ಹೀಗಾಗಿಯೇ ಝಹೀರ್ ಖಾನ್ ಅವರನ್ನು ಆಯ್ಕೆ ಮಾಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 2 ಹುದ್ದೆಗಳನ್ನು ಭರ್ತಿ ಮಾಡಲು ಪ್ಲ್ಯಾನ್ ರೂಪಿಸಿದೆ. ಅಂದರೆ ಅನುಭವಿ ಕ್ರಿಕೆಟಿಗನಾಗಿರುವ ಝಹೀರ್ ಖಾನ್ ಮೆಂಟರ್ ಆಗಿ ಬಂದರೆ, ಬೌಲಿಂಗ್ ಕೋಚ್ ಜವಾಬ್ದಾರಿಯನ್ನೂ ಸಹ ನಿರ್ವಹಿಸಲಿದ್ದಾರೆ. ಈ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಲಕ್ನೋ ಸೂಪರ್ ಜೈಂಟ್ಸ್ ಪ್ಲ್ಯಾನ್ ಮಾಡಿದೆ. ಆದರೆ ಈ ಬಿಗ್ ಆಫರ್ ಅನ್ನು ಝಹೀರ್ ಖಾನ್ ಸ್ವೀಕರಿಸಲಿದ್ದಾರಾ ಕಾದು ನೋಡಬೇಕಿದೆ.