DC vs RCB, IPL 2021 Match 22 Result: 1 ರನ್​ನಿಂದ​ ಗೆದ್ದ ಆರ್​ಸಿಬಿ; ಪಂತ್- ಹೆಟ್ಮೆಯರ್ ಹೋರಾಟ ವ್ಯರ್ಥ!

DC vs RCB Scorecard: ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2021 ಟೂರ್ನಿಯ 22ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

DC vs RCB, IPL 2021 Match 22 Result: 1 ರನ್​ನಿಂದ​ ಗೆದ್ದ ಆರ್​ಸಿಬಿ; ಪಂತ್- ಹೆಟ್ಮೆಯರ್ ಹೋರಾಟ ವ್ಯರ್ಥ!
ಆರ್​ಸಿಬಿ ತಂಡ

| Edited By: ganapathi bhat

Sep 05, 2021 | 10:43 PM

ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಿಸಲು ಪಂತ್- ಹೆಟ್ಮೆಯರ್ ನಡೆಸಿದ ಹೊರಾಟ ವ್ಯರ್ಥವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ವಿರುದ್ಧ 1 ರನ್​ಗಳ ಸೋಲು ಕಂಡಿದೆ. 172 ರನ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ, 170 ರನ್ ಗಳಿಸಲಷ್ಟೇ ಶಕ್ತವಾಗಿದೆ. ಪಂತ್ 58 ರನ್ ಮತ್ತು ಹೆಟ್ಮೆಯರ್ 53 ರನ್​ಗಳ ಹೋರಾಟ ವ್ಯರ್ಥವಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿತ್ತು.‌ ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲಲು 172 ರನ್ ಗುರಿ ನೀಡಿತ್ತು. ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ ಆಕರ್ಷಕ ಅರ್ಧಶತಕ ದಾಖಲಿಸಿದ್ದರು. 42 ಬಾಲ್‌ಗೆ 5 ಸಿಕ್ಸ್, 3 ಫೋರ್ ಸಹಿತ 75 ರನ್ ಕಲೆಹಾಕಿದ್ದರು.‌ ರಜತ್ ಪಾಟೀದಾರ್ 31, ಮ್ಯಾಕ್ಸ್‌ವೆಲ್ 25 ರನ್ ದಾಖಲಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 12, 17 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಇಶಾಂತ್ ಶರ್ಮಾ‌ ಹಾಗೂ ಅವೇಶ್ ಖಾನ್ ಉತ್ತಮ ಬೌಲಿಂಗ್ ಮಾಡಿದ್ದರು. ತಲಾ‌ 1 ವಿಕೆಟ್ ಪಡೆದು ರನ್ ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದ್ದರು.

LIVE NEWS & UPDATES

The liveblog has ended.
 • 27 Apr 2021 11:24 PM (IST)

  1 ರನ್​ನಿಂದ ಗೆದ್ದ ಆರ್​ಸಿಬಿ

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ರನ್​ಗಳ ಗೆಲುವು ದಾಖಲಿಸಿದೆ. 172 ರನ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 170 ರನ್ ಪೇರಿಸಿ, 1 ರನ್​ನಿಂದ ಸೋಲೊಪ್ಪಿಕೊಂಡಿದೆ.

 • 27 Apr 2021 11:23 PM (IST)

  ಅರ್ಧಶತಕ ಪೂರೈಸಿದ ಪಂತ್ ಹೋರಾಟ ವ್ಯರ್ಥ

  ರಿಷಭ್ ಪಂತ್ ಔಟಾಗದೆ 48 ಬಾಲ್​ಗೆ 58 ರನ್ ದಾಖಲಿಸಿದ್ದಾರೆ. ಆದರೆ ಪಂತ್ ಹಾಗೂ ಸ್ಟಾಯಿನಿಸ್ ಹೋರಾಟ ವ್ಯರ್ಥವಾಗಿದೆ. ಕೇವಲ 1 ರನ್​ನಿಂದ ಡೆಲ್ಲಿ ತಂಡ ಸೋಲೊಪ್ಪಿಕೊಂಡಿದೆ. ಕೊನೆಯ ಓವರ್​ನಲ್ಲಿ ಎಷ್ಟೇ ಪ್ರಯತ್ನ ನಡೆಸಿದರೂ ಡೆಲ್ಲಿ ತಂಡಕ್ಕೆ ಗೆಲುವು ಸಿಗಲಿಲ್ಲ.

