ಅಹ್ಮದಾಬಾದ್: ಕ್ರಿಕೆಟ್ ಮ್ಯಾಚ್ನಲ್ಲಿ ಸ್ಲೆಡ್ಜಿಂಗ್ (Sledging in Cricket) ಅನಿವಾರ್ಯ ಎಂಬಂತಾಗಿ ಹೋಗಿದೆ. ಎದುರಾಳಿ ಆಟಗಾರರನ್ನು ನಿಂದಿಸುವ ಮೂಲಕ ಅವರ ಗಮನ ದೂರ ಮಾಡುವುದು, ಆತ್ಮಸ್ಥೈರ್ಯ ಕುಂದಿಸುವುದು ಈ ಸ್ಲೆಡ್ಜಿಂಗ್ನ ಮುಖ್ಯ ಉದ್ದೇಶ. ಆಸ್ಟ್ರೇಲಿಯನ್ ಕ್ರಿಕೆಟಿಗರು ಈ ಸ್ಲೆಡ್ಜಿಂಗ್ಗೆ ಖ್ಯಾತರಾದವರು. ಐಪಿಎಲ್ನಲ್ಲೂ (IPL 2023) ಈ ಟ್ರೆಂಡ್ ಬಹಳ ಜೋರಾಗಿರುತ್ತದೆ. ನಿನ್ನೆ ಏಪ್ರಿಲ್ 16ರಂದು ನಡೆದ ಎರಡೂ ಪಂದ್ಯಗಳಲ್ಲೂ ಸ್ಲೆಡ್ಜಿಂಗ್ ಜೋರಾಗಿತ್ತು. ಕೆಕೆಆರ್ ಮತ್ತು ಡೆಲ್ಲಿ ಪಂದ್ಯದಲ್ಲಿ ಹೃತಿಕ್ ಶೋಕೀನ್ ಮತ್ತು ನಿತೀಶ್ ರಾಣಾ ಮಧ್ಯೆ ಜಗಳವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿಬಿಡುತ್ತದೆನ್ನುವ ಭಯ ಇತ್ತು. ಆದಾದ ಬಳಿಕ ನಡೆದ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲೂ ಬಿಸಿ ಏರಿಸಿದ ಘಟನೆಗಳು ನಡೆದವು. ಗುಜರಾತ್ನ ಅಖಾಡವಾದ ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಮತ್ತು ಗುಜರಾತ್ ಟೈಟಾನ್ಸ್ ನಾಯಕರ ಮಧ್ಯೆ ನಡೆದ ಸ್ಲೆಡ್ಜಿಂಗ್ ಈಗ ಟ್ರೆಂಡಿಂಗ್ ಆಗುತ್ತಿದೆ.
ಇಲ್ಲಿ ಗುಜರಾತ್ ಟೈಟಾನ್ಸ್ನ 177 ರನ್ ಮೊತ್ತವನ್ನು ರಾಜಸ್ಥಾನ್ ಚೇಸ್ ಮಾಡುವಾಗ ನಡೆದ ಘಟನೆ ಇದು. ಇದರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ಅದು. ಮೊಹಮ್ಮದ್ ಶಮಿ ಬೌಲಿಂಗ್ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಕ್ರಿಸ್ನಲ್ಲಿದ್ದ ಸಂಜು ಸ್ಯಾಮ್ಸನ್ ಬಳಿ ಹಾರ್ದಿಕ್ ಪಾಂಡ್ಯ ಬಂದು ಕಿವಿಯಲ್ಲಿ ಏನೋ ಉಸುರಿದ್ದಾರೆ. ಇದಕ್ಕೆ ಸಂಜು ಸ್ಯಾಮ್ಸನ್ ಏನೂ ಪ್ರತ್ಯುತ್ತರ ನೀಡದೇ ಇದ್ದರೂ ಅವರು ಪಾಂಡ್ಯ ಮಾತಿನಿಂದ ತುಸು ಬೇಸರಗೊಂಡಿರುವುದು ಈ ವಿಡಿಯೋದಲ್ಲಿ ಕಾಣುತ್ತದೆ. ಆ ಘಟನೆ ಬಳಿಕ ಸಂಜು ಸ್ಯಾಮ್ಸನ್ ಅಮೋಘ ಆಟ ರಾಜಸ್ಥಾನ್ ರಾಯಲ್ಸ್ಗೆ ಅದ್ಭುತ ಗೆಲುವು ತಂದುಕೊಡಲು ಪ್ರಮುಖ ಕಾರಣವಾಯಿತು. ಇದೇ ಹಿನ್ನೆಲೆಯಲ್ಲಿ ಈ ಸ್ಲೆಡ್ಜಿಂಗ್ ವಿಡಿಯೋ ಟ್ರೆಂಡಿಂಗ್ನಲ್ಲಿದೆ.
