AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಮಹಿಳಾ ಟಿ20 ವಿಶ್ವಕಪ್ UAEಗೆ ಶಿಫ್ಟ್

ICC Women's T20 World Cup 2024: ಬಾಂಗ್ಲಾದೇಶವು ಇತ್ತೀಚೆಗೆ ರಾಜಕೀಯ ಪ್ರಕ್ಷುಬ್ದತೆ ಸಾಕ್ಷಿಯಾಗಿತ್ತು. ಮೀಸಲಾತಿ ವಿರುದ್ಧ ಶುರುವಾದ ಪ್ರತಿಭಟನೆಯಿಂದಾಗಿ ಪ್ರಧಾನಿ ಶೇಖ್‌ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿದ್ದರು. ಆ ಬಳಿಕ ಕೂಡ ಹಿಂಸಾಚಾರ ಮುಂದುವರೆದಿದ್ದರಿಂದ ಬಾಂಗ್ಲಾದೇಶದಿಂದ ಮಹಿಳಾ ಟಿ20 ವಿಶ್ವಕಪ್ ಅನ್ನು ಸ್ಥಳಾಂತರಿಸುವಂತೆ ಕೆಲ ಕ್ರಿಕೆಟ್ ಮಂಡಳಿಗಳು ಆಗ್ರಹಿಸಿದ್ದವು. ಅದರಂತೆ ಇದೀಗ ವುಮೆನ್ಸ್ ಟಿ20 ವಿಶ್ವಕಪ್​ ಅನ್ನು ಯುಎಇ ಗೆ ಶಿಫ್ಟ್ ಮಾಡಲಾಗಿದೆ.

T20 World Cup 2024: ಮಹಿಳಾ ಟಿ20 ವಿಶ್ವಕಪ್ UAEಗೆ ಶಿಫ್ಟ್
Women's T20 World Cup 2024
ಝಾಹಿರ್ ಯೂಸುಫ್
|

Updated on: Aug 21, 2024 | 6:55 AM

Share

ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್​ ಅನ್ನು ಯುಎಇ ದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಮಂಗಳವಾರ ನಡೆದ ಐಸಿಸಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಅದರಂತೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್​ ಪಂದ್ಯಗಳಿಗೆ ದುಬೈ, ಶಾರ್ಜಾ ಸ್ಟೇಡಿಯಂಗಳು ಆತಿಥ್ಯವಹಿಸಲಿದೆ.

ಬಾಂಗ್ಲಾದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ಕಾರಣ ಟೂರ್ನಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇದಾಗ್ಯೂ ಆಯೋಜನೆಯ ಹಕ್ಕು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಬಳಿ ಇರಲಿದೆ. ಈ ಮೂಲಕ ಯುಎಇನಲ್ಲಿ 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಆಯೊಜಿಸಲು ಬಿಸಿಬಿಗೆ ಸೂಚಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರಧಾನ ಕಛೇರಿಯ ನೆಲೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ಗೆ ಗಮನಾರ್ಹ ಕೇಂದ್ರವಾಗಿದೆ. ಹಲವಾರು ಅರ್ಹತಾ ಪಂದ್ಯಾವಳಿಗಳನ್ನು ಮತ್ತು 2021ರ ಟಿ20 ವಿಶ್ವಕಪ್ ಅನ್ನು ಒಮಾನ್ ಮತ್ತು ಯುಎಇ ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್​ಗೆ 12 ತಂಡಗಳು ಫೈನಲ್​..!

ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಕಾರಣ ಮಹಿಳಾ ಟಿ20 ವಿಶ್ವಕಪ್ ಅನ್ನು ಸಹ ಯುಎಇ ನಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ಮಹಿಳಾ ಟಿ20 ವಿಶ್ವಕಪ್ ತಂಡಗಳು:

  • ಗುಂಪು ಎ : ಆಸ್ಟ್ರೇಲಿಯಾ, ಭಾರತ, ನ್ಯೂಝಿಲೆಂಡ್, ಪಾಕಿಸ್ತಾನ್, ಶ್ರೀಲಂಕಾ.
  • ಗುಂಪು ಬಿ : ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಸ್ಕಾಟ್ಲೆಂಡ್.

ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ:

  • ಗುರುವಾರ, 3 ಅಕ್ಟೋಬರ್ 2024:  ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ,  ಬಾಂಗ್ಲಾದೇಶ್ vs ಸ್ಕಾಟ್ಲೆಂಡ್
  • ಶುಕ್ರವಾರ, 4 ಅಕ್ಟೋಬರ್ 2024: ಆಸ್ಟ್ರೇಲಿಯಾ vs ಶ್ರೀಲಂಕಾ, ಭಾರತ vs ನ್ಯೂಝಿಲೆಂಡ್
  • ಶನಿವಾರ, 5 ಅಕ್ಟೋಬರ್ 2024: ಸೌತ್ ಆಫ್ರಿಕಾ vs ವೆಸ್ಟ್ ಇಂಡೀಸ್, ಬಾಂಗ್ಲಾದೇಶ್ vs ಇಂಗ್ಲೆಂಡ್
  • ಭಾನುವಾರ, 6 ಅಕ್ಟೋಬರ್ 2024: ನ್ಯೂಝಿಲೆಂಡ್ vs ಶ್ರೀಲಂಕಾ,  ಭಾರತ vs ಪಾಕಿಸ್ತಾನ್
  • ಸೋಮವಾರ, 7 ಅಕ್ಟೋಬರ್ 2024: ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್
  • ಮಂಗಳವಾರ, 8 ಅಕ್ಟೋಬರ್ 2024: ಆಸ್ಟ್ರೇಲಿಯಾ vs ಪಾಕಿಸ್ತಾನ್
  • ಬುಧವಾರ, 9 ಅಕ್ಟೋಬರ್ 2024: ಬಾಂಗ್ಲಾದೇಶ್ vs ವೆಸ್ಟ್ ಇಂಡೀಸ್,  ಭಾರತ vs ಶ್ರೀಲಂಕಾ
  • ಗುರುವಾರ, 10 ಅಕ್ಟೋಬರ್ 2024: ಸೌತ್ ಆಫ್ರಿಕಾ vs ಸ್ಕಾಟ್ಲೆಂಡ್
  • ಶುಕ್ರವಾರ, 11 ಅಕ್ಟೋಬರ್ 2024: ಆಸ್ಟ್ರೇಲಿಯಾ vs ನ್ಯೂಝಿಲೆಂಡ್, ಪಾಕಿಸ್ತಾನ್ vs ಶ್ರೀಲಂಕಾ
  • ಶನಿವಾರ, 12 ಅಕ್ಟೋಬರ್ 2024: ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ಬಾಂಗ್ಲಾದೇಶ್ vs ಸೌತ್ ಆಫ್ರಿಕಾ
  • ಭಾನುವಾರ, 13 ಅಕ್ಟೋಬರ್ 2024: ಪಾಕಿಸ್ತಾನ್ vs ನ್ಯೂಝಿಲೆಂಡ್,  ಭಾರತ vs ಆಸ್ಟ್ರೇಲಿಯಾ
  • ಸೋಮವಾರ, 14 ಅಕ್ಟೋಬರ್ 2024: ಇಂಗ್ಲೆಂಡ್ vs ಸ್ಕಾಟ್ಲೆಂಡ್
  • ಗುರುವಾರ, 17 ಅಕ್ಟೋಬರ್ 2024: ಮೊದಲ ಸೆಮಿ ಫೈನಲ್
  • ಶುಕ್ರವಾರ, 18 ಅಕ್ಟೋಬರ್ 2024: ದ್ವಿತೀಯ ಸೆಮಿ ಫೈನಲ್
  • ಭಾನುವಾರ, 20 ಅಕ್ಟೋಬರ್ 2024: ಫೈನಲ್