ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರ ವೃತ್ತಿಜೀವನವು ಏರಿಳಿತಗಳಿಂದ ತುಂಬಿದೆ. ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಆರಂಭದ ನಂತರ ಅವರನ್ನು ಮ್ಯಾಚ್ ಫಿಕ್ಸಿಂಗ್ ಆರೋಪದಡಿ ತಂಡದಿಂದ ನಿಷೇಧಿಸಲಾಯಿತು. ಶಿಕ್ಷೆಯ ಬಳಿಕ ತಂಡಕ್ಕೆ ಮರಳಿದರಾದರೂ ಅವರಿಗೆ ಉತ್ತಮ ಅವಕಾಶ ದೊರೆಯಲಿಲ್ಲ. ಹೀಗಾಗಿ 29 ನೇ ವಯಸ್ಸಿನಲ್ಲಿ ಮೊಹಮ್ಮದ್ ಅಮೀರ್ ನಿವೃತ್ತಿ ಘೋಷಿಸಿದರು. ಈ ಸಮಯದಲ್ಲಿ, ಅವರು ಪಿಸಿಬಿಯ ಮೇಲೆ ಅನೇಕ ಗಂಭೀರ ಆರೋಪಗಳನ್ನು ಸಹ ಮಾಡಿದರು. ಅಮೀರ್ ಈಗ ಇತರ ಮಾರ್ಗಗಳ ಮೂಲಕ ಕ್ರಿಕೆಟ್‌ಗೆ ಮರಳಲು ನೋಡುತ್ತಿದ್ದಾರೆ. ನಿವೃತ್ತಿಯಾದಾಗಿನಿಂದ, ಅಮೀರ್ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಅಲ್ಲಿ ಪೌರತ್ವವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ಇದು ಸಂಭವಿಸಿದಲ್ಲಿ, ಆತನನ್ನು ಐಪಿಎಲ್‌ನಲ್ಲೂ ಕಾಣಬಹುದು.
ಸೋಮವಾರ ಅವರು ತಮ್ಮ ಪ್ರೀತಿಯ ದೇಶಕ್ಕಾಗಿ ಆಡುವುದರಿಂದ ನಿವೃತ್ತರಾಗುವುದು ಸುಲಭದ ಹೆಜ್ಜೆಯಲ್ಲ ಎಂದು ಹೇಳಿದರು. ನಾನು ಈ ನಿರ್ಧಾರದ ಬಗ್ಗೆ ಸಾಕಷ್ಟು ಯೋಚಿಸಿದೆ ಮತ್ತು ನನ್ನ ಆತ್ಮೀಯರೊಂದಿಗೆ ಮಾತನಾಡಿದ್ದೇನೆ. ಅದರ ನಂತರವೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದರು. ಜೊತೆಗೆ ನಾನು ಪಾಕ್ ಪರ ಆಡುವ ನನಗೆ ಸರಿಯಾದ ಸ್ಥಾನಮಾನ ಸಿಗಲಿಲ್ಲ. ಜೊತೆಗೆ ಆಡಳಿತ ಮಂಡಳಿಯಿಂದ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಅಮೀರ್ ಪಾಕ್ ಮಂಡಳಿಯನ್ನು ದೋಷಿಸಿದರು. ಆದರೆ ಕ್ರಿಕೆಟ್ ಪಂಡಿತರು ಅಮೀರ್ ತಮ್ಮ ದೇಶಕ್ಕಾಗಿ ಆಡುವ ಬದಲು ಫ್ರ್ಯಾಂಚೈಸ್ ಲೀಗ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರಿಂದ ನಿವೃತ್ತಿ ಘೋಷಿಸಿದ್ದಾರೆ ಎಂಬ ಅಭಿಪ್ರಾಯಪಟ್ಟಿದ್ದಾರೆ.
ಮೊಹಮ್ಮದ್ ಅಮೀರ್ 6-7 ವರ್ಷಗಳ ಕಾಲ ಕ್ರಿಕೆಟ್
ಮುಂದಿನ 6-7 ವರ್ಷಗಳ ಕಾಲ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ. ನಾನು ಇಂಗ್ಲೆಂಡ್‌ನಲ್ಲಿ ದೀರ್ಘಕಾಲ ಇರಲಿದ್ದೇನೆ. ನಾನು ಇಲ್ಲಿ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೇನೆ ಮತ್ತು ಮುಂದಿನ 6-7 ವರ್ಷಗಳವರೆಗೆ ಹೆಚ್ಚು ಆಡಲು ಬಯಸುತ್ತೇನೆ ಎಂದರು. ನನ್ನ ಮಕ್ಕಳು ಇಂಗ್ಲೆಂಡ್‌ನಲ್ಲಿ ಬೆಳೆಯುತ್ತಿದ್ದಾರೆ. ಅಲ್ಲದೆ ಇಲ್ಲಿಯೇ ತಮ್ಮ ವಿಧ್ಯಾಭ್ಯಾಸವನ್ನು ನಡೆಸಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನಾನು ಇಲ್ಲಿ ಹೆಚ್ಚು ಕಾಲ ಇರುತ್ತೇನೆ. ಅದರಲ್ಲಿ ಯಾವುದೇ ಸಂದೇಶವಿಲ್ಲ ಎಂದರು. ಮುಂದಿನ ದಿನಗಳಲ್ಲಿ ನಾನು ಯಾವ ಅವಕಾಶಗಳನ್ನು ಪಡೆಯುತ್ತೇನೆ ಮತ್ತು ಭವಿಷ್ಯದಲ್ಲಿ ಬ್ರಿಟಿಷ್ ಪೌರತ್ವ ಪಡೆದಾಗ ಯಾವ ಸಾಧ್ಯತೆಗಳು ಉದ್ಭವಿಸುತ್ತವೆ ಎಂಬುದರ ಕುರಿತು ನಾನು ಈಗ ಯೋಚಿಸಿಲ್ಲ ಎಂದರು.
ಐಪಿಎಲ್ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ
ಪಾಕಿಸ್ತಾನದ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶವಿಲ್ಲ, ಆದ್ದರಿಂದ ಅಮೀರ್ ಬ್ರಿಟಿಷ್ ಪೌರತ್ವ ಪಡೆದರೆ, ಅವರನ್ನು ಐಪಿಎಲ್ ಆಡಲು ಅರ್ಹರೆಂದು ಪರಿಗಣಿಸಲಾಗುತ್ತದೆ. ಐಪಿಎಲ್ ಆಡುವ ಪ್ರಶ್ನೆಗೆ, ನಾನು ಇನ್ನೂ ಭವಿಷ್ಯದ ಯೋಜನೆಗಳ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು. ಒಮ್ಮೆ ನಾನು ಇಲ್ಲಿ ಪೌರತ್ವ ಪಡೆದರೆ, ವಿಷಯಗಳು ಬದಲಾಗುತ್ತವೆ. ಪಾಕಿಸ್ತಾನ ಪರ 36 ಟೆಸ್ಟ್ ಪಂದ್ಯಗಳ ಹೊರತಾಗಿ ಅಮೀರ್ 61 ಏಕದಿನ ಮತ್ತು 50 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 81 ಮತ್ತು ಟಿ 20 ಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಅಮೀರ್ ಕೊನೆಯ ಬಾರಿಗೆ 2019 ರಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು.
ಇದನ್ನೂ ಓದಿ:ಪಾಕ್ ಆಟಗಾರರಿಗಿಂತ ಭಾರತೀಯ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಉತ್ತಮರು; ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್