Junior world wrestling championship: ಬೆಳ್ಳಿಯೊಂದಿಗೆ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳು! ಫೈನಲ್​ಗೇರಿದ ಬಿಪಾಶಾ

Junior world wrestling championship: ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತವು ಆರು ಪದಕಗಳೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಗೌರವ್ ಬಲಿಯಾನ್ (79 ಕೆಜಿ) ಮತ್ತು ದೀಪಕ್ (97 ಕೆಜಿ) ಮಂಗಳವಾರ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

Junior world wrestling championship: ಬೆಳ್ಳಿಯೊಂದಿಗೆ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳು! ಫೈನಲ್​ಗೇರಿದ ಬಿಪಾಶಾ
ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌
Follow us
TV9 Web
| Updated By: ಪೃಥ್ವಿಶಂಕರ

Updated on: Aug 18, 2021 | 10:48 PM

ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ರವೀಂದರ್ ಫೈನಲ್‌ನಲ್ಲಿ ಇರಾನ್‌ನ ಕುಸ್ತಿಪಟು ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಅದೇ ಸಮಯದಲ್ಲಿ, ಬಿಪಾಶಾ ಮಹಿಳೆಯರಲ್ಲಿ 76 ಕೆಜಿ ಸ್ಪರ್ಧೆಯ ಫೈನಲ್ ತಲುಪಿದರು. ಇದು ಭಾರತದ ಚಿನ್ನದ ಪದಕದ ಭರವಸೆಯನ್ನು ಜೀವಂತವಾಗಿರಿಸಿದೆ. ರಿಪೇಚೇಜ್‌ನ ಸಂಪೂರ್ಣ ಲಾಭವನ್ನು ಪಡೆದ ಯಶ್ (74 ಕೆಜಿ), ಪೃಥ್ವಿ ಬಾಬಾಸಾಹೇಬ್ ಪಾಟೀಲ್ (92 ಕೆಜಿ) ಮತ್ತು ಅನಿರುದ್ (125 ಕೆಜಿ) ಕಂಚಿನ ಪದಕಗಳನ್ನು ಪಡೆದರು. ಇದರೊಂದಿಗೆ, ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತವು ಆರು ಪದಕಗಳೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಗೌರವ್ ಬಲಿಯಾನ್ (79 ಕೆಜಿ) ಮತ್ತು ದೀಪಕ್ (97 ಕೆಜಿ) ಮಂಗಳವಾರ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಈ ವರ್ಷದ ಜೂನ್​ನಲ್ಲಿ ಯಾಸರ್ ಡೋಗು ಹಿರಿಯ ಸ್ಪರ್ಧೆಯಲ್ಲಿ ಗೆದ್ದಿದ್ದ ರಹಮಾನ್ ಮೌಸಾ ಅಮೋಯುಜಡ್ಖಲೀಲಿ ವಿರುದ್ಧ 61 ಕೆಜಿ ವಿಭಾಗದ ಫೈನಲ್​ನಲ್ಲಿ ರವೀಂದರ್ 3-9 ಅಂತರದಿಂದ ಸೋಲು ಅನುಭವಿಸಿದರು. ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ, 74 ಕೆಜಿ ಪ್ಲೇಆಫ್​ನಲ್ಲಿ, ಕಿರ್ಗಿಸ್ತಾನ್ ನ ಸ್ಟಾಂಬುಲ್ ಜನಯ್ಬೆಕ್ ಉಲೂ ವಿರುದ್ಧ 2-5 ರಿಂದ ಡ್ರಾ ಸಾಧಿಸಿದ ಯಶ್ 12-6ರಲ್ಲಿ ಗೆಲುವು ಸಾಧಿಸಿದರು. ಕೊನೆಯ 90 ಸೆಕೆಂಡುಗಳಲ್ಲಿ ಯಶ್ ಯಶಸ್ಸನ್ನು ಸಾಧಿಸಿದರು. ಆರಂಭದಲ್ಲಿ ಮುನ್ನಡೆ ಸಾಧಿಸಿದ ನಂತರ ಎದುರಾಳಿ ಕುಸ್ತಿಪಟು ಅತಿಯಾದ ಆತ್ಮವಿಶ್ವಾಸದಲ್ಲಿ ಮುಳುಗಿದರು. ಯಶ್ ಇದರ ಸಂಪೂರ್ಣ ಲಾಭ ಪಡೆದರು. ಅವರು ಮೊದಲು ಅರ್ಮೇನಿಯಾದ ಅರ್ಮೆನ್ ಮುಸಿಕ್ಯಾನ್ ಅವರನ್ನು 9-2 ಅಂಕಗಳಿಂದ ಸೋಲಿಸಿ ಕಂಚಿನ ಪದಕಕ್ಕೆ ಅರ್ಹರಾಗಿದ್ದರು.

