IPL 2021: ಆರ್​ಸಿಬಿಗೆ ಹೆಚ್ಚಾಯ್ತು ನ್ಯಾಗ್ಸ್ ಕಾಟ; ಈತನನ್ನ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದ ಕೊಹ್ಲಿ! ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ ಆಟಗಾರರು

IPL 2021: ವಿರಾಟ್ ಬೆಂಗಳೂರಿಗೆ ಹೋಗೋಣ. ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಇಲ್ಲಿಗೆ ಮುಗಿಸಿಬಿಡೋಣ. ಈ ರೀತಿ ನಮಗೆ ಪದೇಪದೇ ಅವಕಾಶ ಸಿಗೋದಿಲ್ಲ. ಬಿಟ್ಟು ಬಿಡೋಣ. ನ್ಯಾಗ್ಸ್ ಮಾತಿಗೆ ವಿರಾಟ್ ಚೆನ್ನಾಗೇ ನಕ್ಕಿದ್ದಾರೆ.

IPL 2021: ಆರ್​ಸಿಬಿಗೆ ಹೆಚ್ಚಾಯ್ತು ನ್ಯಾಗ್ಸ್ ಕಾಟ; ಈತನನ್ನ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದ ಕೊಹ್ಲಿ! ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ ಆಟಗಾರರು
ವಿರಾಟ್ ಕೊಹ್ಲಿ, ನಾಗ್
pruthvi Shankar

| Edited By: Skanda

Apr 22, 2021 | 8:22 AM

ಈ ಬಾರಿ ಐಪಿಎಲ್​ನ ಮೊದಲ ಮೂರು ಪಂದ್ಯಗಳಿಗಾಗಿ ಚೆನ್ನೈನಲ್ಲಿ ಬೀಡುಬಿಟ್ಟಿದ್ದ ಆರ್​ಸಿಬಿ ಆಟಗಾರರು ನಾಲ್ಕನೇ ಪಂದ್ಯಕ್ಕಾಗಿ ಫ್ಲೈಟ್​ ಹತ್ತಿ ಮುಂಬೈಗೆ ಪ್ರಯಾಣಿಸಿದ್ದಾರೆ. ಫ್ಲೈಟ್​​ನಲ್ಲಿ ಆರ್​ಸಿಬಿ ಆಟಗಾರರು, ಫುಲ್ ಜೋಷ್​ನಲ್ಲಿದ್ದರು. ಅದ್ರಲ್ಲೂ ಮಿಸ್ಟರ್ ನ್ಯಾಗ್ಸ್ ಎಂಟರ್​ಟೈನ್ಮೆಂಟ್, ಕೊಹ್ಲಿ ಹುಡುಗರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಚೆನ್ನೈನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಆರ್​ಸಿಬಿ, ಐಪಿಎಲ್​ನಲ್ಲಿ ಹ್ಯಾಟ್ರಿಕ್ ಗೆಲುವಿನ ದಾಖಲೆ ಬರೆದಿದೆ. ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಕೊಹ್ಲಿ ಹುಡುಗರು, ಈಗ ಮುಂಬೈಗೆ ಪ್ರಯಾಣಿಸಿದ್ದಾರೆ. ವಾಂಖೆಡೆಯಲ್ಲಿ ಆರ್​ಸಿಬಿ ರಾಜಸ್ಥಾನ್ ಮತ್ತು ಚೆನ್ನೈ ವಿರುದ್ಧ ಪಂದ್ಯಗಳನ್ನಾಡಲಿದೆ.

ಸಾಕು ಬೆಂಗಳೂರಿಗೆ ಹೋಗೋಣ ಎಂದು ಪಟ್ಟು ಹಿಡಿದ ನ್ಯಾಗ್ಸ್! ಫ್ಲೈಟ್​​ನಲ್ಲಿ ಮಿಸ್ಟರ್ ನ್ಯಾಗ್ಸ್, ಹೇಗಿದ್ರೂ ನಾವು ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಹೀಗಾಗಿ ಇಲ್ಲಿಗೆ ಟೂರ್ನಿಯನ್ನ ಮುಗಿಸಿ, ಬೆಂಗಳೂರಿಗೆ ಹೋಗೋಣ ಎಂದು ಪಟ್ಟು ಹಿಡಿದಿದ್ದ. ನ್ಯಾಗ್ಸ್ ಆಡಿದ ಈ ಮಾತಿಗೆ ಟೀಮ್ ಡೈರೆಕ್ಟರ್ ಮೈಕ್ ಹಸನ್, ನೀನ್ ಬೇಕಾದ್ರೆ ಹೋಗು. ನಾವು ಮುಂಬೈಗೆ ಹೋಗುತ್ತೇವೆ ಎಂದಿದ್ದಾರೆ.

