ICC T20 World Cup: ಈ ಬಾರಿಯ ಐಪಿಎಲ್​ ನಡೆಯುವ ಸ್ಥಳಗಳಲ್ಲೇ T20 ವಿಶ್ವಕಪ್​ ಆಯೋಜಿಸಲು ಬಿಸಿಸಿಐ ಚಿಂತನೆ,​ ಈ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ?

|

Updated on: Mar 10, 2021 | 1:34 PM

ICC T20 World Cup: ಐಪಿಎಲ್ 2021 ರ ಎಲ್ಲಾ 60 ಪಂದ್ಯಗಳನ್ನು ಆಯೋಜಿಸಿರುವ ಆರು ಸ್ಥಳಗಳಲ್ಲಿ, ವಿಶ್ವಕಪ್ ಪಂದ್ಯಗಳನ್ನು ಸಹ ಆಯೋಜಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ICC T20 World Cup: ಈ ಬಾರಿಯ ಐಪಿಎಲ್​ ನಡೆಯುವ ಸ್ಥಳಗಳಲ್ಲೇ T20 ವಿಶ್ವಕಪ್​ ಆಯೋಜಿಸಲು ಬಿಸಿಸಿಐ ಚಿಂತನೆ,​ ಈ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ?
ಸಾಂಧರ್ಬಿಕ ಚಿತ್ರ
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಆವೃತ್ತಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬಹಳ ಮುಖ್ಯ ಮತ್ತು ವಿಶೇಷವಾಗಿದೆ. ಕಳೆದ ವರ್ಷ ಯುಎಇಗೆ ಆತಿಥ್ಯ ವಹಿಸಿದ ನಂತರ, ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಲೀಗ್ ಮತ್ತೊಮ್ಮೆ ಭಾರತಕ್ಕೆ ಮರಳುತ್ತಿದೆ. ಪಂದ್ಯಾವಳಿ ಏಪ್ರಿಲ್ 9 ರಿಂದ ಪ್ರಾರಂಭವಾಗಲಿದ್ದು, 52 ದಿನಗಳವರೆಗೆ ಪಂದ್ಯಾವಳಿಗಳು ನಡೆಯಲಿದೆ. ಕೊರೊನಾ ಮಹಾಮಾರಿಯ ಪ್ರಕರಣಗಳು ಕಡಿಮೆ ಆಗಿತ್ತಿದ್ದರೂ, ಅದರ ಅಪಾಯ ಇನ್ನೂ ಹಾಗೇ ಇದೆ. ಹೀಗಾಗಿ ಈ ಸಂದರ್ಭದಲ್ಲಿ, ಐಪಿಎಲ್ 2021ರ ಯಶಸ್ಸು ಬಿಸಿಸಿಐಗೆ ಬಹಳ ಮುಖ್ಯವಾಗಿದೆ. ಆದರೆ ಈ ಯಶಸ್ಸು ಕೇವಲ ಐಪಿಎಲ್‌ಗೆ ಸೀಮಿತವಾಗಿಲ್ಲ. ಬದಲಿಗೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2021 ರ ಸಿದ್ಧತೆಗಳ ಅಡಿಪಾಯವಾಗಿ ಬಿಸಿಸಿಐ ಈ ಪಂದ್ಯಾವಳಿಯನ್ನು ಪರಿಗಣಿಸಿದೆ. ಅಷ್ಟೇ ಅಲ್ಲದೆ, ಐಪಿಎಲ್ 2021 ರ ಎಲ್ಲಾ 60 ಪಂದ್ಯಗಳನ್ನು ಆಯೋಜಿಸಿರುವ ಆರು ಸ್ಥಳಗಳಲ್ಲಿ, ವಿಶ್ವಕಪ್ ಪಂದ್ಯಗಳನ್ನು ಸಹ ಆಯೋಜಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಟಿ20 ವಿಶ್ವಕಪ್ ಭಾರತದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್​ ತಿಂಗಳಲ್ಲಿ ನಡೆಯಲಿದೆ. 2016 ರಲ್ಲಿ ಭಾರತದಲ್ಲಿ ನಡೆದ ಕೊನೆಯ ವಿಶ್ವಕಪ್ ನಂತರ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಆಗಿದ್ದರೂ, ಕೊರೊನಾ ವೈರಸ್ ಕಾರಣದಿಂದಾಗಿ, ಈ ಬಾರಿ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಅಲ್ಲದೆ ಬಿಸಿಸಿಐನ ಮುಂದಿರುವ ಸವಾಲುಗಳು ಸಹ ದೊಡ್ಡದಾಗಿದೆ.

