ಕೊವಿಡ್ ಭೀತಿಯಿಂದ ಈ ಹಿಂದೆ ಐಪಿಎಲ್ ಪಂದ್ಯ ಮುಂದೂಡಲ್ಪಟ್ಟಿತ್ತು. ಬಳಿಕ ಆದರೆ, ಇದೀಗ ಮತ್ತೊಮ್ಮೆ ಐಪಿಎಲ್ಗೆ ಕೊರೊನಾ ಸಂಕಷ್ಟ ಎದುರಾಗಿದ್ದು, ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಆಟಗಾರ ಟಿ. ನಟರಾಜನ್ಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರಿಂದಾಗಿ ಮತ್ತೊಮ್ಮೆ ಐಪಿಲ್ ಪಂದ್ಯ ರದ್ದಾಗಲಿದೆಯಾ? ಎಂಬ ಚರ್ಚೆಗಳು ಶುರುವಾಗಿವೆ. ಆದರೆ, ಇಂದಿನ ಡಿಸಿ ವರ್ಸಸ್ ಎಸ್ಆರ್ಹೆಚ್ ಪಂದ್ಯ ನಡೆಯಲಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಸನ್ರೈಸರ್ಸ್ ಹೈದರಾಬಾದ್ ತಂಡದ ಟಿ. ನಟರಾಜನ್ ಅವರಿಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿದೆ. ಇಂದೇ ಸನ್ರೈಸರ್ಸ್ (ಎಸ್ಆರ್ಹೆಚ್) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಹೆಚ್) ತಂಡದ ಮಧ್ಯೆ ಐಪಿಎಲ್ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ತಿಳಿಸಿದೆ.
ಭಾರತದಲ್ಲಿ ಕೊವಿಡ್ ಸೋಂಕು ಹೆಚ್ಚಾಗಿದ್ದರಿಂದ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡಿತ್ತು. ಅದಾದ ನಾಲ್ಕು ತಿಂಗಳ ನಂತರ ಮತ್ತೆ ಐಪಿಎಲ್ ಟೂರ್ನಿ ಯುಎಇಯಲ್ಲಿ ಮತ್ತೆ ಪುನರಾರಂಭಗೊಂಡಿತ್ತು. ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ದುಬೈನಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ. ಟಿ. ನಟರಾಜನ್ ಸಂಪರ್ಕದಲ್ಲಿದ್ದ ಇತರೆ ಆಟಗಾರರು ಕೂಡ ಕ್ವಾರಂಟೈನ್ ಆಗಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಪಟ್ಟಿ:
ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ಪ್ರಿಯಂ ಗರ್ಗ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಟಿ ನಟರಾಜನ್, ಅಭಿಷೇಕ್ ಶರ್ಮಾ, ಶಹಬಾಝ್ ನದೀಮ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ರಶೀದ್ ಖಾನ್, ಶೆರ್ಫೇನ್ ರುದಫೋರ್ಡ್, ವೃದ್ಧಿಮಾನ್ ಸಹಾ (ವಿಕೆಟ್ಕೀಪರ್), ಶ್ರೀವತ್ಸ ಗೋಸ್ವಾಮಿ, ಬಸಿಲ್ ಥಂಪಿ, ಜೇಸನ್ ಹೋಲ್ಡರ್, ಜಗದೀಶ ಸುಚಿತ್, ಕೇದಾರ್ ಜಾಧವ್, ಮುಜೀಬ್ ಉರ್ ರೆಹಮಾನ್, ಜೇಸನ್ ರಾಯ್.
(IPL 2021 SRH player T Natarajan tests Covid positive DC VS SRH Match will Continue)
Published On - 3:41 pm, Wed, 22 September 21