IPL 2023: ಪಂದ್ಯದ ನಡುವೆ ಮೈದಾನದಲ್ಲೇ ಜಗಳಕ್ಕಿಳಿದ ಡೆಲ್ಲಿ ಬಾಯ್ಸ್..!
IPL 2023 Kannada: ಐಪಿಎಲ್ನ 22ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು.
Updated on: Apr 16, 2023 | 11:30 PM

IPL 2023: ಐಪಿಎಲ್ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇತ್ತ ಆಟಗಾರರ ನಡುವೆ ಕೂಡ ಪೈಪೋಟಿ ಜೋರಾಗುತ್ತಿದೆ. ಅಂತಹದೊಂದು ಪೈಪೋಟಿ ನಡುವೆ ಇಬ್ಬರು ಆಟಗಾರರು ಮೈದಾನದಲ್ಲೇ ಜಗಳಕ್ಕಿಳಿದ ಘಟನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ.

ಐಪಿಎಲ್ನ 22ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ವೆಂಕಟೇಶ್ ಅಯ್ಯರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೇತರಿಸಿಕೊಂಡಿತು.

ಆದರೆ 2ನೇ ವಿಕೆಟ್ ಬೀಳುತ್ತಿದ್ದಂತೆ ಕೆಕೆಆರ್ ನಾಯಕ ನಿತೀಶ್ ರಾಣಾ ಕ್ರೀಸ್ಗೆ ಆಗಮಿಸಿದ್ದರು. ಆದರೆ 5 ರನ್ಗಳಿಸಿದ ರಾಣಾ ಸ್ಪಿನ್ನರ್ ಹೃತಿಕ್ ಶೋಕೀನ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಇತ್ತ ವಿಕೆಟ್ ಸಿಗುತ್ತಿದ್ದಂತೆ ಹೃತಿಕ್ ರಾಣಾರನ್ನು ಕೆಣಕಿದ್ದಾರೆ.

ಇದರಿಂದ ಕೆರಳಿದ ನಿತೀಶ್ ರಾಣಾ ಹೃತಿಕ್ ಶೋಕೀನ್ರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಇದರಿಂದ ಮತ್ತಷ್ಟು ಕೆರಳಿದ ನಿತೀಶ್ ರಾಣಾ ಜಗಳಕ್ಕಿಳಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ನಿತೀಶ್ ರಾಣಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದಾರೆ.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ನಿತೀಶ್ ರಾಣಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದಾರೆ.

ವಿಶೇಷ ಎಂದರೆ ನಿತೀಶ್ ರಾಣಾ ಹಾಗೂ ಹೃತಿಕ್ ಶೋಕೀನ್ ಇಬ್ಬರು ದೆಹಲಿ ಮೂಲದ ಆಟಗಾರರು. ಇಬ್ಬರು ದೆಹಲಿ ಪರ ರಣಜಿ ಆಡುತ್ತಿದ್ದಾರೆ. ಇದಾಗ್ಯೂ ಐಪಿಎಲ್ ಪಂದ್ಯದ ಮೂಲಕ ಒಂದೇ ತಂಡದ ಆಟಗಾರರು ಕಿರಿಕ್ಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ.

ಅಂದಹಾಗೆ ಡೆಲ್ಲಿ ಬಾಯ್ಸ್ ಐಪಿಎಲ್ನಲ್ಲಿ ಜಗಳಕ್ಕಿಳಿಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2013 ರಲ್ಲಿ ದೆಹಲಿ ಮೂಲದ ಆಟಗಾರರಾದ ಗೌತಮ್ ಗಂಭೀರ್ (ಕೆಕೆಆರ್) ವಿರಾಟ್ ಕೊಹ್ಲಿ (ಆರ್ಸಿಬಿ) ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಇದೀಗ ದೆಹಲಿ ಮೂಲದ ಹೃತಿಕ್ ಶೋಕೀನ್ ಹಾಗೂ ನಿತೀಶ್ ರಾಣಾ ಅದನ್ನು ಪುನರಾವರ್ತಿಸಿದ್ದಾರೆ.
