AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 5 ಎಸೆತಗಳಲ್ಲಿ 33 ರನ್ ನೀಡಿದ ಲೋಗನ್ ವ್ಯಾನ್ ಬೀಕ್..!

Logan van beek: 16ನೇ ಓವರ್​ನ ಮೊದಲ ಎಸೆತದಲ್ಲೇ ವ್ಯಾನ್ ಬೀಕ್ ವೈಡ್ ಎಸೆದರು. ಚೆಂಡು ವಿಕೆಟ್​ ಕೀಪರ್ ಅನ್ನು ವಂಚಿಸಿ ಬೌಂಡರಿ ಲೈನ್ ದಾಟಿತು. ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡಕ್ಕೆ ಅತಿರಿಕ್ತ 5 ರನ್​ಗಳು ಲಭಿಸಿದವು. ಮರು ಎಸೆತದಲ್ಲಿ ಬ್ರೇಸ್​ವೆಲ್ 1 ರನ್ ಕಲೆಹಾಕಿದರು. ಇನ್ನು 2ನೇ ಎಸೆತದಲ್ಲಿ ಟಾಮ್ ಬ್ರೂಸ್ 1 ರನ್ ಓಡಿದರು.

ಕೇವಲ 5 ಎಸೆತಗಳಲ್ಲಿ 33 ರನ್ ನೀಡಿದ ಲೋಗನ್ ವ್ಯಾನ್ ಬೀಕ್..!
Logan van beek
TV9 Web
| Edited By: |

Updated on: Jan 14, 2024 | 11:29 AM

Share

ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ (Super Smash 2024) ಟಿ20 ಲೀಗ್​ನ 22ನೇ ಪಂದ್ಯದಲ್ಲಿ ಲೋಗನ್ ವ್ಯಾನ್ ಬೀಕ್ ಒಂದೇ ಓವರ್​ನಲ್ಲಿ ಬರೋಬ್ಬರಿ 33 ರನ್ ನೀಡಿದ್ದಾರೆ. ಸೆಂಟ್ರಲ್ ಡಿಸ್ಟ್ರಿಕ್ಟ್ಸ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಲ್ಲಿಂಗ್ಟನ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ನಿರೀಕ್ಷಿತ ಆರಂಭ ಪಡೆಯಲು ವೆಲ್ಲಿಂಗ್ಟನ್ ತಂಡಕ್ಕೆ ಸಾಧ್ಯವಾಗಿರಲಿಲ್ಲ.

ಕೇವಲ 72 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೆಲ್ಲಿಂಗ್ಟನ್ ತಂಡಕ್ಕೆ ಮುಹಮ್ಮದ್ ಅಬ್ಬಾಸ್ (35) ಆಸರೆಯಾದರು. ಹಾಗೆಯೇ ಕೊನೆಯ ಓವರ್​ಗಳ ವೇಳೆ ಅಬ್ಬರಿಸಿದ ಲೋಗನ್ ವ್ಯಾನ್ ಬೀಕ್ 24 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ 41 ರನ್ ಬಾರಿಸಿದರು. ಈ ಮೂಲಕ ವೆಲ್ಲಿಂಗ್ಟನ್ ತಂಡವು 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.

148 ರನ್​ಗಳ ಗುರಿ ಬೆನ್ನತ್ತಿದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್​ ತಂಡವು 16 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 115 ರನ್ ರನ್​ಗಳಿಸಿತು. ಅಂತಿಮ 30 ಎಸೆತಗಳಲ್ಲಿ 33 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ವ್ಯಾನ್ ಬೀಕ್ ದುಬಾರಿಯಾದರು.

33 ರನ್ ನೀಡಿದ ವ್ಯಾನ್ ಬೀಕ್:

17ನೇ ಓವರ್​ನ ಮೊದಲ ಎಸೆತದಲ್ಲೇ ವ್ಯಾನ್ ಬೀಕ್ ವೈಡ್ ಎಸೆದರು. ಚೆಂಡು ವಿಕೆಟ್​ ಕೀಪರ್ ಅನ್ನು ವಂಚಿಸಿ ಬೌಂಡರಿ ಲೈನ್ ದಾಟಿತು. ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡಕ್ಕೆ ಅತಿರಿಕ್ತ 5 ರನ್​ಗಳು ಲಭಿಸಿದವು. ಮರು ಎಸೆತದಲ್ಲಿ ಬ್ರೇಸ್​ವೆಲ್ 1 ರನ್ ಕಲೆಹಾಕಿದರು. ಇನ್ನು 2ನೇ ಎಸೆತದಲ್ಲಿ ಟಾಮ್ ಬ್ರೂಸ್ 1 ರನ್ ಓಡಿದರು.