 • 27 Apr 2021 11:13 PM (IST)

  ಹೆಟ್ಮೆಯರ್ ಅಬ್ಬರ; ಅರ್ಧಶತಕ ಪೂರೈಕೆ

  ವೇಗದ ಆಟ ಪ್ರದರ್ಶಿಸಿದ ಹೆಟ್ಮೆಯರ್ 23 ಬಾಲ್​ಗೆ 50 ರನ್ ಪೂರೈಸಿದ್ದಾರೆ. 4 ಸಿಕ್ಸರ್, 2 ಬೌಂಡರಿ ದಾಖಲಿಸಿದ್ದಾರೆ. 19 ಓವರ್​ಗೆ ಡೆಲ್ಲಿ ತಂಡದ ಸ್ಕೋರ್ 158/4 ಆಗಿದೆ. ಗೆಲ್ಲಲು 6 ಬಾಲ್​ಗೆ 14 ರನ್ ಬೇಕಿದೆ.

 • 27 Apr 2021 11:11 PM (IST)

  ಡೆಲ್ಲಿ ಗೆಲ್ಲಲು 12 ಬಾಲ್​ಗೆ 25 ರನ್ ಬೇಕು

  ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 12 ಬಾಲ್​ಗೆ 25 ರನ್ ಬೇಕಾಗಿದೆ. 18 ಓವರ್ ಅಂತ್ಯಕ್ಕೆ ಡೆಲ್ಲಿ 147 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಡೆಲ್ಲಿ ಪರ ನಾಯಕ ರಿಷಭ್ ಪಂತ್ 42 ರನ್ ಗಳಿಸಿ ಆಡುತ್ತಿದ್ದಾರೆ.

 • 27 Apr 2021 10:55 PM (IST)

  ಡೆಲ್ಲಿ ಗೆಲ್ಲಿಸಲು ನಾಯಕನ ಹೋರಾಟ

  ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಲು 30 ಬಾಲ್​ಗೆ 61 ರನ್ ಬೇಕಿದೆ. ಡೆಲ್ಲಿ ಪರ ನಾಯಕ ರಿಷಭ್ ಪಂತ್ ಇನ್ನಿಂಗ್ಸ್ ಕಟ್ಟುವ ಆಟವಾಡುತ್ತಿದ್ದಾರೆ. 34 ಬಾಲ್​ಗೆ 37 ರನ್ ಗಳಿಸಿ ಕ್ರಿಸ್ ಕಾಯ್ದುಕೊಂಡಿದ್ದಾರೆ. ಹೆಟ್ಮಿಯರ್ 10 ಬಾಲ್​ಗೆ 16 ರನ್ ಗಳಿಸಿ ಆಡುತ್ತಿದ್ದಾರೆ. ಡೆಲ್ಲಿ ತಂಡ 15 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 111 ರನ್ ದಾಖಲಿಸಿದೆ.

 • 27 Apr 2021 10:45 PM (IST)

  ಸ್ಟೊಯಿನಿಸ್ ಔಟ್

  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತೋರ್ವ ಬ್ಯಾಟ್ಸ್​ಮನ್ ಸ್ಟೊಯಿನಿಸ್ ಔಟ್ ಆಗಿದ್ದಾರೆ. 17 ಬಾಲ್​ಗೆ 22 ರನ್ ಗಳಿಸಿ ನಿರ್ಗಮಿಸಿದ್ದಾರೆ. ಹರ್ಷಲ್ ಪಟೇಲ್ ಬಾಲ್​ಗೆ ಡಿವಿಲಿಯರ್ಸ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಡೆಲ್ಲಿ ತಂಡ 13 ಓವರ್​ಗಳ ಅಂತ್ಯಕ್ಕೆ 93 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.

 • 27 Apr 2021 10:33 PM (IST)

  ಡೆಲ್ಲಿ ಗೆಲ್ಲಲು 54 ಬಾಲ್​ಗೆ 103 ರನ್ ಬೇಕು

  ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 54 ಬಾಲ್​ಗೆ 103 ರನ್ ಬೇಕಾಗಿದೆ. ಡೆಲ್ಲಿ ತಂಡದ ಮೊತ್ತ 11 ಓವರ್​ಗೆ 3 ವಿಕೆಟ್ ಕಳೆದುಕೊಂಡು 63 ರನ್ ಆಗಿದೆ. ರಿಷಭ್ ಪಂತ್ ಹಾಗೂ ಸ್ಟಾಯಿನಿಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 27 Apr 2021 10:25 PM (IST)

  ಡೆಲ್ಲಿ ಕ್ಯಾಪಿಟಲ್ಸ್ 53/3 (9 ಓವರ್)

  9 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ವಿಕೆಟ್ ಕಳೆದುಕೊಂಡು 53 ರನ್ ದಾಖಲಿಸಿದೆ. ರಿಷಭ್ ಪಂತ್ ಮತ್ತು ಸ್ಟಾಯಿನಿಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 66 ಬಾಲ್​ಗೆ 119 ರನ್ ಬೇಕಿದೆ.

