AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni Birthday: ಧೋನಿಗೂ ಇದೆ ಪಬ್ಜಿ ಆಡುವ ಗೀಳು! ನಿದ್ರೆಯಲ್ಲೂ ಪಬ್ಜಿ ಬಗ್ಗೆ ಕನವರಿಸ್ತಾರೆ ಮಹೀ; ಸಾಕ್ಷಿ ಹೇಳಿದ ಸತ್ಯ ಸಂಗತಿ

MS Dhoni Birthday: ಹೆಡ್‌ಫೋನ್‌ ಧರಿಸಿ ಗೇಮ್‌ನಲ್ಲಿ ತಮ್ಮೊಟ್ಟಿಗೆ ಆಟವಾಡುತ್ತಿರುವವರ ಜೊತೆಗೆ ಮಾತನಾಡುತ್ತಾ ಇರುತ್ತಾರೆ. ಇತ್ತೀಚೆಗೆ ರಾತ್ರಿ ನಿದ್ರೆಯಲ್ಲೂ ಪಬ್‌ಜಿ ಬಗ್ಗೆಯೇ ಮಾತನಾಡುತ್ತಿರುತ್ತಾರೆ.

MS Dhoni Birthday: ಧೋನಿಗೂ ಇದೆ ಪಬ್ಜಿ ಆಡುವ ಗೀಳು! ನಿದ್ರೆಯಲ್ಲೂ ಪಬ್ಜಿ ಬಗ್ಗೆ ಕನವರಿಸ್ತಾರೆ ಮಹೀ; ಸಾಕ್ಷಿ ಹೇಳಿದ ಸತ್ಯ ಸಂಗತಿ
ಎಂ ಎಸ್ ಧೋನಿ
ಪೃಥ್ವಿಶಂಕರ
|

Updated on: Jul 07, 2021 | 6:24 PM

Share

ಎಂ.ಎಸ್.ಧೋನಿಗೆ ಕ್ರಿಕೆಟ್ ಮೇಲೆ ಎಷ್ಟೊಂದು ಒಲವಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಹಾಗೆ ಮಹೇಂದ್ರನಿಗೆ ಆ ಒಂದು ವಿಡಿಯೋ ಗೇಮ್ ಮೇಲೆ ಅತೀವ ಅಸಕ್ತಿ.. ಅದ್ಯಾವ ಮಟ್ಟಿಗೆ ಅಂದ್ರೆ, ರಾತ್ರಿ ನಿದ್ದೆಯಲ್ಲೂ ಧೋನಿ ಆ ಶೂಟಿಂಗ್ ಗೇಮ್ ಬಗ್ಗೆಯೇ ಕನವರಿಸುತ್ತಾರೆ. ಪಂದ್ಯ ಶುರುವಾಗುತ್ತೆ ಅಂದ್ರೆ ಸಾಕು, ಚಾಂಪಿಯನ್ ಕ್ಯಾಪ್ಟನ್ ಎಂ.ಎಸ್.ಧೋನಿ, ಫುಲ್ ಌಕ್ಟಿವ್ ಆಗಿರ್ತಾರೆ. ಎದುರಾಳಿ ತಂಡಕ್ಕೆ ಸೋಲಿನ ಗುನ್ನಾ ಕೊಡೋಕೆ ಹತ್ತಾರು ರಣತಂತ್ರಗಳನ್ನ ರೂಪಿಸೋದ್ರಲ್ಲಿ ಧೋನಿ ತಲ್ಲಿನನಾಗಿರ್ತಾರೆ. ಮಹೇಂದ್ರನಿಗೆ ಕ್ರಿಕೆಟ್ ಅಂದ್ರೆ ಎಲ್ಲಿಲ್ಲದ ಪ್ರೀತಿ.. ಹಾಗೆಯೇ ಮಾಹಿಗೆ, ಮತ್ತೊಂದು ಗೇಮ್ ಬಗ್ಗೆಯೂ ಸಿಕ್ಕಾಪಟ್ಟೆ ಆಸಕ್ತಿಯನ್ನ ಹೊಂದಿದ್ದಾರೆ.

ಅಷ್ಟೇ ಅಲ್ಲ, ಆ ಆಟವನ್ನ ಧೋನಿ ಅದ್ಯಾವ ಮಟ್ಟಿಗೆ ಇಷ್ಟಪಡ್ತಾರೆ ಅಂದ್ರೆ, ರಾತ್ರಿ ನಿದ್ದೆಯಲ್ಲೂ ಅದರ ಬಗ್ಗೆನೇ ಯೋಚನೆ ಮಾಡ್ತಾರೆ. ಎಂ.ಎಸ್.ಧೋನಿಗೆ ಕ್ರಿಕೆಟ್ ಬಿಟ್ರೆ ಫುಟ್ಬಾಲ್ ಆಟದ ಬಗ್ಗೆ ಪ್ರೀತಿ ಹೊಂದಿರಬಹುದು ಅಂತಾ ನೀವು ಅಂದುಕೊಂಡಿರಬಹುದು. ಆದ್ರೆ, ಧೋನಿ ಕ್ರಿಕೆಟ್ ಬಿಟ್ರೆ ಇಷ್ಟ ಆಗೋದು, ಭಾರತದಲ್ಲಿ ಸದ್ಯ ಬ್ಯಾನ್ ಆಗಿರೋ ಪಬ್ಜಿ ವಿಡಿಯೋ ಗೇಮ್.

ಮಹೇಂದ್ರ ಸಿಂಗ್ ಧೋನಿಗೂ ಇದೆ ಪಬ್ಜಿ ಆಡುವ ಗೀಳು! ಎಂ.ಎಸ್.ಧೋನಿಗೆ ವಿಡಿಯೋ ಗೇಮ್ಗಳ ಮೇಲಿನ ಪ್ರೀತಿ ಇಂದು ನಿನ್ನೆಯದ್ದಲ್ಲ. ಧೋನಿ ಭಾರತ ತಂಡದ ಪರ ಆಡುವಾಗ, ಒಂದಿಷ್ಟು ಟೈಮ್ ಸಿಕ್ರೆ ಸಾಕು, ವಿಡಿಯೋ ಗೇಮ್ ಆಡುವುದ್ರಲ್ಲಿ ಮಗ್ನರಾಗ್ತಿದ್ರು. ಟೀಂ ಇಂಡಿಯಾದ ಸಹ ಆಟಗಾರರೊಂದಿಗೆ ಮಾಹಿ, ಜಿದ್ದಿದೆ ಬಿದ್ದವರಂತೆ ವಿಡಿಯೋ ಗೇಮ್ ಆಡಿ ಎಂಜಾಯ್ ಮಾಡಿದ್ರು.. ಇನ್ನು ಹೋಟೆಲ್ಗಳಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಧೋನಿ, ಗೇಮ್ ಆಡುತ್ತಿರೋ ಫೋಟೋಗಳು ಸಹ ವೈರಲ್ ಆಗ್ತಿದ್ವು.. ಆದ್ರೆ, ಧೋನಿಗೂ ಪಬ್ಜಿ ಆಡುವ ಗೀಳಿದೆ ಅನ್ನೋದನ್ನ ಇದೀಗ ಬಹಿರಂಗಗೊಂಡಿದೆ.

