AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಇದುವರೆಗೂ ಕಪ್ ಗೆದ್ದಿಲ್ಲ, ಹಾಗೆಂದು ಆರ್​ಸಿಬಿ ತಂಡದಿಂದ ದೂರವಾಗುವ ಯೋಚನೆ ಸ್ವಲ್ಪವೂ ಬಂದಿಲ್ಲ: ವಿರಾಟ್ ಕೊಹ್ಲಿ

2013ರಿಂದಲೂ ತಂಡದ ನಾಯಕರಾಗಿರುವ ಕೊಹ್ಲಿ, ಬೆಂಗಳೂರು ಅಭಿಮಾನಿಗಳಿಂದ ಪಡೆದಿರುವ ಗೌರವ, ಸಂಭ್ರಮವನ್ನು ಮತ್ತೆಲ್ಲೂ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

IPL 2021: ಇದುವರೆಗೂ ಕಪ್ ಗೆದ್ದಿಲ್ಲ, ಹಾಗೆಂದು ಆರ್​ಸಿಬಿ ತಂಡದಿಂದ ದೂರವಾಗುವ ಯೋಚನೆ ಸ್ವಲ್ಪವೂ ಬಂದಿಲ್ಲ: ವಿರಾಟ್ ಕೊಹ್ಲಿ
ಇದೀಗ ಐಪಿಎಲ್​ನ ದ್ವಿತಿಯಾರ್ಧದಲ್ಲಿ ಕೆಕೆಆರ್ ವಿರುದ್ದ ಕಣಕ್ಕಿಳಿಯಲಿರುವ ಕೊಹ್ಲಿ 71 ರನ್​ ಕಲೆಹಾಕಿದ್ರೆ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಐದನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಲಿದ್ದಾರೆ.
TV9 Web
| Edited By: |

Updated on:Apr 05, 2022 | 12:43 PM

Share

ಐಪಿಎಲ್ ಟೂರ್ನಿಯ ಮೊದಲ ಪಂದ್ಯಾಟ ಇಂದು (ಏಪ್ರಿಲ್ 9) ಸಂಜೆ 7 ಗಂಟೆಗೆ ಆರಂಭವಾಗಲಿದೆ. 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ ಇಂಡಿಯನ್ಸ್, ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಸೆಣೆಸಾಡಲಿದೆ. ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂಬ ಉತ್ಸಾಹದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಆಟಗಾರರು ನಾವು ಈ ಬಾರಿಯೂ ಚಾಂಪಿಯನ್ಸ್ ಎನ್ನಲು ಕಾದು ಕುಳಿತಿದ್ದಾರೆ. ಈ ಮಧ್ಯೆ, ಆರ್​ಸಿಬಿ ತಂಡದ ನಾಯಕ, ಅಭಿಮಾನಿಗಳ ಹಾಟ್ ಫೇವರಿಟ್ ಕ್ರಿಕೆಟರ್ ವಿರಾಟ್ ಕೊಹ್ಲಿ ತಮ್ಮ ಮತ್ತು ಆರ್​ಸಿಬಿ ನಡುವಿನ ಬಾಂಧವ್ಯವನ್ನು ಬಿಚ್ಚಿಟ್ಟಿದ್ದಾರೆ.

