AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ. ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ […]

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?
KUSHAL V
| Edited By: |

Updated on: Aug 18, 2020 | 2:57 PM

Share

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ.

ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ ಆಗಿರುವ ಈ ಧೋನಿ ಅಭಿಮಾನಿಗೆ ಅವರ ನೆಚ್ಚಿನ ಆಟಗಾರ ನಿವೃತ್ತಿಯಾಗಿದ್ದು ತೀವ್ರ ನೋವುಂಟು ಮಾಡಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಬಷೀರ್​ ಮತ್ತೆಂದೂ ಇಂಡಿಯಾ- ಪಾಕಿಸ್ತಾನ ನಡುವಿನ ಪಂದ್ಯಾವಳಿಗಳನ್ನು ನೋಡುವುದಿಲ್ಲವಂತೆ. ಹಾಗಂತ ತಾವೂ ಮ್ಯಾಚ್ ನೋಡೋದಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಜೊತೆಗೆ, ಆ ಮ್ಯಾಚ್​ಗಳನ್ನ ನೋಡಲು ವಿದೇಶಕ್ಕೆ ಸಹ ಹೋಗುವುದಿಲ್ಲವಂತೆ. ಅದರ ಬದಲಾಗಿ, ಈ 65 ವರ್ಷದ ಧೋನಿ ಅಭಿಮಾನಿ, ತನ್ನ ಫೇವರೇಟ್​ ಆಟಗಾರನನ್ನ ಕೊನೇ ಬಾರಿ ಧೋನಿಯ ತವರೂರಾದ ರಾಂಚಿಯಲ್ಲಿ ಭೇಟಿ ಮಾಡಲು ಬಯಸಿದ್ದಾರೆ.

ಅಮೆರಿಕಾದ ಶಿಕಾಗೋನಲ್ಲಿ ರೆಸ್ಟೋರೆಂಟ್​ ನಡೆಸುವ ಪಾಕ್​ ಸಂಜಾತ ಬಷೀರ್​ಗೂ ಕ್ಯಾಪ್ಟನ್​ ಕೂಲ್​ ನಡುವಿನ ಬಾಂಧವ್ಯ ಶುರುವಾಗಿದ್ದು ಮೊಹಾಲಿಯಲ್ಲಿ ನಡೆದ 2011ರ ವಿಶ್ವ ಕಪ್​ನ ಇಂಡಿಯಾ-ಪಾಕಿಸ್ತಾನ ನಡುವಿನ ಸೆಮಿಫೈನಲ್​ ಮ್ಯಾಚ್​ ವೇಳೆ.

ಪಂದ್ಯ ನೋಡಲು ಟಿಕೆಟ್​ಗಾಗಿ ಹಂಬಲಿಸುತ್ತಿದ್ದ ಬಷೀರ್​ಗೆ ಧೋನಿ ಅಂದು ಮ್ಯಾಚ್​ನ ಟಿಕೆಟ್​ ಕೊಡಿಸಿದ್ದರಂತೆ. ಅಂದಿನಿಂದ ಶುರುವಾದ ಧೋನಿ ಮೇಲಿನ ಅಗಾಧ ಅಭಿಮಾನವನ್ನ ಬಷೀರ್​ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಪಾಕ್​ ಛೀಮಾರಿಗೂ ಬಷೀರ್​ ಡೋಂಟ್​ ಕೇರ್​ ಧೋನಿಯ ಮೇಲಿನ ಈ ಹುಚ್ಚು ಅಭಿಮಾನದಿಂದ ಬಷೀರ್​ ಇತರೆ ಪಾಕಿಸ್ತಾನದ ಫ್ಯಾನ್ಸ್​ ಹಲವಾರು ಬಾರಿ ಛೀಮಾರಿ ಹಾಕಿದ್ದಾರಂತೆ. ಬಷೀರ್​ನ ದೇಶದ್ರೋಹಿ ಅಂತಾ ಕರೆದಿದ್ದು ಉಂಡು. ಆದರೆ, ಇದ್ಯಾವುದಕ್ಕೂ ಬಷೀರ್​ ಡೋಂಟ್​ ಕೇರ್​. ನನಗೆ ಎರಡೂ ದೇಶಗಳಂದರೆ ಪ್ರೀತಿ. ಆದರೆ, ಅದಕ್ಕಿಂತ ಮಿಗಿಲಾದದ್ದು ಮಾನವ ಕುಲ ಎಂದು ಹೇಳಿದ್ದಾರೆ.

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್