[yop_poll id=”1″]
ಈ ಎರಡು ಟೀಮುಗಳ ನಡವಿನ ಹಣಾಹಣಿಯನ್ನು ನೋಡಿದ್ದೇಯಾದಲ್ಲಿ ಮುಂಬೈ ಪ್ರಾಬಲ್ಯ ಮೆರೆದಿದೆ. ಇದುವರೆಗೆ ಆಡಿರುವ 25 ಪಂದ್ಯಗಳಲ್ಲಿ ಮುಂಬೈ 16 ಬಾರಿ ಜಯ ಸಾಧಿಸಿದ್ದರೆ, ಬೆಂಗಳೂರು ಕೇವಲ 9 ಸಲ ಮಾತ್ರ ಗೆದ್ದಿದೆ. ಕಳೆದ 5 ಪಂದ್ಯಗಳ ಫಲಿತಾಂಶವನ್ನು ಗಮನಿಸಿದಾಗ್ಯೂ ಮುಂಬೈನ ಮೇಲುಗಾರಿಕೆ ನಿಚ್ಚಳವಾಗಿ ಗೊತ್ತಾಗುತ್ತದೆ. ಆ ಮ್ಯಾಚ್ಗಳ ಪೈಕಿ 4ರಲ್ಲಿ ಭಾರತದ ವಾಣಿಜ್ಯ ರಾಜಧಾನಿ ಜಯಭೇರಿ ಬಾರಿಸಿದೆ. ಆದರೆ ಮುಂಬೈನ ಮೇಲುಗೈ ಹೊರತಾಗಿಯೂ ಈ ತಂಡಗಳ ನಡುವಿನ ಸೆಣಸಾಟ ಮೈನವಿರೇಳಿಸುತ್ತದೆ.
ಇದನ್ನೂ ಓದಿ: IPL 2020: RCB vs MI Live Score
ಹಾಗೆ ನೋಡಿದರೆ, ಕೊಹ್ಲಿ, ಮುಂಬೈ ವಿರುದ್ಧ ಆಡುವಾಗಲೆಲ್ಲ ವಿಜೃಂಭಿಸುತ್ತಾರೆ. ಇದಕ್ಕೆ ಸಾಕ್ಷಿಯೆಂದರೆ ಅವರು ಗಳಿಸಿರುವ 683 ರನ್ಗಳು. ಮುಂಬೈ ಪರ ಕೈರನ್ ಪೊಲ್ಲಾರ್ಡ್ (475) ಅತಿ ಹೆಚ್ಚು ರನ್ ಗಳಿಸಿದ್ದಾರೆ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ, ಮುಂಬೈನ ಯಾವುದೇ ಬ್ಯಾಟ್ಸ್ಮನ್ ಇದುವರೆಗೆ ಬೆಂಗಳೂರು ವಿರುದ್ಧ ಶತಕ ಬಾರಿಸಿಲ್ಲ. ರೋಹಿತ್ 2018 ಐಪಿಎಲ್ನಲ್ಲಿ ಬಾರಿಸಿದ 94 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಬೌಲರ್ಗಳ ಸಾಧನೆ ನೋಡುವುದಾದರೆ, 12 ವಿಕೆಟ್ ಪಡೆದಿರುವ ವಿನಯ್ ಕು
ಇವೆರಡು ತಂಡಗಳ ನಡುವೆ ಪಂದ್ಯವೊಂದರಲ್ಲಿ ಗಳಿಸಿದ ಗರಿಷ್ಠ ಮೊತ್ತ (235/1) ಬೆಂಗಳೂರಿನ ಹೆಸರಲ್ಲಿದೆ. ಮುಂಬೈನ ಗರಿಷ್ಠ ಸ್ಕೋರ್ 213/6. ಅತ್ಯುತ್ತಮ ಬೌಲಿಂಗ್ ಸಾಧನೆ ಬೆಂಗಳೂರು ಪರ ಸ್ಯಾಮುವೆಲ್ ಬದ್ರಿ
ನಿಸ್ಸಂದೇಹವಾಗಿ ಬೆಂಗಳೂರು, ವೇಗದ ಬೌಲರ್ಗಳ ವೈಫಲ್ಯದಿಂದ ಕಂಗೆಟ್ಟಿದೆ. ಡೇಲ್ ಸ್ಟೀನ್ ತಮ್ಮ ಖ್ಯಾತಿಗೆ ತಕ್ಕ ಬೌಲಿಂಗ್ ಮಾಡುತ್ತಿಲ್ಲ. ಉಮೇಶ್ ಯಾದವ್ ಮೊದಲಿನ ಎರಡು ಪಂದ್ಯಗಳಲ್ಲೂ ವಿಫಲರಾದರು. ಇವರಿಬ್ಬರು ಇವತ್ತಿನ ಪಂದ್ಯದಲ್ಲಿ ಆಡುವುದು ಅನುಮಾನ. ಯಾದವ್ ಜಾಗಕ್ಕೆ ಮೊಹಮ್ಮದ್ ಸಿರಾಜ್, ಮತ್ತು ಸ್ಟೀನ್ ಸ್ಥಾನದಲ್ಲಿ ಕ್ರಿಸ್ ಮೊರಿಸ್ ಬರಬಹುದು. ಆಲ್ರೌಂಡರ್ ಶಿವಮ್ ದುಬೆ ಸಹ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ಜಾಗಕ್ಕೆ ಮೋಯಿನ್ ಅಲಿಯನ್ನು ಆಡಿಸುವ ನಿರೀಕ್ಷೆಯಿದೆ. ಬ್ಯಾಟಿಂಗ್ ಲೈನ್ಅಪ್ನಲ್ಲಿ ಯಾವುದೇ ಬದಲಾವಣೆ ಮಾಡಲಿಕ್ಕಿಲ್ಲ.
ಅತ್ತ ರೋಹಿತ್, ತಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಿಕ್ಕಲ್ಲ. ಬಿರುಸಿನ ಹೊಡೆತಗಳನ್ನಾಡುವ ಯುವ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಷನ್, ಓವರ್ಸೀಸ್ ಆಟಗಾರ ಕ್ವಿಂಟನ್ ಡಿ ಕಾಕ್ ಚೆನ್ನಾಗಿ ಆಡುತ್ತಿರುವುದರಿಂದ ಇವತ್ತು ಸಹ ಬೆಂಚ್ ಕಾಯಿಸಬೇಕಾಗಬಹುದು. ಸೌರಭ್ ತಿವಾರಿ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಕಾಂಟ್ರಿಬ್ಯೂಷನ್ಗಳನ್ನು ನೀಡುತ್ತಿದ್ದಾರೆ. ಬೌಲಿಂಗ್ ಯುನಿಟ್ನಲ್ಲೂ ಉಲ್ಲೇಖಿಸುವಂಥ ಸಮಸ್ಯೆಗಳು ಕಾಣುತ್ತಿಲ್ಲ.
Published On - 3:54 pm, Mon, 28 September 20