Lionel Messi: ಲಿಯೊನೆಲ್ ಮೆಸ್ಸಿ ಕಣ್ಣೀರು ಒರೆಸಿ ಬಿಸಾಡಿದ ಟಿಶ್ಯೂ ಪೇಪರ್ ಮಾರಾಟಕ್ಕಿದೆ! ಎಷ್ಟು ಕೋಟಿಗೆ ಗೊತ್ತಾ?

| Updated By: ಪೃಥ್ವಿಶಂಕರ

Updated on: Aug 18, 2021 | 6:56 PM

Lionel Messi: ಎಫ್‌ಸಿ ಬಾರ್ಸಿಲೋನಾಕ್ಕೆ ಭಾವನಾತ್ಮಕ ವಿದಾಯ ಭಾಷಣದ ಸಮಯದಲ್ಲಿ ಲಿಯೋನೆಲ್ ಮೆಸ್ಸಿ ತನ್ನ ಕಣ್ಣೀರನ್ನು ಒರೆಸಲು ಬಳಸಿದ ಟಿಶ್ಯೂ ಪೇಪರ್​ ಈಗ $ 1 ಮಿಲಿಯನ್‌ಗೆ ಮಾರಾಟಕ್ಕಿದೆ ಎಂದು ವರದಿಯಾಗಿದೆ.

Lionel Messi: ಲಿಯೊನೆಲ್ ಮೆಸ್ಸಿ ಕಣ್ಣೀರು ಒರೆಸಿ ಬಿಸಾಡಿದ ಟಿಶ್ಯೂ ಪೇಪರ್ ಮಾರಾಟಕ್ಕಿದೆ! ಎಷ್ಟು ಕೋಟಿಗೆ ಗೊತ್ತಾ?
ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳಿದ ಲಿಯೊನೆಲ್ ಮೆಸ್ಸಿ
Follow us on

ಬಾರ್ಸಿಲೋನಾ ತಂಡದಿಂದ ಲಿಯೊನೆಲ್ ಮೆಸ್ಸಿ ನಿರ್ಗಮನವು ಒಂದು ಭಾವನಾತ್ಮಕ ಸಂಗತಿಯಾಗಿದ್ದು, ಅರ್ಜೆಂಟೀನಾ ಸೂಪರ್ಸ್ಟಾರ್ ತನ್ನ ವಿದಾಯ ಭಾಷಣ ಮಾಡುವಾಗ ವೇದಿಕೆ ಮೇಲೆ ಕಣ್ಣೀರು ಸುರಿಸಿದ್ದರು. ಮೆಸ್ಸಿ ವೇದಿಕೆಯ ಬಳಿ ನಿಂತಿದ್ದಾಗ, ಬಾರ್ಸಿಲೋನಾ ಆಟಗಾರರು ಮತ್ತು ಮಾಧ್ಯಮ ವ್ಯಕ್ತಿಗಳನ್ನು ಒಳಗೊಂಡ ಪ್ರೇಕ್ಷಕರು ಒಂದೂವರೆ ನಿಮಿಷಕ್ಕೂ ಹೆಚ್ಚು ಕಾಲ ನಿಂತು ತಮ್ಮ ಚಪ್ಪಾಳೆ ತಟ್ಟಿದರು. ಈ ವೇಳೆ ಮೆಸ್ಸಿ ಗಳಗಳನೆ ಅತ್ತಿದ್ದರು. 34 ವರ್ಷದ ಮೆಸ್ಸಿ ತಮ್ಮ ವೃತ್ತಿಜೀವನದ 21 ವರ್ಷಗಳ ಸುದೀರ್ಘ ಸಂಬಂಧಕ್ಕೆ ವಿದಾಯ ಹೇಳಿದರು.ಈಗ ಅವರ ಹೊಸ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡಲಿದ್ದಾರೆ. ಆದರೆ ಈಗ ಸುದ್ದಿಯಲ್ಲಿರುವುದು ಮೆಸ್ಸಿ ತಂಡ ತೊರೆದ ವಿಚಾರವಲ್ಲ. ಬದಲಿಗೆ, ತಮ್ಮ ವಿದಾಯದ ಭಾಷಣದ ವೇಳೆ ಕಣ್ಣೀರನ್ನು ಒರೆಸಿಕೊಳ್ಳಲು ಬಳಸಿದ್ದ ಟಿಶ್ಯೂ ಪೆಪರ್ ಹರಾಜಿಗಿರುವುದು.

