ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ (Neeraj Chopra) ಫೈನಲ್ಗೆ ಪ್ರವೇಶಿಸಿದ್ದಾರೆ. ಫೈನಲ್ನ ಅರ್ಹತಾ ಸುತ್ತಿನಲ್ಲಿ 88.77 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಪ್ರವೇಶಿಸಿದರು. ಇದರೊಂದಿಗೆ 2024 ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ಗೂ ನೇರ ಅರ್ಹತೆ ಪಡೆದುಕೊಂಡರು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಪ್ರವೇಶಿಸಲು ಕನಿಷ್ಠ 83 ಮೀಟರ್ ದೂರದವರೆಗೆ ಜಾವೆಲಿನ್ ಎಸೆಯಬೇಕಿತ್ತು. ಇತ್ತ ಮೊದಲ ಎಸೆತದಲ್ಲೇ 88.77 ಮೀಟರ್ ಎಸೆದು ನೀರಜ್ ಚೋಪ್ರಾ ಫೈನಲ್ಗೆ ಅರ್ಹತೆ ಪಡೆದುಕೊಂಡರು. ಅಲ್ಲದೆ ಇದಾದ ಬಳಿಕ ಉಳಿದ ಯಾವುದೇ ಎಸೆತಗಾರರು ಚೋಪ್ರಾ ಅವರ ದೂರವನ್ನು ಕ್ರಮಿಸಿರಲಿಲ್ಲ. ಹೀಗಾಗಿ ಏಕೈಕ ಎಸೆತದೊಂದಿಗೆ ನೀರಜ್ ಅಗ್ರಸ್ಥಾನ ಅಲಂಕರಿಸಿದರು.
ಪ್ಯಾರಿಸ್ನಲ್ಲಿ ನಡೆಯಲಿರುವ 2024ರ ಒಲಿಂಪಿಕ್ಸ್ಗಾಗಿ ಜುಲೈ 1 ರಿಂದ ಅರ್ಹತಾ ವಿಂಡೋ ತೆರೆದಿದೆ. ಇಲ್ಲಿ 85.50 ಮೀಟರ್ ಮಾರ್ಕ್ ಅನ್ನು ಅರ್ಹತಾ ಮಾನದಂಡವಾಗಿ ನಿಗದಿ ಮಾಡಲಾಗಿದ್ದು, ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 88.77 ಮೀಟರ್ ದೂರದವರೆಗೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆದುಕೊಂಡಿದ್ದಾರೆ.
2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಬರೋಬ್ಬರಿ 87.58 ಮೀ. ದೂರ ಭರ್ಜಿ ಎಸೆಯುವ ಮೂಲಕ ಚೋಪ್ರಾ ಈ ಸಾಧನೆ ಮಾಡಿದ್ದರು. ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 88.77 ಮೀಟರ್ ಥ್ರೋ ಎಸೆಯುವ ಮುಂಬರುವ ಒಲಿಂಪಿಕ್ಸ್ನಲ್ಲೂ ಸ್ವರ್ಣ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಫೈನಲ್ ರೌಂಡ್ನಲ್ಲಿ ಒಟ್ಟು 12 ಮಂದಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲಿ ನೀರಜ್ ಚೋಪ್ರಾ ಅಗ್ರಸ್ಥಾನದಲ್ಲಿದ್ದರೆ, ಭಾರತದ ಡಿಪಿ ಮನು ಹಾಗೂ ಕಿಶೋರ್ ಜೆನಾ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಭರ್ಜಿ ಎಸೆಯುವ ಸ್ಪರ್ಧಾಳುಗಳ ಪಟ್ಟಿ ಈ ಕೆಳಗಿನಂತಿದೆ…
Published On - 3:15 pm, Sat, 26 August 23