3ನೇ ಎಸೆತ ವೈಡ್. ನೋ ಬಾಲ್ ಆಗಿದ್ದ ಮರು ಎಸೆತದಲ್ಲಿ ಬ್ರೇಸ್​ವೆಲ್ ಭರ್ಜರಿ ಸಿಕ್ಸ್ ಸಿಡಿಸಿದರು. ಫ್ರೀ ಹಿಟ್​ ಎಸೆತದಲ್ಲಿ ಲಾಂಗ್ ಆಫ್​ನತ್ತ ಸಿಕ್ಸರ್ ಬಾರಿಸಿದರು. 4ನೇ ಎಸೆತದಲ್ಲಿ ಬ್ರೇಸ್​ವೆಲ್ ಬ್ಯಾಟ್​ನಿಂದ ಡೀಪ್ ಮಿಡ್​ ವಿಕೆಟ್​ನತ್ತ ಮತ್ತೊಂದು ಸಿಕ್ಸ್​. 5ನೇ ಎಸೆತದಲ್ಲಿ ಫೈನ್ ಲೆಗ್​ನತ್ತ ಸಿಕ್ಸ್ ಬಾರಿಸುವ ಮೂಲಕ ಬ್ರೇಸ್​ವೆಲ್ ತಂಡಕ್ಕೆ ಜಯ ತಂದುಕೊಟ್ಟರು.

ಇದರೊಂದಿಗೆ ಕೇವಲ 5 ಎಸೆತಗಳಲ್ಲಿ 33 ರನ್ ನೀಡಿದ ಕಳಪೆ ದಾಖಲೆಯೊಂದು ಲೋಗನ್ ವ್ಯಾನ್ ಬೀಕ್ ಹೆಸರಿಗೆ ಸೇರ್ಪಡೆಯಾಯಿತು. ಹಾಗೆಯೇ ಈ ಬಾರಿಯ ಸೂಪರ್ ಸ್ಮ್ಯಾಶ್ ಲೀಗ್​ನ ಅತ್ಯಂತ ಕಳಪೆ ಬೌಲಿಂಗ್ ದಾಖಲೆ ಕೂಡ ಲೋಗನ್ ಪಾಲಾಯಿತು.

ವೆಲ್ಲಿಂಗ್ಟನ್ ಪ್ಲೇಯಿಂಗ್ 11: ನಿಕ್ ಗ್ರೀನ್‌ವುಡ್ , ಟ್ರಾಯ್ ಜಾನ್ಸನ್ , ನಿಕ್ ಕೆಲ್ಲಿ (ನಾಯಕ) , ಮುಹಮ್ಮದ್ ಅಬ್ಬಾಸ್ , ಜೆಸ್ಸಿ ತಾಷ್‌ಕಾಫ್ , ಕ್ಯಾಲಮ್ ಮೆಕ್‌ಲಾಚ್ಲಾನ್ (ವಿಕೆಟ್ ಕೀಪರ್) , ನಾಥನ್ ಸ್ಮಿತ್ , ಲೋಗನ್ ವ್ಯಾನ್ ಬೀಕ್ , ಪೀಟರ್ ಯಂಗ್‌ಹಸ್‌ಬಂಡ್ , ಇಯಾನ್ ಮ್ಯಾಕ್‌ಪೀಕ್ , ಮೈಕೆಲ್ ಸ್ನೆಡೆನ್.

ಇದನ್ನೂ ಓದಿ: ಈ IPL ನಲ್ಲೂ RCBಗೆ ಸೋಲು: SRH ವಿನ್ನರ್..!

ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪ್ಲೇಯಿಂಗ್ 11: ವಿಲ್ ಯಂಗ್ , ಜ್ಯಾಕ್ ಬೋಯ್ಲ್ , ಡೇನ್ ಕ್ಲೀವರ್ (ವಿಕೆಟ್ ಕೀಪರ್) , ಟಾಮ್ ಬ್ರೂಸ್ (ನಾಯಕ) , ಡೌಗ್ ಬ್ರೇಸ್ವೆಲ್ , ವಿಲಿಯಂ ಕ್ಲಾರ್ಕ್ , ಬೆವನ್ ಸ್ಮಾಲ್ , ಜೋಯ್ ಫೀಲ್ಡ್ , ಅಜಾಜ್ ಪಟೇಲ್ , ಬ್ಲೇರ್ ಟಿಕ್ನರ್ , ಜೇಡನ್ ಲೆನಾಕ್ಸ್.

Follow Us
TV9 Web
TV9 Web

TV9 Kannada

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