ಕಸರತ್ತು ಆರಂಭಿಸಿದ ಮೊಹಮ್ಮದ್ ಶಮಿ: ಇಲ್ಲಿದೆ ವಿಡಿಯೋ ಝಲಕ್

ಕಸರತ್ತು ಆರಂಭಿಸಿದ ಮೊಹಮ್ಮದ್ ಶಮಿ: ಇಲ್ಲಿದೆ ವಿಡಿಯೋ ಝಲಕ್

ಝಾಹಿರ್ ಯೂಸುಫ್
|

Updated on:Aug 20, 2024 | 2:34 PM

Mohammed Shami: 2023ರ ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಮೊಹಮ್ಮದ್ ಶಮಿ ಸಂಚಲನ ಸೃಷ್ಟಿಸಿದ್ದರು. 7 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಶಮಿ ಒಟ್ಟು 24 ವಿಕೆಟ್ ಕಬಳಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆದರೆ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಶಮಿ ಟೀಮ್ ಇಂಡಿಯಾ ಪರ ಮತ್ತೆ ಕಣಕ್ಕಿಳಿದಿಲ್ಲ.

ಟೀಮ್ ಇಂಡಿಯಾ ಮೊಹಮ್ಮದ್ ಶಮಿ ಮೈದಾನದಿಂದ ಹೊರಗುಳಿದು 7 ತಿಂಗಳುಗಳೇ ಕಳೆದಿವೆ. ಏಕದಿನ ವಿಶ್ವಕಪ್ ವೇಳೆ ಪಾದದ ನೋವಿಗೆ ಒಳಗಾಗಿದ್ದ ಶಮಿ ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಐಪಿಎಲ್ 2024 ರಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಶಮಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕಸರತ್ತು ಆರಂಭಿಸಿದ್ದಾರೆ.

ಎನ್​​ಸಿಎ ನಲ್ಲಿ ರಿಹ್ಯಾಬ್​ ನಡೆಸುತ್ತಿರುವ ಮೊಹಮ್ಮದ್ ಶಮಿ ಮುಂಬರುವ ಬಾಂಗ್ಲಾದೇಶ್ ವಿರುದ್ಧದ ಸರಣಿಗೂ ಅಲಭ್ಯರಾಗಲಿದ್ದಾರೆ. ಏಕೆಂದರೆ ದುಲೀಪ್ ಟ್ರೋಫಿ ಟೂರ್ನಿಗೆ ಪ್ರಕಟಿಸಲಾದ ತಂಡದಲ್ಲಿ ಶಮಿ ಹೆಸರು ಕಾಣಿಸಿಕೊಂಡಿಲ್ಲ. ಹೀಗಾಗಿ ಟೀಮ್ ಇಂಡಿಯಾಗೆ ಅವರ ಕಂಬ್ಯಾಕ್ ಮತ್ತಷ್ಟು ವಿಳಂಬವಾಗಲಿದೆ.

ಇದಾಗ್ಯೂ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಜಯ್ ಶಾ ಖಚಿತಪಡಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಬೇಕಿದೆ. ಇದಕ್ಕಾಗಿ ಇದೀಗ ಕಸರತ್ತನ್ನು ಆರಂಭಿಸಿರುವ ಶಮಿ ಮುಂಬರುವ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಅಕ್ಟೋಬರ್​ನಲ್ಲಿ ನಡೆಯಲಿರುವ ರಣಜಿ ಟ್ರೋಫಿಯಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಬೌಲಿಂಗ್ ಮಾಡಲು ಯಶಸ್ವಿಯಾದರೆ, ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿಯೇ ಇದೀಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಶಮಿ ಬೆವರಿಳಿಸುತ್ತಿದ್ದಾರೆ.

 

Published on: Aug 20, 2024 02:33 PM