AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

22 ವರ್ಷ, 130 ಕೆಜಿ ತೂಕ, ಸಿಕ್ಸರ್ ಹೊಡೆಯುವುದರಲ್ಲಿ ಪಂಟರ್; ಪಾಕ್ ತಂಡದಲ್ಲಿ ಸ್ಥಾನ ಪಡೆದ ಅಜಮ್ ಖಾನ್

ಅಜಮ್ ಪಾಕಿಸ್ತಾನದ ಆಟಗಾರರಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್. ಟಿ 20 ಕ್ರಿಕೆಟ್‌ನಲ್ಲಿ ಇದುವರೆಗೆ 157 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

22 ವರ್ಷ, 130 ಕೆಜಿ ತೂಕ, ಸಿಕ್ಸರ್ ಹೊಡೆಯುವುದರಲ್ಲಿ ಪಂಟರ್; ಪಾಕ್ ತಂಡದಲ್ಲಿ ಸ್ಥಾನ ಪಡೆದ ಅಜಮ್ ಖಾನ್
ಮೊಯಿನ್ ಅಲಿ ಅವರ ಪುತ್ರ ಅಜಮ್ ಖಾನ್
ಪೃಥ್ವಿಶಂಕರ
|

Updated on: Jun 05, 2021 | 7:54 PM

Share

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳಿಗೆ ಪಾಕಿಸ್ತಾನ ಪ್ರವಾಸ ಘೋಷಿಸಲಾಗಿದೆ. ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಅಲಿ ಅವರ ಪುತ್ರ ಅಜಮ್ ಖಾನ್ ಈ ಪ್ರವಾಸಕ್ಕಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಜಮ್‌ಗೆ ಟಿ 20 ಸರಣಿಗೆ ಅವಕಾಶ ನೀಡಲಾಗಿದೆ. ಅಜಮ್ ಅವರನ್ನು ಟಿ 20 ಗೆ ತಕ್ಕನಾದ ಆಟಗಾರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವರು ಇಲ್ಲಿಯವರೆಗೆ ಕೇವಲ ಒಂದು ಪ್ರಥಮ ದರ್ಜೆ ಪಂದ್ಯವನ್ನು ಮಾತ್ರ ಆಡಿದ್ದಾರೆ. ಆದರೆ ಚುಟುಕು ಸಮರದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ.

ತಂಡದಲ್ಲಿ ಪ್ರವೇಶಕ್ಕಾಗಿ 30 ಕೆಜಿ ತೂಕ ಇಳಿಕೆ ಈವರೆಗೆ 36 ಟಿ 20 ಪಂದ್ಯಗಳನ್ನು ಆಡಿರುವ ಅಜಮ್ ಅವರನ್ನು ಸ್ಫೋಟಕ ಬ್ಯಾಟ್ಸ್‌ಮನ್ ಎಂದು ಕರೆಯಲಾಗುತ್ತದೆ. ಮೈದಾನದಲ್ಲಿ ಸಿಕ್ಸರ್‌ಗಳನ್ನು ಹೊಡೆಯುವುದರಲ್ಲಿ ಅಜಮ್​ ಪಂಟರ್​ ಎಂದು ಪರಿಗಣಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಮತ್ತು ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅವರು ತಮ್ಮ ಬ್ಯಾಟ್‌ನಿಂದ ಮ್ಯಾಜಿಕ್ ತೋರಿಸಿದ್ದಾರೆ. ಪಾಕಿಸ್ತಾನ ತಂಡಕ್ಕೆ ಪ್ರವೇಶಿಸಲು ಅವರು ಸುಮಾರು 30 ಕೆಜಿ ಕಳೆದುಕೊಂಡಿದ್ದಾರೆ ಎಂಬುದು ಈಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

