2021ರ ಐಪಿಎಲ್​ನಲ್ಲಿ ತಂಡಗಳ ಜೆರ್ಸಿ ಹೇಗಿರಲಿದೆ ಗೊತ್ತಾ?

|

Updated on: Mar 14, 2021 | 11:28 AM

ಚೆನ್ನೈ ಸೂಪರ್ ಕಿಂಗ್ಸ್, ಮುಂಬಾ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ಜೆರ್ಸಿಗಳು ವಿನೂತನ ಶೈಲಿಯಲ್ಲಿ ಬರಲಿದೆ ಎನ್ನುವುದು ಈ ಬಾರಿಯ ಐಪಿಎಲ್​ನ ವಿಶೇಷ​

2021ರ ಐಪಿಎಲ್​ನಲ್ಲಿ ತಂಡಗಳ ಜೆರ್ಸಿ ಹೇಗಿರಲಿದೆ ಗೊತ್ತಾ?
ಐಪಿಎಲ್ 2021
Follow us on

ನ್ಯೂ ಇಂಡಿಯನ್ ಪ್ರೀಮಿಯರ್ ಲೀಗ್ ಸೀಜನ್ ಎಂದರೆ ಹೊಸ ಪ್ರಾಯೋಜನಕರು ಮತ್ತು ನೂತನ ತಂಡದ ಜೆರ್ಸಿ ಎಂದು ಅರ್ಥ. ಇನ್ನೂ ಈ ವಿಚಾರವಾಗಿ ಕೆಲವರು ತಮ್ಮ ಕಿಟ್​ಗಳ ವಿನ್ಯಾಸವನ್ನು ಬದಲಾಯಿಸಲು ನಿರ್ಧರಿಸಿದ್ದರೆ, ಇನ್ನೂ ಹಲವರು ತಮ್ಮ ಜರ್ಸಿಯಲ್ಲಿನ ಹೊಸ ಶೀರ್ಷಿಕೆಗಾಗಿ ಪ್ರಾಯೋಜಕರನ್ನು ಕರೆತಂದಿದ್ದಾರೆ. ಮತ್ತೊಂದು ಅದ್ಭುತ ಐಪಿಎಲ್​ ಆವೃತ್ತಿಗೆ ಕಾಲಿಡಲು ಇನ್ನೇನು ಒಂದು ತಿಂಗಳು ಇರುವಾಗಲೇ ತಂಡದ ಜೆರ್ಸಿಗಳಲ್ಲಿನ ಬದಲಾವಣೆ ತೀವ್ರ ಕುತೂಹಲ ಕೆರಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್, ಕೋಲ್ಕತ್ತ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಜರ್ಸಿಗಳು ವಿನೂತನ ಶೈಲಿಯಲ್ಲಿ ಬರಲಿದೆ ಎನ್ನುವುದು ಮತ್ತೊಂದು ವಿಶೇಷ.

ಐಪಿಎಲ್​ 2021: ಚೆನೈ ಸೂಪರ್ ಕಿಂಗ್ಸ್ (CSK) ಜೆರ್ಸಿ:
ಎಪ್ರಿಲ್ 9 ರಿಂದ ಪ್ರಾರಂಭವಾಗಲಿರುವ ಐಪಿಎಲ್ 2021 ಆವೃತ್ತಿಗಾಗಿ ಎಂ.ಎಸ್ ಧೋನಿಯ ಸಿಎಸ್​ಕೆ ತಂಡ ತಮ್ಮ ಹೊಸ ವಿನ್ಯಾಸದ ಜೆರ್ಸಿಯನ್ನು ಬಹಿರಂಗಪಡಿಸಿದೆ. ಸಿಎಸ್​ಕೆ ಜೆರ್ಸಿ ಗಮನಾರ್ಹ ಬದಲಾವಣೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದು, ವಿಶೇಷವಾಗಿ ಮಿಂತ್ರಾ ಇದರ ಪ್ರಧಾನ ಪ್ರಾಯೋಜಕರಾಗಿದ್ದಾರೆ.

