IPL 2021 RR vs MI Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ

| Updated By: Skanda

Updated on: Apr 29, 2021 | 8:03 AM

IPL 2021: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ 2021 ರ 24 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಡೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

IPL 2021 RR vs MI Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ
ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್
Follow us on

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ 2021 ರ 24 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಡೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಎಂಐ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುತ್ತಿದ್ದಂತೆ ಗೆಲುವಿನ ಹಾದಿಗೆ ಮರಳಲು ನೋಡಲಿದೆ. ಆರ್‌ಸಿಬಿ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಸೋತ ನಂತರ, ಎಂಐ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಆದಾಗ್ಯೂ ಅವರು ಡಿಸಿ ಮತ್ತು ಪಿಬಿಕೆಎಸ್ ವಿರುದ್ಧ ಮುಂದಿನ ಎರಡು ಪಂದ್ಯಗಳನ್ನು ಕಳೆದುಕೊಂಡರು. ಐದು ಪಂದ್ಯಗಳಿಂದ ಮೂರು ಸೋಲುಗಳು ಮತ್ತು ಎರಡು ಗೆಲುವುಗಳ ನಂತರ ಮತ್ತೆ ಗೆಲುವಿನ ಹಾದಿಗೆ ಮರಳಲು ನೋಡುತ್ತಿದೆ.

ಆರ್​ಆರ್​ ಕೂಡ ಪಂದ್ಯಾವಳಿಯಲ್ಲಿ ಏರಿಳಿತ ಕಂಡಿದೆ. ಐದು ಪಂದ್ಯಗಳಿಂದ ಮೂರು ಸೋಲುಗಳು ಮತ್ತು ಎರಡು ಗೆಲುವುಗಳೊಂದಿಗೆ ನಾಲ್ಕು ಪಾಯಿಂಟ್‌ಗಳಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿದ್ದಾರೆ. ಆರ್​ಆರ್​ ತಮ್ಮದೇ ಆದ ಬ್ಯಾಟಿಂಗ್ ಸಮಸ್ಯೆಗಳನ್ನು ಹೊಂದಿದ್ದಾರೆ. ಜೋಸ್ ಬಟ್ಲರ್ ಕ್ಲಿಕ್ ಆಗಿಲ್ಲ. ಸಂಜು ಸ್ಯಾಮ್ಸನ್ ಸ್ಥಿರತೆ ಕಾಪಾಡಿಕೊಂಡಿಲ್ಲ. ಆದರೆ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 41 ಎಸೆತಗಳಲ್ಲಿ 42 ರನ್ ಗಳಿಸಿ ಜವಾಬ್ದಾರಿಯುತ ಆಡಿ ತಂಡವನ್ನು ಗೆಲ್ಲಿಸಿದರು.

ಎಂಐ ಮತ್ತು ಆರ್‌ಆರ್ ನಡುವಿನ ಐಪಿಎಲ್‌ನ 24 ನೇ ಪಂದ್ಯ ಯಾವಾಗ ನಡೆಯಲಿದೆ?
ಎಂಐ ಮತ್ತು ಆರ್​ಆರ್​ ನಡುವಿನ ಐಪಿಎಲ್‌ನ 24 ನೇ ಪಂದ್ಯವು 2021 ಏಪ್ರಿಲ್ 29 ರಂದು ನಡೆಯಲಿದೆ.

ಪಂದ್ಯದ ಸ್ಥಳ ಯಾವುದು?
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಮಧ್ಯಾಹ್ನ 3.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 3 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?
ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.

ಸಂಭವನೀಯ ಇಲೆವನ್
ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಜಯಂತ್ ಯಾದವ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ

ಬೆಂಚ್: ಅನ್ಮೋಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಅನುಕುಲ್ ರಾಯ್, ಜೇಮ್ಸ್ ನೀಶಮ್, ಅರ್ಜುನ್ ತೆಂಡೂಲ್ಕರ್, ಪಿಯೂಷ್ ಚಾವ್ಲಾ, ನಾಥನ್ ಕೌಲ್ಟರ್ ನೈಲ್, ಆದಿತ್ಯ ತಾರೆ, ಜಯಂತ್ ಯಾದವ್, ಯುಧ್ವೀರ್ ಸಿಂಗ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಕ್ರಿಸ್ ಲಿನ್, ಆಡಮ್ ಮಿಲ್ಸೆನ್

ರಾಜಸ್ಥಾನ್ ರಾಯಲ್ಸ್
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಮ್ ಡ್ಯೂಬ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ರಾಹುಲ್ ತಿವಾಟಿಯಾ, ಜಯದೇವ್ ಉನಾದ್ಕಟ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್

ಬೆಂಚ್: ಲಿಯಾಮ್ ಲಿವಿಂಗ್‌ಸ್ಟೋನ್, ಮನನ್ ವೊಹ್ರಾ, ಮಹಿಪಾಲ್ ಲೋಮರ್, ಶ್ರೇಯಾಸ್ ಗೋಪಾಲ್, ಆಂಡ್ರ್ಯೂ ಟೈ, ಅನುಜ್ ರಾವತ್, ಆಕಾಶ್ ಸಿಂಗ್, ಜೋಫ್ರಾ ಆರ್ಚರ್, ಕೆ.ಸಿ.ಕರಿಯಪ್ಪ, ಮಾಯಾಂಕ್ ಮಾರ್ಕಂಡೆ, ಕುಲದೀಪ್ ಯಾದವ್, ಕಾರ್ತಿಕ್ ತ್ಯಾಗಿ