IPL 2021: ಆರ್​ಸಿಬಿ ಪರ ಕೊಹ್ಲಿ ಮಾಡಿದ ವಿಶಿಷ್ಠ ಸಾಧನೆಗೆ ಭರ್ತಿ 12 ವರ್ಷ! ರಾಜಸ್ಥಾನ್ ವಿರುದ್ಧವು ನಡೆಯುತ್ತಾ ವಿರಾಟ್ ದರ್ಬಾರ್?

IPL 2021: 2009 ರಲ್ಲಿ, ಈ ದಿನ ಅಂದರೆ ಏಪ್ರಿಲ್ 22 ರಂದು ವಿರಾಟ್ ಕೊಹ್ಲಿ ಐಸಿಎಲ್‌ನಲ್ಲಿ ಆರ್‌ಸಿಬಿಗೆ ಮೊದಲ ಅರ್ಧಶತಕವನ್ನು ಗಳಿಸಿದರು. ಅಂದಿನಿಂದ, ಅವರು ಈ ತಂಡಕ್ಕಾಗಿ 39 ಅರ್ಧಶತಕ ಮತ್ತು 5 ಶತಕಗಳನ್ನು ಗಳಿಸಿದ್ದಾರೆ.

IPL 2021: ಆರ್​ಸಿಬಿ ಪರ ಕೊಹ್ಲಿ ಮಾಡಿದ ವಿಶಿಷ್ಠ ಸಾಧನೆಗೆ ಭರ್ತಿ 12 ವರ್ಷ! ರಾಜಸ್ಥಾನ್ ವಿರುದ್ಧವು ನಡೆಯುತ್ತಾ ವಿರಾಟ್ ದರ್ಬಾರ್?
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Apr 22, 2021 | 3:24 PM

ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಐಪಿಎಲ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುತ್ತಿದೆ. ಈ ಸ್ಪರ್ಧೆಯು ಎರಡು ತಂಡಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಏಕೆಂದರೆ ಇಂದಿನ ಪಂದ್ಯವನ್ನು ಗೆದ್ದು ಆರ್ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ತವಕದಲ್ಲಿದೆ. ಹಾಗೆಯೇ ರಾಜಸ್ಥಾನ ಕೂಡ ಇಂದಿನ ಪಂದ್ಯವನ್ನು ಗೆದ್ದು ಸೋಲಿನ ಸುಳಿಯಿಂದ ಹೊರಬರಲು ನೋಡುತ್ತಿದೆ. ಆದರೆ ಈ ದಿನ ನಾಯಕ ವಿರಾಟ್ ಕೊಹ್ಲಿಗೆ ಬಹಳ ವಿಶೇಷವಾಗಿದೆ. ಏಕೆಂದರೆ ಕೊಹ್ಲಿ ಇಂದಿಗೆ 12 ವರ್ಷಗಳ ಹಿಂದೆ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿ ಆರ್​ಸಿಬಿ ಪರ ಮೊದಲ ಬಾರಿಗೆ ಅರ್ಧ ಶತಕ ಬಾರಿಸಿದ್ದರು. ಆ ಮೂಲಕ ತಾನೊಬ್ಬ ಆಕ್ರಮಣಕಾರಿ ಆಟಗಾರನೆಂಬುದನ್ನು ಕೊಹ್ಲಿ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದರು.