ಪಾಟೀಲ್ (92 ಕೆಜಿ) ಪ್ಲೇಆಫ್ ನಲ್ಲಿ ರಷ್ಯಾದ ಇವಾನ್ ಕಿರಿಲ್ಲೋವ್ ಅವರನ್ನು 2-1ರಿಂದ ಸೋಲಿಸಿದರು. ಪಾಟೀಲ್ ಮಾನದಂಡದ ಆಧಾರದಲ್ಲಿ ಹಿಂದುಳಿದಿದ್ದರು ಆದರೆ ರಷ್ಯಾದ ಕುಸ್ತಿಪಟುವಿಗೆ ಫೌಲ್ ಆಟಕ್ಕಾಗಿ ದಂಡ ವಿಧಿಸಲಾಯಿತು. ಹೀಗಾಗಿ ಭಾರತೀಯ ಕುಸ್ತಿಪಟು ಗೆದ್ದರು. ಅನಿರುದ್ಧ್ (125 ಕೆಜಿ) ಅಜರ್ಬೈಜಾನ್ ನ ಐಡಿನ್ ಅಹ್ಮದೋವ್ ವಿರುದ್ಧ 7-2 ಅಂತರದ ಗೆಲುವಿನೊಂದಿಗೆ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕ ಗಳಿಕೆಯನ್ನು ಹೆಚ್ಚಿಸಿದರು.

ಬಿಪಾಶಾಗೆ ಚಿನ್ನ ಗೆಲ್ಲುವ ಅವಕಾಶವಿದೆ ಮಹಿಳೆಯರ ಸ್ಪರ್ಧೆಯಲ್ಲಿ, ಬಿಪಾಶಾ (76 ಕೆಜಿ) ಮಂಗೋಲಿಯಾದ ಓಡ್‌ಬಾಗ್ ಉಲ್ಜಿಬತ್ ಅವರನ್ನು 9-4ರಿಂದ ಸೋಲಿಸಿದರು. ಮತ್ತೊಂದೆಡೆ, ಮಹಿಳೆಯರ 50 ಕೆಜಿ ಸೆಮಿಫೈನಲ್ ಪ್ರವೇಶಿಸಿದ ಯುವ ಕುಸ್ತಿಪಟು ಸಿಮ್ರಾನ್, ತಾಂತ್ರಿಕ ಶ್ರೇಷ್ಠತೆಯಿಂದ ಅಮೆರಿಕದ ಎಮಿಲಿ ಕಿಂಗ್ ಶಿಲ್ಸನ್ ಎದುರು ಸೋತರು. ಸಿಮ್ರಾನ್ ರೊಮೇನಿಯಾದ ಜಾರ್ಜಿಯಾನಾ ಲವಿನಿಯಾ ಅಂಟೂಕಾ ಅವರನ್ನು ತಾಂತ್ರಿಕ ಕೌಶಲ್ಯದ ಆಧಾರದ ಮೇಲೆ ಸೋಲಿಸಿದರು. ಇದರ ನಂತರ, ಅಜರ್ಬೈಜಾನ್ ನ ಗುಲ್ತಾಕಿನ್ ಶಿರಿನೋವಾ ಕ್ವಾರ್ಟರ್ ಫೈನಲ್​ನಲ್ಲಿ ಸೋಲಿಸಲ್ಪಟ್ಟರು. ಆದಾಗ್ಯೂ, ಕ್ವಾರ್ಟರ್ ಫೈನಲ್‌ನಲ್ಲಿ ಸಿತೋ (55 ಕೆಜಿ), ಕುಸುಮ್ (59 ಕೆಜಿ) ಮತ್ತು ಅರ್ಜು (68 ಕೆಜಿ) ಸೋಲು ಅನುಭವಿಸಿದರು.