ಧೋನಿಯ 40 ನೇ ಹುಟ್ಟುಹಬ್ಬದಂದು ಅವರೊಂದಿನ ಭಾವನಾತ್ಮಕ ಸಂಬಂಧವನ್ನು ಟ್ವೀಟ್​ ಮೂಲಕ ಹಂಚಿಕೊಂಡ ಸುರೇಶ್ ರೈನಾ

| Updated By: Skanda

Updated on: Jul 08, 2021 | 6:47 AM

ಅಂತರರಾಷ್ಟ್ರೀಯ ಕ್ರಿಕೆಟ್​ ಆಡುವಾಗ ಬೇರೆ ಯಾರೂ ಮಾಡಲು ಸಾಧ್ಯವಿರದ ಸಹಾಯವನ್ನು ದೋನಿ ತಮಗೆ ಮಾಡಿದರು ಎಂದು ರೈನಾ ಹೇಳಿದ್ದಾರೆ. ಧೋನಿಯಿಂದಾಗೇ ರೈನಾ ಬಹಳ ದಿನಗಳವರೆಗೆ ರಾಷ್ಟ್ರೀಯ ತಂಡದ ಭಾಗವಾಗಿರುವುದು ಸಾಧ್ಯವಾಯಿತು ಎಂದು ಅನೇಕರು ಹೇಳುತ್ತಾರೆ.

ಧೋನಿಯ 40 ನೇ ಹುಟ್ಟುಹಬ್ಬದಂದು ಅವರೊಂದಿನ ಭಾವನಾತ್ಮಕ ಸಂಬಂಧವನ್ನು ಟ್ವೀಟ್​ ಮೂಲಕ ಹಂಚಿಕೊಂಡ ಸುರೇಶ್ ರೈನಾ
ಮಹೇಂದ್ರ ಸಿಂಗ್ ಧೋನಿ
Follow us on

ಭಾರತದ ಮಾಜಿ ಕ್ಯಾಪ್ಟನ್ ಮತ್ತು ಚೆನೈ ಸೂಪರ್ ಕಿಂಗ್ಸ್ ತಂಡದ ಎವರ್​ಗ್ರೀನ್ ತಲೈವಾ ಮಹೇಂದ್ರ ಸಿಂಗ್ ಧೋನಿ ಅವರು ಇಂದು (ಬುಧವಾರ) ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಆಚರಿಸಿಕೊಳ್ಳುವುದೇನು ಬಂತು, ಭಾರತ ಮತ್ತು ವಿಶ್ವದೆಲ್ಲೆಡೆ ಹಬ್ಬಿರುವ ಅವರ ಅಭಿಮಾನಿಗಳು ಕೇಕ್​ಗಳನ್ನು ಕತ್ತರಿಸುತ್ತಾ, ವಿಶಲ್ ಪೋಡು ಅಂತ ಕುಣಿಯುತ್ತಾ, ಸಿಹಿ ಹಂಚುತ್ತಾ ಆಚರಿಸುತ್ತಿದ್ದಾರೆ. ನಿಸ್ಸಂದೇಹವಾಗಿ ಧೋನಿ ಕೋಟ್ಯಾಂತರ ಉದಯೋನ್ಮುಖ ಅಟಗಾರರಿಗೆ, ತಮ್ಮ ಜೊತೆ ಆಡಿದವರಿಗೆ ಬಹು ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅವರಿಂದ ಪ್ರೇರಣೆ ಪಡೆದ ಮತ್ತು ಈಗಲೂ ಪಡಯುತ್ತರುವ ಆಟಗಾರರಲ್ಲಿ ಸಿಎಸ್​ಕೆ ತಂಡದ ಬ್ಯಾಟಿಂಗ್ ಮೇನ್​ಸ್ಟೇ ಸುರೇಶ್ ರೈನಾ ಸಹ ಒಬ್ಬರು. ಅವರಿಬ್ಬರು ಕೇವಲ ಸಿಎಸ್​ಕೆ ತಂಡಕ್ಕೆ ಮಾತ್ರವಲ್ಲ ರಾಷ್ಟ್ರೀಯ ತಂಡಕ್ಕೂ ಜೊತೆಯಾಗಿ ಆಡಿದ್ದಾರೆ. ಧೋನಿಯೊಂದಿಗೆ ತನಗೆ ಭಾತೃತ್ವದ ಸಂಬಂಧ ಇದೆಯೆಂದು ರೈನಾ ಹೇಳುತ್ತಾರೆ. ಇಂದು ಧೋನಿಗೆ ಬರ್ತ್​ಡೇ ವಿಶ್​ ಮಾಡಿದವರಲ್ಲಿ ಮೊದಲಿಗರಾಗಿರುವ ರೈನಾ ಒಂದು ಭಾವನಾತ್ಮಕ ಟ್ವೀಟ್​ ಮಾಡಿದ್ದಾರೆ.