ಈ ಟೂರ್ನಿಯನ್ನ ಇಲ್ಲಿಗೆ ಮರೆತು ಬಿಡೋಣ ಮುಂದುವರೆದು ಆಟಗಾರರನ್ನ ಕಾಲೆಳೆದ ಮಿಸ್ಟರ್ ನ್ಯಾಗ್ಸ್, ಮೈಕ್, ಇಲ್ಲಿವರೆಗೆ ನಾನು ನೀಡಿದ ಎಲ್ಲಾ ಪ್ಲ್ಯಾನ್​ಗಳು ವರ್ಕ್ ಆಗಿದೆ. ನಾವು ಬೆಂಗಳೂರಿಗೆ ಹೋಗೋಣ. ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಈ ಟೂರ್ನಿಯನ್ನ ಇಲ್ಲಿಗೆ ಮರೆತು ಬಿಡೋಣ. ಇದಕ್ಕೆ ಪ್ರತಿಕ್ರಿಯಿಸಿದ ಮೈಕ್ ಹಸನ್ ಯಾಕೇ ನೀನು ಹೋಗ್ಬೇಕಾ? ನಾನು ಟೀಮ್ ಜೊತೆ ಮುಂಬೈಗೆ ಹೋಗುತ್ತೇನೆ ಎಂದರು. ಮೈಕ್ ಹಸನ್ ಒಪ್ಪದಿದ್ದಾಗ, ನ್ಯಾಗ್ಸ್ ವಿರಾಟ್ ಬೆನ್ನಿಂದೆ ಬಿದ್ದಿದ್ದಾನೆ. ವಿರಾಟ್ ಈ ರೀತಿ ಪದೇಪದೇ ಆಗೋದಿಲ್ಲ. ಹೇಗಿದ್ರೂ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಬೆಂಗಳೂರಿಗೆ ಹೋಗಿ ಬಿಡೋಣ ಎಂದಿದ್ದಾರೆ.

ವಿರಾಟ್​ ಕೊಹ್ಲಿ ಕಾಲೆಳೆದ ಮಿಸ್ಟರ್ ನ್ಯಾಗ್ಸ್, ವಿರಾಟ್ ನಾವು ಬೆಂಗಳೂರಿಗೆ ಹೋಗೋಣ. ನಾವು ನಂಬರ್ ಒನ್​ ಸ್ಥಾನದಲ್ಲಿದ್ದೇವೆ. ಇಲ್ಲಿಗೆ ಮುಗಿಸಿಬಿಡೋಣ. ಈ ರೀತಿ ನಮಗೆ ಪದೇಪದೆ ಅವಕಾಶ ಸಿಗೋದಿಲ್ಲ. ಬಿಟ್ಟು ಬಿಡೋಣ ಎಂದಿದ್ದಾರೆ. ನ್ಯಾಗ್ಸ್ ಮಾತಿಗೆ ವಿರಾಟ್ ಚೆನ್ನಾಗೇ ನಕ್ಕಿದ್ದಾರೆ. ಅಷ್ಟೇ ಅಲ್ಲ.. ನ್ಯಾಗ್ಸ್ ಬಳಿ ಬಂದು, ಯಾರಾದ್ರೂ ಈತನನ್ನ ಎತ್ತಿ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿರಾಟ್, ನಾನು ಹೇಳಿದ ಮಾತುಗಳನ್ನ ಕಟ್ ಮಾಡ್ಬೇಡಿ. ಹಾಗೇ ಇಡಿ ಎಂದಿದ್ದಾರೆ. ಇನ್ನು ಫ್ಲೈಟ್​​ನಲ್ಲಿ ನ್ಯಾಗ್ಸ್​​ ಹಾವಳಿ ಜೋರಾಗ್ತಿದ್ದಂತೆ, ಆರ್​ಸಿಬಿ ಆಟಗಾರರು ನ್ಯಾಗ್ಸ್​​ನನ್ನು ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada