MI vs DC IPL 2021 Match Prediction: ಕಳೆದ ಆವೃತ್ತಿಯ ಫೈನಲ್ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಾ ಡೆಲ್ಲಿ ಪಡೆ?
IPL 2021: 28 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಇದರಲ್ಲಿ ದೆಹಲಿ ಕ್ಯಾಪಿಟಲ್ಸ್ - 12 ಪಂದ್ಯ ಹಾಗೂ ಮುಂಬೈ ಇಂಡಿಯನ್ಸ್ 16 ಪಂದ್ಯದಲ್ಲಿ ಗೆದ್ದು ಬೀಗಿದೆ.
ಮುಂಬೈ ಇಂಡಿಯನ್ಸ್ (MI), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋತ ನಂತರ, ಸತತ ಎರಡು ಗೆಲುವುಗಳನ್ನು ಗಳಿಸಿದೆ ಮತ್ತು 2021 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು 13 ರನ್‌ಗಳಿಂದ ಸೋಲಿಸಿದ ರೋಹಿತ್ ಶರ್ಮಾ ನಾಯಕತ್ವದ ತಂಡ ವಿಶ್ವಾಸದಿಂದ ಬೀಗುತ್ತಿದೆ. ಹೀಗಾಗಿ ಇಂದು ದೆಹಲಿ ಕ್ಯಾಪಿಟಲ್ಸ್ (DC) ವಿರುದ್ಧ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದೆ. ಅತ್ತ ದೆಹಲಿ ಕ್ಯಾಪಿಟಲ್ಸ್ ಸಹ ತನ್ನ ಶಕ್ತಿಯನ್ನು ಸಾಬೀತುಪಡಿಸಲು ಈ ಪಂದ್ಯವನ್ನು ಬಳಸಿಕೊಳ್ಳುವ ಹಟದಲ್ಲಿದೆ. ಈ ಕಾರಣಗಳಿಂದಾಗಿ ಇಂದಿನ ಪಂದ್ಯದ ಮೇಲೆ ಮೇಲೆ ಎಲ್ಲರ ಗಮನ ಬಿದ್ದಿದೆ. ಇಷ್ಟಾದರೂ ಚೆಪಾಕ್‌ನಲ್ಲಿ ಮುಂಬೈ ಮೂರು ಪಂದ್ಯಗಳನ್ನು ಆಡಿದ್ದರಿಂದ ಮೇಲುಗೈ ಸಾಧಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.
ಮತ್ತೊಂದೆಡೆ, ದೆಹಲಿ ಕ್ಯಾಪಿಟಲ್ಸ್ ತಂಡ ಚೆನ್ನೈನಲ್ಲಿ ಒಂದು ಪಂದ್ಯವನ್ನೂ ಆಡಿಲ್ಲ, ಅವರ ಎಲ್ಲಾ ಪಂದ್ಯಗಳು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿವೆ. ಆದಾಗ್ಯೂ, ಏಪ್ರಿಲ್ 18 ರ ಭಾನುವಾರ ಮುಂಬೈನ ವಾಖೆಂಡೆಯಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿರುವುದರಿಂದ ರಿಷಭ್ ಪಂತ್ ಬಳಗ ಮನೋಸ್ಥೈರ್ಯವನ್ನು ಹೆಚ್ಚಿಸಿಕೊಂಡಿದೆ.
ಪಿಚ್ ವರದಿ ಚೆಪಾಕ್‌ನಲ್ಲಿರುವ ಪಿಚ್ ನಿಧಾನಗತಿಯ ಬೌಲಿಂಗ್‌ಗೆ ಸಹಕಾರಿಯಾಗಿದೆ ಆದ್ದರಿಂದ, ಸ್ಪಿನ್ನರ್‌ಗಳು ಪರಿಣಾಮ ಬೀರುವ ಸಾಧ್ಯತೆಯಿದೆ. ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ವಾತಾವರಣದ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇದೆ.
ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್: 170
ಬೆನ್ನಟ್ಟುವ ತಂಡಗಳ ದಾಖಲೆ: ಗೆಲುವು – 1, ಸೋಲು – 4,
ಸಂಭವನೀಯ ಇಲೆವನ್ ದೆಹಲಿ ಕ್ಯಾಪಿಟಲ್ಸ್ ಶಿಖರ್ ಧವನ್, ಪೃಥ್ವಿ ಶಾ, ಸ್ಟೀವ್ ಸ್ಮಿತ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಲಲಿತ್ ಯಾದವ್, ಕ್ರಿಸ್ ವೋಕ್ಸ್, ಲುಕ್ಮನ್ ಮೆರಿವಾಲಾ / ಅಮಿತ್ ಮಿಶ್ರಾ, ರವಿ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್
ಬೆಂಚ್: ಶಿಮ್ರಾನ್ ಹೆಟ್ಮಿಯರ್, ಶಮ್ಸ್ ಮುಲಾನಿ, ಆಕ್ಸಾರ್ ಪಟೇಲ್, ಟಾಮ್ ಕುರ್ರನ್, ಅನ್ರಿಕ್ ನಾರ್ಟ್ಜೆ, ಅನಿರುದ್ಧಾ ಜೋಶಿ, ವಿಷ್ಣು ವಿನೋದ್, ಸ್ಯಾಮ್ ಬಿಲ್ಲಿಂಗ್ಸ್, ರಿಪಾಲ್ ಪಟೇಲ್, ಅಮಿತ್ ಮಿಶ್ರಾ / ಲುಕ್ಮನ್ ಮೆರಿವಾಲಾ, ಇಶಾಂತ್ ಶರ್ಮಾ, ಪ್ರವೀಣ್ ದುಬೆ, ಉಮೇಶ್ ಯಾದವ್
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ಬೆಂಚ್: ಅಂಮೋಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಅನುಕುಲ್ ರಾಯ್, ಜೇಮ್ಸ್ ನೀಶಮ್, ಅರ್ಜುನ್ ತೆಂಡೂಲ್ಕರ್, ಪಿಯೂಷ್ ಚಾವ್ಲಾ, ನಾಥನ್ ಕೌಲ್ಟರ್ ನೈಲ್, ಆದಿತ್ಯ ತಾರೆ, ಜಯಂತ್ ಯಾದವ್, ಯುಧ್ವೀರ್ ಸಿಂಗ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಕ್ರಿಸ್ ಲಿನ್, ಮಾರ್ಕೊ ಜಾನ್ಸ್
ಮುಖಾಮುಖಿ 28 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಇದರಲ್ಲಿ ದೆಹಲಿ ಕ್ಯಾಪಿಟಲ್ಸ್ – 12 ಪಂದ್ಯ ಹಾಗೂ ಮುಂಬೈ ಇಂಡಿಯನ್ಸ್ 16 ಪಂದ್ಯದಲ್ಲಿ ಗೆದ್ದು ಬೀಗಿದೆ.
ಪಂದ್ಯದ ಅತ್ಯುತ್ತಮ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ – ಮುಂಬೈ ಇಂಡಿಯನ್ಸ್ 28 ಪಂದ್ಯಗಳಲ್ಲಿ, ರೋಹಿತ್ ಶರ್ಮಾ 818 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ದರ ಕ್ರಮವಾಗಿ 32.72 ಮತ್ತು 133.01. ಆಗಿದೆ. ಡೆಲ್ಲಿ ವಿರುದ್ಧ ಅಜೇಯ 74 ರನ್ ಬಾರಿಸಿದ್ದಾರೆ. ಜೊತೆಗೆ ಐದು ಅರ್ಧಶತಕಗಳನ್ನು ಹೊಂದಿದ್ದಾರೆ.
ಪಂದ್ಯದ ಅತ್ಯುತ್ತಮ ಬೌಲರ್ ರಾಹುಲ್ ಚಹರ್ – ಮುಂಬೈ ಇಂಡಿಯನ್ಸ್ ರಾಹುಲ್ ಚಹರ್ ಪ್ರಸ್ತುತ ಟಿ 20 ಸ್ಪರ್ಧೆಯಲ್ಲಿ ಎಂಐ ಪರ ಮೂರು ವಿಕೆಟ್ ಪಡೆದ ಪ್ರಮುಖ ಆಟಗಾರರಾಗಿದ್ದಾರೆ. ಅವರು ಆರ್‌ಸಿಬಿ ವಿರುದ್ಧ ಕಳಪೆ ಬೌಲಿಂಗ್ ಮಾಡಿದರು. ಆದರೆ ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ವಿರುದ್ಧ ಅದ್ಭುತ ಪುನರಾಗಮನ ಮಾಡಿದರು, ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್‌ಗಳನ್ನು ಪಡೆದರು. 21 ವರ್ಷದ ಯುವಕ ಮತ್ತೆ ಎದುರಾಳಿ ತಂಡಕ್ಕೆ ಕಂಟಕವಾಗುವ ನಿರೀಕ್ಷೆಯಿದೆ.