ಚೆನೈ ಸೂಪರ್ ಕಿಂಗ್ಸ್ ಜೆರ್ಸಿ

ಪಂಜಾಬ್ ಕಿಂಗ್ಸ್ (PBKS) ಜೆರ್ಸಿ :
ಕಿಂಗ್ಸ್ ಇಲೆವನ್ ಪಂಜಾಬ್ (KXIP) ಈ ಬಾರಿಯ ಐಪಿಎಲ್​ನಲ್ಲಿ ನೂತನ ಹೆಸರಿನೊಂದಿಗೆ ಬರುತ್ತಿದ್ದು, ಹೊಸ ಶೈಲಿಯ ಲೋಗೊ ಕೂಡ ಇರಲಿದೆ ಎನ್ನುವುದು ವಿಶೇಷ. ಪಂಜಾಬ್​ ಫ್ರ್ಯಾಂಚೈಸ್ 2021ರ ಐಪಿಎಲ್​ಗೆ ಪಂಜಾಬ್​ ಕಿಂಗ್ಸ್ ಆಗಿ ಪ್ರವೇಶಿಸಲಿದೆ ಮತ್ತು ಹೊಸ ಲೋಗೊವನ್ನು ಕೂಡ ಬಿಡುಗಡೆ ಮಾಡಿದೆ.

ಪಂಜಾಬ್ ಕಿಂಗ್ಸ್ ಜೆರ್ಸಿ

ರಾಜಸ್ಥಾನ ರಾಯಲ್ಸ್ (RR) ಜರ್ಸಿ:
ಆರ್​ಆರ್​ ಇನ್ನೂ ಕೂಡ ತನ್ನ ಜೆರ್ಸಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಜೈಪುರ ಮೂಲದ ಫ್ರ್ಯಾಂಚೈಸ್ ಪ್ರಸ್ತುತ ಶೀರ್ಷಿಕೆ ಇಲ್ಲದ ಪ್ರಾಯೋಜಕರಾಗಿದ್ದಾರೆ. ಆದರೆ ಲೀಗ್​ ಪ್ರಾರಂಭವಾಗುವ ಮೊದಲು ಹೊಸ ಬ್ರಾಂಡ್​ನೊಂದಿಗೆ ಆರ್​ಆರ್​ ಬರಲಿದೆ ಎಂಬ ನಿರೀಕ್ಷೆ ಇದೆ. ದ್ವಿಚಕ್ರ ವಾಹನ ತಯಾರಕರಾದ ಸ್ಟಡ್ಸ್ ಜೊತೆ ರಾಜಸ್ಥಾನ ರಾಯಲ್ಸ್ ಒಪ್ಪಂದ ಮಾಡಿಕೊಂಡಿದೆ ಎನ್ನುವುದು ವಿಶೇಷವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಜೆರ್ಸಿ:
ಆರ್​ಸಿಬಿ ತಂಡ ತಮ್ಮ ಜೆರ್ಸಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಈ ವರ್ಷ ಐಪಿಎಲ್​ನಲ್ಲಿ ಭಾಗವಹಿಸುತ್ತಿದೆ. ವಿರಾಟ್​ ಕೊಹ್ಲಿ ನಾಯಕತ್ವದ ತಂಡ ಕಳೆದ ಬಾರಿ ಐಪಿಎಲ್​ನಲ್ಲಿ ಪ್ಲೇಆಫ್ ಮ್ಯಾಚ್​ ವರೆಗೆ ತಲುಪಿದ್ದರು. ಈ ಕಾರಣದಿಂದಾಗಿ ಈ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡಿ ಐಪಿಎಲ್​ ಗೆಲುವಿನ ಪಟ್ಟವನ್ನು ಮುಡಿಗೇರಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿ

ಕೋಲ್ಕತಾ ನೈಟ್ ರೈಡರ್ಸ್ (KKR) ಜೆರ್ಸಿ:
ಕೆಕೆಆರ್​ ಕೂಡ ಆರ್​ಸಿಬಿ ಮಾದರಿಯಲ್ಲಿಯೇ ಜೆರ್ಸಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಅವರ ಶೀರ್ಷಿಕೆಯ ಪ್ರಾಯೋಜಕರು ಮೊಬೈಲ್​ ಪ್ರೀಮಿಯರ್​ ಲೀಗ್​ (ಎಮ್​ಪಿಎಲ್​) ಆಗಿದ್ದು, ಚಿನ್ನ ಮತ್ತು ನೇರಳೆ ಬಣ್ಣದ ಜೆರ್ಸಿ ಇರಲಿದೆ.

