ರಜತ್ ಮನೋಹರ್ ಪಾಟಿದಾರ್.. ಮೂಲ ಬೆಲೆ 20ಲಕ್ಷಕ್ಕೆ ಆರ್ಸಿಬಿ ತಂಡಕ್ಕೆ ಸೇಲ್ ಆಗಿರುವ ಕ್ರಿಕೆಟಿಗ. ಮಿಡಲ್ ಆರ್ಡರ್ನ ಬಲಗೈ ಬ್ಯಾಟ್ಸ್ಮನ್ ಆಗಿರುವ ಪಾಟಿದಾರ್, ಆರ್ಸಿಬಿ ಅಭ್ಯಾಸ ಪಂದ್ಯದಲ್ಲಿ ಕೋಚ್ಗಳನ್ನೇ ದಂಗಾಗುವಂತೆ ಅಬ್ಬರಿಸಿ ಬೊಬ್ಬಿರಿದ್ದಾನೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆರ್ಸಿಬಿಯ ಎರಡೂ ಅಭ್ಯಾಸ ಪಂದ್ಯದಲ್ಲಿ, ರಜತ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾನೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಪಾಟಿದಾರ್, ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ, ಕೋಚ್ಗಳ ಹುಬ್ಬೆರುವಂತೆ ಮಾಡಿದ್ರು.
ಅಭ್ಯಾಸ ಪಂದ್ಯದಲ್ಲಿ ರಜತ್
ಮೊದಲ ಅಭ್ಯಾಸ ಪಂದ್ಯದಲ್ಲಿ 35ಬಾಲ್ಗಳಲ್ಲಿ 54ರನ್ ಗಳಿಸಿದ್ದ ರಜತ್, ಎರಡನೇ ಪಂದ್ಯದಲ್ಲಿ 49ಬಾಲ್ಗಳಲ್ಲಿ 104ರನ್ ಬಾರಿಸಿದ್ರು.
ದೇಸಿ ಕ್ರಿಕೆಟ್ನಲ್ಲಿ ರನ್ ಮಳೆ ಹರಿಸಿರುವ ರಜತ್!
ರಜತ್ ಕೇವಲ ಐಪಿಎಲ್ ಅಭ್ಯಾಸ ಪಂದ್ಯಗಳಲ್ಲಿ ಮಾತ್ರ ಮಿಂಚಿಲ್ಲ. ಇದಕ್ಕೂ ಮುನ್ನ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯ ಪ್ರದೇಶದ ಪರ ರನ್ ಮಾರುತವನ್ನ ಎಬ್ಬಿಸಿದ್ದಾನೆ. ಈಗಾಗಲೇ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ಟೀಮ್ ಮ್ಯಾನೇಜ್ಮೆಂಟ್ನ ಗಮನ ಸೆಳೆದಿರುವ ರಜತ್, ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯೋದ್ರಲ್ಲಿ ಅನುಮಾನವಿಲ್ಲ. ರಜತ್ನನ್ನ ಹನ್ನೊಂದರ ಬಳದಲ್ಲಿ ಆಡಿಸಿದ್ರೆ, ಆರ್ಸಿಬಿ ಮಿಡರ್ ಆರ್ಡರ್ ಮತ್ತಷ್ಟು ಬಲಗೊಳ್ಳಲಿದೆ.
ಮೂರನೇ ಕ್ರಮಾಂಕದಲ್ಲಿ ರಜತ್ಗೆ ಸಿಗುತ್ತಾ ಅವಕಾಶ?
ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಳಿಯೋದ್ರಿಂದ, ಆರ್ಸಿಬಿ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಯಾರನ್ನ ಕಣಕ್ಕಿಳಿಸವೇಕು ಅನ್ನೋ ಗೊಂದಲವಿದೆ. ಅದ್ರಲ್ಲೂ ಪಾಟಿದಾರ್ ದೇಸಿ ಟೂರ್ನಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರೋದ್ರಿಂದ, ಆರ್ಸಿಬಿ ತಂಡದಲ್ಲಿ 3ನೇ ಸ್ಥಾನಕ್ಕೆ ನ್ಯಾಯ ಒದಗಿಸಿಕೊಡುವ ಸಾಮರ್ಥ್ಯ ಹೊಂದಿದ್ದಾನೆ.
ಟಿ-ಟ್ವೆಂಟಿಯಲ್ಲಿ ರಜತ್
ಮಧ್ಯಪ್ರದೇಶ ಪರ 22 ಟಿ-ಟ್ವೆಂಟಿ ಪಂದ್ಯಗಳನ್ನಾಡಿರೊ ರಜತ್ ಪಾಟಿದಾರ್ 699ರನ್ ಗಳಿಸಿದ್ದಾನೆ. ಗರಿಷ್ಠ 96ರನ್ ಗಳಿಸಿದ್ದು, 6ಅರ್ಧಶತಕಗಳನ್ನ ಬಾರಿಸಿದ್ದಾನೆ.
ಇನ್ನೂ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಡಿದ ಗ್ಲೇನ್ ಮ್ಯಾಕ್ಸ್ವೆಲ್, ಭರ್ಜರಿ ರಿವರ್ಸ್ ಸ್ವೀಪ್ ಶಾಟ್ಗಳನ್ನ ಬಾರಿಸಿದ್ರು. ಯಜ್ವಿಂದರ್ ಚಹಲ್ ಹಾಗೂ ಡೇನಿಯಲ್ ಕ್ರಿಶ್ಚಿಯನ್ ಬೌಲಿಂಗ್ನಲ್ಲಿ ಮ್ಯಾಕ್ಸ್ವೆಲ್ ಅತ್ಯದ್ಭುತ ರಿವರ್ಸ್ ಸ್ವೀಪ್ ಶಾಟ್ಗಳನ್ನ ಹೊಡೆದ್ರು. ಈ ಪಂದ್ಯದಲ್ಲಿ ಮ್ಯಾಕ್ಸ್ವೆಲ್ 31 ಬಾಲ್ಗಳಲ್ಲಿ 44ರನ್ ಚಚ್ಚಿದ್ರು.
ಮಿಡಲ್ ಆರ್ಡರ್ನಲ್ಲಿ ಸ್ಟ್ರಾಂಗ್ ಬ್ಯಾಟ್ಸ್ಮನ್ಗಳ ಕೊರತೆ ಎದುರಿಸ್ತಿದ್ದ ಆರ್ಸಿಬಿಗೆ ಮತ್ತೊಂದು ಅಸ್ತ್ರ ಸಿಕ್ಕಾಂತಾಗಿದೆ. ರಜತ್ ಪಾಟಿದಾರ್, ಎಬಿ ಡಿವಿಲಿಯರ್ಸ್, ಗ್ಲೇನ್ ಮ್ಯಾಕ್ಸ್ವೆಲ್ ಈ ಮೂವರು ಮಿಡಲ್ ಆರ್ಡರ್ನಲ್ಲಿರೋದು ತಂಡದ ಶಕ್ತಿಯನ್ನ ಹೆಚ್ಚಿಸುವಂತೆ ಮಾಡಿದೆ.