IPL 2021: ಆರ್​ಸಿಬಿಗೆ ಸಿಹಿ ಸುದ್ದಿ! ಕೊರೊನಾ ಗೆದ್ದು ಕ್ಯಾಂಪ್ ಸೇರಿದ ದೇವದತ್.. ಮುಂಬೈ ವಿರುದ್ಧದ ಪಂದ್ಯಕ್ಕೆ ಪಡಿಕ್ಕಲ್ ಲಭ್ಯ!

IPL 2021: ಎರಡು ವಾರಗಳ ಹಿಂದೆ ಕೊವಿಡ್ ವರದಿ ಪಾಸಿಟಿವ್ ಬಂದಿತ್ತು. ಇದೀಗ ಎರಡೂ ಟೆಸ್ಟ್ಗಳಲ್ಲೂ ನೆಗೆಟಿವ್ ಬಂದಿದ್ದು, ಆರ್ಸಿಬಿ ತಂಡವನ್ನ ಸೇರಿಕೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

IPL 2021: ಆರ್​ಸಿಬಿಗೆ ಸಿಹಿ ಸುದ್ದಿ! ಕೊರೊನಾ ಗೆದ್ದು ಕ್ಯಾಂಪ್ ಸೇರಿದ ದೇವದತ್.. ಮುಂಬೈ ವಿರುದ್ಧದ ಪಂದ್ಯಕ್ಕೆ ಪಡಿಕ್ಕಲ್ ಲಭ್ಯ!
ವಿರಾಟ್​ ಕೊಹ್ಲಿ ಜೊತೆ ದೇವದತ್ ಪಡಿಕ್ಕಲ್
Follow us
ಪೃಥ್ವಿಶಂಕರ
|

Updated on: Apr 08, 2021 | 11:24 AM

ಐಪಿಎಲ್ 14ನೇ ಆವೃತ್ತಿಗೆ ಇನ್ನೊಂದೇ ದಿನ ಮಾತ್ರ ಬಾಕಿ ಇದ್ದು, ಆರ್ಸಿಬಿ ಅಭಿಮಾನಿಗಳ ಪಾಲಿಗೆ ಬಹುದೊಡ್ಡ ಶುಭಸುದ್ದಿ ಸಿಕ್ಕಿದೆ. ಮಾರ್ಚ್ 22ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ಕನ್ನಡಿಗ ದೇವದತ್ ಪಡಿಕ್ಕಲ್, ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ರು. ಆದ್ರೀಗ ಪಡಿಕ್ಕಲ್ಗೆ ನಡೆಸಿದ ಎರಡೂ ಟೆಸ್ಟ್ನಲ್ಲಿ, ನೆಗೆಟಿವ್ ವರದಿ ಬಂದಿದ್ದು, ಆರ್ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಈ ಮೂಲಕ ಪಡಿಕ್ಕಲ್ ನಾಯಕ ಕೊಹ್ಲಿಗೆ ಕಗ್ಗಂಟಾಗಿದ್ದ ಆರಂಭಿಕನ ಸ್ಥಾನಕ್ಕೆ ಜೀವ ತುಂಬಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್ಸಿಬಿ, ಪಡಿಕ್ಕಲ್ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಹಾಗೇ ಆಡಲು ಸಿದ್ದರಾಗಿದ್ದಾರೆ ಅಂತಾ ತಿಳಿಸಿದೆ. ಕೊರೊನಾ ಗೆದ್ದಿರೋ ಪಡಿಕ್ಕಲ್, ತಮ್ಮ ಅಭಿಮಾನಿಗಳಿಗೆ ವಿಡಿಯೋ ಸಂದೇಶವನ್ನ ರವಾನಿಸಿದ್ದಾರೆ. ಎರಡು ವಾರಗಳ ಹಿಂದೆ ಕೊವಿಡ್ ವರದಿ ಪಾಸಿಟಿವ್ ಬಂದಿತ್ತು. ಇದೀಗ ಎರಡೂ ಟೆಸ್ಟ್ಗಳಲ್ಲೂ ನೆಗೆಟಿವ್ ಬಂದಿದ್ದು, ಆರ್ಸಿಬಿ ತಂಡವನ್ನ ಸೇರಿಕೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಮುಂಬೈ ವಿರುದ್ಧದ ಪಂದ್ಯಕ್ಕೆ ಪಡಿಕ್ಕಲ್ ಲಭ್ಯ! ಪಡಿಕ್ಕಲ್ಗೆ ಕೊರೊನಾ ಬಂದಾಗ, ಆರಂಭದ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಾರೆ ಅಂತಾ ಹೇಳಲಾಗ್ತಿತ್ತು. ಆದ್ರೀಗ ಪಂದ್ಯಕ್ಕೆ ಮೂರು ದಿನ ಬಾಕಿ ಇರುವಂತೆಯೇ ದೇವದತ್ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಏಪ್ರಿಲ್ 9ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರೋ ಉದ್ಘಾಟನಾ ಪಂದ್ಯದಲ್ಲಿ, ಪಡಿಕ್ಕಲ್ ಕಣಕ್ಕಳಿಯೋದು ಬಹುತೇಕ ಪಕ್ಕಾ ಆಗಿದೆ..

