Jasprit Bumrah Marriage Pic: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕ್ರಿಕೆಟರ್​ ಬುಮ್ರಾ- ಸಂಜನಾ ಗಣೇಶನ್.. ಫೋಟೋ ನೋಡಿ

|

Updated on: Mar 15, 2021 | 4:24 PM

ಟೀಂ ಇಂಡಿಯಾದ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ, ಇಂದು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವರಿಸಿದ್ದಾರೆ. ಇಬ್ಬರೂ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Jasprit Bumrah Marriage Pic: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕ್ರಿಕೆಟರ್​ ಬುಮ್ರಾ- ಸಂಜನಾ ಗಣೇಶನ್.. ಫೋಟೋ ನೋಡಿ
ಬುಮ್ರಾ, ಸಂಜನಾ ಜೋಡಿ
Follow us on

ಟೀಂ ಇಂಡಿಯಾದ ವೇಗದ ಬೌಲರ್​ ಜಸ್ಪ್ರೀತ್  ಬುಮ್ರಾ,  ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಇಂದು ವರಿಸಿದ್ದಾರೆ. ಇಬ್ಬರೂ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಫೋಟೋಗಳನ್ನು ಐಪಿಎಲ್​ ತಂಡವಾದ ಮುಂಬೈ ಇಂಡಿಯನ್ಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಹಲವು ದಿನಗಳಿಂದ ಈ ಜೋಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದ್ಯಾವೂದಕ್ಕೂ ತಲೆ ಕೇಡಿಸಿಕೊಳ್ಳದ ಈ ಜೋಡಿಗಳು ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿವೆ.

ಟ್ವೀಟ್ ಮಾಡಿದ ಜಸ್ಪ್ರೀತ್ ಬುಮ್ರಾ..
ಈ ಬಗ್ಗೆ ಟ್ವೀಟ್ ಮಾಡಿರುವ ಜಸ್ಪ್ರೀತ್ ಬುಮ್ರಾ, ಪ್ರೀತಿಯ ಜೊತೆಗೆ ಮುಂದೆ ಸಾಗುತ್ತಾ, ನಾವಿಬ್ಬರು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಇಂದು ನಮ್ಮ ಜೀವನದ ಅತ್ಯಂತ ಸಂತೋಷದಾಯಕ ದಿನಗಳಲ್ಲಿ ಒಂದಾಗಿದೆ. ನಮ್ಮ ವಿವಾಹದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಎಂದಿದ್ದಾರೆ.

ಅನುಪಮಾ ಪರಮೇಶ್ವರನ್ ಜೊತೆ ಬುಮ್ರಾ ಹೆಸರು ತಳಕು
ಈ ಹಿಂದೆ ಬುಮ್ರಾ, ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತಿತ್ತು. ಆದರೆ ವಿಷಯ ಎಲ್ಲೆಡೆ ಹಬ್ಬುತ್ತಿದಂತೆ ಮಾತಾನಾಡಿದ ಅನುಪಮಾ ಅವರ ತಾಯಿ, ಈ ವದಂತಿಗಳೆಲ್ಲಾ ಸತ್ಯಕ್ಕೆ ದೂರವಾಗಿವೆ ಎಂದಿದ್ದರು. ನಂತರ ಸಂಜನಾ ಗಣೇಶನ್ ಹೆಸರಿನ ಜೊತೆ ಬುಮ್ರಾ ಅವರ ಹೆಸರನ್ನು ತಳುಕು ಹಾಕಲಾಗುತ್ತಿತ್ತು.

ಟೀಂ ಇಂಡಿಯಾದಿಂದ ರಜೆ ಪಡೆದಿದ್ದ ಬುಮ್ರಾ
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಂತರ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದಿಂದ ರಜೆ ಪಡೆದಿದ್ದರು. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಬುಮ್ರಾ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದಾರೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿತ್ತು. ಇದರಿಂದಾಗಿ ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಬುಮ್ರಾ ಆಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳ ನಂತರ, ಬುಮ್ರಾ ಮದುವೆಗೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಆ ಹೊತ್ತಿಗೆ ವೇಗದ ಬೌಲರ್‌ ಯಾರನ್ನು ಮದುವೆಯಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿರಲಿಲ್ಲ.

ಯಾರು ಈ ಸಂಜನಾ ಗಣೇಶನ್​?
28 ವರ್ಷದ ಸಂಜನಾ ಗಣೇಶನ್​ ಮೂಲತಃ ಪುಣೆಯವರು. ಮಾಡೆಲಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಸಂಜನಾ 2014ರಲ್ಲಿ ಫೆಮಿನಾ ಮಿಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್​ ಕೂಡ ಆಗಿದ್ದಾರೆ. 2016ರಲ್ಲಿ ಸ್ಟಾರ್​ಸ್ಪೋರ್ಟ್ಸ್​ಗೆ ಕ್ರೀಡಾ ನಿರೂಪಕಿಯಾಗಿ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಸಂಜನಾಗೆ ಅವರ ಪ್ರತಿಸ್ಪರ್ಧಿಯಾಗಿದ್ದ ಅಶ್ವಿನಿ ಕೌಲ್​​ ಜತೆ ಅಫೇರ್​ ಇತ್ತು. ಆದರೆ ಅವರಿಬ್ಬರ ರಿಲೇಶನ್​ಶಿಪ್​ ತುಂಬ ದಿನ ಇರಲಿಲ್ಲ ಎಂಬ ರೂಮರ್​ ಕೂಡ ಇದೆ. 2016ರ ಈಚೆಗೆ ಕ್ರೀಡೆಗೆ ಸಂಬಂಧಪಟ್ಟ ಶೋ, ಸಂದರ್ಶನಗಳಲ್ಲಿ ಸಕ್ರಿಯವಾಗಿದ್ದಾರೆ. ಐಪಿಲ್​ ವೇಳೆ ಕೋಲ್ಕತ್ತ ನೈಟ್​ ರೈಡರ್ಸ್​ ತಂಡದ ನೈಟ್​ ಕ್ಲಬ್​ ಶೋನ ನಿರೂಪಕಿ ಇವರು. ಬುಮ್ರಾ ಮತ್ತು ಸಂಜನಾ ವಿವಾಹವಾಗುತ್ತಿರುವ ಬಗ್ಗೆ ಇವರಿಬ್ಬರೂ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

 

Published On - 4:04 pm, Mon, 15 March 21