KKR vs CSK, IPL 2021 Match 15 Result: ಪ್ಯಾಟ್ ಕಮ್ಮಿನ್ಸ್ ಏಕಾಂಗಿ ಹೋರಾಟ ವ್ಯರ್ಥ; ರೋಚಕ ಪಂದ್ಯದಲ್ಲಿ ಗೆದ್ದ ಸಿಎಸ್​ಕೆ

TV9 Web
| Updated By: ganapathi bhat

Updated on:Nov 30, 2021 | 12:15 PM

KKR vs CSK Scorecard: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದ ಸಂಪೂರ್ಣ ಅಪ್ಡೇಟ್​ಗಳು ಇಲ್ಲಿದೆ.

KKR vs CSK, IPL 2021 Match 15 Result:  ಪ್ಯಾಟ್ ಕಮ್ಮಿನ್ಸ್ ಏಕಾಂಗಿ ಹೋರಾಟ ವ್ಯರ್ಥ; ರೋಚಕ ಪಂದ್ಯದಲ್ಲಿ ಗೆದ್ದ ಸಿಎಸ್​ಕೆ
ಐಪಿಎಲ್​ನ ದ್ವಿತಿಯಾರ್ಧ ರಂಗೇರಲು ಇನ್ನು ದಿನ ಮಾತ್ರ ಉಳಿದಿವೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಆಟಗಾರ ಆಡುವುದು ಅನುಮಾನ.

ಮುಂಬೈ: ಇಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ವಿರುದ್ದ 18 ರನ್​ಗಳ ಜಯ ಸಾಧಿಸಿದೆ. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಕಮಿನ್ಸ್ ಕೇವಲ 34 ಬಾಲ್​ಗಳಲ್ಲಿ ಅಜೇಯ 66 ರನ್​​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಇತರ ಆಟಗಾರರ ನೆರವು ಸರಿಯಾಗಿ ದೊರಕದ ಕಾರಣ ಕೋಲ್ಕತ್ತಾ ಸೋಲಬೇಕಾಯಿತು.

ಚೆನ್ನೈ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾದ ಆರಂಭ ಉತ್ತಮವಾಗಿರಲಿಲ್ಲ. ಟಾಪ್ ಆರ್ಡರ್​ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೆಡ್​ ನಡೆಸಿದರು. ಪರಿಣಾಮವಾಗಿ ಕೋಲ್ಕತ್ತಾ 100 ರನ್ ದಾಟುವುದರೊಳಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಚೆನ್ನೈಗೆ ಬಾರಿ ಗೆಲುವಿನ ನಿರೀಕ್ಷೆ ಮಾಡಲಾಗಿತ್ತು. ಆದರೆ ಆಲ್​ರೌಂಡರ್ ರಸೆಲ್ ಹಾಗೂ ಕಮಿನ್ಸ್ ಚೆನ್ನೈ ನಿರೀಕ್ಷೆಯನ್ನು ಉಸಿಗೊಳಿಸಿದರು. ಈ ಇಬ್ಬರು ಆಟಗಾರರು ಅಬ್ಬರದ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ಸನಿಹಕ್ಕೆ ತರುತ್ತಿದ್ದರು. ಆದರೆ 54 ರನ್ ಗಳಿಸಿದ್ದ ರಸೆಲ್ ಔಟಾಗುತ್ತಲೆ ಕೋಲ್ಕತ್ತಾದ ಸೋಲು ಖಚಿತವಾಯಿತು. ಆದರೂ ವೀರಾವೇಶದ ಬ್ಯಾಟಿಂಗ್ ಮಾಡಿದ ಕಮಿನ್ಸ್ ಕೊನೆಯವರೆಗೂ ಏಕಾಂಗಿ ಹೋರಾಟ ಮಾಡಿದರೂ ಸಹ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ ಕೋಲ್ಕತ್ತಾ 202 ರನ್​ಗಳಿಗೆ ತನ್ನೇಲ್ಲಾ ವಿಕೆಟ್​ ಕಳೆದುಕೊಂಡು ಆಲ್​ಔಟ್​ ಆಯಿತು.

