VIDEO: ಇದು ಕ್ರಿಕೆಟ್ ಇತಿಹಾಸದ ಅತ್ಯದ್ಭುತ​ ಕ್ಯಾಚ್..!

Troy Johnson: ಚೆಂಡು ಇನ್ನೇನು ಬೌಂಡರಿ ಗೆರೆ ದಾಟಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ 30 ಯಾರ್ಡ್ ಸರ್ಕಲ್​ನಿಂದ ಓಡಿ ಬಂದ ಟ್ರಾಯ್ ಜಾನ್ಸನ್ ಎಲ್ಲರನ್ನು ನಿಬ್ಬೆರಗಾಗಿಸುವ ಫೀಲ್ಡಿಂಗ್ ಮಾಡಿದರು. ಇದೀಗ ಜಾನ್ಸನ್ ಅವರ ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VIDEO: ಇದು ಕ್ರಿಕೆಟ್ ಇತಿಹಾಸದ ಅತ್ಯದ್ಭುತ​ ಕ್ಯಾಚ್..!
Troy Johnson
Follow us
| Updated By: ಝಾಹಿರ್ ಯೂಸುಫ್

Updated on: Jan 14, 2024 | 8:30 AM

ಕ್ರಿಕೆಟ್ ಅಂಗಳದಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂತಹದೊಂದು ಅದ್ಭುತ ಕ್ಯಾಚ್​ಗೆ ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ (Super Smash 2024) ಟಿ20 ಲೀಗ್ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ವೆಲ್ಲಿಂಗ್ಟನ್ ಹಾಗೂ ಸೆಂಟ್ರಲ್ ಡಿಸ್ಟ್ರಿಕ್ಟ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ವೆಲ್ಲಿಂಗ್ಟನ್ ತಂಡವು ಮೊದಲು ಬ್ಯಾಟ್ ಮಾಡಿತು. ಅದರಂತೆ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.

148 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪರ ವಿಲ್ ಯಂಗ್ ಹಾಗೂ ಜಾಕ್ ಬೊಯೆಲ್ ಇನಿಂಗ್ಸ್ ಆರಂಭಿಸಿದರು. ಮೈಕೆಲ್ ಸ್ನೆಡೆನ್ ಎಸೆದ ಪಂದ್ಯದ 6ನೇ ಓವರ್​ನ 2ನೇ ಎಸೆತವನ್ನು ವಿಲ್ ಯಂಗ್ ನೇರವಾಗಿ ಬಾರಿಸಿದ್ದರು.

ಚೆಂಡು ಇನ್ನೇನು ಬೌಂಡರಿ ಗೆರೆ ದಾಟಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ 30 ಯಾರ್ಡ್ ಸರ್ಕಲ್​ನಿಂದ ಓಡಿ ಬಂದ ಟ್ರಾಯ್ ಜಾನ್ಸನ್ ಎಲ್ಲರನ್ನು ನಿಬ್ಬೆರಗಾಗಿಸುವ ಫೀಲ್ಡಿಂಗ್ ಮಾಡಿದರು.

ಇದನ್ನೂ ಓದಿ: ಈ IPL ನಲ್ಲೂ RCBಗೆ ಸೋಲು: SRH ವಿನ್ನರ್..!

ಆಕಾಶದತ್ತ ಚಿಮ್ಮಿದ ಚೆಂಡು ಇನ್ನೇನು ಬೌಂಡರಿ ಲೈನ್ ಬಳಿ ಬೀಳಲಿದೆ ಅನ್ನುವಷ್ಟರಲ್ಲಿ ಟ್ರಾಯ್ ಜಾನ್ಸನ್ ಅದ್ಭುತವಾಗಿ ಡೈವ್ ಹೊಡೆದರು. ಅಲ್ಲದೆ ಚೆಂಡನ್ನು ಬಂಧಿಸಿದರು. ಆದರೆ ಕ್ಷಣಾರ್ಧದಲ್ಲೇ ಅವರು ಬೌಂಡರಿ ಗೆರೆಯನ್ನು ದಾಟಲಿದ್ದೇನೆ ಎಂದರಿತು ಅವರು ಚೆಂಡನ್ನು ನಿಕ್ ಕೆಲ್ಲಿಗೆ ಎಸೆದರು. ಇತ್ತ ನಿಕ್ ಚೆಂಡನ್ನು ಹಿಡಿಯುವ ಮೂಲಕ ಕ್ಯಾಚ್ ಅನ್ನು ಪೂರ್ಣಗೊಳಿಸಿದರು.

ಕಣ್ಣು ಮಿಟುಕಿಸುವಷ್ಟರಲ್ಲಿ ಮುಗಿದ ಹೋದ ಈ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಟ್ರಾಯ್ ಜಾನ್ಸನ್ ಹಿಡಿದ ಈ ಕ್ಯಾಚ್ ಅನ್ನು ಕ್ರಿಕೆಟ್ ಇತಿಹಾಸದ ಅತ್ಯದ್ಭುತ ಕ್ಯಾಚ್​ಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದು ಎಲರನ್ನು ನಿಬ್ಬೆರಗಾಗಿಸಿ ಇದೀಗ ಟ್ರಾಯ್ ಜಾನ್ಸನ್ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.