‘ಹ್ಯಾಪಿ ಬರ್ತ್​ಡೇ @msdhoni. ನೀವು ನನಗೆ ಗೆಳೆಯ, ಸಹೋದರ, ಮಾರ್ಗದರ್ಶಿ ಎಲ್ಲವೂ ಆಗಿರುವಿರಿ. ದೇವರು ನಿಮಗೆ ಒಳ್ಳೆಯ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸುವೆ. ಒಬ್ಬ ಐಕಾನಿಕ್ ಆಟಗಾರ ಮತ್ತು ಶ್ರೇಷ್ಠ ನಾಯಕನಾಗಿ ನಮ್ಮೆಲ್ಲರಿಗೆ ಸ್ಫೂರ್ತಿಯಾಗಿರುವುದಕ್ಕೆ ಧನ್ಯವಾದಗಳು.#HappyBirthdayDhoni’ ಎಂದು ರೈನಾ ಟ್ವೀಟ್ ಮಾಡಿದ್ದಾರೆ

ಧೋನಿ ಮತ್ತು ರೈನಾ ಜೊತೆಯಾಗಿ ಟೀಮ್ ಇಂಡಿಯಾ ಮತ್ತು ಸಿಎಸ್​ಕೆ ತಂಡಕ್ಕೆ ಅದ್ಭುತ ಮತ್ತು ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದಾರೆ. ಅಂದಹಾಗೆ ಈ ಜೋಡಿಯು ಅಂತರರಾಷ್ಟ್ರೀಯ ಕ್ರಿಕೆಟ್​ಗೂ ಒಂದೇ ದಿನ ವಿದಾಯ (ಆಗಸ್ಟ್​ 15, 2020) ಘೋಷಿಸಿದರು.

ಅಂತರರಾಷ್ಟ್ರೀಯ ಕ್ರಿಕೆಟ್​ ಆಡುವಾಗ ಬೇರೆ ಯಾರೂ ಮಾಡಲು ಸಾಧ್ಯವಿರದ ಸಹಾಯವನ್ನು ದೋನಿ ತಮಗೆ ಮಾಡಿದರು ಎಂದು ರೈನಾ ಹೇಳಿದ್ದಾರೆ. ಧೋನಿಯಿಂದಾಗೇ ರೈನಾ ಬಹಳ ದಿನಗಳವರೆಗೆ ರಾಷ್ಟ್ರೀಯ ತಂಡದ ಭಾಗವಾಗಿರುವುದು ಸಾಧ್ಯವಾಯಿತು ಎಂದು ಅನೇಕರು ಹೇಳುತ್ತಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷದ ಆರಂಭದಲ್ಲಿ ಮಾಧ್ಯಮವೊಂದರ ಜೊತೆ ಮಾತಾಡಿದ್ದ ರೈನಾ ಅವರು, ‘ನನ್ನ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನವನ್ನು ಹೇಗೆ ಹೊರತೆಗೆಯಬಹುದು ಅಂತ ಧೋನಿಗೆ ಚೆನ್ನಾಗಿ ಗೊತ್ತಿತ್ತು ಮತ್ತು ಅವರಿಗೆ ನನ್ನ ಮೇಲೆ ನಂಬುಗೆಯೂ ಇತ್ತು. ನಾನು ತಂಡದಲ್ಲಿ ಸ್ಥಾನ ಉಳಿದಿಕೊಳ್ಳುವಂತಾಗಲು ನಮ್ಮಿಬ್ಬರ ನಡುವಿನ ಸಂಬಂಧವನ್ನು ಸಮೀಕರಿಸಿ ಮಾತಾಡಿದಾದ ಮನಸ್ಸಿಗೆ ತುಂಬಾ ನೋವಾಗುತ್ತದೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಲು ಮತ್ತು ಅದನ್ನು ಕಾಯ್ದುಕೊಳ್ಳಲು ನಾನು ತುಂಬಾ ಶ್ರಮ ಪಟ್ಟಿದ್ದೇನೆ, ನನ್ನ ಪರಿಶ್ರಮದಿಂದಾಗೇ ನಾನು ಧೋನಿಯ ವಿಶ್ವಾಸ ಮತ್ತು ಗೌರವವನ್ನು ಸಂಪಾದಿಸಿದ್ದೇನೆ,’ ಎಂದು ಹೇಳಿದ್ದರು.