 • 27 Apr 2021 10:17 PM (IST)

  ಪೃಥ್ವಿ ಶಾ ಔಟ್

  18 ಬಾಲ್​ಗೆ 21 ರನ್ ಗಳಿಸಿ ಪೃಥ್ವಿ ಶಾ ಔಟ್ ಆಗಿದ್ದಾರೆ. ಹರ್ಷಲ್ ಪಟೇಲ್ ಎಸೆದ ಬಾಲ್​ನ್ನು ಡಿವಿಲಿಯರ್ಸ್ ಕ್ಯಾಚ್ ಪಡೆದಿದ್ದಾರೆ. 8 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 50 ರನ್ ಪೂರೈಸಿದೆ. 3 ವಿಕೆಟ್ ಕಳೆದುಕೊಂಡಿದೆ.

 • 27 Apr 2021 10:07 PM (IST)

  ಪವರ್​ಪ್ಲೇ ಅಂತ್ಯಕ್ಕೆ 43/2

  ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 43 ರನ್ ದಾಖಲಿಸಿದೆ. ಪೃಥ್ವಿ ಶಾ ಹಾಗೂ ನಾಯಕ ರಿಷಭ್ ಪಂತ್, ಇಬ್ಬರು ಯುವ ಆಟಗಾರರು ಆಡುತ್ತಿದ್ದಾರೆ. ಆರ್​ಸಿಬಿ ಪರ ಸಿರಾಜ್ ಹಾಗೂ ಜಾಮಿಸನ್ ತಲಾ 1 ವಿಕೆಟ್ ಪಡೆದಿದ್ದಾರೆ.

 • 27 Apr 2021 09:57 PM (IST)

  ಸ್ಟೀವ್ ಸ್ಮಿತ್ ವಿಕೆಟ್ ಪತನ!

  ಡೆಲ್ಲಿ ತಂಡದ ಮತ್ತೋರ್ವ ಪ್ರಮುಖ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ 5 ಬಾಲ್​ಗೆ 4 ರನ್ ಗಳಿಸಿ ಔಟ್ ಆಗಿದ್ದಾರೆ. ಸಿರಾಜ್ ಬೌಲಿಂಗ್​ಗೆ ಎಬಿ ಡಿವಿಲಿಯರ್ಸ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 4 ಓವರ್​ಗೆ 33 ರನ್ ಗಳಿಸಿ ಮುಖ್ಯ 2 ವಿಕೆಟ್ ಕಳೆದುಕೊಂಡಿದೆ.

 • 27 Apr 2021 09:53 PM (IST)

  ಶಿಖರ್ ಧವನ್ ಔಟ್

  ಡೆಲ್ಲಿ ಕ್ಯಾಪಿಟಲ್ಸ್​ನ ಮುಖ್ಯ ಬ್ಯಾಟ್ಸ್​ಮನ್ ಶಿಖರ್ ಧವನ್ ಔಟ್ ಆಗಿದ್ದಾರೆ. 7 ಬಾಲ್​ಗೆ 6 ರನ್ ಗಳಿಸಿ ಜಾಮಿಸನ್ ಬಾಲ್​ಗೆ ಚಹಾಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 3 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 27 ರನ್ ದಾಖಲಿಸಿದೆ.

 • 27 Apr 2021 09:46 PM (IST)

  ಡೆಲ್ಲಿ ವೇಗದ ಬ್ಯಾಟಿಂಗ್

  ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಶುರುಮಾಡಿದ್ದಾರೆ. 2ನೇ ಓವರ್​ಗೆ 3 ಬೌಂಡರಿ ಬಾರಿಸಿದ್ದಾರೆ. 23 ರನ್ ದಾಖಲಿಸಿದ್ದಾರೆ.

 • 27 Apr 2021 09:41 PM (IST)

  ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ

  ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 7 ರನ್ ದಾಖಲಿಸಿದೆ. ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಡೇನಿಯಲ್ ಸ್ಯಾಮ್ಸ್ ಮೊದಲ ಓವರ್ ಬೌಲಿಂಗ್ ಮಾಡಿ್ದ್ದಾರೆ.

