ಆರ್ಸಿಬಿ vs ಸಿಎಸ್ಕೆ ಪಂದ್ಯದಲ್ಲಿ ಈ ಪ್ಲೇಯರ್ಗಳ ಮಧ್ಯೆ ನಡೆಯಲಿದೆ ಕಾಳಗ; ಇಲ್ಲಿದೆ ವಿವರ
ಇಂದಿನ ಪಂದ್ಯ ಎರಡೂ ತಂಡಕ್ಕೆ ಪ್ರಮುಖ ಎನಿಸಿಕೊಂಡಿದೆ. ಫಾಪ್ ಡುಪ್ಲೆಸಿಸ್ ಅವರು ಆರ್ಸಿಬಿ ತಂಡವನ್ನು ಮುನ್ನಡೆಸಿದರೆ, ಚೆನ್ನೈಗೆ ಧೋನಿ ಸಾರಥ್ಯ ಇದೆ.

ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಸತತ ಮೂರನೇ ಪಂದ್ಯವನ್ನು ಹೋಮ್ ಪಿಚ್ನಲ್ಲಿ ಆಡುತ್ತಿದೆ. ಈ ಬಾರಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯವನ್ನು ಆರ್ಸಿಬಿ ಗೆದ್ದಿದೆ. ಇಂದು (ಏಪ್ರಿಲ್ 17) ಆರ್ಸಿಬಿ ತಂಡವು ಚೆನ್ನೈ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಈ ಸೀಸನ್ನಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಎರಡು ಮ್ಯಾಚ್ನ ಗೆದ್ದಿವೆ. ಹೀಗಾಗಿ, ಇಂದಿನ ಪಂದ್ಯ ಎರಡೂ ತಂಡಕ್ಕೆ ಪ್ರಮುಖ ಎನಿಸಿಕೊಂಡಿದೆ. ಫಾಪ್ ಡುಪ್ಲೆಸಿಸ್ ಅವರು ಆರ್ಸಿಬಿ ತಂಡವನ್ನು ಮುನ್ನಡೆಸಿದರೆ, ಚೆನ್ನೈಗೆ ಧೋನಿ (Dhoni) ಸಾರಥ್ಯ ಇದೆ.
ರುತುರಾಜ್ ಗಾಯಕ್ವಾಡ್ vs ಮೊಹಮದ್ ಸಿರಾಜ್
ರುತುರಾಜ್ ಗಾಯಕ್ವಾಡ್ ಅವರು ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಅವರು ಕೆಲ ಪಂದ್ಯಗಳಲ್ಲಿ ಎಡವಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಪ್ರಮುಖ ಎನಿಸಿಕೊಂಡಿದ್ದಾರೆ. ಸಿಎಸ್ಕೆ ಪರ ಅವರು ಓಪನಿಂಗ್ ಮಾಡಲಿದ್ದಾರೆ. ಅವರನ್ನು ಕಟ್ಟಿ ಹಾಕಲು ಆರ್ಸಿಬಿ ತಂಡದ ಬೌಲರ್ ಮೊಹಮದ್ ಸಿರಾಜ್ ಇದ್ದಾರೆ. ತಮ್ಮ ಸ್ವಿಂಗ್ ಮೂಲಕ ಅವರು ರುತುರಾಜ್ ಗಾಯಕ್ವಾಡ್ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಲಿದ್ದಾರೆ. ಇದರಲ್ಲಿ ಅವರು ಯಶಸ್ವಿ ಆದರೆ, ಪಂದ್ಯ ಆರ್ಸಿಬಿ ಕೈ ಸೇರಲಿದೆ.
ಮ್ಯಾಕ್ಸ್ವೆಲ್ vs ಜಡೇಜಾ
ಆರ್ಸಿಬಿ ಮಧ್ಯಮ ಕ್ರಮಾಂಕಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ ಅವರು ಆಸರೆ ಆಗಿದ್ದಾರೆ. ವಿರಾಟ್ ಹಾಗೂ ಫಾಪ್ ಡುಪ್ಲೆಸಿಸ್ ಅವರು ಒಳ್ಳೆಯ ಓಪನಿಂಗ್ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬರುವ ಗ್ಲೆನ್ ತಂಡಕ್ಕೆ ಆಸರೆ ಆಗುತ್ತಿದ್ದಾರೆ. ಇವರು ಆಲ್ರೌಂಡರ್ ಕೂಡ ಹೌದು. ಧೋನಿ ತಂಡದಲ್ಲಿ ರವೀಂದ್ರ ಜಡೇಜಾ ಆಲ್ರೌಂಡರ್ ಆಗಿದ್ದಾರೆ. ಈ ಸೀಸನ್ನಲ್ಲಿ ಮ್ಯಾಕ್ಸ್ವೆಲ್ ಎರಡು ಬಾರಿ ಸ್ಪಿನ್ಗೆ ಔಟ್ ಆಗಿದ್ದಾರೆ. ಹೀಗಾಗಿ, ಮ್ಯಾಕ್ಸ್ವೆಲ್ ಬ್ಯಾಟಿಂಗ್ಗೆ ಬಂದರೆ ರವೀಂದ್ರ ಜಡೇಜಾ ಅವರನ್ನು ಧೋನಿ ಬೌಲಿಂಗ್ಗೆ ಇಳಿಸಬಹುದು.
ಇದನ್ನೂ ಓದಿ: MS Dhoni Six: ಎಂಎಸ್ ಧೋನಿ ಸಿಡಿಸಿದ ಆ ಒಂದು ಸಿಕ್ಸ್ಗೆ ದಂಗಾದ ನರೇಂದ್ರ ಮೋದಿ ಸ್ಟೇಡಿಯಂ: ವೈರಲ್ ವಿಡಿಯೋ
ಧೋನಿ vs ಹರ್ಷಲ್ ಪಟೇಲ್
ಸಿಎಸ್ಕೆ ತಂಡಕ್ಕೆ ಮಧ್ಯಮ ಕ್ರಮಾಂಕದ ಚಿಂತೆ ಕಾಡಿದೆ. ಉತ್ತಮ ಆರಂಭ ಸಿಕ್ಕರೂ ಮಧ್ಯಮ ಕ್ರಮಾಂಕದಲ್ಲಿ ತಂಡ ತೊಂದರೆ ಎದುರಿಸುತ್ತಿದೆ. ಧೋನಿ ಅವರು ಈ ಜವಾಬ್ದಾರಿಯನ್ನು ಹೊರಬೇಕಿದೆ. ಧೋನಿಯನ್ನು ಆರ್ಸಿಬಿ ಬೌಲರ್ ಹರ್ಷಲ್ ಕಟ್ಟಿ ಹಾಕಲು ಪ್ರಯತ್ನಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Mon, 17 April 23