ರೈನಾ ಅವರಲ್ಲದೆ ಹಲವಾರು ಕ್ರಿಕೆಟ್​ ಆಟಗಾರರು ಧೋನಿಗೆ ಹುಟ್ಟು ಹಬ್ಬದ ಶುಬಾಷಯಗಳನ್ನು ಹೇಳಿದ್ದಾರೆ.

ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಅಲ್​-ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಟ್ವೀಟ್​ನಲ್ಲಿ, ‘ನನ್ನ ಶಾಶ್ವತವಾದ ಪ್ರೀತಿ ಮತ್ತು ಶ್ರೇಷ್ಠ ಸ್ನೇಹಿತನಿಗೆ, ಹ್ಯಾಪಿ ಬರ್ತ್​ ಡೇ ಮಾಹಿ ಭಾಯ್​, ನಿಮಗೆ ಬರೀ ಪ್ರೀತಿ ಮಾತ್ರ,’ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮ ತಮ್ಮ ಟ್ವೀಟ್​ನಲ್ಲಿ, ‘ಹ್ಯಾಪಿ ಬರ್ತ್​ಡೇ ಮಾಹಿ ಭಾಯ್, ನಾಯಕನ ರೂಪದಲದಲ್ಲಿ ಅತ್ಯುತ್ತಮ ಸ್ನೇಹಿತ ನೀವು, ನಿಮ್ಮ ಇಂದಿನ ದಿನ ಮತ್ತು ಈ ವರ್ಷ ಅದ್ಭುತವಾಗಿರಲಿ ಎಂದು ಹಾರೈಸುತ್ತೇನೆ,’ ಅಂತ ಹೇಳಿದ್ದಾರೆ.

ಭಾರತದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಮೊಹಮ್ಮದ್ ಕೈಫ್, ದಾದಾ (ಸೌರವ್ ಗಂಗೂಲಿ) ಪಂದ್ಯಗಳನ್ನು ಗೆಲ್ಲುವುದು ಹೇಗೆ ಅಂತ ನಮಗೆ ಕಲಿಸಿದರೆ, ಗೆಲ್ಲುವುದನ್ನು ನಮಗೆ ಅಭ್ಯಾಸವಾಗಿಸಿದವರು ಧೋನಿ. ಕೇವಲ ಒಂದು ದಿನದ ಅಂತರದಲಲ್ಲಿ ಎರಡು ಬೇರೆ ಬೇರೆ ಅವಧಿಯ ಶ್ರೇಷ್ಠ ನಾಯಕರು ಜನಿಸಿದ್ದಾರೆ. ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ನೀಡಿದ ವ್ಯಕ್ತಿಗಳಿಗೆ ಹುಟ್ಟುಹಬ್ಬದ ಶುಭಾಷಯಗಳು,’ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಸಹ ಧೋನಿಯನ್ನು ಅವರ ಜನ್ಮದಿನದ ಅಂಗವಾಗಿ ಹಾರೈಸಿದೆ.
‘ಅವರನ್ನು ಕ್ಯಾಪ್ಟನ್ ಕೂಲ್ ಅಂತ ಕರೆಯಲು ಕಾರಣವಿದೆ. ಅವರ ಬರ್ತ್​ಡೇ ಹಿನ್ನೆಲೆಯಲ್ಲಿ ಅವರು ತೆಗೆದುಕೊಂಡ ಕೆಲ ಉತ್ಕೃಷ್ಟ ನಿರ್ಧಾರಗಳನ್ನು ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತ,’ ಎಂದು ಹೇಳಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದೆ.

ಬಿಸಿಸಿಐ ತನ್ನ ಟ್ವೀಟ್​ನಲ್ಲಿ, ‘ಒಬ್ಬ ಲೆಜೆಂಡ್ ಮತ್ತು ಪ್ರೇರಣೆ, ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ಹುಟ್ಟು ಹಬ್ಬದ ಶುಭಾಷಯಗಳು ಎಂದು ಹೇಳಿದೆ.

ಇನ್ನೂ ಹಲವಾರು ಹಾಲಿ ಮತ್ತು ಮಾಜಿ ಆಟಗಾರರು ಲೆಜಂಡರಿ ಧೋನಿಗೆ ಹುಟ್ಟಹಬ್ಬದ ವಿಷಸ್ ಹೇಳಿದ್ದಾರೆ.

ಇದನ್ನೂ ಓದಿ: MS Dhoni Birthday: ಮದುವೆಗೂ ಮುನ್ನ ನಾಲ್ವರು ಸುಂದರಿಯರೊಂದಿಗೆ ಧೋನಿ ಹೆಸರು! ಇವರಲ್ಲಿ ನಟಿಮಣಿಯರೇ ಹೆಚ್ಚು