ಚೆನ್ನೈ ಬ್ಯಾಟಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ನಿಗದಿತ 20 ಓವರ್​ಗಳ ಅಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 220 ರನ್ ಪೇರಿಸಿತ್ತು. ಚೆನ್ನೈ ಪರ ಡುಪ್ಲೆಸಿಸ್ 60 ಬಾಲ್​ಗೆ 9 ಬೌಂಡರಿ, 4 ಸಿಕ್ಸರ್ ಸಹಿತ 95* ರನ್ ಕಲೆಹಾಕಿದ್ದರು. ಆರಂಭಿಕ ಗಾಯಕ್​ವಾಡ್ 64 (42) ರನ್, ಧೋನಿ 17 (8), ಮೊಯೀನ್ ಅಲಿ 25 (12) ಹಾಗೂ ಜಡೇಜಾ 6 (1) ರನ್ ಗಳಿಸಿ ಕೋಲ್ಕತ್ತಾಗೆ ಬೃಹತ್ ಟಾರ್ಗೆಟ್ ನೀಡಿದ್ದರು.

ಕೋಲ್ಕತ್ತಾ ಪರ ಯಾವೊಬ್ಬ ಬೌಲರ್​ ಕೂಡ ರನ್ ವೇಗ ನಿಯಂತ್ರಿಸುವ ಪ್ರದರ್ಶನ ನೀಡಿರಲಿಲ್ಲ. ಚೆನ್ನೈ ಮೊದಲ ವಿಕೆಟ್ ಪಡೆಯಲು ಕೋಲ್ಕತ್ತಾ ಬೌಲರ್ಸ್ ಪರದಾಡಿದ್ದರು. ವರುಣ್ ಚಕ್ರವರ್ತಿ ಹೊರತಾಗಿ ಉಳಿದ ಬೌಲರ್​ಗಳು ಯಥೇಚ್ಚವಾಗಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.

LIVE NEWS & UPDATES

The liveblog has ended.
  • 21 Apr 2021 11:22 PM (IST)

    ಚೆನ್ನೈಗೆ 18 ರನ್​ಗಳ ಜಯ

    ಇಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ವಿರುದ್ದ 18 ರನ್​ಗಳ ಜಯ ಸಾಧಿಸಿದೆ. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಕಮಿನ್ಸ್ ಕೇವಲ 34 ಬಾಲ್​ಗಳಲ್ಲಿ ಅಜೇಯ 66 ರನ್​​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

  • 21 Apr 2021 11:17 PM (IST)

    ಕೊನೆಯ ಓವರ್ ಕೋಲ್ಕತ್ತಾ 9ನೇ ವಿಕೆಟ್ ಪತನ

    ಕೊನೆಯ ಓವರ್ ಬಾಕಿ ಇದ್ದು ಕೋಲ್ಕತ್ತಾಕ್ಕೆ ಗೆಲ್ಲಲು 6 ಎಸೆತಗಳಲ್ಲಿ 20 ರನ್​ಗಳ ಅವಶ್ಯಕತೆ ಇದೆ. ಕಮಿನ್ಸ್ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. 19ನೇ ಓವರ್​ನಲ್ಲಿ ವರುಣ್ ಚಕ್ರವರ್ತಿ ರನ್​ಔಟ್​ಗೆ ಬಲಿಯಾಗಿದ್ದಾರೆ.

  • 21 Apr 2021 11:11 PM (IST)

    ಕೊನೆಯ 2 ಓವರ್ ಬಾಕಿ, ಕೋಲ್ಕತ್ತಾ 193/8

    ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ರೋಚಕ ಹಂತಕ್ಕೆ ಬಂದು ನಿಂತಿದೆ. ಕಮಿನ್ಸ್ ಪಂದ್ಯವನ್ನು ಗೆಲ್ಲಿಸಲು ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಇನ್ನೇನೂ ಕೇವಲ 2 ಓವರ್ ಬಾಕಿ ಇದ್ದು ಕೋಲ್ಕತ್ತಾ ಗೆಲ್ಲಲು 12 ಬಾಲ್​ಗಳಲ್ಲಿ 28 ರನ್ ಬೇಕಾಗಿದೆ.

  • 21 Apr 2021 10:57 PM (IST)

    ಕಮ್ಮಿನ್ಸ್ ಭರ್ಜರಿ ಬ್ಯಾಟಿಂಗ್!

    ಕೋಲ್ಕತ್ತಾ ಪರ ಪಾಟ್ ಕಮ್ಮಿನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಕಮ್ಮಿನ್ಸ್ 19 ಬಾಲ್​ಗೆ 3 ಬೌಂಡರಿ 5 ಸಿಕ್ಸರ್ ಸಹಿತ 48 ರನ್ ಪೇರಿಸಿದ್ದಾರೆ. ಕೋಲ್ಕತ್ತಾ 16 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 176 ರನ್ ದಾಖಲಿಸಿದೆ. ಕೋಲ್ಕತ್ತಾ ಗೆಲ್ಲಲು 24 ಬಾಲ್​ಗೆ 45 ರನ್ ಬೇಕಿದೆ.

