AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಓವರ್​ಗಳಲ್ಲಿ 60 ರನ್ ನೀಡಿದ ಡಚ್ ವೇಗಿ..!

Logan Van Beek: ನೆದರ್​ಲೆಂಡ್ಸ್ ಪರ 33 ಏಕದಿನ ಪಂದ್ಯಗಳನ್ನಾಡಿರುವ ಲೋಗನ್ ವ್ಯಾನ್ ಬೀಕ್ ಒಟ್ಟು 46 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ 30 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 36 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಇದೀಗ ಕೆರಿಬಿಯನ್ ದ್ವೀಪದಲ್ಲಿ ಟಿ10 ಲೀಗ್ ಆಡುತ್ತಿರುವ ಡಚ್ ಆಟಗಾರ 60 ರನ್​ಗಳನ್ನು ಬಿಟ್ಟುಕೊಡುವ ಮೂಲಕ ಸುದ್ದಿಯಾಗಿದ್ದಾರೆ.

2 ಓವರ್​ಗಳಲ್ಲಿ 60 ರನ್ ನೀಡಿದ ಡಚ್ ವೇಗಿ..!
Logan Van Beek
ಝಾಹಿರ್ ಯೂಸುಫ್
|

Updated on: Aug 20, 2024 | 1:04 PM

Share

ಒಂದೇ ಓವರ್​ನಲ್ಲಿ 36 ರನ್ ಬಾರಿಸಿದ ಬ್ಯಾಟರ್​ಗಳ ಬಗ್ಗೆ ಕೇಳಿರುತ್ತೀರಿ… ಆದರೆ ಇಲ್ಲೊಬ್ಬರು ಬೌಲರ್​ ಎರಡು ಓವರ್​ಗಳಲ್ಲಿ 60 ರನ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅದು ಕೂಡ ಅಂತಾರಾಷ್ಟ್ರೀಯ ಕ್ರಿಕೆಟರ್ ಎಂಬುದು ವಿಶೇಷ. ವೆಸ್ಟ್ ಇಂಡೀಸ್​ನ ಕೇಮನ್ ಐಲ್ಯಾಂಡ್​ನಲ್ಲಿ ನಡೆಯುತ್ತಿರುವ ಮ್ಯಾಕ್ಸ್​60 ಟಿ10 ಲೀಗ್​ನಲ್ಲಿ ನೆದರ್​ಲೆಂಡ್ಸ್ ಬೌಲರ್ ಲೋಗನ್ ವ್ಯಾನ್ ಬೀಕ್ ಬರೋಬ್ಬರಿ 60 ರನ್​ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದು ಸಹ 12 ಎಸೆತಗಳಲ್ಲಿ ಎಂಬುದೇ ಅಚ್ಚರಿ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆರಿಬಿಯನ್ ಟೈಗರ್ಸ್ ತಂಡದ ಪರ ಜೋಶ್ ಬ್ರೌನ್ 23 ಎಸೆತಗಳಲ್ಲಿ 5 ಸಿಕ್ಸ್​ಗಳೊಂದಿಗೆ 56 ರನ್ ಚಚ್ಚಿದ್ದರು. ಇನ್ನು ನಿಕ್ ಹಾಬ್ಸನ್ 12 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 40 ರನ್ ಸಿಡಿಸಿದರು. ಈ ಇಬ್ಬರ ಸಿಡಿಲಬ್ಬರಕ್ಕೆ ಸಿಲುಕಿದ ಲೋಗನ್ ವ್ಯಾನ್ ಬೀಕ್ ಮೊದಲ ಓವರ್​ನಲ್ಲಿ 24 ರನ್ ನೀಡಿದ್ದರು.

ಇದಾದ ಬಳಿಕ ಮತ್ತೆ ದಾಳಿಗಿಳಿದ ಲೋಗನ್ ವ್ಯಾನ್ ಬೀಕ್ ಮೂರು ಸಿಕ್ಸ್, ಮೂರು ಫೋರ್, ಎರಡು ನೋ ಬಾಲ್, ಒಂದು ವೈಡ್, ನಾಲ್ಕು ರನ್ ಸಹಿತ ಒಟ್ಟು 36 ರನ್​ಗಳನ್ನು ನೀಡಿದರು. ಈ ಮೂಲಕ ಕೇವಲ 2 ಓವರ್​ಗಳಲ್ಲಿ 60 ರನ್​ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಕೆರಿಬಿಯನ್ ಟೈಗರ್ಸ್ ತಂಡವು 10 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಗ್ರಾಂಡ್ ಕೇಮನ್ ಜಾಗ್ವಾರ್ಸ್ ತಂಡವು 10 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 88 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೆರಿಬಿಯನ್ ಟೈಗರ್ಸ್ ತಂಡವು 65 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಇದಕ್ಕೂ ಮುನ್ನ ಲೋಗನ್ ವ್ಯಾನ್ ಬೀಕ್ ನ್ಯೂಝಿಲೆಂಡ್​ನಲ್ಲಿ ನಡೆದ ಸೂಪರ್ ಸ್ಮ್ಯಾಶ್ ಟಿ20 ಲೀಗ್​ನಲ್ಲಿ 5 ಎಸೆತಗಳಲ್ಲಿ 33 ರನ್ ನೀಡಿ ಸುದ್ದಿಯಾಗಿದ್ದರು. ಈ ಪಂದ್ಯದ ಕೊನೆಯ 4 ಓವರ್​ಗಳಲ್ಲಿ 33 ರನ್​ಗಳು ಬೇಕಿತ್ತು. ಈ ವೇಳೆ ದಾಳಿಗಿಳಿದ ವ್ಯಾನ್ ಬೀಕ್ 33 ರನ್​ಗಳನ್ನು ನೀಡುವ ಮೂಲಕ ವೆಲ್ಲಿಂಗ್ಟನ್ ತಂಡದ ಸೋಲಿಗೆ ಕಾರಣರಾಗಿದ್ದರು. ಇದೀಗ ಮತ್ತೆ 60 ರನ್​ಗಳೊಂದಿಗೆ ವ್ಯಾನ್ ಬೀಕ್ ಹೆಸರು ಮುನ್ನಲೆಗೆ ಬಂದಿದೆ.

ಇದನ್ನೂ ಓದಿ: IPL 2025: LSG ತಂಡಕ್ಕೆ ಝಹೀರ್ ಖಾನ್..?

ಅಂದಹಾಗೆ ಲೋಗನ್ ವ್ಯಾನ್ ಬೀಕ್ ನೆದರ್​ಲೆಂಡ್ಸ್ ತಂಡದ ಖಾಯಂ ಸದಸ್ಯ. ಈಗಾಗಲೇ 33 ಏಕದಿನ ಪಂದ್ಯಗಳನ್ನಾಡಿರುವ ಅವರು 46 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 30 ಟಿ20 ಪಂದ್ಯಗಳಿಂದ 36 ವಿಕೆಟ್ ಉರುಳಿಸಿದ್ದಾರೆ. ಇನ್ನು ನೆದರ್​ಲೆಂಡ್ಸ್ ಪರ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಆಡಿದ ಆಟಗಾರರಲ್ಲಿ ಲೋಗನ್ ವ್ಯಾನ್ ಬೀಕ್ ಕೂಡ ಒಬ್ಬರು. ಆದರೀಗ ಕೇವಲ 12 ಎಸೆತಗಳಲ್ಲಿ 60 ರನ್ ನೀಡುವ ಮೂಲಕ ಸುದ್ದಿಯಾಗಿದ್ದು ಮಾತ್ರ ವಿಪರ್ಯಾಸ.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