IPL 2021: ಸ್ಪಾಟ್ ಫಿಕ್ಸಿಂಗ್, ಪಾಕ್ ಆಟಗಾರರಿಗೆ ನಿಷೇಧ, ಶ್ರೀಶಾಂತ್​ಗೆ ಭಜ್ಜಿ ಕಪಾಳಮೋಕ್ಷ! ಐಪಿಎಲ್​ನಲ್ಲಿ ಸೃಷ್ಟಿಯಾದ ವಿವಾದಗಳಿವು

|

Updated on: Apr 09, 2021 | 3:55 PM

IPL Controversies: 2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಭಯೋತ್ಪಾಕರು ದಾಳಿ ನಡೆಸಿದ್ರು. ಇದ್ರಿಂದ ಐಪಿಎಲ್ನಲ್ಲಿ ಪಾಕ್ ಆಟಗಾರರಿಗೆ ನಿಷೇಧ ಹೇರಲಾಯ್ತು

IPL 2021: ಸ್ಪಾಟ್ ಫಿಕ್ಸಿಂಗ್, ಪಾಕ್ ಆಟಗಾರರಿಗೆ ನಿಷೇಧ, ಶ್ರೀಶಾಂತ್​ಗೆ ಭಜ್ಜಿ ಕಪಾಳಮೋಕ್ಷ! ಐಪಿಎಲ್​ನಲ್ಲಿ ಸೃಷ್ಟಿಯಾದ ವಿವಾದಗಳಿವು
ಐಪಿಎಲ್​ನಲ್ಲಿ ಸೃಷ್ಟಿಯಾದ ವಿವಾದಗಳು
Follow us on

ಐಪಿಎಲ್ ಕೇವಲ ಕಲರ್ಫುಲ್ ಟೂರ್ನಿ ಮಾತ್ರವಲ್ಲ. ವಿವಾದಗಳ ಲೀಗ್ ಸಹ ಆಗಿದೆ. ಕಳೆದ 13ವರ್ಷಗಳಲ್ಲಿ ಹತ್ತಾರು ವಿವಾದಗಳು ಐಪಿಎಲ್ನಲ್ಲಿ ನಡೆದಿವೆ. ಇದರಲ್ಲಿ ಕೆಲವೊಂದು ವಿವಾದಗಳು ಬಂದಷ್ಟೇ ವೇಗವಾಗಿ ಕಣ್ಮರೆಯಾಗಿದ್ದರೆ. ಇನ್ನೂ ಕೆಲವು ವಿವಾದಗಳಿಂದ ಸಂಪೂರ್ಣ ತಂಡಗಳೇ ಶಿಕ್ಷೆಗೆ ಒಳಪಟ್ಟಿವೆ. ಐಪಿಎಲ್​ನ ಆರಂಭಿಕ ದಿನಗಳಲ್ಲಿ ಫಿಕ್ಸಿಂಗ್ ಭೂತ ಬೆಂಬಿಡದಂತೆ ಕಾಡಿತ್ತು. ಇದರಿಂದ ಹಲವಾರು ಆಟಗಾರರು ಅಜೀವ ನಿಷೇಧಕೊಳ್ಳಗಾದರು. ಜೊತೆಗೆ ಫಿಕ್ಸಿಂಗ್​ನಲ್ಲಿ ಭಾಗಿಯಾದ ಅಪರಾಧ ಸಾಭೀತಾದ ಹಿನ್ನೆಲೆಯಲ್ಲಿ ಐಪಿಎಲ್​ನ ಪ್ರಮುಖ 2 ತಂಡಗಳು 2 ವರ್ಷಗಳ ಕಾಲ ಐಪಿಎಲ್​ನಿಂದ ನಿಷೇಧಕೊಳಗಾದವು. ಹೀಗೆ ಐಪಿಎಲ್​ನಲ್ಲಿ ಇಲ್ಲಿವರೆಗೂ ಉದ್ಭವಿಸಿರುವ ಕೆಲವು ವಿವಾದಗಳ ಮಾಹಿತಿ ಇಲ್ಲಿದೆ.