ಮೆಸ್ಸಿ ಬಳಸಿದ ಟಿಶ್ಯೂ ಮಾರಾಟಕ್ಕಿದೆ
ಪಿಎಸ್‌ಜಿಗೆ ಮೆಸ್ಸಿ ವರ್ಗಾವಣೆಯು ಪ್ರಪಂಚದಾದ್ಯಂತದ ಫುಟ್‌ಬಾಲ್ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನು ನೀಡಿತು. ಅವರ ವಿದಾಯ ಭಾಷಣದ ಸಮಯದಲ್ಲಿ, ಮೆಸ್ಸಿ ತನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ, ಅವರ ಪತ್ನಿ ಆಂಟೊನೆಲ್ಲಾ ಕಣ್ಣೀರನ್ನು ಒರೆಸಲು ಟಿಶ್ಯೂ ಪೇಪರ್ ನೀಡಿದರು. ಎಫ್‌ಸಿ ಬಾರ್ಸಿಲೋನಾಕ್ಕೆ ಭಾವನಾತ್ಮಕ ವಿದಾಯ ಭಾಷಣದ ಸಮಯದಲ್ಲಿ ಲಿಯೋನೆಲ್ ಮೆಸ್ಸಿ ತನ್ನ ಕಣ್ಣೀರನ್ನು ಒರೆಸಲು ಬಳಸಿದ ಟಿಶ್ಯೂ ಪೇಪರ್​ ಈಗ $ 1 ಮಿಲಿಯನ್‌ಗೆ ಮಾರಾಟಕ್ಕಿದೆ ಎಂದು ವರದಿಯಾಗಿದೆ.

ವರದಿ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬರು ಮೆಸ್ಸಿ ಬಳಸಿದ ಪೇಪರ್​ ಅನ್ನು ಪಡೆದುಕೊಂಡು, ಈಗ ಅದನ್ನು ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿದ್ದಾರೆ. ಜೊತೆಗೆ ಆನ್‌ಲೈನ್‌ನಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದಕ್ಕೆ $ 1 ಮಿಲಿಯನ್ ದರವನ್ನು ನಿಗಧಿ ಮಾಡಿದ್ದಾರೆ.

ಬಾರ್ಸಿಲೋನಾ-ಮೆಸ್ಸಿಯ ಸಂಬಂಧ 13 ನೇ ವಯಸ್ಸಿನಲ್ಲಿ ಆರಂಭವಾಯಿತು
ಮೆಸ್ಸಿ ಮತ್ತು ಬಾರ್ಸಿಲೋನಾ ಸಂಬಂಧ 21 ವರ್ಷ ಹಳೆಯದು. ಈ ಸ್ಮರಣೀಯ ಪ್ರಯಾಣವು 2000 ರಲ್ಲಿ ಆರಂಭವಾಯಿತು. ಮೆಸ್ಸಿ ಕ್ಲಬ್‌ನ ಪ್ರಸಿದ್ಧ ಲಾ ಮೆಸಿಯಾ ಅಕಾಡೆಮಿಗೆ 13 ನೇ ವಯಸ್ಸಿನಲ್ಲಿ ಸೇರಿದರು. ಇದರ ನಂತರ, 2004 ರಲ್ಲಿ, ಅವರು ಬಾರ್ಸಿಲೋನಾದ ಹಿರಿಯ ತಂಡದಲ್ಲಿ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು ನಿರಂತರವಾಗಿ ಕ್ಲಬ್‌ನಲ್ಲಿದ್ದರು. ಈ ಸಮಯದಲ್ಲಿ, ಬಾರ್ಸಿಲೋನಾ ಸ್ಪ್ಯಾನಿಷ್ ಲೀಗ್‌ನಿಂದ ಯುರೋಪಿಯನ್ ಲೀಗ್‌ಗೆ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿತು ಮತ್ತು ಕ್ಲಬ್ ಅನ್ನು ರಿಯಲ್ ಮ್ಯಾಡ್ರಿಡ್‌ಗೆ ಸರಿಸಮಾನವಾಗಿ ತರಲು ಹತ್ತಾರು ಟ್ರೋಫಿಗಳನ್ನು ಗೆಲ್ಲಲು ಸಹಾಯ ಮಾಡಿತು. 2018 ರಲ್ಲಿ ಆಂಡ್ರೆಸ್ ಇನಿಯೆಸ್ಟಾ ಕ್ಲಬ್‌ನಿಂದ ನಿರ್ಗಮಿಸಿದ ನಂತರ ಮೆಸ್ಸಿ ತಂಡದ ಪೂರ್ಣ ಪ್ರಮಾಣದ ನಾಯಕರಾದರು. ಆದರೆ ಈ ಅವಧಿಯಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಸಾಧಿಸಲಿಲ್ಲ. ಅವರು ಏಕಾಂಗಿಯಾಗಿ ತಂಡವನ್ನು ನಿಭಾಯಿಸಬೇಕಾಗಿತ್ತು. ಈ ಕಾರಣಕ್ಕಾಗಿ ಅವರು 2020 ರಲ್ಲಿ ಕ್ಲಬ್ ಅನ್ನು ತೊರೆಯುವುದಾಗಿ ಘೋಷಿಸಿದರು. ಆದರೆ ಬಾರ್ಸಿಲೋನಾದ ಕಾನೂನು ಅಡೆತಡೆಗಳಿಂದ ಒಂದು ವರ್ಷ ಅವರು ತಂಡದಿಂದ ದೂರಾಗದಂತೆ ತಡೆಯಲಾಯಿತು.