 • 27 Apr 2021 09:10 PM (IST)

  ಡಿವಿಲಿಯರ್ಸ್ ಸಿಕ್ಸರ್ ಆಟ; ಡೆಲ್ಲಿಗೆ 172 ರನ್ ಗುರಿ!

  ಕೊನೆಯ ಓವರ್​ನಲ್ಲಿ ಎಬಿ ಡಿವಿಲಿಯರ್ಸ್ ವೇಗದ ಆಟ ಆಡಿದ್ದಾರೆ. ಸ್ಟೊಯಿನಿಸ್ ಬೌಲಿಂಗ್​ಗೆ 3 ಸಿಕ್ಸರ್ ಸಿಡಿಸಿದ್ದಾರೆ. 42 ಬಾಲ್​ಗೆ 5 ಸಿಕ್ಸರ್, 3 ಬೌಂಡರಿ ಸಹಿತ 72 ರನ್ ಕಲೆಹಾಕಿದ್ದಾರೆ. ಕೊನೆಯ ಓವರ್​ನಲ್ಲಿ 23 ರನ್ ದಾಖಲಾಗಿದೆ. ಆರ್​ಸಿಬಿ ನಿಗದಿತ 20 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿದೆ.

 • 27 Apr 2021 09:02 PM (IST)

  150 ರನ್​ಗಳತ್ತ ಆರ್​ಸಿಬಿ; ಎಬಿಡಿ 50!

  ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 148 ರನ್ ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಪರ ಎಬಿಡಿ ಅರ್ಧಶತಕ ಪೂರೈಸಿದ್ದಾರೆ. ಡೇನಿಯಲ್ ಸ್ಯಾಮ್ಸ್ ಕ್ರಿಸ್ ಕಾಯ್ದುಕೊಂಡಿದ್ದಾರೆ.

 • 27 Apr 2021 08:58 PM (IST)

  ವಾಷಿಂಗ್ಟನ್ ಸುಂದರ್ ಔಟ್

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 5ನೇ ವಿಕೆಟ್ ಪತನವಾಗಿದೆ. ವಾಷಿಂಗ್ಟನ್ ಸುಂದರ್ 9 ಬಾಲ್​ಗೆ 6 ರನ್ ಗಳಿಸಿ ನಿರ್ಗಮಿಸಿದ್ದಾರೆ. ರಬಾಡ ಬಾಲ್​ಗೆ ರಬಾಡಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಆರ್​ಸಿಬಿ 18 ಓವರ್​ಗೆ 139 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.

 • 27 Apr 2021 08:48 PM (IST)

  ಆರ್​ಸಿಬಿ 124/4 (16 ಓವರ್)

  ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿದೆ. ಡಿವಿಲಿಯರ್ಸ್ 25 ಬಾಲ್​ಗೆ 35 ರನ್ ಗಳಿಸಿ ಆಡುತ್ತಿದ್ದಾರೆ. ವಾಷಿಂಗ್ಟನ್ ಸುಂದರ್ 5 ಬಾಲ್​ಗೆ 4 ರನ್ ಪೇರಿಸಿದ್ದಾರೆ.

 • 27 Apr 2021 08:40 PM (IST)

  ಪಾಟೀದಾರ್ ಔಟ್

  ರಜತ್ ಪಾಟೀದಾರ್ 22 ಬಾಲ್​ಗೆ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಕ್ಸರ್ ಪಟೇಲ್ ಬಾಲ್​ಗೆ ಸ್ಟೀವ್ ಸ್ಮಿತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಮೊದಲ 4 ವಿಕೆಟ್ ಕಳೆದುಕೊಂಡಿದೆ. ಎಬಿ ಡಿವಿಲಿಯರ್ಸ್ ಹಾಗೂ ವಾಷಿಂಗ್ಟನ್ ಸುಂದರ್ ಕಣದಲ್ಲಿದ್ದಾರೆ. 15 ಓವರ್​ಗೆ ಆರ್​ಸಿಬಿ 115/4 ರನ್ ದಾಖಲಿಸಿದೆ.