ಆರ್ಸಿಬಿ ಆತಂಕ ದೂರ ಮಾಡಿದ ಕನ್ನಡಿಗ ಪಡಿಕ್ಕಲ್! ಆರಂಭಿಕನಾಗಿ ಕ್ಲಾಸ್ ಌಂಡ್ ಮಾಸ್ ಪರ್ಫಾಮೆನ್ಸ್ ನೀಡುವ ಪಡಿಕ್ಕಲ್ಗೆ ಕೊರೊನಾ ಬಂದಿದ್ದು, ನಿಜಕ್ಕೂ ತಂಡದಲ್ಲಿ ಆತಂಕವನ್ನುಂಟು ಮಾಡಿತ್ತು. ಅಲ್ಲದೇ ಪಡಿಕ್ಕಲ್ ಸ್ಥಾನದಲ್ಲಿ ಯಾರನ್ನ ಆರಂಭಿಕನಾಗಿ ಕಣಕ್ಕಿಳಿಸಬೇಕು ಅನ್ನೋ ಬಗ್ಗೆ ಕ್ಯಾಪ್ಟನ್ ಕೊಹ್ಲಿ ತಲೆಕೆಡಿಸಿಕೊಂಡಿದ್ರು. ಆದ್ರೀಗ ಪಡಿಕ್ಕಲ್ಗೆ ನೆಗೆಟಿವ್ ಬಂದಿರೋದು, ತಂಡದ ಉತ್ಸಾಹವನ್ನ ಹೆಚ್ಚಾಗುವಂತೆ ಮಾಡಿದೆ. ಅಲ್ಲದೇ, ಕ್ಯಾಪ್ಟನ್ ಕೊಹ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ..

ರನ್ ಮಾರುತ ಎಬ್ಬಿಸಲು ಕಿಂಗ್ ಕೊಹ್ಲಿ-ಪಡಿಕ್ಕಲ್ ಸಜ್ಜು ಈ ಬಾರಿಯ ಐಪಿಎಲ್ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಡಿಕ್ಕಲ್ ಇನ್ನಿಂಗ್ಸ್ ಅರಂಭಿಸೋದು ಖಚಿತವಾಗಿದೆ. ಕಳೆದ ಸೀಸನ್ನಲ್ಲಿ ಆರಂಭಿಕರಾಗಿ ಯಶಸ್ಸು ಕಂಡಿರುವ ಪಡಿಕ್ಕಲ್-ಕೊಹ್ಲಿ ಜೋಡಿ, ಈ ಆವೃತ್ತಿಯಲ್ಲೂ ರನ್ ಶಿಖರ ಕಟ್ಟಲು ರೆಡಿಯಾಗಿದ್ದಾರೆ. ಅದ್ರಲ್ಲೂ ಲೆಫ್ಟ್ ಹ್ಯಾಂಡ್ ಮತ್ತು ರೈಟ್ ಹ್ಯಾಂಡ್ ಬ್ಯಾಟಿಂಗ್ ಕಾಂಬಿನೇಷನ್, ಎದುರಾಳಿ ತಂಡಕ್ಕೆ ಫೀಲ್ಡಿಂಗ್ ಸೆಟ್ ಮಾಡಲು ಕಷ್ಟವಾಗಲಿದೆ..

ಆರ್ಸಿಬಿ ತಂಡದ ಮತ್ತೊಬ್ಬ ಆಟಗಾರನಿಗೆ ಕೊರೊನಾ ದೃಢ! ಕಳೆದ ಸೀಸನ್ನಲ್ಲಿ ಚೆನ್ನೈ ತಂಡವನ್ನ ಬಿಟ್ಟುಬಿಡದೇ ಕಾಡಿದ್ದ ಕ್ರೂರಿ ಕೊರೊನಾ, ಈ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ಬೆನ್ನಿಂದೆ ಬಿದ್ದಿದೆ. ಡ್ಯಾಶಿಂಗ್ ಓಪನರ್ ಪಡಿಕ್ಕಲ್ ಬೆನ್ನಲ್ಲೇ, ಇದೀಗ ಮತ್ತೊಬ್ಬ ಆಟಗಾರನಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಐಪಿಎಲ್ನಲ್ಲಿ ಸೋಂಕಿತ ಆಟಗಾರರ ಸಂಖ್ಯೆ ನಾಲ್ಕಕ್ಕೇರಿದೆ..

