IPL Auction 2021: ತಮ್ಮನನ್ನು ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ ಸಾರಾ ತೆಂಡೂಲ್ಕರ್

IPL Auction 2021: ಈ ಸಾಧನೆಯನ್ನು ನಿನ್ನಿಂದ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಇದು ನಿನ್ನದು ಎಂದು ತಮ್ಮನಿಗೆ ಸ್ಫೂರ್ತಿ ತುಂಬಿದ್ದಾಳೆ. ಹೀಗೆ ಸಾರಾ ತೆಂಡೂಲ್ಕರ್, ತಮ್ಮ ಅರ್ಜುನ್ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾಳೆ. ಮತ್ತೊಂದೆಡೆ ಬಾಲಿವುಡ್ ನಟ ನಿರ್ದೇಶಕ ಫರಾನ್ ಅಖ್ತರ್ ಕೂಡ, ಅರ್ಜುನ್ ಪರವಾಗಿ ಬ್ಯಾಟ್ ಬೀಸಿದ್ದಾರೆ.

IPL Auction 2021: ತಮ್ಮನನ್ನು ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ ಸಾರಾ ತೆಂಡೂಲ್ಕರ್
ಅರ್ಜುನ್ ತೆಂಡೂಲ್ಕರ್, ಸಾರಾ ತೆಂಡೂಲ್ಕರ್
Updated By: ರಶ್ಮಿ ಕಲ್ಲಕಟ್ಟ

Updated on: Feb 21, 2021 | 12:57 PM

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ಐಪಿಎಲ್ ಬಿಡ್ಡಿಂಗ್​ನಲ್ಲಿ ಮುಂಬೈ ಫ್ರಾಂಚೈಸಿ ಪಾಲಾಗಿರೋದು ನಿಮಗೆ ಗೊತ್ತೇ ಇದೆ. ಆದ್ರೆ ಐಪಿಎಲ್​ನಲ್ಲಿ ​  ಹರಾಜಾಗಿದ್ದಕ್ಕೆ ಖುಷಿ ಪಡಬೇಕಿದ್ದ ಅರ್ಜುನ್ ಎರಡು ದಿನಗಳಿಂದ ನೋವು ಅನುಭವಿಸುತ್ತಿದ್ದ. ಆದ್ರೀಗ ತಮ್ಮನ ಪರ ಬ್ಯಾಟ್ ಬೀಸಿರುವ ಅಕ್ಕ ಸಾರಾ ತೆಂಡೂಲ್ಕರ್, ಅರ್ಜುನ್​ನ್ನು ಟ್ರೋಲ್ ಮಾಡಿದವರಿಗೆ ಸರಿಯಾಗೇ ತಿರುಗೇಟು ನೀಡಿದ್ದಾರೆ.

ಈ ಬಾರಿಯ ಐಪಿಎಲ್ ಬಿಡ್ಡಿಂಗ್​ನಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದು ಅರ್ಜುನ್ ತೆಂಡೂಲ್ಕರ್. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅನ್ನೋ ಕಾರಣಕ್ಕೆ, ಅರ್ಜುನ್​ನ್ನು ಯಾವ ಫ್ರಾಂಚೈಸಿ ಖರೀದಿ ಮಾಡುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಹರಾಜಿನಲ್ಲಿ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಸರದಿ ಬಂದಾಗ, ಯಾವ ಫ್ರಾಂಚೈಸಿಯೂ ಖರೀದಿಸೋ ಮನಸ್ಸು ಮಾಡಲಿಲ್ಲ. ಆದ್ರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ₹ 20 ಲಕ್ಷ ಮೂಲ ಬೆಲೆಗೆ, ಅರ್ಜುನ್​ನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.

ಮುಂಬೈ ತಂಡ ₹20 ಲಕ್ಷಕ್ಕೆ ಖರೀದಿ ಮಾಡುತ್ತಿದ್ದಂತೆ, ಅರ್ಜುನ್ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದ. ಬಾಲ್ಯದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಯಾಗಿದ್ದೆ. ನನ್ನ ಕನಸು ಸಾಕಾರಗೊಂಡಿದೆ ಎಂದು, ಸಂತಸ ಹಂಚಿಕೊಂಡಿದ್ದರು.

ಇಷ್ಟೇ ಆಗಿದ್ರೆ ಅರ್ಜುನ್ ಸುದ್ದಿಯಾಗ್ತಿರಲಿಲ್ಲ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಅರ್ಜುನ್​ನನ್ನ ಟ್ರೋಲ್ ಮಾಡಲು ಶುರುಮಾಡಿದ್ರು. ಕೆಲವರು ಸರ್​ನೇಮ್​ನಿಂದ ಅರ್ಜುನ್​ಗೆ ₹20 ಲಕ್ಷ ರೂಪಾಯಿ ಸಿಕ್ಕಿದೆ ಎಂದ್ರೆ, ಇನ್ನು ಕೆಲವರು ಕ್ರಿಕೆಟ್ನಲ್ಲೂ ಸ್ವಜನಪಕ್ಷಪಾತ ಶುರುವಾಯ್ತು ಅಂತಾ ಹೇಳಲು ಶುರುಮಾಡಿದ್ರು.

ಆದ್ರೀಗ ಸಾರಾ ತೆಂಡೂಲ್ಕರ್, ತನ್ನ ತಮ್ಮನನ್ನ ಟ್ರೋಲ್ ಮಾಡುತ್ತಿರುವವರಿಗೆ ಸರಿಯಾಗೇ ತಿರುಗೇಟು ನೀಡಿದ್ದಾರೆ. ಈ ಸಾಧನೆಯನ್ನು ನಿನ್ನಿಂದ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಾರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಅಪ್​ಡೇಟ್ ಮಾಡಿದ್ದಾರೆ.

ಸಾರಾ ತೆಂಡೂಲ್ಕರ್ ಇನ್​ಸ್ಟಾಗ್ರಾಂ ಸ್ಟೋರಿ

ಮತ್ತೊಂದೆಡೆ ಬಾಲಿವುಡ್ ನಟ ನಿರ್ದೇಶಕ ಫರಾನ್ ಅಖ್ತರ್ ಕೂಡ, ಅರ್ಜುನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಅರ್ಜುನ್ ಕರಿಯರ್ ಆರಂಭಿಸುವ ಮುನ್ನವೇ ಆತನ ಉತ್ಸಾಹವನ್ನ ಕೊಲ್ಲಬೇಡಿ ಎಂದಿದ್ದಾರೆ.

ಇದನ್ನೂ ಓದಿ:IPL Auction 2021: ಸ್ವಜನ ಪಕ್ಷಪಾತ ಅಪವಾದ, ಅರ್ಜುನ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟ ಫರ್ಹಾನ್ ಅಖ್ತರ್