 • 27 Apr 2021 08:37 PM (IST)

  ಶತಕ ಪೂರೈಸಿದ ಆರ್​ಸಿಬಿ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶತಕ ಪೂರೈಸಿದೆ. 14 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 105 ರನ್ ದಾಖಲಿಸಿದೆ. ಡಿವಿಲಿಯರ್ಸ್ 19 ಬಾಲ್​ಗೆ 20 ಹಾಗೂ ಪಾಟೀದಾರ್ 20 ಬಾಲ್​ಗೆ 30 ರನ್ ದಾಖಲಿಸಿ ಆಡುತ್ತಿದ್ದಾರೆ. ಇನ್ನಿಂಗ್ಸ್ ಮುಕ್ತಾಯಕ್ಕೆ ಇನ್ನು 6 ಓವರ್​ಗಳು ಬಾಕಿ ಇವೆ.

 • 27 Apr 2021 08:32 PM (IST)

  ಆರ್​ಸಿಬಿ 94/3 (13 ಓವರ್)

  13 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ಕಳೆದುಕೊಂಡು 94 ರನ್ ದಾಖಲಿಸಿದೆ. ಡಿವಿಲಿಯರ್ಸ್ 16 ಬಾಲ್​ಗೆ 18 ಹಾಗೂ ಪಾಟೀದಾರ್ 17 ಬಾಲ್​ಗೆ 21 ರನ್ ಗಳಿಸಿ ಆಡುತ್ತಿದ್ದಾರೆ.

 • 27 Apr 2021 08:23 PM (IST)

  ಆರ್​ಸಿಬಿ 68/3 (10 ಓವರ್)

  10 ಓವರ್​​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ವಿಕೆಟ್ ಕಳೆದುಕೊಂಡು 68 ರನ್ ದಾಖಲಿಸಿದೆ. ತಂಡದ ಪರ ರಜತ್ ಪಾಟೀದಾರ್ ಹಾಗೂ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 27 Apr 2021 08:14 PM (IST)

  ಮ್ಯಾಕ್ಸ್​ವೆಲ್ ಔಟ್

  ರಾಯಲ್ ಚಾಲೆಂಜರ್ಸ್ ಪ್ರಬಲ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ ಅಮಿತ್ ಮಿಶ್ರಾ ಬೌಲಿಂಗ್​ಗೆ ಸ್ಟೀವ್ ಸ್ಮಿತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ವೇಗದ ಆಟಕ್ಕೆ ಮುಂದಾಗಿದ್ದ ಮ್ಯಾಕ್ಸ್​ವೆಲ್ 20 ಬಾಲ್​ಗೆ 25 ರನ್ ಗಳಿಸಿ ಔಟ್ ಆಗಿದ್ದಾರೆ. ಆರ್​ಸಿಬಿ ಪರ ರಜತ್ ಪಾಟೀದಾರ್ ಕಣದಲ್ಲಿದ್ದಾರೆ.

 • 27 Apr 2021 08:12 PM (IST)

  ಗ್ಲೆನ್ ಮ್ಯಾಕ್ಸ್​ವೆಲ್ ಸಿಕ್ಸರ್ ಆಟ

  ಆರ್​ಸಿಬಿ 8 ಓವರ್​ಗಳ ಅಂತ್ಯಕ್ಕೆ 57 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಪರ ಗ್ಲೆನ್ ಮ್ಯಾಕ್ಸ್​ವೆಲ್ ವೇಗದ ಆಟ ಆಡುತ್ತಿದ್ದಾರೆ. 2 ಸಿಕ್ಸರ್, 1 ಬೌಂಡರಿ ಸಹಿತ ಆಟ ಮುಂದುವರಿಸಿದ್ದಾರೆ.

 • 27 Apr 2021 08:03 PM (IST)

  ಪವರ್​ಪ್ಲೇ ಅಂತ್ಯಕ್ಕೆ 36/2

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಓವರ್​ಗಳ ಅಂತ್ಯಕ್ಕೆ ಪ್ರಮುಖ 2 ವಿಕೆಟ್ ಕಳೆದುಕೊಂಡು 36 ರನ್ ದಾಖಲಿಸಿದೆ. ದೇವದತ್ ಪಡಿಕ್ಕಲ್ ಹಾಗೂ ಕೊಹ್ಲಿ ವಿಕೆಟ್ ಪತನವಾದ ಬಳಿಕ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ರಜತ್ ಪಾಟೀದಾರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡು ವಿಕೆಟ್ ಕಳೆದುಕೊಂಡ ಬಳಿಕ ರನ್ ವೇಗ ಇಳಿಕೆಯಾಗಿದೆ.

