IPL 2021 RCB vs RR Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ
IPL 2021 RCB vs RR live streaming: ಈ ಬಾರಿ ಆರ್‌ಸಿಬಿ ತಂಡ ಇದುವರೆಗೆ ಆಡಿದ ಮೂರು ಪಂದ್ಯಗಳನ್ನೂ ಗೆದ್ದು ಅತ್ಯುತ್ತಮ ಆರಂಭ ಕಂಡಿದೆ ಮತ್ತು ನಾಯಕ ವಿರಾಟ್ ಕೊಹ್ಲಿ ಇಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ತವಕಿಸುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2021 ರಲ್ಲಿ ಈವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಪಂದ್ಯಾವಳಿಯಲ್ಲಿ ಇದು ಅವರ ಅತ್ಯುತ್ತಮ ಆರಂಭವಾಗಿದೆ ಮತ್ತು ನಾಯಕ ವಿರಾಟ್ ಕೊಹ್ಲಿ ಇಂದು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡವನ್ನು ಸೋಲಿಸಿ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ತವಕಿಸುತ್ತಿದ್ದಾರೆ. ಅಲ್ಲದೆ ಆರ್‌ಸಿಬಿಯ ಎಲ್ಲಾ ವಿಭಾಗವು ಬಲಿಷ್ಠವಾಗಿ ಕಾಣುತ್ತಿದ್ದು ನಾಯಕ ಕೊಹ್ಲಿಗೆ ಯಾವುದೇ ಚಿಂತೆ ಇಲ್ಲದೆ ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಟ್ಟಂತಾಗಿದೆ.
ಆದರೆ ಆರ್‌ಆರ್ ತಂಡದಲ್ಲಿ ಹಲವು ಸಮಸ್ಯೆಗಳಿವೆ, ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಮನನ್ ವೊಹ್ರಾ ಬ್ಯಾಟ್‌ನೊಂದಿಗೆ ಫಾರ್ಮ್ ಕಾಪಾಡಿಕೊಂಡಿದ್ದಾರೆ. ಆದರೆ ಎಲ್ಲರಿಗಿಂತ ಮುಂಚೂಣಿಯಲ್ಲಿರುವ ಆರ್‌ಸಿಬಿ ವಿರುದ್ಧದ ಕಠಿಣ ಪಂದ್ಯಕ್ಕಿಂತ ಮುಂಚಿತವಾಗಿ ಅವರು ತಮ್ಮ ಆಟವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಇತ್ತ ಆರ್‌ಆರ್ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಮೊದಲ ಪಂದ್ಯವೊಂದನ್ನು ಬಿಟ್ಟರೆ ನಂತರ ಅತ್ಯುತ್ತಮ ಆಟವನ್ನೇನೂ ತೋರಿಸಿಲ್ಲ. ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ಅವರು ನಂತರ ಎರಡು ತಂಡಗಳಲ್ಲೂ ಕಡಿಮೆ ಸ್ಕೋರ್ ದಾಖಲಿಸಿದ್ದಾರೆ. ಡೇವಿಡ್ ಮಿಲ್ಲರ್ ಮತ್ತು ಕ್ರಿಸ್ ಮೋರಿಸ್ ದೆಹಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಉಳಿದ ಭಾರತದ ಬ್ಯಾಟ್ಸ್‌ಮನ್‌ಗಳಾದ ಶಿವಮ್ ದುಬೆ, ರಿಯಾನ್ ಪರಾಗ್ ಮತ್ತು ರಾಹುಲ್ ತಿವಾಟಿಯಾ ಅವರಿಂದಲೂ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ.
ಇದಕ್ಕೆ ತದ್ವಿರುದ್ಧವಾಗಿ, ಆರ್‌ಸಿಬಿಯ ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರೆಲ್ಲರೂ ಫಾರ್ಮ್ನಲ್ಲಿದ್ದಾರೆ. ಇದು ಅವರು ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲು ದೊಡ್ಡ ಕಾರಣವಾಗಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಡಿವಿಲಿಯರ್ಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಭಾರತದ ಸ್ಥಳೀಯ ಪ್ರತಿಭೆಗಳು ಸಹ ಈ ಋತುವಿನಲ್ಲಿ ತಂಡಕ್ಕೆ ಉತ್ತಮವಾಗಿ ನೆರವಾಗಿದ್ದಾರೆ.
ಆರ್‌ಸಿಬಿ ಮತ್ತು ಆರ್‌ಆರ್ ನಡುವಿನ ಐಪಿಎಲ್‌ನ 16 ನೇ ಪಂದ್ಯ ಯಾವಾಗ ನಡೆಯಲಿದೆ? ಆರ್‌ಸಿಬಿ ಮತ್ತು ಆರ್‌ಆರ್ ನಡುವಿನ ಐಪಿಎಲ್‌ನ 16 ನೇ ಪಂದ್ಯವು ಏಪ್ರಿಲ್ 22, 2021 ರಂದು ನಡೆಯಲಿದೆ.
ಪಂದ್ಯದ ಸ್ಥಳ ಯಾವುದು? ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ? ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ? ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ದೇವದುತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ವಾಷಿಂಗ್ಟನ್ ಸುಂದರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಡಾನ್ ಕ್ರಿಶ್ಚಿಯನ್ / ರಜತ್ ಪಾಟಿದಾರ್ / ಡೇನಿಯಲ್ ಸ್ಯಾಮ್ಸ್, ಶಹಬಾಜ್ ಅಹ್ಮದ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.
ಬೆಂಚ್: ಸುಯಾಶ್ ಪ್ರಭುದೇಸಾಯಿ, ಸಚಿನ್ ಬೇಬಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್ / ಡಾನ್ ಕ್ರಿಶ್ಚಿಯನ್ / ಡೇನಿಯಲ್ ಸ್ಯಾಮ್ಸ್, ಮೊಹಮ್ಮದ್ ಅಜರುದ್ದೀನ್, ಶಹಬಾಜ್ ಅಹ್ಮದ್, ಫಿನ್ ಅಲೆನ್, ಕೆ.ಎಸ್.ಭಾರತ್, ಕೇನ್ ರಿಚರ್ಡ್ಸನ್, ನವದೀಪ್ ಸೈನಿ, ಆಡಮ್ ಜಂಪಾ
ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ), ಶಿವಮ್ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ರಾಹುಲ್ ತಿವಾಟಿಯಾ, ಜಯದೇವ್ ಉನಾದ್ಕಟ್ / ಶ್ರೇಯಾಸ್ ಗೋಪಾಲ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್
ಬೆಂಚ್: ಲಿಯಾಮ್ ಲಿವಿಂಗ್‌ಸ್ಟೋನ್, ಯಶಸ್ವಿ ಜೈಸ್ವಾಲ್, ಮಹಿಪಾಲ್ ಲೋಮರ್, ಶ್ರೇಯಾಸ್ ಗೋಪಾಲ್ / ಜಯದೇವ್ ಉನಾದ್ಕಟ್, ಆಂಡ್ರ್ಯೂ ಟೈ, ಅನುಜ್ ರಾವತ್, ಆಕಾಶ್ ಸಿಂಗ್, ಜೋಫ್ರಾ ಆರ್ಚರ್, ಕೆ.ಸಿ.ಕರಿಯಪ್ಪ, ಮಾಯಾಂಕ್ ಮಾರ್ಕಂಡೆ, ಕುಲದೀಪ್ ಯಾದವ್, ಕಾರ್ತಿಕ್ ತ್ಯಾಗಿ