ಕೋಲ್ಕತಾ ನೈಟ್ ರೈಡರ್ಸ್ ಜೆರ್ಸಿ

ಸನ್​ರೈಸರ್ಸ್ ಹೈದರಾಬಾದ್ (SRH) ಜೆರ್ಸಿ:
ಎಸ್​ಆರ್​ಹೆಚ್ ಕೆಸರಿ ಮತ್ತು ಕಪ್ಪು ಬಣ್ಣದ ಜೆರ್ಸಿ ಹೊಂದಿದ್ದು, ಈ ಜೆರ್ಸಿಯಲ್ಲಿ ಜೆಕೆ ಲಕ್ಷ್ಮಿ ಸಿಮೆಂಟ್​ ಅವರ ಪ್ರಧಾನ ಪ್ರಾಯೋಜಕತ್ವವಿದೆ. ಇದಲ್ಲದೇ ಅವರು ತಮ್ಮ ಕಿಟ್​ನಲ್ಲಿ ಜಿಯೋ, ಕೋಲ್ಗೇಟ್ ಮತ್ತು ವಾಲ್ವೋಲಿನ್​ ಪ್ರಾಯೋಜಕತ್ವವನ್ನು ಹೊಂದಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್ ಜೆರ್ಸಿ

ದೆಹಲಿ ಕ್ಯಾಪಿಟಲ್ಸ್ (DC) ಜೆರ್ಸಿ:
​ದೆಹಲಿ ಕ್ಯಾಪಿಟಲ್ಸ್​ ತಮ್ಮ ನೀಲಿ ಬಣ್ಣದ ಜೆರ್ಸಿ ಹೊಂದಿದ್ದು, ಜೆಎಸ್‌ಡಬ್ಲ್ಯೂ, ಎಬಿಕ್ಸ್‌ಕ್ಯಾಶ್, ಜಿಯೋ ಮತ್ತು ಅಪೊಲೊ ಟೈರ್‌ಗಳು ಪ್ರಮುಖ ಪ್ರಾಯೋಜಕರಾಗಿದ್ದಾರೆ. ಡಿಸಿ ಕಳೆದ ವರ್ಷದ ಜೆರ್ಸಿಯೊಂದಿಗೆ ಈ ವರ್ಷವೂ ಕೂಡ ಐಪಿಎಲ್​ಗೆ ಪ್ರವೇಶಿಸಲಿದೆ.

ದೆಹಲಿ ಕ್ಯಾಪಿಟಲ್ಸ್ ಜೆರ್ಸಿ

ಮುಂಬೈ ಇಂಡಿಯನ್ಸ್ (MI) ಜೆರ್ಸಿ:
ಹಾಲಿ ಚಾಂಪಿಯನ್‌ಗಳಾದ ಈ ತಂಡ ಕಿಟ್‌ ಹಾಗೂ ಜೆರ್ಸಿಯನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ನಾಲ್ಕು ಬಾರಿ ಚಾಂಪಿಯನ್‌ ಆಗಿರುವ ಎಮ್​ಐನ ಶೀರ್ಷಿಕೆ ಪ್ರಾಯೋಜಕರಾಗಿ ಸ್ಯಾಮ್‌ಸಂಗ್ ಮತ್ತು ಡಿಎಚ್‌ಎಲ್ ಇರಲಿದೆ.

ಮುಂಬೈ ಇಂಡಿಯನ್ಸ್ ಜೆರ್ಸಿ

ಆದರೆ ಈ ಎಲ್ಲಾ ಮಾಹಿತಿಗಳು ಚರ್ಚೆಯಲ್ಲಿದೆ ಆದರೆ ಇನ್ನೂ ಕೂಡ 2021ರ ಐಪಿಎಲ್​ ತಂಡಗಳ ಜೆರ್ಸಿಯ ಬಗ್ಗೆ ಅಧಿಕೃತವಾಗಿ ಖಚಿತ ಮಾಹಿತಿ ಹೊರಬಂದಿಲ್ಲ. ಸದ್ಯಕ್ಕೆ ಐಪಿಎಲ್ ಟೀಮ್​ಗಳು ಈ ಆಯ್ಕೆಯನ್ನು ಮಾಡಿಕೊಂಡಿದ್ದಾರೆ ಅಷ್ಟೇ.

ಇದನ್ನೂ ಓದಿ:ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಧಿಕ ರನ್​ ಗಳಿಸಿದ ಐವರು ಆಟಗಾರರು

Published On - 11:25 am, Sun, 14 March 21