6,6,6,6,6: ತಾಹ ತೂಫಾನ್ಗೆ ಶಿವಮೊಗ್ಗ ಲಯನ್ಸ್ ತತ್ತರ
Maharaja Trophy 2024: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿದೆ. ಮಂಗಳೂರು ಡ್ರಾಗನ್ಸ್ ವಿರುದ್ಧ 15 ರನ್ಗಳ ಜಯ ಸಾಧಿಸಿದ್ದ ಹುಬ್ಬಳ್ಳಿ ಟೈಗರ್ಸ್ ಆ ಬಳಿಕ ಮೈಸೂರು ವಾರಿಯರ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿತ್ತು. ಇನ್ನು ಬೆಂಗಳೂರು ಬ್ಲಾಸ್ಟರ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿದರೆ, ಶಿವಮೊಗ್ಗ ಲಯನ್ಸ್ ತಂಡವನ್ನು 8 ವಿಕೆಟ್ಗಳಿಂದ ಬಗ್ಗು ಬಡಿದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 11ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಮಳೆಬಾಧಿತ ಈ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಟಾಸ್ ಗೆದ್ದ ನಾಯಕ ಮನೀಶ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಶಿವಮೊಗ್ಗ ಲಯನ್ಸ್ ಉತ್ತಮ ಆರಂಭ ಪಡೆದಿರಲಿಲ್ಲ.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ರಾಜ್ 21 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 35 ರನ್ ಬಾರಿಸಿದರು. ಇನ್ನು ಶಿವರಾಜ್ 24 ರನ್ಗಳ ಕೊಡುಗೆ ನೀಡಿದರೆ, ಅಭಿನಯ್ ಮನೋಹರ್ 17 ರನ್ ಸಿಡಿಸಿದರು. ಈ ಮೂಲಕ ಶಿವಮೊಗ್ಗ ಲಯನ್ಸ್ ತಂಡವು 17 ಓವರ್ಗಳಲ್ಲಿ 137 ರನ್ ಕಲೆಹಾಕಿತು.
ತಾಹ ತೂಫಾನ್:
ದ್ವಿತೀಯ ಇನಿಂಗ್ಸ್ ವೇಳೆ ಮಳೆ ಬಂದಿದ್ದರಿಂದ ವಿಜೆಡಿ ನಿಯಮದ ಪ್ರಕಾರ, ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 5 ಓವರ್ಗಳಲ್ಲಿ 51 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಲು ಬಂದ ತಿಪ್ಪಾ ರೆಡ್ಡಿ 1 ರನ್ಗಳಿಸಿ ಔಟಾದರು. ಮೊದಲ ವಿಕೆಟ್ ಸಿಗುತ್ತಿದ್ದಂತೆ ಶಿವಮೊಗ್ಗ ಲಯನ್ಸ್ ತಂಡ ಗೆಲುವಿನ ಭರವಸೆ ಹೆಚ್ಚಾಯಿತು.
ಆದರೆ ಮತ್ತೋರ್ವ ಆರಂಭಿಕ ಆಟಗಾರ ಮೊಹಮ್ಮದ್ ತಾಹ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ಶಿವಮೊಗ್ಗ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ತಾಹ ಮೈದಾನದ ಮೂಲೆ ಮೂಲೆಗೂ ಸಿಕ್ಸ್ಗಳನ್ನು ಸಿಡಿಸಿದರು. ಅಲ್ಲದೆ ಕೇವಲ 12 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 35 ರನ್ ಚಚ್ಚಿದರು.
ತಾಹಾ ಅವರಿಂದ ಬ್ಯಾಕ್ ಟು ಬ್ಯಾಕ್ ಸಿಕ್ಸ್ಗಳು ಇವತ್ತಿನ ಪಂದ್ಯ ಸಖತ್ತಾಗಿತ್ತು 🫡🤩#MaharajaTrophyOnStar #StarSportsKannada @maharaja_t20 pic.twitter.com/bJoOIfkjSD
— Star Sports Kannada (@StarSportsKan) August 20, 2024
ತಾಹಾ ಅವರಿಂದ ಎಂಥಾ ಸಿಕ್ಸ್ ಇದು.. 💥 ಇನ್ನೂ ಬೇಕು..🌟
📺 ನೋಡಿರಿ Maharaja Trophy KSCA T20 | ಶಿವಮೊಗ್ಗ vs ಹುಬ್ಬಳ್ಳಿ | LIVE NOW #StarSportsKannada ದಲ್ಲಿ#MaharajaTrophyOnStar @maharaja_t20 pic.twitter.com/d20ij2BfKK
— Star Sports Kannada (@StarSportsKan) August 20, 2024
ಈ ಸ್ಪೋಟಕ ಬ್ಯಾಟಿಂಗ್ ಪರಿಣಾಮ ಹುಬ್ಬಳ್ಳಿ ಟೈಗರ್ಸ್ ತಂಡವು 3.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 51 ರನ್ಗಳ ಗುರಿ ಮುಟ್ಟಿದೆ. ಈ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಶಿವಮೊಗ್ಗ ಲಯನ್ಸ್ ಪ್ಲೇಯಿಂಗ್ 11: ರೋಹಿತ್ ಕೆ , ನಿಹಾಲ್ ಉಳ್ಳಾಲ್ (ನಾಯಕ) , ಧ್ರುವ ಪ್ರಭಾಕರ್ , ಆದಿತ್ಯ ವಿಶ್ವ ಕರ್ಮ , ಅಭಿನವ್ ಮನೋಹರ್ , ಎಸ್ ಶಿವರಾಜ್ , ಹಾರ್ದಿಕ್ ರಾಜ್ , ಭರತ್ ಧುರಿ , ಆದಿತ್ಯ ಮಣಿ , ವಾಸುಕಿ ಕೌಶಿಕ್ , ಪ್ರದೀಪ್ ಟಿ.
ಇದನ್ನೂ ಓದಿ: IPL 2025: LSG ತಂಡಕ್ಕೆ ಝಹೀರ್ ಖಾನ್..?
ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಮೊಹಮ್ಮದ್ ತಾಹ, ತಿಪ್ಪಾ ರೆಡ್ಡಿ, ಕೃಷ್ಣನ್ ಶ್ರೀಜಿತ್ , ಮನೀಶ್ ಪಾಂಡೆ (ನಾಯಕ) , ಅನೀಶ್ವರ್ ಗೌತಮ್ , ಕಾರ್ತಿಕೇಯ ಕೆ ಪಿ , ಎಲ್ ಆರ್ ಕುಮಾರ್ , ನಿಶ್ಚಿತ್ ಪೈ , ಕೆ ಸಿ ಕಾರ್ಯಪ್ಪ , ವಿಧ್ವತ್ ಕಾವೇರಪ್ಪ , ಶ್ರೀಶ ಆಚಾರ್.