  • 21 Apr 2021 10:52 PM (IST)

    ದಿನೇಶ್ ಕಾರ್ತಿಕ್ ಔಟ್!

    ದಿನೇಶ್ ಕಾರ್ತಿಕ್ 40 ರನ್ ಗಳಿಸಿ ನಿರ್ಗಮಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ 15 ಓವರ್​ಗೆ 7 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ. ಗೆಲ್ಲಲು 30 ಬಾಲ್​ಗೆ 75 ರನ್ ಬೇಕಿದೆ. ಕಮ್ಮಿನ್ಸ್ ಹಾಗೂ ನಾಗರಕೋಟಿ ಬ್ಯಾಟಿಂಗ್​ನಲ್ಲಿದ್ದಾರೆ.

  • 21 Apr 2021 10:46 PM (IST)

    ಕೆಕೆಆರ್ ಗೆಲ್ಲಲು 36 ಬಾಲ್​ಗೆ 83 ರನ್ ಬೇಕು

    ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು 36 ಬಾಲ್​ಗೆ 86 ರನ್ ಬೇಕಾಗಿದೆ. ಕೋಲ್ಕತ್ತಾ 14 ಓವರ್​ಗೆ 138/6 ಸ್ಕೋರ್ ಮಾಡಿದೆ. ಕಮ್ಮಿನ್ಸ್ ವೇಗದ ಆಟ ಆಡುತ್ತಿದ್ದಾರೆ. ದಿನೇಶ್ ಕಾರ್ತಿಕ್ 40 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 21 Apr 2021 10:42 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 127/6 (13 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 13 ಓವರ್​ಗೆ 127 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಕೋಲ್ಕತ್ತಾ ಪರ ದಿನೇಶ್ ಕಾರ್ತಿಕ್ ಹಾಗೂ ಪಾಟ್ ಕಮ್ಮಿನ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 21 Apr 2021 10:36 PM (IST)

    ರಸ್ಸೆಲ್ ಔಟ್!

    ಸ್ಯಾಮ್ ಕುರ್ರನ್ ಬೌಲಿಂಗ್​ಗೆ ರಸ್ಸೆಲ್ ಬೌಲ್ಡ್ ಆಗಿದ್ದಾರೆ. 54 ರನ್ ಗಳಿಸಿ ಭರ್ಜರಿ ಆಡುತ್ತಿದ್ದ ರಸ್ಸೆಲ್ ಔಟ್ ಆಗಿರುವುದು ಕೋಲ್ಕತ್ತಾಗೆ ಮತ್ತೆ ಆಘಾತ ನೀಡಿದೆ.

  • 21 Apr 2021 10:32 PM (IST)

    ರಸ್ಸೆಲ್ ಅರ್ಧಶತಕ

    ಕೋಲ್ಕತ್ತಾ ಪರ ಆಂಡ್ರ್ಯೂ ರಸ್ಸೆಲ್ ಅಬ್ಬರಿಸುತ್ತಿದ್ದಾರೆ. ಕೇವಲ 21 ಬಾಲ್​ಗೆ 54 ರನ್ ಗಳಿಸಿ ಅರ್ಧಶತಕ ಪೂರೈಸಿದ್ದಾರೆ. 11 ಓವರ್​ಗೆ ಕೋಲ್ಕತ್ತಾ 5 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ. ಗೆಲ್ಲಲು 54 ಬಾಲ್​ಗೆ 110 ರನ್ ಬೇಕಿದೆ.

  • 21 Apr 2021 10:26 PM (IST)

    ಅಬ್ಬರಿಸುತ್ತಿರುವ ರಸ್ಸೆಲ್

    ಕೋಲ್ಕತ್ತಾ 5 ವಿಕೆಟ್ ಕಳೆದುಕೊಂಡ ನಡುವೆಯೂ ಆಂಡ್ರ್ಯೂ ರಸ್ಸೆಲ್ ಅಬ್ಬರಿಸುತ್ತಿದ್ದಾರೆ. ರಸ್ಸೆಲ್ 17 ಬಾಲ್​ಗೆ 3 ಬೌಂಡರಿ 5 ಸಿಕ್ಸರ್ ಸಹಿತ 47 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಿನೇಶ್ ಕಾರ್ತಿಕ್ 17 (11) ಕೂಡ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೋಲ್ಕತ್ತಾ 10 ಓವರ್​ಗೆ 5 ವಿಕೆಟ್ ಕಳೆದುಕೊಂಡು 97 ರನ್ ದಾಖಲಿಸಿದೆ. ಗೆಲ್ಲಲು 60 ಬಾಲ್​ಗೆ 124 ರನ್ ಬೇಕಿದೆ.

