ತರಬೇತಿ ಶಿಬಿರದಲ್ಲಿ IPL ಬಗ್ಗೆ ಕೇನ್​ ವಿಲಿಯಮ್ಸನ್ ಹೇಳಿದ್ದೇನು?

ತರಬೇತಿ ಶಿಬಿರದಲ್ಲಿ IPL ಬಗ್ಗೆ ಕೇನ್​ ವಿಲಿಯಮ್ಸನ್ ಹೇಳಿದ್ದೇನು?

IPL​2020 ಗೆ BCCI ತರಾತುರಿಯ ಸಿದ್ಧತೆ ಮಾಡಿಕೊಳ್ತಿರುವಾಗಲೇ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ IPL​​ನಲ್ಲಿ ಆಡೋದು ಒಂದು ಅದ್ಭುತವಾದ ಅನುಭವ ಅಂತಾ ಹೇಳಿಕೊಂಡಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್ ತಂಡದ ಟ್ರೈನಿಂಗ್ ಕ್ಯಾಂಪ್​ನಲ್ಲಿ ಪಾಲ್ಗೊಂಡಿರುವ ಕೇನ್ ಮಿಲಿಯನ್ ಡಾಲರ್ ಟೂರ್ನಿ ಬಗ್ಗೆ ಮನದಾಳದ ಮಾತುಗಳನ್ನ ಬಿಚ್ಚಿಟ್ಟಿದ್ದಾರೆ. ಈ ಬಾರಿ IPL ಎಲ್ಲಿ ನಡೆಯುತ್ತೆ ಮತ್ತು ಹೇಗೆ ನಡೆಯುತ್ತೆ ಅನ್ನೋದಷ್ಟೇ ತಿಳಿದುಬರಬೇಕಾಗಿದೆ. ಹಾಗಿದ್ರೂ IPL​ನಲ್ಲಿ ಪಾಲ್ಗೊಂಡು ಆಡೋದು ಒಂದು ಅದ್ಭುತ ಅನುಭವ. ಜೊತೆಗೆ, IPL​ನಲ್ಲಿ ಯಾವುದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ […]

KUSHAL V

| Edited By:

Jul 25, 2020 | 12:10 PM

IPL​2020 ಗೆ BCCI ತರಾತುರಿಯ ಸಿದ್ಧತೆ ಮಾಡಿಕೊಳ್ತಿರುವಾಗಲೇ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ IPL​​ನಲ್ಲಿ ಆಡೋದು ಒಂದು ಅದ್ಭುತವಾದ ಅನುಭವ ಅಂತಾ ಹೇಳಿಕೊಂಡಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್ ತಂಡದ ಟ್ರೈನಿಂಗ್ ಕ್ಯಾಂಪ್​ನಲ್ಲಿ ಪಾಲ್ಗೊಂಡಿರುವ ಕೇನ್ ಮಿಲಿಯನ್ ಡಾಲರ್ ಟೂರ್ನಿ ಬಗ್ಗೆ ಮನದಾಳದ ಮಾತುಗಳನ್ನ ಬಿಚ್ಚಿಟ್ಟಿದ್ದಾರೆ.

ಈ ಬಾರಿ IPL ಎಲ್ಲಿ ನಡೆಯುತ್ತೆ ಮತ್ತು ಹೇಗೆ ನಡೆಯುತ್ತೆ ಅನ್ನೋದಷ್ಟೇ ತಿಳಿದುಬರಬೇಕಾಗಿದೆ. ಹಾಗಿದ್ರೂ IPL​ನಲ್ಲಿ ಪಾಲ್ಗೊಂಡು ಆಡೋದು ಒಂದು ಅದ್ಭುತ ಅನುಭವ. ಜೊತೆಗೆ, IPL​ನಲ್ಲಿ ಯಾವುದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹೆಚ್ಚಿನ ಮಾಹಿತಿ ದೊರೆಯಲಿದೆ. IPL​ನಿಂದ ಹೆಚ್ಚಿನ ವಿಷಯಗಳನ್ನ ತಿಳಿದುಕೊಳ್ಳೋದು ಒಳ್ಳೇದು ಎಂದು ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ. ಈ ಮೂಲಕ ಕೇನ್ IPL​ನಲ್ಲಿ ಆಡೋದಕ್ಕೆ ಉತ್ಸುಕರಾಗಿದ್ದಾರೆ ಎಂದು ಕಂಡು ಬರುತ್ತದೆ.

ಸದ್ಯ IPL ಆಡಳಿತ ಮಂಡಳಿಯ ಮುಖ್ಯಸ್ಥ ಬ್ರಿಜೇಷ್ ಪಟೇಲ್, ಇನ್ನು 10 ದಿನಗಳ ಒಳಗೆ ನಡೆಯೋ ಸಭೆಯಲ್ಲಿ, ಪಂದ್ಯಾವಳಿಯ ಸ್ಥಳ ಹಾಗೂ ವೇಳಾಪಟ್ಟಿಯನ್ನ ಸಿದ್ಧಗೊಳಿಸೋದಾಗಿ ತಿಳಿಸಿದ್ದಾರೆ. ಅಲ್ಲಿಗೆ ಐಪಿಎಲ್ ಸೆಪ್ಟಂಬರ್ ಅಥವಾ ಅಕ್ಟೋಬರ್​ನಲ್ಲಿ ನಡೆಯಲಿದ್ದು ಕೇನ್ ವಿಲಿಯಮ್ಸನ್ ಸೇರಿದಂತೆ ವಿದೇಶಿ ಕ್ರಿಕೆಟಿಗರೆಲ್ಲಾ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡೋದಕ್ಕೆ ಉತ್ಸುಕರಾಗಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada