ಐಪಿಎಲ್ 2021 ಟೂರ್ನಿಯ 16ನೇ ಪಂದ್ಯವು ಇಂದು (ಏಪ್ರಿಲ್ 22) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ, ಆಡಿರುವ 3 ಪಂದ್ಯಗಳ ಪೈಕಿ ಮೂರರಲ್ಲೂ ಗೆದ್ದು ಫೇವರಿಟ್ ತಂಡ ಅನಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಆಡಿರುವ 3 ಪಂದ್ಯಗಳಲ್ಲಿ 1ರಲ್ಲಿ ಗೆಲುವು ಕಂಡಿದೆ. ಮತ್ತೆರಡರಲ್ಲಿ ಸೋಲುಂಡಿದೆ.
ಬಲಿಷ್ಠ ತಂಡವನ್ನು ಹೊಂದಿರುವ ಆರ್ಸಿಬಿ ಈ ಬಾರಿಯ ಟೂರ್ನಿಯಲ್ಲಿ ಯಶಸ್ವಿಯಗಿ ಮುನ್ನುಗ್ಗುತ್ತಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ಗೆ ಬಲ ತುಂಬಿದರೆ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ಚಹಾಲ್ ಬೌಲಿಂಗ್ನಲ್ಲಿ ಮಿಂಚುತ್ತಿದ್ದಾರೆ. ಒಬ್ಬಿಲ್ಲೊಬ್ಬರು ದಾಂಡಿಗರು ಆರ್ಸಿಬಿ ಬ್ಯಾಟಿಂಗ್ಗೆ ಶಕ್ತಿ ತುಂಬುತ್ತಿದ್ದಾರೆ. ಮ್ಯಾಕ್ಸ್ವೆಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲೂ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಆರ್ಸಿಬಿ ಬೌಲರ್ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಆಟದಲ್ಲಿ ಯಶಸ್ವಿಯಾಗುತ್ತಿಲ್ಲ. ಸಂಜು ಸ್ಯಾಮ್ಸನ್ ಒಂದು ಪಂದ್ಯದಲ್ಲಿ ಅಬ್ಬರಿಸಿ ಮತ್ತೆ ತಣ್ಣಗಾಗಿದ್ದಾರೆ. ಮಿಲ್ಲರ್ ಹಾಗೂ ಮಾರಿಸ್ ಆಟದ ಬಗ್ಗೆಯೂ ನಂಬಿಕೆ ಮೂಡಿಲ್ಲ. ಸಕಾರಿಯಾ, ಉನಾದ್ಕತ್, ಮಾರಿಸ್ ಬೌಲಿಂಗ್ ದಾಳಿ ಯಶಸ್ವಿಯಾಗಬೇಕಿದೆ.
ಕಳೆದ ಮೂರು ಪಂದ್ಯದಲ್ಲಿ ಗೆಲುವು ಕಂಡಿರುವ ಆರ್ಸಿಬಿ ಇಂದು ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಅದೇ ಯಶಸ್ವಿ ತಂಡವನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಗಾಯಗೊಂಡು ತಂಡದಿಂದ ಹೊರಗುಳಿದ ಬಳಿಕ, ಡೇವಿಡ್ ಮಿಲ್ಲರ್ ಆಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಕೂಡ ಇದೇ ತಂಡವನ್ನು ಇಂದು ಆಡಿಸುವ ಸಾಧ್ಯತೆ ದಟ್ಟವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್:
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್:
ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ), ಶಿವಮ್ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕತ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್
IPL 2021 Points Table: ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಟಾಪ್; ಮತ್ತೆ ಮೊದಲ ಸ್ಥಾನಕ್ಕೇರುತ್ತಾ ಆರ್ಸಿಬಿ?
(IPL 2021 RCB vs RR Team Prediction Royal Challengers Bangalore vs Rajasthan Royals Playing 11)
Published On - 5:42 pm, Thu, 22 April 21