ಒತ್ತಡದಲ್ಲಿರುವ ಧೋನಿ ಇವತ್ತು ಅಯ್ಯರ್​ನ ಡೆಲ್ಲಿಯನ್ನು ಮಣಿಸುವರೆ?

| Updated By: ಸಾಧು ಶ್ರೀನಾಥ್​

Updated on: Sep 25, 2020 | 5:30 PM

ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿ ಇವತ್ತಿನ ಪಂದ್ಯ; ಆಡಿದ ಎರಡು ಗೇಮ್​ಗಳಲ್ಲಿ ಒಂದನ್ನು ಗೆದ್ದು ಮತ್ತೊಂದನ್ನು ಸೋತಿರುವ ಚೆನೈ ಸೂಪರ್ ಕಿಂಗ್ಸ್ ಮತ್ತು ಆಡಿರುವ ಒಂದು ಪಂದ್ಯವನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಜಸ್ತಾನ್ ರಾಯಲ್ಸ್ ವಿರುದ್ಧ ಸುಲಭವಾಗಿ ಸೋತ ಚೆನೈನ ನಾಯಕ ಮಹೇಂದ್ರ ಸಿಂಗ್ ಧೋನಿ ನಿಸ್ಸಂದೇಹವಾಗಿ ಒತ್ತಡದಲ್ಲಿದ್ದಾರೆ. ಆ ಸೋಲಿಗೆ ಅವರೇ ಕಾರಣ ಎಂದು ಕ್ರಿಕೆಟ್ ಪರಿಣಿತರು ಮತ್ತು ಹಲವಾರು ಮಾಜಿ ಆಟಗಾರರು ಹೇಳುತ್ತಿರುವುದು ಧೋನಿಗೆ ಕಿರಿಕಿರಿ ಅನಿಸಿರಲಿಕ್ಕೂ […]

ಒತ್ತಡದಲ್ಲಿರುವ ಧೋನಿ ಇವತ್ತು ಅಯ್ಯರ್​ನ ಡೆಲ್ಲಿಯನ್ನು ಮಣಿಸುವರೆ?
Follow us on

ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿ ಇವತ್ತಿನ ಪಂದ್ಯ; ಆಡಿದ ಎರಡು ಗೇಮ್​ಗಳಲ್ಲಿ ಒಂದನ್ನು ಗೆದ್ದು ಮತ್ತೊಂದನ್ನು ಸೋತಿರುವ ಚೆನೈ ಸೂಪರ್ ಕಿಂಗ್ಸ್ ಮತ್ತು ಆಡಿರುವ ಒಂದು ಪಂದ್ಯವನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ರಾಜಸ್ತಾನ್ ರಾಯಲ್ಸ್ ವಿರುದ್ಧ ಸುಲಭವಾಗಿ ಸೋತ ಚೆನೈನ ನಾಯಕ ಮಹೇಂದ್ರ ಸಿಂಗ್ ಧೋನಿ ನಿಸ್ಸಂದೇಹವಾಗಿ ಒತ್ತಡದಲ್ಲಿದ್ದಾರೆ. ಆ ಸೋಲಿಗೆ ಅವರೇ ಕಾರಣ ಎಂದು ಕ್ರಿಕೆಟ್ ಪರಿಣಿತರು ಮತ್ತು ಹಲವಾರು ಮಾಜಿ ಆಟಗಾರರು ಹೇಳುತ್ತಿರುವುದು ಧೋನಿಗೆ ಕಿರಿಕಿರಿ ಅನಿಸಿರಲಿಕ್ಕೂ ಸಾಕು. 217 ರನ್​ಗಳ ಬೃಹತ್ ಮೊತ್ತವನ್ನು ಚೇಸ್ ಮಾಡುವಾಗ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡದೆ, ಸ್ಯಾಮ್ ಕರನ್, ಋತುರಾಜ್ ಗಾಯಕ್ವಾಡ್ ಮತ್ತು ಕೇದಾರ್ ಜಾಧವ್ ಅವರನ್ನು ತನಗಿಂತ ಮುಂಚೆ ಆಡಲು ಕಳಿಸಿದ್ದು ತೀವ್ರ ಸ್ವರೂಪದ ಟೀಕೆಗೆ ಗುರಿಯಾಗಿದೆ. ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಕ್ಯಾಪ್ಟನ್ ಕೂಲ್ ಪ್ರಯತ್ನಿಸಿದರಾದರೂ ಅದರಿಂದ ಯಾರೂ ಇಂಪ್ರೆಸ್ ಆಗಿಲ್ಲ.