ಭಾರತ ತಂಡದ ನಾಯಕನೂ ಆಗಿರುವ ಕೊಹ್ಲಿಗೆ ಸದ್ಯ 32 ವರ್ಷ ವಯಸ್ಸು. ಕೊಹ್ಲಿ ಮತ್ತು ಆರ್​ಸಿಬಿ ನಂಟು ಇಂದು ನಿನ್ನೆಯದಲ್ಲ. ಐಪಿಎಲ್ ಆರಂಭಿಕ ಆವೃತ್ತಿಯಿಂದಲೂ ಕೊಹ್ಲಿ ಆರ್​ಸಿಬಿಯ ಆಟಗಾರರಾಗಿದ್ದಾರೆ. ಅಂದರೆ, 2008ರಿಂದ 2021ರ ಐಪಿಎಲ್, ಒಟ್ಟು 12 ವರ್ಷಗಳಿಗೂ ಹೆಚ್ಚು ಕಾಲ ಆರ್​ಸಿಬಿ ಮತ್ತು ಬೆಂಗಳೂರು ಜೊತೆ ಬಾಂಧವ್ಯ ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೊಹ್ಲಿ, ಇದುವರೆಗೆ ಒಂದು ಬಾರಿಯೂ ಆರ್​ಸಿಬಿ ಕಪ್ ಗೆಲ್ಲಲಾಗಲಿಲ್ಲ. ಆದರೂ ಆರ್​ಸಿಬಿ ತಂಡವನ್ನು ತ್ಯಜಿಸುವ ಮನ ಮಾಡಲಿಲ್ಲ ಎಂದು ಹೇಳಿದ್ದಾರೆ. 2013ರಿಂದಲೂ ತಂಡದ ನಾಯಕರಾಗಿರುವ ಕೊಹ್ಲಿ, ಬೆಂಗಳೂರು ಅಭಿಮಾನಿಗಳಿಂದ ಪಡೆದಿರುವ ಗೌರವ, ಸಂಭ್ರಮವನ್ನು ಮತ್ತೆಲ್ಲೂ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಭಿಮಾನಿಗಳಿಂದ ತುಂಬಾ ಸಪೋರ್ಟ್ ಪಡೆಯುವ ಇತರ ತಂಡಗಳೂ ಐಪಿಎಲ್​ನಲ್ಲಿವೆ. ಆದರೆ, ನಮಗೆ ಎಲ್ಲೆಡೆ ಸಿಗುವಷ್ಟು ಪ್ರೋತ್ಸಾಹ ಇನ್ಯಾರಿಗೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ನಾವು ಹೃತ್ಪೂರ್ವಕವಾಗಿ ಕ್ರಿಕೆಟ್ ಆಡುತ್ತೇವೆ. ಈ ಹಿಂದೆ ಕಷ್ಟದ ಸನ್ನಿವೇಶಗಳಿಂದಾಗಿ ನಾವು ಸೋತಿಸರಬಹುದು. ಅಷ್ಟಾಗ್ಯೂ ಕ್ರಿಕೆಟ್ ಬಗೆಗಿನ ಆಸಕ್ತಿ, ಬದ್ಧತೆ ಕಡಿಮೆ ಆಗಿಲ್ಲ ಎಂದು ತಿಳಿಸಿದ್ದಾರೆ.

ಇದುವರೆಗೂ ನಾವು ಕಪ್ ಗೆದ್ದಿಲ್ಲ ಎಂಬ ಕಾರಣಕ್ಕೆ ಈ ತಂಡದಿಂದ ದೂರವಾಗುವ ಮನಸ್ಸೇ ನನಗೆ ಬಂದಿಲ್ಲ. ಇಂತಹ ಪರಿಸ್ಥಿತಿ, ಸನ್ನಿವೇಶ ಇನ್ನೆಲ್ಲೂ ಸಿಗಲು ಅಥವಾ ಸೃಷ್ಟಿಮಾಡಲು ಸಾಧ್ಯವಿಲ್ಲ. ಈ ಅನುಭವ ಮ್ಯಾಜಿಕಲ್ ಆಗಿದೆ ಎಂದು ಆರ್​ಸಿಬಿ ಪೋಸ್ಟ್ ಮಾಡಿಕೊಂಡಿರುವ ವಿಡಿಯೋದಲ್ಲಿ ವಿರಾಟ್ ಹೇಳಿಕೊಂಡಿದ್ದಾರೆ.

ಆರ್​ಸಿಬಿ ತಂಡ ಈ ಬಾರಿಯಾದರೂ ಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಗ್ಲೆನ್ ಮ್ಯಾಕ್ಸ್​ವೆಲ್, ಕೈಲ್ ಜೆಮಿಸನ್ ಮುಂತಾದ ಆಟಗಾರರು ತಂಡದಲ್ಲಿದ್ದಾರೆ. ಭಾರತದ ಅತ್ಯಂತ ಸೆಲೆಬ್ರೇಟೆಡ್ ಕ್ರಿಕೆಟರ್ ಎ.ಬಿ. ಡಿವಿಲಿಯರ್ಸ್ ಕೂಡ ಆರ್​ಸಿಬಿಯಲ್ಲಿದ್ದಾರೆ. ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪ್ಲೇ ಆಫ್​ವರೆಗೆ ಮುನ್ನುಗ್ಗಿತ್ತು. ಆದರೆ, ಸನ್​ರೈಸರ್ಸ್ ಹೈದರಾಬಾದ್ ಮುಂದೆ ಸೋಲು ಅನುಭವಿಸಿತ್ತು.

ಇದನ್ನೂ ಓದಿ: MI vs RCB Predicted Playing 11: ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯದ ಸಂಭಾವ್ಯ ಆಟಗಾರರು ಇವರು

ಇದನ್ನೂ ಓದಿ: MI vs RCB: ನಮ್ಮ ಆರ್​ಸಿಬಿ ಗೆದ್ದರೆ ಕಿಚ್ಚ ಸುದೀಪ್​ ಹೀಗೆ ಮಾಡ್ತಾರಂತೆ!

Published On - 5:03 pm, Fri, 9 April 21

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?