8 ನಗರಗಳಲ್ಲಿ ಸಂಘಟಿಸುವ ಯೋಚನೆ ಇತ್ತು
ವರದಿಗಳ ಪ್ರಕಾರ ಟಿ20 ವಿಶ್ವಕಪ್​ಗಾಗಿ, ಬಿಸಿಸಿಐ ಈ ಹಿಂದೆ 8 ಸ್ಥಳಗಳನ್ನು ಆಯ್ಕೆ ಮಾಡಿತ್ತು. ಆದರೆ ಕೊರೊನಾದಿಂದ ಉಂಟಾದ ಸಮಸ್ಯೆಗಳು, ಬಿಸಿಸಿಐನ ಚಿಂತನೆಗಳನ್ನ ಬದಲಾಯಿಸಿದವು. ಹಾಗಾಗಿ ಬಿಸಿಸಿಐ, ಈ ಬಾರಿ ಐಪಿಎಲ್ ಆವೃತ್ತಿಯನ್ನು ಆಧರಿಸಿ, ವಿಶ್ವಕಪ್ ನಡೆಯುವ ಸ್ಥಳಕ್ಕಾಗಿ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಿದೆ. ಇದರಿಂದ ತಂಡಗಳು ಕನಿಷ್ಠ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕಾಗುತ್ತದೆ. ವರದಿಯ ಪ್ರಕಾರ ಐಸಿಸಿ, ಪಂದ್ಯಾವಳಿಗಳು ನಡೆಯುವ ಸ್ಥಳವನ್ನು ಸಾಮಾನ್ಯವಾಗಿ ಸುಮಾರು 6 ತಿಂಗಳ ಮುಂಚಿತವಾಗಿ ಘೋಷಿಸುತ್ತದೆ.

ಆದರೆ ಈ ಬಾರಿ ಈ ವಿಚಾರದಲ್ಲಿ ಕೊಂಚ ಬದಲಾವಣೆಯಾಗಬಹುದು. ಅಂದರೆ, ಪಂದ್ಯಾವಳಿ ಆರಂಭಕ್ಕೂ ಸ್ವಲ್ಪ ಮೊದಲು ಸ್ಥಳವನ್ನು ಘೋಷಿಸಬಹುದಾಗಿದೆ. ಈ ಹಿಂದೆ ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಚೆನ್ನೈ, ಅಹಮದಾಬಾದ್, ಮೊಹಾಲಿ ಮತ್ತು ಧರ್ಮಶಾಲಾದಲ್ಲಿ ಪಂದ್ಯಾವಳಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಹೇಳಲಾಗಿತ್ತು. ಆದರೆ ಈಗ ಧರ್ಮಶಾಲಾ ಮತ್ತು ಮೊಹಾಲಿಯಲ್ಲಿ ಪಂದ್ಯಾವಳಿಗಳನ್ನು ನಡೆಸದಿರಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

ಮುಂಬೈ-ಕೋಲ್ಕತ್ತಾದ ಅಹಮದಾಬಾದ್‌ನಲ್ಲಿ ಫೈನಲ್
ಅಷ್ಟೇ ಅಲ್ಲ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯುವ ಸ್ಥಳಕ್ಕಾಗಿ ನಗರಗಳ ಆಯ್ಕೆ ಕೂಡ ನಿಶ್ಚಿತವಾಗಿದೆ ಎಂದು ಹೇಳಲಾಗುತ್ತಿದೆ. ಸೆಮಿಫೈನಲ್ ಪಂದ್ಯಗಳು ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಬಹುದು. 2016 ರ ಪಂದ್ಯಾವಳಿಯಲ್ಲಿ, ಮುಂಬೈ, ಕೋಲ್ಕತಾ ಮತ್ತು ದೆಹಲಿಯಲ್ಲಿ ನಾಕೌಟ್ ಪಂದ್ಯಗಳು ನಡೆದಿದ್ದವು. ಈ ಕಾರಣದಿಂದಾಗಿ ಬಿಸಿಸಿಐ ಈ ಬಾರಿ ಇತರ ಸ್ಥಳಗಳನ್ನು ಆಯ್ಕೆ ಮಾಡಬಹುದು.

ಇದನ್ನೂ ಓದಿ: India vs England: ಇಂಗ್ಲೆಂಡ್‌ ಕ್ರಿಕೆಟ್​ನಲ್ಲಿ​ ಮೋರ್ಗನ್​ಗಿರುವಷ್ಟು ಸ್ವಾತಂತ್ರ್ಯ ರೂಟ್​ಗಿಲ್ಲ! ಹಾಗಾಗಿ ಟೆಸ್ಟ್​ ಸರಣಿ ಸೋಲಬೇಕಾಯ್ತು..!