  • 21 Apr 2021 10:17 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 66/5 (8 ಓವರ್)

    8 ಓವರ್​ಗಳ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ ಕಳೆದುಕೊಂಡು 66 ರನ್ ದಾಖಲಿಸಿದೆ. ಕೋಲ್ಕತ್ತಾ ಪರ ರಸ್ಸೆಲ್ 8 ಬಾಲ್​ಗೆ 23 ರನ್ ಗಳಿಸಿ ವೇಗದ ಆಟ ಆಡುತ್ತಿದ್ದಾರೆ. ಕೆಕೆಆರ್ ಗೆಲ್ಲಲು 72 ಬಾಲ್​ಗೆ 155 ರನ್ ಬೇಕಿದೆ.

  • 21 Apr 2021 10:09 PM (IST)

    ಪವರ್​ಪ್ಲೇ ಅಂತ್ಯಕ್ಕೆ 45/5

    6 ಓವರ್​ಗಳ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 45 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ತಂಡ ಗೆಲ್ಲಲು 84 ಬಾಲ್​ಗೆ 176 ರನ್ ಬೇಕಾಗಿದೆ. ರಸ್ಸೆಲ್ ವೇಗವಾಗಿ ಆಡುತ್ತಿದ್ದಾರೆ. ಜೊತೆಗೆ, ವಿಕೆಟ್ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕೆಕೆಆರ್​ಗೆ ಇದೆ.

  • 21 Apr 2021 10:06 PM (IST)

    ತ್ರಿಪಾಠಿ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ 31 ರನ್​ಗೆ 5 ವಿಕೆಟ್ ಕಳೆದುಕೊಂಡಿದೆ. ಚೆನ್ನೈ ಪರ ಚಹರ್ 4 ಹಾಗೂ ಎಂಗ್ಡಿ 1 ವಿಕೆಟ್ ಕಬಳಿಸಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಆಂಡ್ರ್ಯೂ ರಸ್ಸೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೊನೆಯದಾಗಿ ರಾಹುಲ್ ತ್ರಿಪಾಠಿ 9 ಬಾಲ್​ಗೆ 8 ರನ್ ಗಳಿಸಿ ನಿರ್ಗಮಿಸಿದ್ದಾರೆ.

  • 21 Apr 2021 10:02 PM (IST)

    ಚೆನ್ನೈಗೆ ಮತ್ತೊಂದು ವಿಕೆಟ್

    ಚೆನ್ನೈ ಸೂಪರ್ ಕಿಂಗ್ಸ್ ಪರ ದೀಪಕ್ ಚಹರ್ ಮತ್ತೊಂದು ವಿಕೆಟ್ ಪಡೆದಿದ್ದಾರೆ. ಕೋಲ್ಕತ್ತಾ 5 ಓವರ್​ಗೆ 31/4 ಆಗಿದ್ದು, 4 ವಿಕೆಟ್​ಗಳನ್ನೂ ಚಹರ್ ಪಡೆದಿದ್ದಾರೆ.

  • 21 Apr 2021 10:01 PM (IST)

    ಕೋಲ್ಕತ್ತಾ ನಾಯಕ ಮೋರ್ಗನ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಇಯಾನ್ ಮೋರ್ಗನ್ 7 ಬಾಲ್​ಗೆ 7 ರನ್ ಗಳಿಸಿ ನಿರ್ಗಮಿಸಿದ್ದಾರೆ. ಈ ಮೂಲಕ ಕೋಲ್ಕತ್ತಾದ ಮೂರು ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿದೆ. ಕೆಕೆರ್ ಪರ ತ್ರಿಪಾಠಿ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್​ಗೆ ಇಳಿದಿದ್ದಾರೆ.

  • 21 Apr 2021 09:51 PM (IST)

    ನಿತೀಶ್ ರಾಣಾ ಔಟ್

    ನಿತೀಶ್ ರಾಣಾ 12 ಬಾಲ್​ಗೆ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಕೋಲ್ಕತ್ತಾ 3 ಓವರ್​ಗಳ ಅಂತ್ಯಕ್ಕೆ 2 ಮುಖ್ಯ ವಿಕೆಟ್ ಕಳೆದುಕೊಂಡು 17 ರನ್ ದಾಖಲಿಸಿದೆ. ತ್ರಿಪಾಠಿ ಜೊತೆಗೆ ಇಯಾನ್ ಮೋರ್ಗನ್ ಬ್ಯಾಟಿಂಗ್​ಗೆ ಆಗಮಿಸಿದ್ದಾರೆ. ಕೋಲ್ಕತ್ತಾ ಗೆಲ್ಲಲು 204 ರನ್ ಬೇಕಿದೆ.

  • 21 Apr 2021 09:47 PM (IST)

    ಕೋಲ್ಕತ್ತಾ 14/1 (2 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 2 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿದೆ. ಸ್ಯಾಮ್ ಕುರ್ರನ್ ಬೌಲಿಂಗ್​ನ ಎರಡನೇ ಓವರ್​ನಲ್ಲಿ 9 ರನ್ ಬಿಟ್ಟುಕೊಟ್ಟಿದ್ದಾರೆ. ಕೋಲ್ಕತ್ತಾ ಪರ ನಿತೀಶ್ ರಾಣಾ ಹಾಗೂ ತ್ರಿಪಾಠಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 21 Apr 2021 09:40 PM (IST)

    ಸೊನ್ನೆ ಸುತ್ತಿದ ಗಿಲ್; ಕೆಕೆಆರ್ ಮೊದಲ ವಿಕೆಟ್ ಪತನ

    ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಆಘಾತ ಎದುರಿಸಿದೆ. ಆರಂಭಿಕರಾಗಿ ಕ್ರೀಸ್​ಗೆ ಇಳಿದಿದ್ದ ಶುಬ್​ಮನ್ ಗಿಲ್ ಚಹರ್​ಗೆ ವಿಕೆಟ್ ಒಪ್ಪಿಸುವ ಮೂಲಕ ಡಕ್ ಔಟ್ ಆಗಿದ್ದಾರೆ. ಕೋಲ್ಕತ್ತಾ 1 ಓವರ್ ಅಂತ್ಯಕ್ಕೆ 5 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.

  • 21 Apr 2021 09:28 PM (IST)

    ಚೆನ್ನೈ ಸೂಪರ್ ಕಿಂಗ್ಸ್ 220/3 (20 ಓವರ್)

    ನಿಗದಿತ 20 ಓವರ್​ಗೆ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 3 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಗೆಲ್ಲಲು 221 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

  • 21 Apr 2021 09:16 PM (IST)

    ಧೋನಿ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ವಿಕೆಟ್ ಕಳೆದುಕೊಂಡಿದೆ. 8 ಬಾಲ್​ಗೆ 17 ರನ್ ಗಳಿಸಿ ಧೋನಿ ರಸ್ಸೆಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 19 ಓವರ್​ಗೆ 201/3 ಆಗಿದೆ. ಡುಪ್ಲೆಸಿಸ್ ಜೊತೆಗೆ ಜಡೇಜಾ ಕ್ರೀಸ್​ಗೆ ಇಳಿದಿದ್ದಾರೆ.

  • 21 Apr 2021 09:14 PM (IST)

    ಡುಪ್ಲೆಸಿಸ್ ಹ್ಯಾಟ್ರಿಕ್ ಬೌಂಡರಿ; 200 ದಾಟಿದ ಚೆನ್ನೈ

    ರಸ್ಸೆಲ್ ಬೌಲಿಂಗ್​ಗೆ ಡುಪ್ಲೆಸಿಸ್ ಹ್ಯಾಟ್ರಿಕ್ ಬೌಂಡರಿ ಸಿಡಿಸಿದ್ದಾರೆ. ಚೆನ್ನೈ ತಂಡದ ಮೊತ್ತ 19 ಓವರ್​ಗೆ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿದೆ.

  • 21 Apr 2021 09:09 PM (IST)

    ಧೋನಿ ಸಿಕ್ಸರ್

    ಚೆನ್ನೈ ಸೂಪರ್ ಕಿಂಗ್ಸ್ 18 ಓವರ್​ಗಳ ಅಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿದೆ. ಧೋನಿ ಕೂಡ ಅಬ್ಬರಿಸಿದ್ದಾರೆ. 7 ಬಾಲ್​ಗೆ 1 ಸಿಕ್ಸರ್, 2 ಬೌಂಡರಿ ಸಹಿತ 17 ರನ್ ದಾಖಲಿಸಿದ್ದಾರೆ.