ಮಹೇಂದ್ರನಿಗೆ ನಿದ್ರೆಯಲ್ಲೂ ಪಬ್ಜಿಯದ್ದೇ ಕನವರಿಕೆ! ಸದ್ಯ ಪ್ಲೇ ಸ್ಟೇಷನ್ ಹಾಗೂ ಕಾಲ್ ಆಫ್ ಡ್ಯುಟಿ ಅಂತಹ ವಿಡಿಯೋ ಗೇಮ್ಗಳನ್ನ ಧೋನಿ ಬ್ಯುಸಿಯಾಗಿದ್ದಾರೆ. ಆದ್ರೆ, ಒಂದು ಕಾಲದಲ್ಲಿ ಮಾಹಿ, ಪಬ್ಜಿ ಆಡೋದ್ರಲ್ಲಿ ಪಂಟರ್ ಎನ್ನಿಸಿಕೊಂಡಿದ್ರು ಎಂದು ಪತ್ನಿ ಸಾಕ್ಷಿ ಹೇಳಿದ್ದಾರೆ. ಧೋನಿ ಪಬ್ಜಿ ಗೇಮ್ ಅದ್ಯಾವಮಟ್ಟಿಗೆ ಅಂಟ್ರಕ್ಷನ್ ಮಾಡಿತ್ತು ಅಂದ್ರೆ, ರಾತ್ರಿ ನಿದ್ದೆಯಲ್ಲೂ ಗೇಮ್ ಬಗ್ಗೆ ಕನವರಿಸ್ತಿದ್ರು. ಕೆಲವೊಮ್ಮೆ ಹೆಡ್ಫೋನ್ ಹಾಕಿಕೊಂಡು ತಮ್ಮೊಟ್ಟಿಗೆ ಗೇಮ್ ಆಡುತ್ತಿರುವವರೊಂದಿಗೆ ಧೋನಿ ಮಾತನಾಡನಾಡ್ತಿದ್ರು ಅಂತ ಸಾಕ್ಷಿ ತಿಳಿಸಿದ್ದಾರೆ.

ನಿದ್ರೆಯಲ್ಲೂ ಪಬ್ಜಿ ಕನವರಿಕೆ ಧೋನಿ ಸದಾ ಒಂದಲ್ಲ ಒಂದನ್ನು ಆಲೋಚಿಸುತ್ತಲೇ ಇರುತ್ತಾರೆ. ಮೆದುಳಿಗೆ ವಿಶ್ರಾಂತಿಯೇ ಕೊಡುವುದಿಲ್ಲ. ಕಾಲ್‌ ಆಫ್‌ ಡ್ಯೂಟಿ ಅಥವಾ ಪಬ್‌ಜಿ ವಿಡಿಯೋ ಗೇಮ್‌ ಆಡುವ ಮೂಲಕ ತಮ್ಮ ಆಲೋಚನೆಗಳನ್ನು ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಾರೆ. ಇದು ಒಳ್ಳೆಯ ಸಂಗತಿ ಕೂಡ. ಹೆಡ್‌ಫೋನ್‌ ಧರಿಸಿ ಗೇಮ್‌ನಲ್ಲಿ ತಮ್ಮೊಟ್ಟಿಗೆ ಆಟವಾಡುತ್ತಿರುವವರ ಜೊತೆಗೆ ಮಾತನಾಡುತ್ತಾ ಇರುತ್ತಾರೆ. ಇತ್ತೀಚೆಗೆ ರಾತ್ರಿ ನಿದ್ರೆಯಲ್ಲೂ ಪಬ್‌ಜಿ ಬಗ್ಗೆಯೇ ಮಾತನಾಡುತ್ತಿರುತ್ತಾರೆ.

ಪಬ್ಜಿ ಚೀನಾ ಮೂಲಕ ಗೇಮ್ ಌಪ್ ಆಗಿರೋ ಕಾರಣದಿಂದ, ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಪಬ್ಜಿಯನ್ನ ಭಾರತದಲ್ಲೇ ಅಭಿವೃದ್ಧಿ ಪಡಿಸಲಾಗ್ತಿದೆ. ಬ್ಯಾಟಲ್ಗ್ರೌಂಡ್ಸ್ ಹೆಸರಿನಲ್ಲಿ ಪಬ್ಜಿ ಮರಳಿಬರುತ್ತಿದೆ. ಇದ್ರೊಂದಿಗೆ ಧೋನಿ ಶೂಟಿಂಗ್ ಗೇಮ್ ಅಖಾಡಕ್ಕೆ ಮತ್ತೆ ಎಂಟ್ರಿಕೊಟ್ರು ಅಚ್ಚರಿಯಿಲ್ಲ.