ಪಾಕಿಸ್ತಾನದ ಅತ್ಯಧಿಕ ಸ್ಟ್ರೈಕ್ ರೇಟ್ ಬ್ಯಾಟ್ಸ್‌ಮನ್ 22 ವರ್ಷದ ಅಜಮ್ ಖಾನ್ ಕಳೆದ ವರ್ಷದಿಂದ ತಮ್ಮ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕ್ರಿಕೆಟ್​ನಲ್ಲಿ ಛಾಪೂ ಮೂಡಿಸಿದ್ದರು. ಆದರೆ ತೂಕ ಇಳಿಸಿಕೊಳ್ಳಲು ಆಯ್ಕೆ ಸಮಿತಿಯ ಸದಸ್ಯರು ಸೂಚಿಸಿದ್ದರು. ಆ ಸಮಯದಲ್ಲಿ ಅವರ ತೂಕ ಸುಮಾರು 130 ಕೆ.ಜಿ. ಇತ್ತು. ಕ್ರಿಕೆಟ್ ಆಡಬೇಕೆಂಬ ಹೆಬ್ಬಯಕೆ ಹೊಂದಿದ್ದ ಅಜಮ್ ಮಂಡಳಿಯ ಸೂಚನೆಯಂತೆ ತೂಕ ಇಳಿಸಕೊಂಡಿದ್ದಾರೆ. ಪ್ರಸ್ತುತ ಅವರು ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಲ್ಲದೆ ಅಜಮ್ ಪಾಕಿಸ್ತಾನದ ಆಟಗಾರರಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್. ಟಿ 20 ಕ್ರಿಕೆಟ್‌ನಲ್ಲಿ ಇದುವರೆಗೆ 157 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ನನ್ನ ಕಠಿಣ ಪರಿಶ್ರಮ ಫಲ ​​ನೀಡಿತು! ಪಾಕಿಸ್ತಾನ ತಂಡಕ್ಕೆ ಆಯ್ಕೆಯಾದ ನಂತರ ಅಜಮ್ ತುಂಬಾ ಭಾವುಕರಾದರು. ನಾನು ಉಪಾಹಾರ ಸೇವಿಸುತ್ತಿದ್ದಾಗ, ನನ್ನನ್ನು ಟಿ 20 ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ನಬಿಲ್ ಭಾಯ್ (ಕ್ವೆಟ್ಟಾ ಗ್ಲಾಡಿಯೇಟರ್ಸ್‌ನ ಮಾಧ್ಯಮ ವ್ಯವಸ್ಥಾಪಕ) ಹೇಳಿದ್ದರು. ನಂತರ ನಾನು ಉಪಾಹಾರವನ್ನು ಪಕ್ಕಕ್ಕೆ ಇರಿಸಿ ನೇರವಾಗಿ ಅಪ್ಪನ (ಅಬ್ಬು) ಬಳಿ ಹೋದೆ. ಅದು ಭಾವನಾತ್ಮಕ ಸನ್ನಿವೇಶವಾಗಿತ್ತು. ಇಷ್ಟು ದೊಡ್ಡ ಅವಕಾಶ ಇಷ್ಟು ಬೇಗ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನನಗೆ ತುಂಬಾ ಸಂತೋಷವಾಗಿದೆ. ಏಕೆಂದರೆ ಕಳೆದ ವರ್ಷದಿಂದ ನನ್ನ ಕಠಿಣ ಪರಿಶ್ರಮದ ಪ್ರತಿಫಲವನ್ನು ನಾನು ಪಡೆದುಕೊಂಡಿದ್ದೇನೆ ಎಂದು ಅಜಮ್ ಹೇಳಿದರು.

ಟಿ 20 ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅರ್ಷದ್ ಇಕ್ಬಾಲ್, ಫಹೀಮ್ ಅಶ್ರಫ್, ಫಖರ್ ಜಮಾ, ಹೈದರ್ ಅಲಿ, ಹರಿಸ್ ರವೂಫ್, ಹಸನ್ ಅಲಿ, ಇಮದ್ ವಾಸಿಮ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಶಾಹೀನ್ ಶಾ ಅಫ್ರಿದಿ, ಶಾರ್ಜೀಲ್ ಖಾನ್, ಉಸ್ಮಾನ್ ಖಾದಿರ್.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