ಆರ್ಸಿಬಿ ತಂಡದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಸೋಂಕಿಗೆ ತುತ್ತಾಗಿದ್ದಾರೆ. ಸ್ಯಾಮ್ಸ್ಗೆ ಸೋಂಕು ತಗುಲಿರುವುದನ್ನ ಆರ್ಸಿಬಿ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಆದ್ರೆ, ಆಸಿಸ್ ಮೂಲದ ಕ್ರಿಕೆಟಿಗನಿಗೆ ಕೊರೊನಾದ ಯಾವುದೇ ಗುಣಲಕ್ಷಣಗಳಿಲ್ಲ ಅಂತಾ ಸ್ಪಷ್ಟಪಡಿಸಿದೆ. ಏಪ್ರಿಲ್ 3ರಂದು ಚೆನ್ನೈಗೆ ಬಂದಿಳಿದಿದ್ದ ಸ್ಯಾಮ್ಸ್ಗೆ ಕೊವಿಡ್ ಟೆಸ್ಟ್ ಮಾಡಿದ್ದಾಗ ನೆಗೆಟಿವ್ ಬಂದಿತ್ತು. ಆದ್ರೆ, ಏಪ್ರಿಲ್ 7ರಂದು ನಡೆದ 2ನೇ ಪರೀಕ್ಷೆಯಲ್ಲಿ ಸ್ಯಾಮ್ಸ್ಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇನ್ನೂ ಕೊರೊನಾದಿಂದಾಗಿ ಸ್ಯಾಮ್ಸ್ ಮುಂಬೈ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ..

ಸೋಂಕಿನ ಲಕ್ಷಣಗಳಿಲ್ಲ ಏಪ್ರಿಲ್ 3ರಂದು ಚೆನ್ನೈ ಹೋಟೆಲ್ನಲ್ಲಿ ಡೇನಿಯಲ್ ಸ್ಯಾಮ್ಸ್ ಪರೀಕ್ಷೆ ಒಳಗಾಗಿದ್ರು. ಆಗ ಕೊವಿಡ್ ವರದಿ ನೆಗೆಟಿವ್ ಬಂದಿತ್ತು. ಆದ್ರೆ ಏಪ್ರಿಲ್ 7ರಂದು ನಡೆದ 2ನೇ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಸ್ಯಾಮ್ಸ್ಗೆ ಸೋಂಕಿನ ಯಾವುದೇ ಲಕ್ಷಣವಿಲ್ಲ. ಆದ್ರೆ ವೈದ್ಯಕೀಯ ಸೌಲಭ್ಯವಿರುವ ಐಸೋಲೇಷನ್ನಲ್ಲಿದ್ದಾರೆ. – ಆರ್ಸಿಬಿ ಫ್ರಾಂಚೈಸಿ

ಒಟ್ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೊರೊನಾ ಗೆದ್ದು ಬಂದಿರೋದು ಆರ್ಸಿಬಿ ತಂಡದ ಉತ್ಸಾಹವನ್ನು ನೂರು ಪಟ್ಟು ಹೆಚ್ಚಾಗುವಂತೆ ಮಾಡಿದೆ. ಜೊತೆಗೆ ಆರಂಭಿಕರ ಸಮಸ್ಯೆಯ ಆತಂಕವನ್ನು ಪಡಿಕ್ಕಲ್ ದೂರ ಮಾಡಿದ್ದಾನೆ. ಆದ್ರೆ ಪಡಿಕ್ಕಲ್ ಬೆನ್ನಲ್ಲೇ ಸ್ಯಾಮ್ಸ್ಗೆ ಸೋಂಕು ತಂದಿರೋದು, ಆರ್ಸಿಬಿ ಕ್ಯಾಂಪ್ನಲ್ಲಿ ತಳಮಳ ಹೆಚ್ಚಾಗುವಂತೆ ಮಾಡುತ್ತಿದೆ.

ಇದನ್ನೂ ಓದಿ:IPL 2021: ನಾನೀಗಲೂ ಅತೀ ವೇಗದ ಚಿರತೆ! ಆರ್​ಸಿಬಿ ಜರ್ಸಿ ತೊಟ್ಟು, ಕೊಹ್ಲಿ- ಎಬಿಡಿಗೆ ಚಾಲೆಂಜ್ ಹಾಕಿದ ಬೋಲ್ಟ್

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