  • 21 Apr 2021 09:04 PM (IST)

    ಚೆನ್ನೈ ಸೂಪರ್ ಕಿಂಗ್ಸ್ 172/2 (17 ಓವರ್)

    17 ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿದೆ. ಚೆನ್ನೈ ಪರ ಧೋನಿ- ಡುಪ್ಲೆಸಿಸ್ ಆಡುತ್ತಿದ್ದಾರೆ. ಓವರ್​ಗೆ ಸುಮಾರು 10 ರನ್ ಸರಾಸರಿಯಲ್ಲಿ ರನ್ ಪೇರಿಸುತ್ತಿರುವ ಚೆನ್ನೈ, ವಿಕೆಟ್ ಕೂಡ ಉಳಿಸಿಕೊಂಡಿದೆ. ಬೃಹತ್ ಮೊತ್ತ ಕಲೆಹಾಕುವುದು ಖಚಿತವಾಗಿದೆ.

  • 21 Apr 2021 09:00 PM (IST)

    ಸಿಕ್ಸರ್ ಬೆನ್ನಲ್ಲೇ ಮೊಯೀನ್ ಅಲಿ ಔಟ್

    ಸುನಿಲ್ ನರೈನ್ ಬೌಲಿಂಗ್​ಗೆ ವೇಗದ ಆಟ ಆಡುತ್ತಿದ್ದ ಮೊಯೀನ್ ಅಲಿ, ಮತ್ತೊಂದು ಸಿಕ್ಸರ್​ಗೆ ಮುಂದಾಗಿ ಸ್ಟಂಪ್ ಔಟ್ ಆಗಿದ್ದಾರೆ. 12 ಬಾಲ್​ಗೆ 25 ರನ್ ಗಳಿಸಿ ನಿರ್ಗಮಿಸಿದ್ದಾರೆ. ಚೆನ್ನೈ ಪರ ಡುಪ್ಲೆಸಿಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಡುಪ್ಲೆಸಿಸ್ ಜೊತೆಯಾಗಿದ್ದಾರೆ.

  • 21 Apr 2021 08:57 PM (IST)

    ಮೊಯೀನ್ ಅಲಿ ಅಬ್ಬರ ಶುರು

    ಮೊಯೀನ್ ಅಲಿ ಸುನಿಲ್ ನರೈನ್ ಬೌಲಿಂಗ್​ಗೆ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಆಟವಾಡುತ್ತಿದ್ದಾರೆ.

  • 21 Apr 2021 08:56 PM (IST)

    ಡುಪ್ಲೆಸಿಸ್ ಬೌಂಡರಿ- ಸಿಕ್ಸರ್ ಆಟ

    ಅಂತಿಮ ಓವರ್​ಗಳು ಸಮೀಪಿಸುತ್ತಿರುವಂತೆ ಡುಪ್ಲೆಸಿಸ್ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಪ್ರಸಿದ್ಧ್ ಕೃಷ್ಣ ಓವರ್​ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದಾರೆ. ಡುಪ್ಲೆಸಿಸ್ 47 ಬಾಲ್​ಗೆ 67 ರನ್ ಗಳಿಸಿ ಆಡುತ್ತಿದ್ದಾರೆ. ಚೆನ್ನೈ ಮೊತ್ತ 16 ಓವರ್ ಅಂತ್ಯಕ್ಕೆ 155/1 ಆಗಿದೆ.

  • 21 Apr 2021 08:51 PM (IST)

    ಚೆನ್ನೈ ಸೂಪರ್ ಕಿಂಗ್ಸ್ 144/1 (15 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 144 ರನ್ ದಾಖಲಿಸಿದೆ. ಸುರೇಶ್ ರೈನಾ, ಅಂಬಟಿ ರಾಯುಡು, ಜಡೇಜಾ, ಧೋನಿ, ಸ್ಯಾಮ್ ಕುರ್ರನ್ ವಿಕೆಟ್​ಗಳು ಉಳಿದುಕೊಂಡಿದೆ. ಕೋಲ್ಕತ್ತಾ ಬೌಲರ್​ಗಳು ವಿಕೆಟ್ ಪಡೆಯಲಾರದೆ ರನ್ ನೀಡಿ ಸುಸ್ತಾಗಿದ್ದಾರೆ.

  • 21 Apr 2021 08:46 PM (IST)

    ಚೆನ್ನೈ ಸೂಪರ್ ಕಿಂಗ್ಸ್ 130/1 (14 ಓವರ್)

    14 ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಕಳೆದುಕೊಂಡು 130 ರನ್ ದಾಖಲಿಸಿದೆ. ಚೆನ್ನೈ ಪರ ಮೊಯೀನ್ ಅಲಿ 6 (5) ಹಾಗೂ ಡುಪ್ಲೆಸಿಸ್ 62 (41) ಆಡುತ್ತಿದ್ದಾರೆ. ಚೆನ್ನೈ ಬೃಹತ್ ಮೊತ್ತ ಪೇರಿಸುವತ್ತ ಹೆಜ್ಜೆಹಾಕಿದೆ.