40 ನೇ ಅರ್ಧ ಶತಕದ ಹೊಸ್ತಿಲಲ್ಲಿ ಕೊಹ್ಲಿ 2009 ರಲ್ಲಿ, ಈ ದಿನ ಅಂದರೆ ಏಪ್ರಿಲ್ 22 ರಂದು ವಿರಾಟ್ ಕೊಹ್ಲಿ ಐಸಿಎಲ್‌ನಲ್ಲಿ ಆರ್‌ಸಿಬಿಗೆ ಮೊದಲ ಅರ್ಧಶತಕವನ್ನು ಗಳಿಸಿದರು. ಅಂದಿನಿಂದ, ಅವರು ಈ ತಂಡಕ್ಕಾಗಿ 39 ಅರ್ಧಶತಕ ಮತ್ತು 5 ಶತಕಗಳನ್ನು ಗಳಿಸಿದ್ದಾರೆ. ಅಂದರೆ, ಅವರು ಇಂದು ರಾಜಸ್ಥಾನ್ ವಿರುದ್ಧ ಕಣಕ್ಕಿಳಿದು ಅಬ್ಬರಿಸಿ, ಅರ್ಧ ಶತಕವನ್ನೇನಾದರು ಬಾರಿಸಿದರೆ ಇದು ನಾಯಕ ಕೊಹ್ಲಿಗೆ 40 ನೇ ಅರ್ಧ ಶತಕವಾಗಲಿದೆ.

ಡೆಕ್ಕನ್ ಚಾರ್ಜರ್ಸ್ ವಿರುದ್ಧ ಅರ್ಧಶತಕ ವಿರಾಟ್ ಕೊಹ್ಲಿಯ ಮೊದಲ ಅರ್ಧಶತಕ 12 ವರ್ಷಗಳ ಹಿಂದೆ ಬಲಿಷ್ಠ ಡೆಕ್ಕನ್ ಚಾರ್ಜಸ್ ವಿರುದ್ಧ ಬಂದಿತ್ತು. ಕ್ಯಾಪ್ಟನ್ ಕೊಹ್ಲಿ ತಮ್ಮ ಮೊದಲ ಐಪಿಎಲ್ ಅರ್ಧಶತಕದ ಸ್ಕ್ರಿಪ್ಟ್ ಅನ್ನು ಹೇಗೆ ನೇಯ್ದಿದ್ದಾರೆಂದು ನೋಡಿ. 22 ಏಪ್ರಿಲ್ 2009 ರಂದು ಆಡಿದ ಐಪಿಎಲ್ 2 ನೇ ಆವೃತ್ತಿಯ 8 ನೇ ಪಂದ್ಯದಲ್ಲಿ ಕೊಹ್ಲಿ ಈ ಅದ್ಭುತವನ್ನು ಮಾಡಿದರು. ಆಗ ಅವರು 5 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 32 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ, ಸಂಪೂರ್ಣ 50 ರನ್ ಗಳಿಸಿದರು. ಕೊಹ್ಲಿಯ ಬ್ಯಾಟ್‌ನಿಂದ ಐಪಿಎಲ್‌ನಲ್ಲಿ ಇದು ಮೊದಲ ಅರ್ಧಶತಕವಾಗಿತ್ತು. ಆದರೆ, ಕೊಹ್ಲಿಯ ಈ ಅರ್ಧಶತಕವು ತಂಡವನ್ನು ಗೆಲುವಿನ ದಡ ಸೇರಿಸಲಿಲ್ಲ.

6000 ರನ್ ಗಳಿಸುವ ಅವಕಾಶ ಆದರೆ, ಇಂದು ಪರಿಸ್ಥಿತಿ ವಿಭಿನ್ನವಾಗಿದೆ. ಆರ್‌ಸಿಬಿ ತಂಡ ಅತ್ಯುತ್ತಮ ರೂಪದಲ್ಲಿದೆ. ವಿರಾಟ್ ಕೊಹ್ಲಿ ಕೂಡ ಸಾಟಿಯಿಲ್ಲದೆ ಆಡುತ್ತಿದ್ದಾರೆ. ಮತ್ತು ಅಂತಹ ಪರಿಸ್ಥಿತಿಯಲ್ಲಿ, ಅವರು ಇಂದು ಐಪಿಎಲ್‌ನಲ್ಲಿ 40 ನೇ ಅರ್ಧಶತಕವನ್ನು ಗಳಿಸಿದರೆ, 6000 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ 6000 ರನ್ ಪೂರೈಸಿದ ಆಟಗಾರನೆಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಬಹುದು.

Published On - 3:21 pm, Thu, 22 April 21

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್