ಇದನ್ನೂ ಓದಿ: IPL 2023: ಪಂದ್ಯದ ನಡುವೆ ಮೈದಾನದಲ್ಲೇ ಜಗಳಕ್ಕಿಳಿದ ಡೆಲ್ಲಿ ಬಾಯ್ಸ್..!
— Cricbaaz (@cricbaaz21) April 16, 2023
Action speaks louder than voice
Hardik Pandya tried to sledge Sanju Samson and rest is history ?. Rajasthan Royals won the match with 4 balls to spare and table toppers ?. Never mess with #SanjuSamson#RRvsGT #GTvRR pic.twitter.com/DOfTNqUmD6— Roshmi ? (@CricketwithRosh) April 16, 2023
ಗುಜರಾತ್ ಟೈಟಾನ್ಸ್ ತಂಡದ 177 ರನ್ ಗುರಿಯನ್ನು ಚೇಸ್ ಮಾಡುವುದು ಆರ್ಆರ್ಗೆ ಸುಲಭವಾಗಿರಲಿಲ್ಲ. ಒಂದು ಸಮಯದಲ್ಲಿ 55 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ರಾಯಲ್ಸ್ ತಂಡಕ್ಕೆ ಆಗ ಗುರಿ ಇನ್ನಷ್ಟು ಕಠಿಣಗೊಂಡಿತ್ತು. ಮೊಹಮ್ಮದ್ ಶಮಿ, ರಷೀದ್ ಖಾನ್, ಮೋಹಿತ್ ಶರ್ಮಾ, ಆಲ್ಝರಿ ಜೋಸೆಫ್ ಅವರ ಮೊನಚಾದ ಬೌಲಿಂಗ್ನಲ್ಲಿ ತ್ವರಿತಗತಿಯಲ್ಲಿ ರನ್ ಗಳಿಸುವುದು ಯಾವ ಬ್ಯಾಟುಗಾರರಿಗಾದರೂ ಕಷ್ಟವೇ ಸರಿ. ಈ ಹಂತದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ವಿಂಡೀಸ್ ಹಿಟ್ಮ್ಯಾನ್ ಸಿಮ್ರೋನ್ ಹೆಟ್ಮಯರ್ ಇಬ್ಬರೂ ಸೇರಿ 5ನೇ ವಿಕೆಟ್ಗೆ ಸುಮಾರು 4 ಓವರ್ನಲ್ಲಿ 59 ರನ್ ಜೊತೆಯಾಟ ಆಡಿದರು. ಅದು ಆರ್ಆರ್ ಚೇಸಿಂಗ್ನಲ್ಲಿ ಪಡೆದ ಪ್ರಮುಖ ತಿರುವು.
ಇದನ್ನೂ ಓದಿ: Arjun Tendulkar: ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ಸಂಕ್ಷಿಪ್ತ ವಿವರ
ಸಂಜು ಸ್ಯಾಮ್ಸನ್ ನಿರ್ಗಮನದ ಬಳಿಕ ಸಿಮ್ರೋನ್ ಹೆಟ್ಮಯರ್ ಆರ್ಭಟ ಮುಂದುವರಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟು ಮ್ಯಾನ್ ಆಫ್ ದ ಮ್ಯಾಚ್ ಗೌರವಕ್ಕೂ ಪಾತ್ರರಾದರು. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಅದು ಆಡಿದ 5 ಪಂದ್ಯಗಳಿಂದ ನಾಲ್ಕರಲ್ಲಿ ಗೆದ್ದಿದೆ. ಈ ಪಂದ್ಯಕ್ಕೆ ಮುನ್ನ ಜಂಟಿ ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ಇದೀಗ 3ನೇ ಸ್ಥಾನಕ್ಕೆ ಕುಸಿದಿದೆ.
ಇವತ್ತು, ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿ ಆಗುತ್ತಿವೆ. ಪಂದ್ಯ ಸಂಜೆ ನಡೆಯಲಿದೆ.