2008
ಶ್ರೀಶಾಂತ್​ಗೆ ಭಜ್ಜಿ ಕಾಪಾಳಮೋಕ್ಷ
2008ರ ಐಪಿಎಲ್ನಲ್ಲಿ ಪಂಜಾಬ್ ವೇಗಿ ಎಸ್.ಶ್ರೀಶಾಂತ್ಗೆ ಹರ್ಭಜನ್ ಸಿಂಗ್ ಕಾಪಾಳಮೋಕ್ಷ ಮಾಡಿದ್ರು. ಕ್ರೀಡಾಂಗದಲ್ಲಿ ಅತಿರೇಕದಿಂದ ವರ್ತಿಸುತ್ತಿದ್ದ ಶ್ರೀಶಾಂತ್ ಭಜ್ಜಿ ಕೈಯಿಂದ ಏಟು ತಿಂದಿದ್ರು. ಅಲ್ಲದೇ, ಮೈದಾನದಲ್ಲೇ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿತ್ತು.

2009
ಪಾಕಿಸ್ತಾನ ಆಟಗಾರರಿಗೆ ನಿಷೇಧ
2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಭಯೋತ್ಪಾಕರು ದಾಳಿ ನಡೆಸಿದ್ರು. ಇದ್ರಿಂದ ಐಪಿಎಲ್ನಲ್ಲಿ ಪಾಕ್ ಆಟಗಾರರಿಗೆ ನಿಷೇಧ ಹೇರಲಾಯ್ತು.

2012
ವಾಂಖೆಡೆ ಮೈದಾನಕ್ಕೆ ಶಾರುಕ್​ಗೆ ನಿರ್ಬಂಧ
ಕೆಕೆಆರ್ ತಂಡದ ಮಾಲೀಕ ಶಾರುಕ್ ಖಾನ್ಗೆ ಮುಂಬೈನ ವಾಂಖೆಡೆ ಮೈದಾನದಿಂದ 5ವರ್ಷ ನಿಷೇಧಿಸಲಾಗಿತ್ತು. ಪಂದ್ಯದ ವೇಳೆ ಕಿಂಗ್ಖಾನ್ ಮೈದಾನ ಪ್ರವೇಶಕ್ಕೆ ಯತ್ನಿಸಿದ್ರು. ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರು. ಇದ್ರಿಂದ ಎಂಸಿಎ ಐದು ವರ್ಷ ಶಾರುಕ್ಗೆ ಬ್ಯಾನ್ ಮಾಡಿತ್ತು. ಆದ್ರೆ, 2015ರಲ್ಲಿ ಎಂಸಿಎ ನಿಷೇಧವನ್ನ ತೆರವುಗೊಳಿಸಿತ್ತು..

2013
ಸ್ಪಾಟ್ ಫಿಕ್ಸಿಂಗ್
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ವಿವಾದ ಇಡೀ ಕ್ರಿಕೆಟ್ ಲೋಕದಲ್ಲೇ ಕೋಲಾಹಲ ಎಬ್ಬಿಸಿತ್ತು. ರಾಜಸ್ಥಾನ ರಾಯಲ್ಸ್ನ ಶ್ರೀಶಾಂತ್, ಅಜಿತ್ ಚಂದೇಲಾ ಹಾಗೂ ಅಂಕಿತ್ ಚವ್ಹಾಣ್, ಫಿಕ್ಸಿಂಗ್ನಲ್ಲಿ ಭಾಗಿಯಾಗಿರೋದು ಸಾಬೀತಾಗಿತ್ತು. ಶ್ರೀಶಾಂತ್ 7ವರ್ಷಗಳ ನಿಷೇಧದ ಶಿಕ್ಷೆ ಅನುಭವಿಸಿದ್ರೆ, ಅಜಿತ್-ಅಂಕಿತ್ಗೆ ಜೀವಮಾನ ನಿಷೇಧ ಹೇರಲಾಯ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಚೆನ್ನೈ-ರಾಜಸ್ಥಾನ ತಂಡವನ್ನ ಎರಡು ವರ್ಷ ಐಪಿಎಲ್ನಿಂದ ಟೂರ್ನಿಯಿಂದ ಬ್ಯಾನ್ ಮಾಡಲಾಗಿತ್ತು.