ಇದನ್ನೂ ಓದಿ: IPL 2020: CSK vs DC Live Score 

ಬ್ಯಾಟಿಂಗ್ ಮಾಡುವಾಗಲೂ ದೋನಿ ಒಂದಷ್ಟು ಸಿಕ್ಸರ್​ಗಳನ್ನು ಬಾರಿಸಿದ್ದು ಕೇವಲ ಲೆಕ್ಕಕ್ಕೆ ಬಂತೇ ಹೊರತು ಪರಿಗಣನೆಗೆ ಬರಲಿಲ್ಲ. ಯಾಕೆಂದರೆ ಚೆನೈ ಅದಾಗಲೇ ಪಂದ್ಯ ಸೋತಾಗಿತ್ತು. ಚೆನೈ ಟೀಮಿನ ಮ್ಯಾನೇಜ್​ಮೆಂಟ್ ಖುಷಿ ಪಟ್ಟುಕೊಳ್ಳಬಹುದಾದ ಅಂಶವೆಂದರೆ, ಧೋನಿ ಅವರಲ್ಲಿ ಸಿಕ್ಸರ್​ಗಳನ್ನು ಬಾರಿಸುವ ಕ್ಷಮತೆ ಇನ್ನೂ ಇದೆ.

ಹಾಗಂತ ಸೋಲಿಗೆ ಧೋನಿಯ ನಡೆ ಮಾತ್ರ ಕಾರಣ ಅಂತಲೂ ಹೇಳಲಾಗದು. ಅನುಭವಿ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ ಮತ್ತು ಪಿಯುಶ್ ಚಾವ್ಲಾ ಅವರ 8 ಓವರ್​ಗಳಲ್ಲಿ ರಾಜಸ್ತಾನದ ಬ್ಯಾಟ್ಸ್​ಮನ್​ಗಳು 95 ರನ್ ಚಚ್ಚಿದರು. ಆಮೇಲೆ ಲುಂಗಿ ಎನ್ಗಿಡಿ ಎಸೆದ 20 ನೇ ಓವರ್​ನಲ್ಲಿ ಜೊಫ್ರಾ ಆರ್ಚರ್ ಮನಬಂದಂತೆ ದಂಡಿಸಿ 30 ರನ್ ಬಾರಿಸಿದರು. ಅಂದರೆ ಈ 9 ಓವರ್​ಗಳಲ್ಲಿ 125 ರನ್ ಬಂದವು. ಇವತ್ತಿನ ಪಂದ್ಯದಲ್ಲಿ ಚಾವ್ಲಾ ಸ್ಥಾನಕ್ಕೆ ಇಮ್ರಾನ್ ತಾಹಿರ್ ಬರಬಹುದು. ಹಾಗೆಯೇ ಜೊಷ್ ಹೇಜೆಲ್​ವುಡ್ ಎನ್ಗಿಡಿಯನ್ನು ರಿಪ್ಲೇಸ್ ಮಾಡುವ ಸಾಧ್ಯತೆ ಇದೆ.

ಶೇನ್ ವಾಟ್ಸನ್, ಫಫ್ ಡು ಪ್ಲೆಸ್ಸಿ ಉತ್ತಮ ಸ್ಪರ್ಶದಲ್ಲಿರುವುದು ಚೆನೈ ಸಮಾಧಾನಕರ ಅಂಶವಾಗಿದೆ. ಆದರೆ ಮುರಳಿ ವಿಜಯ್, ಮತ್ತು ಋತುರಾಜ್ ಗಾಯಕ್ವಾಡ್ ಅಟಕ್ಕಿನ್ನೂ ಕುದುರಿಕೊಂಡಿಲ್ಲ. ರಾಜಸ್ತಾನ ವಿರುದ್ಧ ಗಾಯಕ್ವಾಡ್ ಅಕ್ಷರಶ: ಅಪ್ರಬುದ್ಧತೆ ತೋರಿದರು. ಗಾಯದ ಸಮಸ್ಯೆಗೆ ಸಿಕ್ಕಿರುವ ಇನ್ಫಾರ್ಮ್ ಬ್ಯಾಟ್ಸ್​ಮನ್ ಅಂಬಟಿ ರಾಯುಡು ಚೇತರಿಸಿಕೊಳ್ಳದಿರುವುದು ಧೋನಿ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.

