶತಕ ದಾಖಲಿಸಿದ್ದರು. 42 ಬಾಲ್‌ಗೆ 5 ಸಿಕ್ಸ್, 3 ಫೋರ್ ಸಹಿತ 75 ರನ್ ಕಲೆಹಾಕಿದ್ದರು. ರಜತ್ ಪಾಟೀದಾರ್ 31, ಮ್ಯಾಕ್ಸ್‌ವೆಲ್ 25 ರನ್ ದಾಖಲಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 12, 17 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಇಶಾಂತ್ ಶರ್ಮಾ ಹಾಗೂ ಅವೇಶ್ ಖಾನ್ ಉತ್ತಮ ಬೌಲಿಂಗ್ ಮಾಡಿದ್ದರು. ತಲಾ 1 ವಿಕೆಟ್ ಪಡೆದು ರನ್ ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದ್ದರು.
You can take a cricketer away from RCB, but you can’t take the RCBian out of that cricketer. You’ve come a long way, Avesh. That was some bowling!#PlayBold #WeAreChallengers #IPL2021 #DCvRCB #DareToDream pic.twitter.com/us5mTa1Rdw
— Royal Challengers Bangalore (@RCBTweets) April 27, 2021
(IPL 2021 RCB captain Virat Kohli consoles devastated Rishabh Pant after Delhi Capitals 1 run loss to RCB)
Published On - 10:12 am, Wed, 28 April 21