 • 27 Apr 2021 07:54 PM (IST)

  ಪಡಿಕ್ಕಲ್ ಔಟ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ನಾಯಕ ವಿರಾಟ್ ಕೊಹ್ಲಿ ಔಟ್ ಆದ ಬೆನ್ನಲ್ಲೇ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಇಶಾಂತ್ ಶರ್ಮಾ ಬೌಲಿಂಗ್​ಗೆ ಬೌಲ್ಡ್ ಆಗಿದ್ದಾರೆ.

 • 27 Apr 2021 07:51 PM (IST)

  ಕೊಹ್ಲಿ ಔಟ್!

  ಅವೇಶ್ ಖಾನ್ ಬಾಲ್​ಗೆ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲ್ಡ್ ಆಗಿದ್ದಾರೆ. 11 ಬಾಲ್​ಗೆ 12 ರನ್ ಗಳಿಸಿ ಕೊಹ್ಲಿ ನಿರ್ಗಮಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ವಿಕೆಟ್ ಪತನವಾಗಿದೆ. ಆರ್​ಸಿಬಿ 4 ಓವರ್​ಗೆ 30 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.

 • 27 Apr 2021 07:46 PM (IST)

  ಆರ್​ಸಿಬಿ 25/0 (3 ಓವರ್)

  ಉತ್ತಮ ಆರಂಭ ಪಡೆದುಕೊಂಡಿರುವ ಆರ್​ಸಿಬಿ 3 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 25 ರನ್ ದಾಖಲಿಸಿದೆ. ಕೊಹ್ಲಿ ಮತ್ತು ಪಡಿಕ್ಕಲ್ ಕ್ರೀಸ್​ನಲ್ಲಿದ್ದಾರೆ. ಇಶಾಂತ್ ಶರ್ಮಾ ಹಾಗೂ ಕಗಿಸೊ ರಬಾಡ ಬೌಲಿಂಗ್ ಮಾಡಿದ್ದಾರೆ. ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿವಿಲಿಯರ್ಸ್ ಬ್ಯಾಟಿಂಗ್​ ಮಾಡಲು ಬಾಕಿ ಇದ್ದಾರೆ.

 • 27 Apr 2021 07:41 PM (IST)

  ವೇಗದ ಆಟಕ್ಕೆ ಮುಂದಾದ ಕೊಹ್ಲಿ- ಪಡಿಕ್ಕಲ್

  ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ವೇಗದ ಆಟಕ್ಕೆ ಮುಂದಾಗಿದ್ದಾರೆ. 2ನೇ ಓವರ್​ಗೆ ವಿಕೆಟ್ ನಷ್ಟವಿಲ್ಲದೆ 16 ರನ್ ದಾಖಲಿಸಿದ್ದಾರೆ. ರಬಾಡ ಬೌಲಿಂಗ್​ನ 2ನೇ ಓವರ್​ಗೆ ಕೊಹ್ಲಿ 1 ಹಾಗೂ ಪಡಿಕ್ಕಲ್ 2 ಬೌಂಡರಿ ಸಿಡಿಸಿದ್ದಾರೆ.

 • 27 Apr 2021 07:36 PM (IST)

  ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 6 ರನ್ ದಾಖಲಿಸಿದೆ. ಭಾರತದ ವೇಗಿ ಇಶಾಂತ್ ಶರ್ಮಾ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ. ದೇವದತ್ತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 27 Apr 2021 07:15 PM (IST)

  ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ ಇಲೆವೆನ್

  ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್

 • 27 Apr 2021 07:14 PM (IST)

  ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

  ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ಸ್ಟೀವನ್ ಸ್ಮಿತ್, ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೋನಿಸ್, ಆಕ್ಸಾರ್ ಪಟೇಲ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಇಶಾಂತ್ ಶರ್ಮಾ, ಅವೇಶ್ ಖಾನ್

 • 27 Apr 2021 07:07 PM (IST)

  ಅಹಮದಾಬಾದ್ ಕ್ರೀಡಾಂಗಣ ಪಂದ್ಯಕ್ಕೆ ತಯಾರು

  ಅಹಮದಾಬಾದ್ ನರೇಂದ್ರ ಮೋದಿ ಮೈದಾನ ಹಣಾಹಣಿಗೆ ಸಜ್ಜು

 • 27 Apr 2021 07:05 PM (IST)

  ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ವಿನ್

  ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Apr 27,2021 11:24 PM

Follow us on

Most Read Stories

Click on your DTH Provider to Add TV9 Kannada