  • 21 Apr 2021 08:36 PM (IST)

    ಡುಪ್ಲೆಸಿಸ್ ಅರ್ಧಶತಕ

    ಚೆನ್ನೈ ಸೂಪರ್ ಕಿಂಗ್ಸ್ ಪರ ಡುಪ್ಲೆಸಿಸ್ ಅರ್ಧಶತಕ ಪೂರೈಸಿದ್ದಾರೆ. 36 ಬಾಲ್​ಗೆ 2 ಸಿಕ್ಸರ್, 4 ಬೌಂಡರಿ ಸಹಿತ 52 ರನ್ ದಾಖಲಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 13 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 121 ರನ್ ಕಲೆಹಾಕಿದೆ. ಮೊದಲ ವಿಕೆಟ್ ಬಳಿಕ ಮೊಯೀನ್ ಅಲಿ ಕಣಕ್ಕಿಳಿದಿದ್ದಾರೆ.

  • 21 Apr 2021 08:33 PM (IST)

    ಋತುರಾಜ್ ಗಾಯಕ್​ವಾಡ್ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ಪರ ಆಕರ್ಷಕ ಆರಂಭ ಒದಗಿಸಿದ್ದ ಋತುರಾಜ್ ಗಾಯಕ್​ವಾಡ್ ಹಾಗೂ ಡುಪ್ಲೆಸಿಸ್ ಜೋಡಿ ಬೇರ್ಪಟ್ಟಿದೆ. 42 ಬಾಲ್​ಗೆ 64 ರನ್ ಗಳಿಸಿ ಋತುರಾಜ್ ಔಟ್ ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 115 ರನ್​ಗೆ ಮೊದಲನೇ ವಿಕೆಟ್ ಕಳೆದುಕೊಂಡಿದೆ.

  • 21 Apr 2021 08:28 PM (IST)

    ಗಾಯಕ್​ವಾಡ್ ಸ್ಫೋಟಕ ಆಟ

    ಋತುರಾಜ್ ಗಾಯಕ್​ವಾಡ್ ಕೋಲ್ಕತ್ತಾ ವಿರುದ್ಧ ಅಬ್ಬರಿಸುತ್ತಿದ್ದಾರೆ. ಪ್ರಸಿದ್ಧ್ ಕೃಷ್ಣ ಬೌಲಿಂಗ್​ನ ಕೊನೆಯ ಓವರ್​ಗೆ ಒಂದು ಬೌಂಡರಿ, ಒಂದು ಸಿಕ್ಸರ್ ಸಿಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 12 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಭರ್ಜರಿ 115 ರನ್ ದಾಖಲಿಸಿದೆ. ಗಾಯಕ್​ವಾಡ್ 63 ಹಾಗೂ ಡುಪ್ಲೆಸಿಸ್ 48 ರನ್ ಪೇರಿಸಿದ್ದಾರೆ.

  • 21 Apr 2021 08:22 PM (IST)

    ಚೆನ್ನೈ ಸೂಪರ್ ಕಿಂಗ್ಸ್ 98/0 (11 ಓವರ್)

    11 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 98 ರನ್ ಗಳಿಸಿದೆ. ಋತುರಾಜ್ ಗಾಯಕ್​ವಾಡ್ ಅರ್ಧಶತಕ ಪೂರೈಸಿದ್ದರೆ, ಡುಪ್ಲೆಸಿಸ್ 32 ಬಾಲ್​ಗೆ 46 ರನ್ ಗಳಿಸಿ ಕಣದಲ್ಲಿದ್ದಾರೆ.

  • 21 Apr 2021 08:20 PM (IST)

    ಅರ್ಧಶತಕ ಪೂರೈಸಿದ ಗಾಯಕ್ವಾಡ್

    ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್​ವಾಡ್ ಅರ್ಧಶತಕ ಪೂರೈಸಿದ್ದಾರೆ. 33 ಬಾಲ್​ಗೆ 3 ಸಿಕ್ಸರ್, 5 ಬೌಂಡರಿ ಸಹಿತ 50 ರನ್ ಕಲೆಹಾಕಿದ್ದಾರೆ. ಮತ್ತೊಂದಡೆ ಡುಪ್ಲೆಸಿಸ್ ಬ್ಯಾಟಿಂಗ್ ಮಾಡುತ್ತಿದ್ದು ಚೆನ್ನೈ ಯವುದೇ ವಿಕೆಟ್ ಕಳೆದುಕೊಂಡಿಲ್ಲ.

