ಸಿಂಪಲ್​​ ಆಗಿ ಮದುವೆ ಆದ ಖ್ಯಾತ ಬೌಲರ್​: ವಿವಾಹ ಮಂಟಪದಲ್ಲಿ ಬೌಲಿಂಗ್​ ಪ್ರದರ್ಶನ!

|

Updated on: Dec 13, 2020 | 3:37 PM

ವರುಣ್​ ಚಕ್ರವರ್ತಿ ತಮ್ಮ ಬಹುಕಾಲದ ಗೆಳತಿ ನೇಹಾ ಖೇಡೇಕರ್​ ಜೊತೆ ಮದುವೆ ಆಗಿದ್ದಾರೆ. ತುಂಬಾನೇ ಖಾಸಗಿಯಾಗಿ ನಡೆದ ಈ ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿತ್ತು.

ಸಿಂಪಲ್​​ ಆಗಿ ಮದುವೆ ಆದ ಖ್ಯಾತ ಬೌಲರ್​: ವಿವಾಹ ಮಂಟಪದಲ್ಲಿ ಬೌಲಿಂಗ್​ ಪ್ರದರ್ಶನ!
ವಿವಾಹವಾದ ವರುಣ್​ ಚಕ್ರವರ್ತಿ
Follow us on

ಕೊರೊನಾ ವೈರಸ್ ಮಧ್ಯೆಯೇ ಸಾಕಷ್ಟು ಜನರು ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಇದೇ ಅವಧಿಯಲ್ಲಿ ಹಸೆಮಣೆ ಏರಿದ್ದಾರೆ. ಈಗ, ಐಪಿಎಲ್​ನಲ್ಲಿ ಸದ್ದು ಮಾಡಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ ಬೌಲರ್​ ವರುಣ್​ ಚಕ್ರವರ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವರುಣ್​ ಚಕ್ರವರ್ತಿ ತಮ್ಮ ಬಹುಕಾಲದ ಗೆಳತಿ ನೇಹಾ ಖೇಡೇಕರ್​ ಜೊತೆ ಮದುವೆ ಆಗಿದ್ದಾರೆ. ತುಂಬಾನೇ ಖಾಸಗಿಯಾಗಿ ನಡೆದ ಈ ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿತ್ತು. ಅಚ್ಚರಿ ಎಂದರೆ, ವರುಣ್​ ವೇದಿಕೆಯ ಮೇಲೆ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ. ನೇಹಾ ಬ್ಯಾಟ್​ ಬೀಸಿದ್ದಾರೆ.

ಈ ವಿಡಿಯೋವನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ಬರೆದುಕೊಂಡಿರುವ ಕೆಕೆಆರ್​, ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್​ ಹಾಗೂ ನೇಹಾಗೆ ಕೆಕೆಆರ್​ ಕಡೆಯಿಂದ ಅಭಿನಂದನೆಗಳು ಎಂದಿದೆ. ಅನೇಕರು ವರುಣ್​​ಗೆ ಅಭಿನಂದನೆ ಸಲ್ಲಿಸಿದ್ದಾರೆ.

2019ರಲ್ಲಿ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡ ₹ 8.4 ಕೋಟಿಗೆ ವರುಣ್​ ಅವರನ್ನು ಖರೀದಿಸಿತ್ತು. ಮೊದಲ ಮ್ಯಾಚ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಅವರರಿಗೆ ಅವಕಾಶ ಸಿಕ್ಕಿರಲಿಲ್ಲ. ಕೆಕೆಆರ್​ ತಂಡ 2020ರಲ್ಲಿ ವರುಣ್​ ಅವರನ್ನು ₹ 4 ಕೋಟಿಗೆ ಖರೀದಿಸಿತ್ತು. 13 ಪಂದ್ಯಗಳಿಂದ 17 ವಿಕೆಟ್​ ಕಿತ್ತಿದ್ದ ವರುಣ್​ 6.84 ಎಕಾನಮಿ ರೇಟ್​ ಉಳಿಸಿಕೊಂಡಿದ್ದರು.

ಇವರ ಪರ್ಫಾರ್ಮೆನ್ಸ್​ ನೋಡಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ವರುಣ್​ ಆಯ್ಕೆ ಆಗಿದ್ದರು. ಆದರೆ, ಅವರು ಗಾಯದ ಸಮಸ್ಯೆಯಿಂದ ಬಳಲಿದ ಕಾರಣ, ಅವರ ಬದಲು ನಟರಾಜನ್​ ಆಯ್ಕೆ ಮಾಡಲಾಗಿತ್ತು. ನಟರಾಜನ್​ ಈ ಬಾರಿ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ಫಿಟ್​​ ಆದರೂ ಫೈನಲ್​ ಆಗಿಲ್ಲ ರೋಹಿತ್​ ಎಂಟ್ರಿ: ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ ಹಿಟ್​ ಮ್ಯಾನ್

Published On - 3:28 pm, Sun, 13 December 20