ನೆಟ್ಟಿಗರ ಜನಾಂಗೀಯ ನಿಂದನೆಗೆ ಬೇಸತ್ತು ಸೋಷಿಯಲ್ ಮೀಡಿಯಾ ತೊರೆದ ಖ್ಯಾತ ಫುಟ್ಬಾಲ್ ಆಟಗಾರ! ಬೇಸರದಿಂದ ಹೇಳಿದ್ದೇನು?

| Updated By: ಪೃಥ್ವಿಶಂಕರ

Updated on: Aug 19, 2021 | 6:22 PM

ಈ ಅಸಹ್ಯಕರ ಸಂಗತಿಗಳು ಪ್ರತಿದಿನ ನನ್ನ ಫೋನ್‌ನಲ್ಲಿ ಸಂದೇಶದಂತೆ ಬರುತ್ತವೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ಅದರ ಬಗ್ಗೆ ಮಾತನಾಡಲು ತುಂಬಾ ನೋವಾಗುತ್ತದೆ.

ನೆಟ್ಟಿಗರ ಜನಾಂಗೀಯ ನಿಂದನೆಗೆ ಬೇಸತ್ತು ಸೋಷಿಯಲ್ ಮೀಡಿಯಾ ತೊರೆದ ಖ್ಯಾತ ಫುಟ್ಬಾಲ್ ಆಟಗಾರ! ಬೇಸರದಿಂದ ಹೇಳಿದ್ದೇನು?
ವಿಲ್ಲೋಕ್
Follow us on

ಇತ್ತೀಚೆಗೆ ಆರ್ಸೆನಲ್ ಬಿಟ್ಟು ನ್ಯೂ ಕ್ಯಾಸಲ್ ಯುನೈಟೆಡ್ ತಂಡ ಸೇರಿದ ವಿಲ್ಲೋಕ್ ಈ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ವರ್ಗಾವಣೆಯಲ್ಲ ಬದಲಾಗಿ ಸೋಷಿಯಲ್ ಮೀಡಿಯಾಕ್ಕೆ ಗುಡ್​ಬೈ ಹೇಳಿರುವುದು. ಮಾಜಿ ಆರ್ಸೆನಲ್ ಮಿಡ್‌ಫೀಲ್ಡರ್ ಅಭಿಮಾನಿಗಳ ಜನಾಂಗೀಯ ಟೀಕೆಗಳಿಂದ ಅಸಮಾಧಾನಗೊಂಡ ನಂತರ ಸೋಷಿಯಲ್ ಮೀಡಿಯಾ ಬಿಡಲು ನಿರ್ಧರಿಸಿದ್ದಾರೆ. ಇದನ್ನು ಅವರು ಬಿಬಿಸಿ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಜೋ 2017-18ರಲ್ಲಿ ಆರ್ಸೆನಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಆರ್ಸೆನಲ್‌ ಪರ 78 ಪಂದ್ಯಗಳಲ್ಲಿ 11 ಗೋಲುಗಳನ್ನು ಗಳಿಸಿದರು. ಇದರ ನಂತರ ಅವರು ನ್ಯೂ ಕ್ಯಾಸಲ್ ಯುನೈಟೆಡ್‌ಗೆ ಸೇರ್ಪಡೆಗೊಂಡರು. ಈ ಅವಧಿಯಲ್ಲಿ ಅವರು 14 ಪಂದ್ಯಗಳಲ್ಲಿ ಎಂಟು ಗೋಲುಗಳನ್ನು ಗಳಿಸಿದರು.

ಸೋಷಿಯಲ್ ಮೀಡಿಯಾಕ್ಕೆ ಗುಡ್​ಬೈ
ಜೋ ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಜನಾಂಗೀಯ ಟೀಕೆಗಳನ್ನು ಎದುರಿಸುತ್ತಿದ್ದರು, ಈ ಕಾರಣದಿಂದಾಗಿ ಅವರು ಸೋಷಿಯಲ್ ಮೀಡಿಯಾವನ್ನು ತೊರೆದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಈ ದಿನಗಳಲ್ಲಿ ನಾವು ವಿಷಯಗಳನ್ನು ನಿರ್ಲಕ್ಷಿಸಬಹುದು ಮತ್ತು ಅವುಗಳನ್ನು ಬಿಟ್ಟುಬಿಡಬಹುದು ಎಂದು ನಾನು ಭಾವಿಸುತ್ತೇನೆ. ಈ ಅಸಹ್ಯಕರ ಸಂಗತಿಗಳು ಪ್ರತಿದಿನ ನನ್ನ ಫೋನ್‌ನಲ್ಲಿ ಸಂದೇಶದಂತೆ ಬರುತ್ತವೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ಅದರ ಬಗ್ಗೆ ಮಾತನಾಡಲು ತುಂಬಾ ನೋವಾಗುತ್ತದೆ. ಸೋಷಿಯಲ್ ಮೀಡಿಯಾವನ್ನು ತೊರೆಯುವ ಮೂಲಕ, ನನ್ನನ್ನು ತುಂಬಾ ಪ್ರೀತಿಸುವ ನನ್ನ ಅಭಿಮಾನಿಗಳಿಂದ ನಾನು ದೂರವಿರುತ್ತೇನೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ.

ಯೂರೋ ಕಪ್‌ನಲ್ಲಿ ಆಟಗಾರರು ಜನಾಂಗೀಯ ಟೀಕೆಗಳಿಗೆ ಬಲಿಯಾಗಿದ್ದಾರೆ
ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ, ಅನೇಕ ಆಟಗಾರರು ಜನಾಂಗೀಯ ಟೀಕೆಗಳನ್ನು ಎದುರಿಸಬೇಕಾಯಿತು. ಇಟಲಿಯ ವಿರುದ್ಧ ಪೆನಾಲ್ಟಿ ಶೂಟೌಟ್ ತಪ್ಪಿಸಿಕೊಂಡ ಇಂಗ್ಲೆಂಡ್‌ನ ಎಲ್ಲಾ ಮೂವರು ಕಪ್ಪು ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಜನಾಂಗೀಯ ಟೀಕೆಗಳನ್ನು ಎದುರಿಸಿದರು. ಇದರ ನಂತರ, ಇಂಗ್ಲೆಂಡ್ ಫುಟ್ಬಾಲ್ ಅಸೋಸಿಯೇಷನ್ ​​(FA) ತನ್ನ ಆಟಗಾರರನ್ನು ಬೆಂಬಲಿಸುವ ಅಧಿಕೃತ ಹೇಳಿಕೆಯನ್ನು ನೀಡಿತು ಮತ್ತು ಈ ಅಸಭ್ಯ ಕಾಮೆಂಟ್ಗಳಿಗಾಗಿ ಅಭಿಮಾನಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿತ್ತು.