  • 21 Apr 2021 07:59 PM (IST)

    50 ರನ್ ಪೂರೈಸಿದ ಚೆನ್ನೈ

    ಡು ಪ್ಲೆಸಿಸ್ ಹಾಗೂ ರುತುರಾಜ್​ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಚೆನ್ನೈ ಅರ್ಧ ಶತಕ ಪೂರೈಸಿದೆ. 6 ಓವರ್ ಎದುರಿಸಿರುವ ಈ ದಾಂಡಿಗರು ಬೌಂಡರಿ ಹಾಗೂ ಸಿಕ್ಸರ್​​ಗಳ ಅಬ್ಬರ ಶುರು ಮಾಡಿದ್ದಾರೆ. ಡುಪ್ಲೆಸಿಸ್ 30 ರನ್ ಗಳಿಸಿದ್ದರೆ, ರುತುರಾಜ್ 23 ರನ್ ಗಳಿಸಿದ್ದಾರೆ.

  • 21 Apr 2021 07:47 PM (IST)

    ಚೆನ್ನೈ ಉತ್ತಮ ಆರಂಭ, 37/0

    ಆರಂಭಿಕರಾಗಿ ಕಣಕ್ಕಿಳಿದಿರುವ ರುತುರಾಜ್ ಹಾಗೂ ಡುಪ್ಲೆಸಿಸ್ ಉತ್ತಮ ಆಟದ ಮೂಲಕ ತಂಡಕ್ಕೆ ಅವಶ್ಯಕವಾದ ರನ್ ಕಲೆಹಾಕುತ್ತಿದ್ದಾರೆ.ಈಗಾಗಲೇ 4 ಓವರ್ ಆಡಿರುವ ಈ ಜೋಡಿ 37 ರನ್ ಗಳಿಸಿದೆ ಇದರಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳು ಸೇರಿವೆ.

  • 21 Apr 2021 07:37 PM (IST)

    ಡು ಪ್ಲೆಸಿಸ್ ಬೌಂಡರಿ

    ಮೊದಲ ಓವರ್​ನಲ್ಲಿ ಯಾವುದೇ ಬೌಂಡರಿ ಗಳಿಸಿದ ಚೆನ್ನೈ ದಾಂಡಿಗರು 2ನೇ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ ಗಳಿಸಿದ್ದಾರೆ. ಕೋಲ್ಕತ್ತಾ ತಂಡದ ಪ್ಯಾಟ್ ಕಮಿನ್ಸ್ ಎಸೆತವನ್ನು ಡುಪ್ಲೆಸಿಸ್ ಸೀದಾ ಬೌಂಡರಿಗಟ್ಟಿ 4 ರನ್ ಗಳಿಸಿದರು.

  • 21 Apr 2021 07:34 PM (IST)

    ಬ್ಯಾಟಿಂಗ್ ಆರಂಭಿಸಿದ ರುತುರಾಜ್- ಡುಪ್ಲೆಸಿಸ್

    ಟಾಸ್ ಗೆದ್ದ ಕೋಲ್ಕತ್ತ ಬೌಲಿಂಗ್ ಆಯ್ದುಕೊಂಡಿದೆ. ಪರಿಣಾಮವಾಗಿ ಚೆನ್ನೈನ ರುತುರಾಜ್ ಹಾಗೂ ಡುಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಕೋಲ್ಕತ್ತಾ ಪರ ಬೌಲಿಂಗ್ ಆರಂಭಿಸಿದ ವರುಣ್ ಚಕ್ರವರ್ತಿ ಮೊದಲ ಓವರ್​ನಲ್ಲಿ ಯಾವುದೇ ಬೌಂಡರಿ ಸಿಕ್ಸರ್ ನೀಡದೆ ಕೇವಲ 4 ರನ್ ನೀಡಿ ಓವರ್ ಮುಕ್ತಾಯಗೊಳಿಸಿದ್ದಾರೆ.

  • 21 Apr 2021 07:11 PM (IST)

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ..

    ರುತುರಾಜ್ ಗೈಕ್ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ (ನಾಯಕ/ ವಿಕೆಟ್ ಕೀಪರ್), ಸ್ಯಾಮ್ ಕುರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್‌ಜಿಡಿ, ದೀಪಕ್ ಚಹರ್

  • 21 Apr 2021 07:09 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್ ಈ ರೀತಿ ಇದೆ.. ನಿತೀಶ್ ರಾಣಾ, ಶುಬ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯೊನ್ ಮೋರ್ಗಾನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ

  • 21 Apr 2021 07:07 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ವಿನ್

    ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

  • Published On - Apr 21,2021 11:22 PM

    Follow us
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್