ಬಾರ್ಸಿಲೋನಾದೊಂದಿಗೆ ಮೆಸ್ಸಿ ದಾಖಲೆ
ಲಾ ಲಿಗಾದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ. ಅವರು 520 ಪಂದ್ಯಗಳಲ್ಲಿ 474 ಗೋಲುಗಳನ್ನು ಗಳಿಸಿದ್ದಾರೆ, ಇದು ಕ್ಲಬ್ ಹಾಗೂ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಗೋಲುಗಳನ್ನು ಹೊಂದಿದೆ. ಒಟ್ಟಾರೆಯಾಗಿ ಮೆಸ್ಸಿ ಬಾರ್ಸಿಲೋನಾಗೆ 778 ಪಂದ್ಯಗಳಲ್ಲಿ 672 ಗೋಲುಗಳನ್ನು ದಾಖಲಿಸಿದ್ದಾರೆ. ಇದಲ್ಲದೇ, ಅವರು ಲೀಗ್‌ನಲ್ಲಿ 193 ಅಸಿಸ್ಟ್‌ಗಳೊಂದಿಗೆ ಅತ್ಯುನ್ನತ ಸಹಾಯ ಆಟಗಾರರಾಗಿದ್ದಾರೆ. ಅಷ್ಟೇ ಅಲ್ಲ, ಬಾರ್ಸಿಲೋನಾ ಪರ ಲಾ ಲಿಗಾದಲ್ಲಿ 36 ಹ್ಯಾಟ್ರಿಕ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಒಂದು ಋತುವಿನಲ್ಲಿ ಗರಿಷ್ಠ 50 ಗೋಲುಗಳು ಕೂಡ ಮೆಸ್ಸಿಯ ಹೆಸರಿನಲ್ಲಿವೆ. ಬಾರ್ಸಿಲೋನಾ ಮುಂಚೂಣಿಯಲ್ಲಿರುವಾಗ, ಮೆಸ್ಸಿ ಪ್ರತಿಷ್ಠಿತ ‘ಬ್ಯಾಲನ್ ಡಿ’ಆರ್’ ಟ್ರೋಫಿಯನ್ನು ಗೆದ್ದುಕೊಂಡರು. ವರ್ಷದ ಅತ್ಯುತ್ತಮ ಫುಟ್ಬಾಲ್ ಆಟಗಾರನ ಪ್ರಶಸ್ತಿಯನ್ನು 6 ಬಾರಿ ಗೆದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಮೆಸ್ಸಿ ಬಾರ್ಸಿಲೋನಾದೊಂದಿಗೆ 34 ಟ್ರೋಫಿಗಳನ್ನು ಗೆದ್ದರು, ಅದರಲ್ಲಿ ಅವರ ಕೊಡುಗೆ ಅಗ್ರಸ್ಥಾನದಲ್ಲಿದೆ. ಇವುಗಳಲ್ಲಿ, ಅವರು 10 ಲಾ ಲಿಗಾ ಪ್ರಶಸ್ತಿಗಳನ್ನು, 7 ಕೋಪಾ ಡೆಲ್ ರೇ ಮತ್ತು 4 UEFA ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.