ಒತ್ತಡ ಎಷ್ಟೇ ಇದ್ದರೂ ಅದನ್ನು ಹ್ಯಾಂಡಲ್ ಮಾಡುವ ವಿಧಾನ ಧೋನಿಗೆ ಗೊತ್ತಿದೆ. ಹಾಗಾಗಿ ಚೆನೈ ಹೆಚ್ಚು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ.

ಅತ್ತ, ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ಅದೃಷ್ಟದ ಬಲದಿಂದ ಸೂಪರ್ ಓವರ್​ನಲ್ಲಿ ಜಯ ಸಾಧಿಸಿದ ಡೆಲ್ಲಿಗೂ ಕೆಲ ತಾಪತ್ರಯಗಳಿವೆ. ಏಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗಾಯ ಇನ್ನೂ ಗುಣವಾಗಿಲ್ಲ. ಅವರ ಅನುಪಸ್ಥಿತಿ ಡೆಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಲಿದೆ. ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ರಿಕ್ಕಿ ಪಾಂಟಿಂಗ್​ಗೆ ಅದು ಚೆನ್ನಾಗಿ ಗೊತ್ತಿದೆ. ಅಶ್ವಿನ್ ಜಾಗಕ್ಕೆ ಹಿರಿಯ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ. ಮತ್ತೊಬ್ಬ ಸ್ಪಿನ್ನರ್ ಅಕ್ಸರ್ ಪಟೇಲ್ ಸ್ಥಾನ ಸದ್ಯಕ್ಕೆ ಅಬಾಧಿತ.

ಶಿಖರ್ ಧವನ್, ಪೃಥ್ವಿ ಶಾಹ, ರಿಷಬ್ ಪಂತ್, ಶರ್ಮನ್ ಹೆಟ್ಮೆಯರ್ ಹಾಗೂ ಖದ್ದು ಅಯ್ಯರ್ ಅವರನ್ನೊಳಗೊಂಡಿರುವ ಡೆಲ್ಲಿಗೆ ಬಿಗ್ ಹಿಟ್ಟರ್​ಗಳ ಕೊರತೆಯಿಲ್ಲ. ಪಂಜಾಬ್ ವಿರುದ್ಧ ಟಾಪ್ ಆರ್ಡರ್ ವಿಫಲವಾದರೂ ಮಾರ್ಕಸ್ ಸ್ಟಾಯ್ನಿಸ್ ಬಿರುಗಾಳಿ ವೇಗದ ಅರ್ಧ ಶತಕ ಬಾರಿಸಿದರು. ಅಯ್ಯರ್ ಮತ್ತು ಪಂತ್ ಕ್ರಮವಾಗಿ 39 ಮತ್ತು 31 ರನ್​ಗಳ ಕಾಣಿಕೆ ನೀಡಿದ್ದರು. ಧವನ್, ಶಾಹ, ಹೆಟ್ಮೆಯರ್ ಫೈರ್ ಮಾಡಿದರೆ ದೊಡ್ಡ ಮೊತ್ತ ನಿರಾಯಸವಾಗಿ ಬಂದುಬಿಡುತ್ತದೆ. ಹಿರಿಯ ಆಟಗಾರ ಅಜಿಂಕಾ ರಹಾನೆ ಇವತ್ತಿನ ಪಂದ್ಯ ಆಡಬಹುದು.

ಕಗಿಸೊ ರಬಾಡ ನೇತೃತ್ವದ ಡೆಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ, ಮೊಹಿತ್ ಶರ್ಮ, ಆವೆಶ್ ಖಾನ್, ಌನ್ರಿಕ್ ನೋರೆ, ಸ್ಡಾಯ್ನಿಸ್, ಹಿರಿಯ ಬೌಲರ್ ಇಶಾಂತ್ ಶರ್ಮ, ಹರ್ಷಲ್ ಪಟೇಲ್ ಮುಂತಾದವರಿದ್ದಾರೆ. ರಬಾಡ ಜೊತೆ ಮೊಹಿತ್ ಮತ್ತು ನೋರೆ ಮಾತ್ರ ಆಡಬಹುದು. ಪಾಂಟಿಂಗ್ ಕಡೇ ಕ್ಷಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೂ ಆಶ್ವರ್ಯವಿಲ್ಲ.

Published On - 5:09 pm, Fri, 25 September 20