2019
ಆರ್.ಅಶ್ವಿನ್ ಮಂಕಡ್ ಔಟ್
ಅದು ಪಂಜಾಬ್ ಹಾಗೂ ರಾಜಸ್ಥಾನ ನಡುವಿನ ಪಂದ್ಯ. ಸ್ಪಿನ್ನರ್ ಆರ್.ಅಶ್ವಿನ್, ಜೋಸ್ ಬಟ್ಲರ್ರನ್ನ ಮಂಕಡ್ ಔಟ್ ಮಾಡಿದ್ರು. ಇದು ಕ್ರಿಕೆಟ್ ದುನಿಯಾದಲ್ಲೇ ಹೆಚ್ಚು ಚರ್ಚೆಗೀಡಾದ ವಿವಾದವಾಯ್ತು. ಈ ಮಂಕಡ್ ಔಟ್ ವಿಚಾರ ಸಾಕಷ್ಟು ಪರ ವಿರೋಧದ ಚರ್ಚೆಗೆ ಗ್ರಾಸವಾಯ್ತು..

2019
ಅಂಪೈರ್ ತೀರ್ಪು ಪ್ರಶ್ನಿಸಿದ ಧೋನಿ
2019ರಲ್ಲಿ ಧೋನಿ ಅಂಪೈರ್ ವಿರುದ್ಧ ತಮ್ಮ ರೋಷವನ್ನ ಹೊರಹಾಕಿದ್ರು. ಆವತ್ತು ಚೆನ್ನೈ ಗೆಲುವಿಗೆ 3 ಎಸೆತದಲ್ಲಿ 8ರನ್ ಬೇಕಿರುತ್ತೆ. ಈ ವೇಳೆ ಅಂಪೈರ್, ಅರ್ಧ ಕೈಮೇಲೆತ್ತಿ ನೋ ಬಾಲ್ ಅಂತಾ ಸಿಗ್ನಲ್ ಕೊಟ್ಟಿದ್ರು. ಅಂಪೈರ್ ಮಾಡಿದ ಈ ಮಿಸ್ಟೇಕ್ ಕ್ಯಾಪ್ಟನ್ ಧೋನಿಯನ್ನ ಕೆರಳಿ ಕೆಂಡಾಮಂಡಲವಾಗೋ ಹಾಗೇ ಮಾಡುತ್ತೆ. ಧರಧರನೇ ಹೆಜ್ಜೆಹಾಕುತ್ತಾ ಮೈದಾನದಕ್ಕೆ ಬಂದ ಧೋನಿ, ಲೆಗ್ ಅಂಪೈರ್ ಹತ್ರ ಅಂಪೈರ್ ಯಡವಟ್ಟವನ್ನ ಹೇಳಿಕೊಂಡಿದ್ರು. ಧೋನಿಯ ಈ ವರ್ತನೆಗೆ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ 15ರಷ್ಟು ದಂಡವನ್ನ ವಿಧಿಸಿದ್ರು. ಒಟ್ನಲ್ಲಿ ಐಪಿಎಲ್ ಕಣ್ತುಂಬಿಕೊಳ್ಳೋದಕ್ಕೆ ಎಷ್ಟು ಚೆನ್ನಾಗಿರುತ್ತೋ, ಕೆಲ ವಿವಾದಗಳು ಕೂಡ ಕಲರ್ಫುಲ್ ಟೂರ್ನಿಗೆ ಕಪ್ಪು ಚುಕ್ಕೆಯಾಗಿವೆ.