ವಿಡಿಯೋ: ಹೆಂಡತಿ ಎದುರಿಗೇ ತನ್ನ ಕುದುರೆಯ ಮುದ್ದು ಮಾಡಿದ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ!
MS Dhoni: ಪ್ರಾಣಿ ಪ್ರಿಯ ಧೋನಿ ತಮ್ಮ ಕುದುರೆಗೆ ಮಸಾಜ್ ಮಾಡಿದ್ದಾರೆ. ಮಲಗಿದ್ದ ಕುದುರೆಯ ಹೊಟ್ಟೆಯನ್ನು ನೀವುತ್ತಾ.. ಅಲ್ಲಿದವರತ್ತ ಕಣ್ಣು ಮಿಟುಕಿಸಿದ್ದಾರೆ. ಇದಕ್ಕೆ ಪತ್ನಿ ಸಾಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲ ಸಾಕ್ಷಿ ಸಿಂಗ್ ಆ ದೃಶ್ಯವನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಕಾರಣ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ ತಮ್ಮ ರಾಂಚಿ ಫಾರಂ ಹೌಸ್ನಲ್ಲಿ ತಮ್ಮ ಅಚ್ಚುಮೆಚ್ಚಿನ ಪ್ರಾಣಿಗಳ ಜೊತೆ ಕೂಲ್ ಕೂಲ್ ಆಗಿದ್ದಾರೆ. ಅವುಗಳನ್ನು ಮುದ್ದಾಡುತ್ತಾ ಆನಂದಿಂದ ಸಮಯ ಕಳೆಯುತ್ತಿದ್ದಾರೆ. ಮೊನ್ನೆಯೂ ಹೀಗೇ ಆಗಿದೆ. ಎಂ ಎಸ್ ಧೋನಿಗೆ ತಮ್ಮ ನೆಚ್ಚಿನ ಕುದುರೆಯ ಮೇಲೆ ವ್ಯಾಮೋಹ ಹೆಚ್ಚಾಗಿದ್ದೇ ತಡ ಸೀದಾ ಅದರ ಬಳಿ ಸಾಗಿ ಅದರ ಮೈದಡವಿ ಮುದ್ದಾಡಿದ್ದಾರೆ. ಪ್ರಾಣಿ ಪ್ರಿಯ ಧೋನಿ ತಮ್ಮ ಕುದುರೆಗೆ ಮಸಾಜ್ ಮಾಡಿದ್ದಾರೆ. ಮಲಗಿದ್ದ ಕುದುರೆಯ ಹೊಟ್ಟೆಯನ್ನು ನೀವುತ್ತಾ.. ಅಲ್ಲಿದವರತ್ತ ಕಣ್ಣು ಮಿಟುಕಿಸಿದ್ದಾರೆ. ಇದಕ್ಕೆ ಪತ್ನಿ ಸಾಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲ ಸಾಕ್ಷಿ ಸಿಂಗ್ ಆ ದೃಶ್ಯವನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ಆಡದೆ ತೋಟದ ಮನೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಸಾಹೇಬರು ಕುದುರೆಗೆ ಏನು ಮೋಡಿ ಮಾಡುತ್ತಿದ್ದಾರೆ ನೋಡಿ ಎಂದು ವಿಡಿಯೋಗೆ #Pamperingtime ಹ್ಯಾಷ್ಟ್ಯಾಗ್ ಹೆಡ್ಡಿಂಗ್ ನೀಡಿದ್ದಾರೆ ಧೋನಿ ಪತ್ನಿ ಸಾಕ್ಷಿ.
View this post on Instagram
ಇದೇ ವೇಳೆ ಸಾಕ್ಷಿ ಅವರು 2009ರ ಥ್ರೋಬ್ಯಾಕ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಹುಡುಗರ ಜೊತೆ ಕ್ರಿಕೆಟ್ ಆಡುತ್ತಿರುವ ಎಂ ಎಸ್ ಧೋನಿ ಆಗಲೂ ಕೂಲ್ ಕೂಲ್ ಆಗಿ ವಿಕೆಟ್ ಹಿಂದೆ ತನ್ಮಯತೆಯಿಂದ ನಿಂತಿದ್ದಾರೆ.
View this post on Instagram
(Chennai Super Kings skipper MS Dhoni massage his horse in Ranchi farmhouse Wife Sakshi Singh Shares Video)
ಮೈಸೂರು ಅರಮನೆಯಲ್ಲಿ ಪಟ್ಟದ ಆನೆ, ಕುದುರೆ ಮತ್ತು ಹಸುಗೆ ಪೂಜೆ
Published On - 11:30 am, Fri, 28 May 21